ಸಂಜಿತ್ ಹೆಗಡೆ ಒಂದು ಚಿತ್ರದ ಹಾಡಿಗೆ, ಒಂದು ಕಾನ್ಸರ್ಟ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.

0
3600

ಕನ್ನಡ ಚಿತ್ರರಂಗದಲ್ಲಿ ನಾಯಕರಿಗೆ ಇರುವಷ್ಟು ಬೆಲೆ ಬೇರೆ ವ್ಯಕ್ತಿಗಳಿಗೆ ಅವರು ಮಾಡುವ ಕೆಲಸಗಳಲ್ಲಿ ಸಿಗುವುದಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಆಶ್ಚರ್ಯವೆಂಬಂತೆ ಕೇವಲ ನಟರಿಗೆ ಅಷ್ಟೇ ಅಲ್ಲ ಈಗ ಗಾಯಕರ ಸಂಭಾವನೆಯೂ ಕೂಡ ಹೆಚ್ಚಾಗಿದೆ. ತನ್ನ ಅತ್ಯಂತ ದೊಡ್ಡ ಬಜೆಟ್ ಗಳೊಂದಿಗೆ ಬರುವ ಸಿನಿಮಾಗಳು ಈಗ ಹಿಂದಿ ಅಥವಾ ಇತರೆ ಭಾಷೆಗಳಿಂದ ಗಾಯಕರನ್ನು ಕರೆಸಿ ಹಾರಿಸುವುದನ್ನು ಕೊಂಚ ಕಡಿಮೆ ಮಾಡಿವೆ.

ಏಕೆಂದರೆ ಕನ್ನಡ ಚಿತ್ರರಂಗದಲ್ಲಿ ಈಗ ಉತ್ತಮ ಗಾಯಕ ಹಾಗೂ ಗಾಯಕಿಯರು ಉದಯೋನ್ಮುಖ ಪ್ರತಿಭೆಗಳಾಗಿ ಹೊರಹೊಮ್ಮಿದ್ದಾರೆ. ಹಾಗೂ ಕೇವಲ ಕನ್ನಡ ಚಿತ್ರರಂಗವಲ್ಲದೆ ಹಿಂದಿ ಹಾಗೂ ತಮಿಳು ತೆಲುಗು ಚಿತ್ರರಂಗಗಳಲ್ಲಿಯು ತಮ್ಮ ಗಾನ ಸುಧೆಯನ್ನು ಹರಿಸಿದ್ದಾರೆ. ಹಾಗೆಯೇ ನಮ್ಮ ಕನ್ನಡದ ದಿಗ್ಗಜ ಗಾಯಕರುಗಳು ಈಗ ಬರುತ್ತಿರುವ ಉದಯೋನ್ಮುಖ ಗಾಯಕರನ್ನು ವಿವಿಧ ಭಾಷೆಗಳಿಗೆ ಪರಿಚಯಿಸುತ್ತಿದ್ದಾರೆ.

ಹಾಗೆಯೇ ಜೀ ಕನ್ನಡ ಕಾರ್ಯಕ್ರಮದಲ್ಲಿ ಕೂಡ ತಮ್ಮ ಗಾಯನದ ಛಾಪನ್ನು ಮೂಡಿಸಿದ್ದ ಸಂಜಿತ್ ಹೆಗಡೆ ಅವರನ್ನು ನೀನು ಕೇವಲ ಕನ್ನಡದಲ್ಲಷ್ಟೇ ಅಲ್ಲ ಭಾರತದಲ್ಲಿರುವ ಎಲ್ಲ ಸಂಗೀತದ ಇಂಡಸ್ಟ್ರಿಯಲ್ಲಿ ಮಿಂಚಬೇಕು. ಹೀಗೆಂದು ಹೇಳಿದ ಕನ್ನಡದ ಖ್ಯಾತ ಗಾಯಕ, ಆಸ್ಕರ್ ಪ್ರಶಸ್ತಿ ವಿಜೇತ ವಿಜಯ ಪ್ರಕಾಶ್ ಅವರು ಸಂಜಿತ್ ಹೆಗಡೆ ಅವರನ್ನು ನಂತರ ತಮಿಳು ಇಂಡಸ್ಟ್ರಿಯ ಸರಿಗಮಪ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದರು.

ಅಲ್ಲಿ ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಶೈಲಿಯ ಗಾಯನದಿಂದ ಇಡೀ ನಾಡಿನ ಜನರ ಮನಸ್ಸು ಗೆದ್ದ ಸಂಜಿತ್ ಹೆಗಡೆ ಅವರು, ನಂತರದ ದಿನಗಳಲ್ಲಿ ದಿನೇದಿನೇ ಪ್ರಖ್ಯಾತಿ ಪಡೆದುಕೊಳ್ಳುವುದಕ್ಕೆ ಶುರು ಮಾಡಿಕೊಂಡರು. ನಂತರ ಒಂದೊಂದೇ ಹಾಡುಗಳನ್ನು ಪ್ರಾರಂಭಿಸಿದ್ದ ಸಂಜೆ ಹೆಗಡೆಯವರು ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಬಂದು ಕನ್ನಡದ ಹಾಡುಗಳನ್ನು ಹಾಡಲು ಶುರುಮಾಡಿದರು. ಅವರ ಹಾಡುಗಳಿಗೆ ಬೇಡಿಕೆ ಹೇಗೆ ಹೆಚ್ಚಾಯಿತೆಂದರೆ ಎಷ್ಟು ಚಿತ್ರಗಳಲ್ಲಿ ಸಂಜಿತ್ ಹೆಗಡೆ ಅವರ ಹಾಡಿನ ಶೈಲಿಗೆ ತಕ್ಕಂತೆ ಒಂದು ಹಾಡು ಇರಬೇಕು.

ಹೀಗೆಂದು ಚಿತ್ರನಿರ್ದೇಶಕರು ಅದೇ ರೀತಿಯ ಹಾಡನ್ನು ಬರೆಸಿ ಅದೇ ಶೈಲಿಯ ಮ್ಯೂಸಿಕ್ ಕಂಪೋಸಿಶನ್ ಮಾಡಿಸುತ್ತಿದ್ದರಂತೆ. ಹಾಗೆಯೇ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಇತರರು ಮಾರ್ಗದರ್ಶನ ನೀಡಿರುವ ಆಧಾರದ ಮೇಲೆ ಸಂಜಿತ್ ಹೆಗಡೆ ಅವರು ಹಲವಾರು ಚಿತ್ರಗಳಲ್ಲಿ ಹಾಡಲು ಶುರುಮಾಡಿದರು. ಮೊದಮೊದಲು ಅರ್ಜುನ್ ಜನ್ಯ ಅವರ ಗರಡಿಯಲ್ಲಿ ಪಳಗಿದ ಸಂಜಿತ್ ಹೆಗಡೆಯವರು ಚಮಕ್ ಚಿತ್ರದ ಕುಶ್ ಕುಶ್ ಎಂಬ ಹಾಡು ಹಾಡುವುದರ ಮೂಲಕ ಪ್ರಖ್ಯಾತಿ ಪಡೆದರು.

ನಂತರ ದಿನೇದಿನೇ ಹಲವಾರು ಚಿತ್ರಗಳನ್ನು ಹಾಡಿದ ಸಂಗೀತ ಹೆಗಡೆಯವರು ಪೈಲ್ವಾನ್, ನಡುವೆ ಅಂತರವಿರಲಿ, ನಟಸಾರ್ವಭೌಮ ಹೀಗೆ ಹತ್ತು ಹಲವಾರು ಚಿತ್ರಗಳಲ್ಲಿ ತಮ್ಮ ವಿಭಿನ್ನ ಶೈಲಿಯ ಗೀತೆಯನ್ನು ಪ್ರಸ್ತುತಪಡಿಸಿದ್ದಾರೆ. ಹಲವಾರು ದಿಗ್ಗಜರಾದ ಪುನೀತ್ ರಾಜಕುಮಾರ್, ಶಿವಣ್ಣ, ಗಣೇಶ್ ಹೀಗೆ ವಿವಿಧ ನಟರಿಂದ ಶ್ಲಾಘನೆಯನ್ನು ಪಡೆದುಕೊಂಡಿದ್ದಾರೆ. ನಂತರ ಹೀಗೆ ಉತ್ತಮ ಗಾಯನಗಳನ್ನು ನೀಡುತ್ತಾ ಪ್ರಖ್ಯಾತಿ ಪಡೆದ ಸಂಜಿತ್ ಹೆಗಡೆಯವರು ಈಗ ಒಂದು ಪ್ರೈವೇಟ್ ಕಾರ್ಯಕ್ರಮಕ್ಕೆ ತಾವೊಬ್ಬರೇ ಬಂದು ಹಾಡುವುದಕ್ಕೆ ಪಡೆದುಕೊಳ್ಳುವ ಸಂಭಾವನೆ 1.5 ಲಕ್ಷದಿಂದ 2ಲಕ್ಷ.

ಹಾಗೆಯೇ ಅವರು ಸಂಪೂರ್ಣ ತಂಡದೊಂದಿಗೆ ಬಂದು ಹಾಡಬೇಕು ಎಂದರೆ ಅವರು ಪಡೆದುಕೊಳ್ಳುವ ಸಂಭಾವನೆ 5 ಲಕ್ಷ.ಅಷ್ಟೇ ಅಲ್ಲ ಒಂದು ಚಿತ್ರಕ್ಕೆ ಹಿನ್ನೆಲೆ ಗಾಯನಕ್ಕಾಗಿ ಸಂಜಿತ್ ಹೆಗಡೆ ಅವರು ಪಡೆದುಕೊಳ್ಳುವ ಸಂಭಾವನೆ ಈಗ ಸರಿಸುಮಾರು ವಿಜಯಪ್ರಕಾಶ್ ಅವರು ಪಡೆದುಕೊಳ್ಳುವ ಸಂಭಾವನೆಯನ್ನೇ ಮುಟ್ಟುತ್ತಿದೆ. ಅಂದರೆ ಸರಿ ಸುಮಾರು 70ರಿಂದ 80 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುವ ಸಂಜಿತ್ ಹೆಗಡೆ ಯವರು ಅದಕ್ಕಿಂತ ಕಡಿಮೆ ಚಾರ್ಜಿಗೆ ಒಪ್ಪಿಕೊಳ್ಳುವುದಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here