ಐಶಾನಿ ಶೆಟ್ಟಿಗೆ ಹಳ್ಳಿ ಮಕ್ಕಳು ಮಾಡಿದ್ದೇನು ಗೊತ್ತಾ.

0
1401

ಪ್ರಿಯ ಓದುಗರೇ ನಿಮಗೆಲ್ಲರಿಗೂ ನಮಸ್ಕಾರ. ಕರಾವಳಿಯ ಸಾಕಷ್ಟು ಪ್ರತಿಭೆಗಳು ಇಂದು ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಮಾತ್ರವಲ್ಲ ತಮ್ಮ ನಟನೆಯ ಮೂಲಕ ರಸದೌತಣವನ್ನು ವೀಕ್ಷಕರಿಗೆ ಉಣಬಡಿಸುತ್ತಿದ್ದಾರೆ. ಅವರಲ್ಲಿ ಕಡಲನಗರಿಯ ಚೆಲುವೆ ಐಶಾನಿ ಶೆಟ್ಟಿಯೂ ಒಬ್ಬರು. ಇವರ ಧ್ವನಿಯಿಂದಲೇ ಅದೆಷ್ಟೋ ವೀಕ್ಷಕರನ್ನು ತನ್ನೆಡೆಗೆ ಸೆಳೆದುಕೊಂಡವರು. ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತರೆ ಸಾಕು, ಶಿಕ್ಷಣಕ್ಕೆ ಬಾಯ್ ಹೇಳುವವರೇ ಹೆಚ್ಚು. ಆದರೆ ಮಂಗಳೂರಿನ ಚೆಲುವೆ ಹಾಗಲ್ಲ.

ಬಣ್ಣದ ಲೋಕದ ಜೊತೆಗೆ ಓದನ್ನು ಮುಂದುವರಿಸಿಕೊಂಡು ಹೋಗಿರುವ ಮುದ್ದು ಮುಖದ ಚೆಲುವೆ ಐಶಾನಿ ಶೆಟ್ಟಿ ಸ್ನಾತಕೋತ್ತರ ಪದವಿಧರೆಯೂ ಹೌದು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಐಶಾನಿ ಮುಂದೆ ನೀನಾಸಂ ಸತೀಶ್ ಅಭಿನಯದ ‘ರಾಕೆಟ್’ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ರಾಕೆಟ್ ಸಿನಿಮಾದ ನಂತರ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದ್ದ ಐಶಾನಿ ಮುಂದೆ ನಡುವೆ ಅಂತರವಿರಲಿ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ನಡುವೆ ಅಂತರವಿರಲಿ ಸಿನಿಮಾದಲ್ಲಿ ಹದಿಹರೆಯದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕರಾವಳಿ ಕುವರಿ ನಿರ್ದೇಶನದಲ್ಲೂ ಎತ್ತಿದ ಕೈ.

ಅವರ ನಿರ್ದೇಶನದ ಕಿರುಚಿತ್ರ ಕಾಜಿ ಗೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ಅವರ ಪ್ರತಿಭೆಗೆ ಸಂದ ಫಲ. ಕಾಜಿ ಯು ಹಲವು ವಿದೇಶಿ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದಲ್ಲದೇ ಪ್ರಶಸ್ತಿಯನ್ನೂ ಬಾಚಿಕೊಂಡಿದೆ. ಕನ್ನಡ ಚಂದನವನದಲ್ಲಿ ತನ್ನದೇ ಆದ ಹೆಸರು ಮಾಡಿರುವಂತಹ ಐಶಾನಿ ಶೆಟ್ಟಿ ಅವರು ಕನ್ನಡ ಚಿತ್ರರಂಗದ ಮುದ್ದು ಯುವ ನಟಿ ಕೂಡ ಹೌದು. ಬಾಲ್ಯದಲ್ಲಿಯೇ ಶಾಲೆ ಕಾಲೇಜುಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.`ಜೋತಿ ಅಲಿಯಾಸ್ ಕೋತಿರಾಜ್ ಚಿತ್ರದಿಂದ ಚಂದನವನ ಪ್ರವೇಶಿಸಿದರು.

ಇವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫೋಟೋಗಳನ್ನು ವಿಡಿಯೋಗಳನ್ನು ನಾನಾ ರೀತಿಯ ಕೇಶವಿನ್ಯಾಸವನ್ನು ಮಾಡಿಕೊಂಡ ಅದರ ಫೋಟೋಗಳನ್ನು ಹೀಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಒಟ್ಟಾರೆ ಐಶಾನಿ ಶೆಟ್ಟಿ ಅವರಿಗೆ ಹೇಳುವುದಾದರೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲವಾಗಿತ್ತಾರೆ ಎಂದು ಹೇಳಬಹುದು. ಅವರು ನಿರ್ದೇಶನದಲ್ಲಿ ಕೂಡ ತನ್ನದೇ ಆದಂತಹ ಛಾ’ಪು ಮೂಡಿಸಿದವರು ಕಾಜಿ ಎನ್ನುವ ಒಂದು ಕಿರು ಚಿತ್ರವನ್ನು ಮಾಡಿ. ಈ ಕಿರು ಚಿತ್ರವನ್ನು ಸತೀಶ್ ನೀನಾಸಂ ಅವರು ನಿರ್ಮಿಸಿದ್ದಾರೆ.

ಈ ಕಿರುಚಿತ್ರಕ್ಕೆ ಉತ್ತಮವಾದಂತಹ ಪ್ರತಿಕ್ರಿಯೆ ಸಿಕ್ಕಿ ಅದೆಷ್ಟು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು. ಆ ಕಿರುಚಿತ್ರವನ್ನು ಭವಿಷ್ಯ ನೀವು ವೀಕ್ಷಿಸಿದಲ್ಲಿ ಅವರ ನಿರ್ದೇಶನದ ಕ್ರಿಯಾಶೀಲತೆ ಮನಸ್ಥಿತಿಯನ್ನು ಸುಲಭವಾಗಿ ಹೇಳಬಹುದು. ಒಟ್ಟಾರೆ ಇಲ್ಲಿಯವರೆಗೆ ಅವರು ವಾಸ್ತುಪ್ರಕಾರ, ರಾಕೆಟ್, ನಮ್ ಗಣಿ ಬಿಕಾಂ ಪಾಸ್, ನಡುವೆ ಅಂತರವಿರಲಿ ಹೀಗೆ ಕೆಲ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಇತ್ತೀಚಿಗೆ ಹೊಂದಿಸಿ ಬರೆಯಿರಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಅವರೇ ಹೇಳಿದ್ದಾರೆ. ಇಷ್ಟೇ ಅಲ್ಲದೆ ಇವರು ಉತ್ತಮ ಗಾಯಕಿಯೂ ಸಹಾ ಆಗಿದ್ದಾರೆ.

ಇವರು ಒಂದೆರಡು ಹಾಡುಗಳನ್ನು ಹಾಡಿದ್ದಾರೆ. ಇದನ್ನು ಹೊರತುಪಡಿಸಿದರೆ ಇವರು ನಟಿಸಿರುವಂತ ಕೆಲವು ಸಿನಿಮಾಗಳ ಹಾಡುಗಳನ್ನಾ ಇವರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಬಹುತೇಕ ನಟಿಯರಿಗೆ ಪಯಣ ಬೆಳೆಸುವುದು ಸರ್ವೇಸಾಮಾನ್ಯವಾಗಿದೆ. ಶೂಟಿಂಗ್, ಇತರೆ ವ್ಯ’ವಹಾರ ಹೀಗೆ ಅನೇಕ ಪ್ರದೇಶಗಳಿಗೆ ಹೋಗಲೇ ಬೇಕಾಗಿರುತ್ತದೆ. ಕೆಲ ನಟಿಯರಿಗೆ ಪಯಣ, ಟ್ರಿಪ್, ಟ್ರೆಕ್ಕಿಂಗ್ ಅಲ್ಲಿ ತುಂಬಾನೇ ಕ್ರೇಜ್ ಕೂಡಾ ಇರುತ್ತೆ. ಕಳೆದೆರಡು ದಿನಗಳ ಹಿಂದೆ ಐಶಾನಿ ಶೆಟ್ಟಿ ಅವರು ಕಾರಿನಲ್ಲಿ ಹೋಗುವಾಗ ಒಂದು ಹಳ್ಳಿಯ ಸಮೀಪದಲ್ಲಿ ತನ್ನ ಕಾರಿನಲ್ಲಿ ಚಲಿಸ್ತಾ ಇರುತ್ತಾರೆ.

ಹಳ್ಳಿಯ ಮಕ್ಕಳು ಇವರನ್ನು ನೋಡಿ ಬಹುಶಃ ಅವರಿಗೆ ಐಷಾನಿಯ ಹೆಸರು ಗೊತ್ತಿತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಐಶಾನಿ ಶೆಟ್ಟಿಯನ್ನು ನೋಡಿದಂತಹ ಕೆಲ ಹುಡುಗರು ಅವರ ನಟನೆಯ ನಡುವೆ ಅಂತರವಿರಲಿ ಸಿನಿಮಾದ ಹಾಡನ್ನು ಹಾಡಿದರು. ಅದು ಯಾವ ಹಾಡು ಅಂತೀರಾ. ಶಾಕುಂತಲೆ ಸಿಕ್ಕಳು, ಸುಮ್ ಸುಮ್ನೆ ನಕ್ಕಳು ಎಂಬ ಹಾಡನ್ನು ಇವರು ಹಾಡಿದರು. ಈ ವಿಡಿಯೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹಂಚಿಕೊಂಡಿದ್ದಾರೆ. ಈ ಹಾಡನ್ನು ಆ ಹುಡುಗರು ಹಾಡುವಾಗ ಐಷಾನಿ ನಾಚಿ ನೀರಾಗಿದ್ದು ಮಾತ್ರ ಸುಳ್ಳಲ್ಲ.

LEAVE A REPLY

Please enter your comment!
Please enter your name here