ಬಹಳ ದುಖ್ಖದ ಸಂಗತಿ ಎಂದರೆ, ನಮ್ಮ ನಾಡಿನ ರೈತಾಪಿ ವರ್ಗವು ಕಳೆದ ಎರೆಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತತ್ತರಿಸಿ ಹೋಗಿದೆ. ನಾಟಿ ಮಾಡಿದ್ದ ನೂರಾರು ಎಕರೆ ಗದ್ದೆಗಳು ಜಲಾವೃತವಾಗಿದೆ. ಧಾರಾಕಾರ ಮಳೆಗೆ ಗದ್ದೆಗಳು ಸಂಪೂರ್ಣ ಜಲಾವೃತವಾಗಿದೆ. ಚಿಕ್ಕಮಗಳೂರಿನ ಕೊಪ್ಪ ಬಳಿಯ ಹಳಗೋಡಿ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಇದಷ್ಟೇ ಅಲ್ಲ ಹಲವಾರು ಗದ್ದೆಗಳು ವರುಣನ ಆರ್ಭಟದಿಂದ ಜಲಾವೃತವಾಗಿವೆ. ನಾಟಿ ಮಾಡಿದ್ದ ಗದ್ದೆಗಳೆಲ್ಲ ನೀರಿನಿಂದ ತುಂಬಿ ಹೋಗಿದೆ. ವರುಣನ ಆರ್ಭಟ ಮಲೆನಾಡಿನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಹೆಚ್ಚಾಗಿದೆ. ಕಳಸ-ಹೊರನಾಡು ಸಂಪರ್ಕ ಬಂದ್ ಮಾಡಲಾಗಿದೆ.
ಈಗಾಗಲೇ ನಿಂತಿರುವ ನೀರು ಇಂಗಿ ಹೋದರೆ ಏನೂ ಸಮಸ್ಯೆಯಿಲ್ಲ. ಆದರೆ ಇದು ಹಾಗೆ ಉಳಿದರೆ ಬೆಳೆಯೆಲ್ಲ ನಾಶವಾಗುತ್ತದೆ. ಕಾಫಿ ನಾಡಿನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆಗೆ ಜನ ಜೀವನವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಇಂದು ಬೆಳಗಿನ ಜಾವದಿಂದ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಮಲೆನಾಡಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ಆದರೂ ತುಂಗಾ, ಭದ್ರಾ, ಹೇಮಾವತಿ ನದಿ ನೀರಿನ ಹರಿವಿನ ಮಟ್ಟ ಏರಿಕೆಯಾಗಿದ್ದು ಮಲೆನಾಡಿಗರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಮಲೆನಾಡಿನ ಭಾಗದ ಘಟ್ಟ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸುರಿಯುತ್ತಿರುವುದರಿಂದ ಮೂರು ಪ್ರಮುಖ ನದಿಗಳು ಕೂಡಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಪಾತ್ರದಲ್ಲಿರುವಂತಹ ಗ್ರಾಮಗಳು ಹಾಗೂ ಹೊಲ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಬಾಳೆಹೊನ್ನೂರಿನ ಭದ್ರಾ ಸೇತುವೆಯ ನೀರಿನ ಹರಿವಿನ ಪ್ರಮಾಣ ಎರೆಡು ದಿನಗಳಿಂದ ಬಹಳ ಹೆಚ್ಚಾಗಿತ್ತು. ಆದರೆ ಇಂದು ಮುಂಜಾನೆಯಿಂದ ಹರಿವಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೂ ಕೂಡಾ ಮಲೆನಾಡಿಗರು ಆತಂಕದ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ.
ಏಕೆಂದರೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್ ಮತ್ತು ನಿಡುವಾಳು ಪ್ರದೇಶಗಳಲ್ಲಿ ಸುರಿಯುವ ಮಳೆ ಹಾಗೂ ಶೃಂಗೇರಿ ತಾಲೂಕಿನ ಕೆರೆ ಕಟ್ಟೆಗಳ ಭಾಗದಲ್ಲಿ ಸುರಿಯುವಂತಹ ಮಳೆ, ಮೂಡಿಗೆರೆ ತಾಲೂಕಿನ ಕಳಸ, ಕುದರೆಮುಖ ಭಾಗಗಳಲ್ಲಿ ಸುರಿವುಂತಹ ಮಳೆ, ನಾಡಿನ ಜೀವ ನದಿಗಳಾದಂತಹ ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳಿಗೆ ಪ್ರಮುಖ ನೀರಿನ ಮೂಲ. ಈ ಎಲ್ಲಾ ಭಾಗಗಳಲ್ಲಿ ಕೂಡ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಯ ಪ್ರಮಾಣ ಯಥೇಚ್ಛವಾಗಿ ಹೆಚ್ಚಾಗುತ್ತಿರುವ ಕಾರಣ ಜನರ ಆತಂಕಕ್ಕೆ ಕಾರಣವಾಗಿದೆ.
ಈ ಜಾಗಗಳಲ್ಲಿ ಹೆಚ್ಚಾಗಿ ಬೆಳೆದಿರುವಂತಹ ಕಾಫಿ ತೋಟ, ಅಡಿಕೆ ತೋಟ ಮತ್ತೆ ಮೆಣಸಿನ ಬೆಳೆಗಳು ಸಂಪೂರ್ಣ ನಾಶವಾಗುವಂತಹ ವಾತಾವರಣ ನಿರ್ಮಾಣವಾಗಿದೆ. ಜನವಸತಿ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೆ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಕಾರಣ ಮಲೆನಾಡಿಗರು ಆತಂಕದಿಂದ ಬದುಕುವ ಪರಿಸ್ಥಿತಿ ಉಂಟಾಗಿದೆ. ರಾಯಚೂರು ಹಾಗೂ ವಿಜಯಪುರದ ಜನರು ಕೂಡ ಮಳೆಯ ಆರ್ಭಟದಿಂದ ತತ್ತರಿಸಿ ಹೋಗಿದ್ದಾರೆ.
ಹಲವಾರು ಕಡೆಗಳಲ್ಲಿ ರಸ್ತೆಗಳು ಹಾಗೂ ಸೇತುವೆಗಳು ಮುಳುಗಡೆಯಾಗಿದೆ. ದಕ್ಷಿಣಕನ್ನಡದಲ್ಲಿ ರಸ್ತೆಯು ಕುಸಿಯುತ್ತಿದೆ. ಭೀಮಾನದಿಯಲ್ಲಿ 120000 ಕ್ಯೂಸೆಕ್ ನೀರನ್ನು ಬಿಟ್ಟಿರುವ ಪರಿಣಾಮ ಈಗ ಪ್ರವಾಹ ಸೃಷ್ಟಿ ಆಗುವ ಸಾಧ್ಯತೆ ಇದೆ ಅಂತ ಹೇಳ್ತಿದ್ದಾರೆ. ನದಿ ಪಾತ್ರದ ಜನರನ್ನು ಸ್ಥಳಾಂತರ ಮಾಡಲಾಗ್ತಾ ಇದೆ. ಬೆಳಗಾವಿಯ ಸೌದತ್ತಿ ಎಲ್ಲಮ್ಮ ದೇವಸ್ಥಾನದಲ್ಲಿ ಮೇಲ್ಗಡೆ ಎಣ್ಣೆ ಹೊಂಡ ಎಂಬ ಸ್ಥಳದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಜಲ ದಿಗ್ಬಂಧನ ಈಗ ಎಲ್ಲಮ್ಮ ದೇವಸ್ಥಾನಕ್ಕೆ ಆಗಿದೆ. ಮಳೆಯ ಆರ್ಭಟ ಹೀಗೆ ಮುಂದುವರೆದರೆ ಜನಜೀವನ ಅಸ್ಥವ್ಯಸ್ತವಾಗುತ್ತದೆ. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಕಂಡುಬರುವ ಸಾಧ್ಯತೆ ಇದೆ. ನಾವೆಲ್ಲರೂ ಈ ಸಂಕಷ್ಟದಿಂದ ಪಾರಾಗಲು ದೇವರಲ್ಲಿ ಪ್ರಾರ್ಥಿಸುವುದು ಅನಿವಾರ್ಯವಾಗಿದೆ.