ಮುಗಿಲ ಮೇಲೇರಿದ ನಲಿವ ಗುಲಾಬಿ ಹೂವು. ರಾಜೇಶ್ ಕೃಷ್ಣನ್ ಹೇಳಿದ್ದೇನು.

0
2231

ಮುಗಿಲ ಮೇಲೇರಿತದ ನಲಿವ ಗುಲಾಬಿ ಹೂವು. ಭಾರತದ ಗಾಯನ ಲೋಕದ ಪ್ರಖ್ಯಾತ ಗಾನಗಂಧರ್ವ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮೇರು ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ 74 ನೇ ವಯಸ್ಸಿನಲ್ಲಿ ಅತ್ಯುಗ್ರ ವೈ’ರಸ್ಗೆ ತುತ್ತಾಗಿ 50 ದಿನಗಳ ನಂತರ ಐಸಿಯು ನಲ್ಲಿ ಕೊ’ನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ ಸರಿಸುಮಾರು 1 ಗಂಟೆ 4 ನಿಮಿಷಕ್ಕೆ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂದು ಎಸ್.ಪಿ.ಬಿ ಅವರ ಪುತ್ರ ಶರಣ್ ಅವರು ಅಧಿಕೃತವಾಗಿ ಮಾಧ್ಯಮಗಳಿಗೆ ಹಾಗೂ ಎಲ್ಲರಿಗೂ ಮಾಹಿತಿಯನ್ನು ನೀಡಿದ್ದಾರೆ. ನಮ್ಮೆಲ್ಲರ ನೋವು ನಲಿವುಗಳಿಗೆ ದನಿಯಾಗಿರುವ ಗಾನ ಗಂಧರ್ವ ನಮ್ಮೆಲ್ಲರನ್ನು ಒಂಟಿಯಾಗಿಸಿದ್ದಾರೆ.

ಆದಷ್ಟು ಹುಷಾರಾಗಿದ್ದರೂ ಕೂಡ ಕೋ’ರೋನ ಸೋಂ’ಕಿನ ಲಕ್ಷಣಗಳು ಸ್ವಲ್ಪ ಸ್ವಲ್ಪವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಆಗಸ್ಟ್ 5 ರಂದು ಎಂ ಜಿ ಎಂ ಹೆಲ್ತ್ಕೇರ್ ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಆರೋಗ್ಯದ ಬಗ್ಗೆ ಸ್ವತಹ ತಾವೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ವಿಡಿಯೋದಲ್ಲಿ ನನ್ನ ದೇಶದಲ್ಲಿ ಸ್ವಲ್ಪವೇ ಸ್ವಲ್ಪ ಇದೆ ಹಾಗಾಗಿ ನಾನು ಮನೆಯಲ್ಲಿ ಐಸೋಲೆಟ್ ಆಗಬೇಕೆಂದು ವೈದ್ಯರು ಹೇಳಿದರು. ಆದರೆ ಇತರರಿಗೆ ತೊಂದರೆ ಕೊಡುವುದು ಬೇಡ ಹಾಗಾಗಿ ನಾನು ಬೇಗನೆ ಆಸ್ಪತ್ರೆಗೆ ದಾಖಲಾಗಿ ಎರಡು ದಿನಗಳಲ್ಲಿ ಮನೆಗೆ ಬಂದು ಬಿಡುತ್ತೇನೆ ಎಂದು ವಿಡಿಯೋ ಮಾಡಿ ಬಿಟ್ಟಿದ್ದರು.

ಆದರೆ ಆಗಸ್ಟ್ 13ರ ತಡರಾತ್ರಿಯಿಂದ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗುತ್ತ ಹೋಯಿತು. ವಿಶೇಷ ತಜ್ಞವೈದ್ಯರ ತಂಡದಿಂದ ಎಸ್.ಪಿ.ಬಿ ಅವರ ಆರೈಕೆ ನಡೆಯುತ್ತಿದ್ದು, ಆಗಸ್ಟ್ 24 ರಂದು ಅವರ ಕೋ’ರೋನ ವರದಿಯು ನೆಗೆಟಿವ್ ಎಂದು ಬಂದಿತ್ತು. ಕೊರೋನ ಲಕ್ಷಣಗಳು ಕಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಸ್.ಪಿ.ಬಿ ಅವರಿಗೆ ನಂತರದ ದಿನಗಳಲ್ಲಿ ವೆಂಟಿಲೇಟರ್ ನ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಇದೇ ವಿಚಾರವಾಗಿ ಅವರ ಪುತ್ರ ಚರಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಅವರ ಪ್ರತಿದಿನದ ಆರೋಗ್ಯದ ಬಗ್ಗೆ ವಿಚಾರವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.

ಮಧ್ಯದಲ್ಲಿ ಎಸ್.ಪಿ.ಬಿ ಅವರು ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಸಿಂಬಲ್ ಅನ್ನು ಕೈಯಲ್ಲಿ ತೋರಿಸಿದ್ದರು. ಬಿಡುವಿನ ಸಮಯದಲ್ಲಿ ಕ್ರಿಕೆಟ್ ನೋಡುತ್ತಿದ್ದ ಎಸ್ಪಿಬಿ ಅವರು ಆದಷ್ಟು ತಮ್ಮನ್ನು ತಾವು ಆಕ್ಟಿವ್ ಆಗಿ ಇಟ್ಟುಕೊಳ್ಳುತ್ತಿದ್ದರು. ಕೆಲದಿನಗಳ ಹಿಂದೆ ಎಸ್.ಪಿ.ಬಿ ಅವರ ಮದುವೆ ವಾರ್ಷಿಕೋತ್ಸವ ಕೂಡ ನಡೆದಿತ್ತು. ಅವರ ಲಕ್ಷಾಂತರ ಅಭಿಮಾನಿಗಳು ದೇಶಾದ್ಯಂತ ಗಾನಗಾರುಡಿಗ ಹೆಚ್ಚು ಕಾಲ ಬದುಕಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು. 40 ಸಾವಿರಕ್ಕೂ ಹೆಚ್ಚು ಹಾಡುಗಳು ಹಾಡಿರುವ ಎಸ್.ಪಿ.ಬಿ ಅವರು ಇಂದು ಮಧ್ಯಾಹ್ನ ಸರಿಸುಮಾರು ಒಂದು ಗಂಟೆ 4 ನಿಮಿಷಕ್ಕೆ ಅ’ಸುನೀಗಿದ್ದಾರೆ ಎಂದು ಎಂಜಿಎಂ ಆಸ್ಪತ್ರೆಯ ಮೂಲಗಳು ತಿಳಿಸಿದೆ.

ವಿಚಾರ ತಿಳಿದ ಲಕ್ಷಾಂತರ ಅಭಿಮಾನಿಗಳು ದುಃ’ಖದ ಮಡುವಿನಲ್ಲಿ ಇದ್ದಾರೆ. ಇದೇ ವಿಚಾರವಾಗಿ ಗಾನಗಾರುಡಿಗ ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಪರಮಾಪ್ತ ಶಿಷ್ಯ ರಾಜೇಶ್ ಕೃಷ್ಣನ್ ಅವರು ನನ್ನ ದೇವರು ದೇವಲೋಕಕ್ಕೆ ಹೋಗಿದ್ದಾರೆ ಹಾಗೂ ದೇವರಾಗಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here