ಇದು ನೀರಿಗಿಂತ ಹೆಚ್ಚು ಅಗತ್ಯ. ಡಾ. ಬಿ.ಎಂ ಹೆಗ್ಡೆ.

0
5854

ಹ್ರದಯವಂತ ಹ್ರದಯತಜ್ಞ ಎಂದು ಕರೆಯಲ್ಪಡುವ ಡಾ.ಬಿ.ಎಂ ಹೆಗ್ಡೆಯವರು ಉಡುಪಿಯ ಬೆಳ್ಳೆಯವರು. ಪೂರ್ಣ ಹೆಸರು ಡಾ. ಬೆಳ್ಳೆ ಮೋನಪ್ಪ ಹೆಗ್ಡೆ. ಇವರು ಮಣಿಪಾಲ ವೈದ್ಯಕೀಯ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಯವರು. ಇವರು ಪ್ರತಿಷ್ಠಿತ ರಾಷ್ಟ್ರೀಯ ‘ಪದ್ಮ ಭೂಷಣ ‘ ಪ್ರಶಸ್ತಿ ಪುರಸ್ಕೃತ ರು. ಇವರು ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ ಪುರಸ್ಕೃತ ರು ಕೂಡಾ. ಇನ್ನೂ ಹಲವು ಪ್ರಶಸ್ತಿ ಇವರಿಗೆ ಲಭಿಸಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವೈದ್ಯರ ಸಾಲಿನಲ್ಲಿ ನಿಲ್ಲುವ ವಿರಳ ವೈದ್ಯರಲ್ಲಿ ಅಗ್ರಗಣ್ಯರು.

ಉತ್ತಮ ಬರಹಗಾರ, ನಿಷ್ಠೂರವಾದಿ, ಅತ್ಯದ್ಭುತ ಭಾಷಣಕಾರ, ಕನ್ನಡ ಪ್ರೇಮಿ. ಇವರು ಏಳು ಭಾಷೆಯಲ್ಲಿ ಸುಲಲಿತವಾಗಿ ಮಾತನಾಡುತ್ತಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮೂವತ್ತಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಇವರ ಭಾಷಣ ಕೇಳಿದವರಿಗೆ ಅಥವಾ ಲೇಖನ ಓದಿದವರಿಗೆ ಅದನ್ನು ಅನುಸರಿಸಿದರೆ ಕಾ’ಯಿಲೆ ದೂರವಾಗುವುದು ಖಚಿತ. ಡಾ.ಬಿ.ಎಮ್.ಹೆಗ್ಡೆ ಅವರು ಬರೆದ ಲೇಖನವೊಂದು ಇಲ್ಲಿದೆ. ತಪ್ಪದೆ ಓದಿ.

ಕೊಲೆಸ್ಟ್ರಾಲ್ : ಔಷಧ ಮಾ’ಫಿಯಾದ ಭೂ’ತ. ಕೊಲೆಸ್ಟ್ರಾಲ್ ಅಂದರೆ ಫ್ಯಾಟ್. ಇದು ದೇಹದ ಮೂಲಭೂತ ಅಗತ್ಯ. ನಾವು ತಿನ್ನುವ ಆಹಾರದಲ್ಲಿ ಶೇಕಡ ಹತ್ತರಷ್ಟು ಆಹಾರ ಕೊಲೆಸ್ಟ್ರಾಲ್ ಆಗುತ್ತದೆ. ಉಳಿದಂತೆ ನಮ್ಮ ದೇಹ ತನಗೆ ಬೇಕಾದಷ್ಟು ಕೊಲೆಸ್ಟ್ರಾಲನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ. ನಮ್ಮ ದೇಹಕ್ಕೆ ಕೊಲೆಸ್ಟ್ರಾಲ್ ಆಹಾರ ನೀರಿಗಿಂತ ಹೆಚ್ಚು ಅಗತ್ಯ. ಇದು ಇಲ್ಲವಾದರೆ ಮನುಷ್ಯ ಸ’ತ್ತೇ ಹೋಗುತ್ತಾನೆ. ದೇಹದಲ್ಲಿ ೧೨೦ ಟ್ರಿಲಿಯನ್ ಕಣಗಳಿವೆ. ಕೆಲವು ಮಿಲಿಯ ಕಣಗಳು ಆಯುಷ್ಯ ಮುಗಿದು ಪ್ರತಿದಿನ ಸಾ’ಯುತ್ತವೆ.

ಪ್ರತಿ ಕಣ ಹುಟ್ಟಬೇಕಾದರೆ, ಆ ಕಣದ ಆರೋಗ್ಯ ರಕ್ಷಣೆ ಆಗಬೇಕಾದರೆ ಕೊಲೆಸ್ಟ್ರಾಲ್ ಬೇಕು. ಲಿ’ವರ್ ನಲ್ಲಿ ಕೊಲೆಸ್ಟ್ರಾಲ್ ಸೃಷ್ಟಿಯಾಗುತ್ತದೆ. ಒತ್ತಡ ಹೆಚ್ಚಿದಾಗ ಅದರ ನಿವಾರಣೆಗೆ ಕೊಲೆಸ್ಟ್ರಾಲ್ ಬೇಕು. ದೇಹದ ಹಾ’ರ್ಮೋನುಗಳು ಸರಿಯಾಗಿ ಕೆಲಸ ಮಾಡಬೇಕೆಂದರೂ ಕೊಲೆಸ್ಟ್ರಾಲ್ ಬೇಕೇ ಬೇಕು. ಒಳ್ಳೆಯ ಕೊಲೆಸ್ಟ್ರಾಲ್, ಕೆ’ಟ್ಟ ಕೊಲೆಸ್ಟ್ರಾಲ್ ಎಂಬುದಿಲ್ಲ. ಮನುಷ್ಯ ಹುಟ್ಟಿಸಿದ ಜಾತಿಯಂತೆ ಇದು ಕೂಡ ಕೃತಕ. ಔಷಧ ಕಂಪನಿಗಳು ಹಣ ಮಾಡಲು ಹುಟ್ಟಿಸಿದ ನಂಬಿಕೆಯಿದು. ರ’ಕ್ತದಲ್ಲಿರುವ ಕೊಲೆಸ್ಟ್ರಾಲ್ ನಾವು ತಿಂದು ಬಂದಿರುವುದಿಲ್ಲ.

ಶೇ ೧೦ ರಷ್ಟು ಮಾತ್ರ ತಿಂದ ಆಹಾರದಿಂದ ಬರುತ್ತದೆ. ೩೦೦ ಮಿ.ಗ್ರಾಂ ಕೊಲೆಸ್ಟ್ರಾಲ್ ಇದ್ದರೆ ಅದನ್ನು ಕಡಿಮೆ ಮಾಡಬೇಕೆಂದು ನೀವು ಹುಲ್ಲು ತಿಂದರೂ ೨೭೫ ಕ್ಕಿಂತ ಕಡಿಮೆಯಾಗುವುದಿಲ್ಲ. ಕೊಲೆಸ್ಟ್ರಾಲ್ ಶ’ತ್ರುವಲ್ಲ ಮಿತ್ರ. ಇದು ಕಾಯಿಲೆಯೂ ಅಲ್ಲ. ನಾನಿದನ್ನು ೪೫ ವರುಷಗಳಿಂದ ಹೇಳುತ್ತಲೇ ಬಂದಿದ್ದೇನೆ. ಈಗ ಆಮೇರಿಕಾದವರು ಇದನ್ನು ಒಪ್ಪಿಕೊಂಡಿದ್ದಾರೆ. ಸಿ’ಟ್ಟು, ಆ’ಕ್ರೋಶ, ದ್ವೇ’ಷ ಹೆಚ್ಚಿದ್ದಾಗ ಸ್ಟಿರಾಯ್ಡ್ ಲೆವೆಲ್ ಹೆಚ್ಚಿ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಸರೀ ತಿನ್ನಬೇಕು. ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ದ್ವೇ’ಷಿಸದೇ ಇರುವುದನ್ನು ರೂಢಿ ಮಾಡಿಕೊಳ್ಳಬೇಕು. ವ್ಯಾಯಾಮ ಮಾಡಬೇಕು. ಪ್ರತಿ ದಿನ ವಾಕ್ ಮಾಡಬೇಕು.

ಕೊಲೆಸ್ಟ್ರಾಲ್ ಗೆ ಮ’ದ್ದು ತೆಗೆದುಕೊಂಡರೆ ಲಿವರ್ ನಲ್ಲಿ ಆಗುವ ಯಾವ ಕೆಲಸವೂ ನಡೆಯುವುದಿಲ್ಲ. ಇಡೀ ದೇಹದ ವ್ಯವಸ್ಥೆ ಹಾಳಾಗುತ್ತದೆ. ಇದಕ್ಕೆ ಔಷಧ ಪಡೆಯುವುದು ಮೂ’ರ್ಖತನ. ಆದರೆ ವೈದ್ಯರು ಕೊಲೆಸ್ಟ್ರಾಲ್ ಇದೆ ಎಂದಾಕ್ಷಣ ಮದ್ದು ಬರೆದು ಕೊಡುತ್ತಾರೆ. ಇದಕ್ಕೆ ಕಾರಣ ಔಷಧ ಕಂಪನಿಗಳು. ರೋಗಿಗೆ ಇದೇ ಮದ್ದು ನೀಡಬೇಕು ಎಂದು ಬರೆಸುವುದು ಕೂಡಾ ಇದೇ ಔಷಧ ಕಂಪನಿಗಳ ಮಾ’ಫಿಯಾ. ಇತ್ತೀಚೆಗೆ ಪ್ಯಾರೀಸ್ ನಲ್ಲಿ ಒಂದು ಸಮೀಕ್ಷೆ ನಡೆಯಿತು. ವೃದ್ಧಾಶ್ರಮವೊಂದರ ೮೦, ೯೦ ವಯಸ್ಸಿನ ವೃದ್ಧರಲ್ಲಿದ್ದ ಕೊಲೆಸ್ಟ್ರಾಲ್ ಪರಿಶೀಲನೆ ಮಾಡಿದಾಗ ೮೦೦, ೯೦೦ ಮಿ.ಗ್ರಾಂ ಇತ್ತು. ಸತ್ಯವೇನೆಂದರೆ ಅಷ್ಟು ಕೊಲೆಸ್ಟ್ರಾಲ್ ಇದ್ದ ಕಾರಣಕ್ಕೇ ಅವರು ಅಷ್ಟು ವರ್ಷ ಬದುಕಿದ್ದರು.

ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ೧೫೦ ರಿಂದ ೨೦೦ ಮಿ.ಗ್ರಾಂ ಇರಬೇಕು. ಆದರೆ ಈಗ ಮಿತಿಯನ್ನು ೧೮೦ ಕ್ಕೆ ವೈದ್ಯರೇ ಇಳಿಸಿದ್ದಾರೆ. ಇದರಿಂದಾಗಿ ವಿಶ್ವದಲ್ಲಿ ಕೋಟ್ಯಾಂತರ ಮಂದಿ ರೋ’ಗಿಗಳ ಪಟ್ಟಿಗೆ ಸೇರುತ್ತಾರೆ. ಇದರಿಂದ ಮ’ದ್ದು ಮಾರಾಟ ಹೆಚ್ಚಾಗುತ್ತದೆ. ಇದರ ಲಾ’ಭ ಔಷಧ ಕಂಪನಿಗಳಿಗೇ. ಇದರಿಂದಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಔಷಧ ತಯಾರಿಸುವ ಕಂಪನಿಗಳಿಗೆ ವಾರ್ಷಿಕ ಲಾ’ಭ ೧೩ ಬಿಲಿಯನ್ ಡಾಲರ್ ಬಂದಿದೆ.

ಹಾ’ರ್ಟ್ ಅ’ಟ್ಯಾಕ್ ಗೂ ಕೊಲೆಸ್ಟ್ರಾಲ್ ಗೂ ಯಾವ ಬಾ’ದರಾಯಣ ಸಂಬಂಧವೂ ಇಲ್ಲ. ಕೊಲೆಸ್ಟ್ರಾಲ್ ಕಡಿಮೆಯಾದರೆ ಕ್ಯಾ’ನ್ಸರ್, ಮಾ’ನಸಿಕ ರೋಗ, ಆ’ತ್ಮಹ’ತ್ಯೆಗಳ ಸಾಧ್ಯತೆ ಹೆಚ್ಚುತ್ತದೆ. ಕೊಲೆಸ್ಟ್ರಾಲ್ ಕಡಿಮೆಯಾದರೆ ಆರೋಗ್ಯ ಹಾಳು. ಮಾತ್ರೆಗಳಿಂದ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಿದರೆ ಲಿವರ್ ಗೆ ಹಾನಿಯಾಗುತ್ತದೆ. ಹಾರ್ಮೋನ್ ಗಳ ಉತ್ಪಾದನೆ ನಿಲ್ಲುತ್ತದೆ. ದೇಹದ ಕ’ಣಗಳ ರ’ಕ್ಷಾ ಕವಚ ಹಾಳಾಗುತ್ತದೆ. ಇದು ಡಯಾಬಿಟಿಸ್ ಗೆ ಕಾರಣವಾಗುತ್ತದೆ. ಇದಕ್ಕಾಗಿಯೇ ಕೊಲೆಸ್ಟ್ರಾಲ್ ಔ’ಷಧ ನೀಡಿದ ಬಳಿಕ ಆಗಾಗ ಲಿ’ವರ್ ಪರೀಕ್ಷೆ ಮಾಡಿಸುತ್ತಾರೆ.

ಕೆಲಸ ಮಾಡಲು ಲವಲವಿಕೆ ಇದ್ದರೆ ಅದುವೇ ಆರೋಗ್ಯ. ಲವಲವಿಕೆ ಇಲ್ಲದಿದ್ದರೆ ಅ’ನಾರೋಗ್ಯ. ಆರೋಗ್ಯಕ್ಕೆ ದೇಸಿ ಹಾಲು ಶ್ರೇಷ್ಟ, ಹಾಲಿಗಿಂತಲೂ ತುಪ್ಪ ಶ್ರೇಷ್ಟ. ಅಂತಿಮವಾಗಿ ನೀವು ತಿಂದದ್ದು ನಿಮ್ಮನ್ನು ಕೊ’ಲ್ಲುವುದಿಲ್ಲ. ನಿಮ್ಮ ತಲೆಯನ್ನು ತಿನ್ನುವುದೇ ನಿಮ್ಮನ್ನು ಕೊ’ಲ್ಲುತ್ತದೆ. ನಮ್ಮಲ್ಲಿ ಹುಟ್ಟುವ ದ್ವೇ’ಷ, ಕ್ರೋ’ಧ ಮೊದಲಾದ ಕೆಟ್ಟ ಚಿಂ’ತನೆಗಳು ನಮ್ಮನ್ನು ಕೊಲ್ಲುತ್ತವೆ. ಪ್ರಪಂಚದಲ್ಲಿ ಅತೀ ಹೆಚ್ಚು ಸಾ’ವು ಉಂಟಾಗುತ್ತಿರುವುದು ಔಷಧಗಳ ಅ’ಡ್ಡ ಪರಿಣಾಮದಿಂದ. ಹೀಗೆಂದು ಡಾ.ಬಿ.ಎಂ.ಹೆಗ್ಡೆ ತಮ್ಮ ಒಂದು ಲೇಖನದಲ್ಲಿ ಬರೆದಿದ್ದಾರೆ.

LEAVE A REPLY

Please enter your comment!
Please enter your name here