ದಟ್ಟ ಕೂದಲಿಗಾಗಿ ಹೀಗೆ ಮಾಡಿ. ರಿಸಲ್ಟ್ ಪಕ್ಕ.

0
3333

ಕೂದಲು ಉದುರುತ್ತಿದೆಯೇ ಹಾಗಾದರೆ ನಿಮ್ಮ ಜೀವನಶೈಲಿ, ಆಹಾರಕ್ರಮದ ಕಡೆ ಗಮನ ಕೊಡುವುದು ಒಳ್ಳೆಯದು. ಇಲ್ಲಿ ಕೂದಲು ಸೊಂಪಾಗಿ ಬೆಳೆಯಲು ಯಾವ ಆಹಾರ ತಿನ್ನಬೇಕು, ಕೂದಲು ಉದುರುವುದನ್ನು ತಡೆಗಟ್ಟಲು ಏನು ಮಾಡಬೇಕು ಎಂಬ ಟಿಪ್ಸ್ ನೀಡಿದ್ದೇವೆ ನೋಡಿ. ಕೂದಲು ಉದುರುವ ಸಮಸ್ಯೆ ಇತ್ತೀಚೆಗೆ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಕೆಲವರಿಗೆ ತುಂಬಾ ಚಿಕ್ಕ ಪ್ರಾ’ಯದಲ್ಲಿಯೇ ಕೂದಲು ಉದುರುವ ಸಮಸ್ಯೆ ಕಂಡು ಬಂದು ಯೌ’ವನ ಪ್ರಾಯದಲ್ಲಿಯೇ ಬಕ್ಕತಲೆ ಸಮಸ್ಯೆ ಕಂಡು ಬರುತ್ತಿದೆ. ಕೂದಲು ನಾನಾ ಕಾರಣಗಳಿಂದ ಉದುರುತ್ತದೆ.

ಕ’ಲುಷಿತ ನೀರು, ಧೂಳು, ಹಾ’ರ್ಮೋನ್‌ಗಳ ವ್ಯತ್ಯಾಸ, ಪೋಷಕಾಂಶಗಳ ಕೊರತೆ ಅಥವಾ ಕಾ’ಯಿಲೆಯಿಂದಾಗಿ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಕೂದಲು ಉದುರುವ ಸಮಸ್ಯೆ ಕಂಡು ಬಂದರೆ ಹೆಚ್ಚಿನವರು ಯಾವ ಎಣ್ಣೆ ಹಚ್ಚಬೇಕು, ಯಾವ ಶ್ಯಾಂಪೂ ಹಚ್ಚಬೇಕು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಕೂದಲು ಯಾವ ಕಾರಣಕ್ಕೆ ಉದುರುತ್ತದೆ ಎಂದು ತಿಳಿದುಕೊಂಡರೆ ಕೂದಲು ಉದುರುವುದನ್ನು ತಡೆಗಟ್ಟಬಹುದು.

ಕೂದಲು ಉದುರುವುದನ್ನು ತಡೆಗಟ್ಟಲು ಬಾ’ಹ್ಯಾ ಹಾಗೂ ಆಂ’ತರಿಕ ಆರೈಕೆ ಬಹುಮುಖ್ಯ. ನಮ್ಮ ಆಹಾರ ಕ್ರಮ, ಜೀವನಶೈಲಿ ಕೂಡ ಕೂದಲಿನ ಆರೋಗ್ಯದ ಮೇಲೆ ಪ್ರಭಾವ ಬೀರುವುದು. ಈ ರೀತಿಯ ಆಹಾರ ಕ್ರಮದಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುವುದು. ಅತ್ಯಧಿಕ ಖಾರ, ಉಪ್ಪು, ಹುಳಿ ಆಹಾರ ಸೇವನೆ. ಕಾಫಿ ಕುಡಿಯುವ ಚ’ಟ. ಮ’ದ್ಯಪಾನ. ಅತೀ ಹೆಚ್ಚು ಆಹಾರ ಸೇವನೆ. ಧೂಮಪಾನ. ಎಣ್ಣೆಯಲ್ಲಿ ಕರಿದ ಪದಾರ್ಥಗಳು. ಅಸಿಡಿಟಿ ಆಹಾರಗಳು. ಇವುಗಳು ಪಿತ್ತವನ್ನು ಹೆಚ್ಚುಮಾಡುತ್ತದೆ. ಇದರಿಂದಾಗಿ ಕೂದಲು ಉದುರುವುದು. ಆದ್ದರಿಂದ ಕೂದಲಿನ

ಆರೋಗ್ಯ ಹೆಚ್ಚಿಸುವ ಈ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ಬೆಣ್ಣೆಹಣ್ಣು : ಇದರಲ್ಲಿ ಆರೋಗ್ಯಕರ ಕೊಬ್ಬಿನಂಶವಿದೆ ಹಾಗೂ ಕೂದಲಿಗೆ ಅಗತ್ಯವಾದ ವಿಟಮಿನ್ ಇ ಇದ್ದು 200 ಗ್ರಾಂ ಬೆಣ್ಣೆ ಹಣ್ಣು ತಿನ್ನುವುದರಿಂದ ಕೂದಲು ಆರೋಗ್ಯಕರವಾಗಿ ಬೆಳೆಯುವುದು. ಬೀನ್ಸ್ : ಬೀನ್ಸ್‌ನಲ್ಲಿ ಸತುವಿನಂಶವಿದ್ದು 100 ಗ್ರಾಂ ಬೀನ್ಸ್ ತಿಂದರೆ ನಿಮಗೆ ದಿನನಿತ್ಯ ಬೇಕಾಗುವ ಸತುವಿನಲ್ಲಿ ಶೇ. 7 ರಷ್ಟು ಲಭ್ಯವಾಗುತ್ತದೆ. ಮೊಟ್ಟೆ : ಮೊಟ್ಟೆಯಲ್ಲಿ ಪ್ರೊಟೀನ್‌ ಹಾಗೂ ಬಯೋಟಿನ್‌ ಅಂಶವಿರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ಪ್ರೊಟೀನ್ ಅಂಶ ಕಡಿಮೆಯಾದರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಇನ್ನು ಇದರಲ್ಲಿರುವ ಬಯೋಟಿನ್‌ ಕೂದಲು ದಪ್ಪವಾಗಿ ಬೆಳೆಯಲು ಸಹಕಾರಿ.

ಒಮೆಗಾ 3 ಇರುವ ಬೀ’ಜಗಳು : ಸೂರ್ಯಕಾಂತಿ ಬೀಜ, ಅಗಸೆದ ಬೀಜ, ಶಿಯಾಬೀಜಗಳು ಇವುಗಳಲ್ಲಿ ವಿಟಮಿನ್ ಇ ಅಧಿಕವಿದ್ದು ಪ್ರತಿದಿನ 1 ಸ್ಪೂನ್‌ ತಿನ್ನುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು. ಸೊಪ್ಪು : ಆಕರ್ಷಕ ಕೂದಲು ಬೇಕೆಂದರೆ ನಿಮ್ಮ ಊಟದ ತಟ್ಟೆಯಲ್ಲಿ ಹಸಿರು ಇರುವಂತೆ ನೋಡಿಕೊಳ್ಳಿ, ಅಂದರೆ ಸೊಪ್ಪು ಅಧಿಕ ತಿನ್ನಬೇಕು. ಮೃದ್ವಂಗಿಗಳು : ಇದರಲ್ಲಿ ಸತುವಿನಂಶ ಅಧಿಕವಿದೆ, ದೇಹದಲ್ಲಿ ಸತುವಿನಂಶ ಕಡಿಮೆಯಾದರೂ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ಇನ್ನು ವೆಜ್‌ ಮಾತ್ರ ತಿನ್ನುವವರು ಕುಂಬಳಕಾಯಿ ಬೀಜ ತಿನ್ನುವುದು ಒಳ್ಳೆಯದು.

ಸಿಹಿಗೆಣಸು : ಇದರಲ್ಲಿ ಬೀಟಾ ಕೆರೋಟಿನ್‌ ಅಧಿಕವಿದೆ. ಒಂದು ಸಾಧಾರಣ ಗಾತ್ರದ ಸಿಹಿ ಗೆಣಸುವಿನಲ್ಲಿ ನಿಮಗೆ ದಿನನಿತ್ಯ ಅಗತ್ಯವಿರುವ ವಿಟಮಿನ್‌ ಎಲ್ಲಕ್ಕಿಂತ 4 ಪಟ್ಟು ಅಧಿಕವಿರುತ್ತದೆ. ಚೆನ್ನಾಗಿ ನೀರು ಕುಡಿಯಿರಿ : ಹೌದು, ಕೂದಲಿನ ಶೇ.25 ರಷ್ಟು ಜೀವಕೋಶಗಳು ನೀರಿನಿಂದ ನಿರ್ಮಿತವಾಗಿರುತ್ತದೆ. ದೇಹ ನಿರ್ಜಲೀಕರಣಗೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಕೂದಲಿನ ಬೇರುಗಳು ಗಟ್ಟಿಯಾಗಿರಲು ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿರುವುದು ಅತ್ಯಂತ ಅಗತ್ಯ. ದಿನವೊಂದರಲ್ಲಿ ಕನಿಷ್ಟ 8 ಲೋಟಗಳಷ್ಟು ನೀರು ಕುಡಿಯುವುದನ್ನು ತಪ್ಪಿಸುವುದು ಒಳ್ಳೆಯದಲ್ಲ.

ಇನ್ನು ಕೂದಲು ಉದುರುವುದನ್ನು ತಡೆಗಟ್ಟಲು ಜೀವನಶೈಲಿಯಲ್ಲಿ ಈ ರೀತಿಯ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು: ಧೂ’ಮಪಾನ, ಮ’ದ್ಯಪಾನ ಮುಕ್ತ ಜೀವನ. ಈ ಜೀವನ ಶೈಲಿಯಿಂದ ಆರೋಗ್ಯಕರ ಕೂದಲು ಮಾತ್ರವಲ್ಲ, ಉತ್ತಮ ಆರೋಗ್ಯವೂ ನಿಮ್ಮದಾಗುವುದು. ಮದ್ಯಪಾನ, ಧೂಮಪಾನ ಮಾಡುವುದರಿಂದ ಕೂದಲಿನ ಬೇರುಗಳಿಗೆ ಅಗತ್ಯವಾದ ರ’ಕ್ತ ಸಂಚಾರ ಕಡಿಮೆಯಾಗಿ ಕೂದಲಿನ ಆರೋಗ್ಯ ಹಾಳಾಗುವುದು.

ಒತ್ತಡ ಜೀವನಶೈಲಿಯಿಂದ ಹೊರಬನ್ನಿ. ಅತಿಯಾದ ಮಾ’ನಸಿಕ ಒ’ತ್ತಡ, ಚಿಂತೆಯಿಂದಲೂ ಕೂದಲು ಉದುರುತ್ತವೆ ಹಾಗೂ ಆರೋಗ್ಯವೂ ಹಾಳಾಗುವುದು. ಬದುಕಿನಲ್ಲಿ ಹಲವಾರು ಒ’ತ್ತಡದ ಪರಿಸ್ಥಿತಿ ಉಂಟಾಗುತ್ತದೆ. ಅದರ ಬಗ್ಗೆ ಚಿಂತೆ ಮಾಡದೆ ಸಮರ್ಥವಾಗಿ ನಿಭಾಯಿಸಬೇಕು. ಧ್ಯಾನ, ಸಂಗೀತ ಕೇಳುವುದು ಮಾಡಿ ಮಾನಸಿಕ ಒ’ತ್ತಡವನ್ನು ಹೊರಹಾಕಿ. ಮಾನಸಿಕ ಒ’ತ್ತಡವನ್ನು ಹೊರಹಾಕುವಲ್ಲಿ ಪ್ರಾಣಾಯಾಮ ಸಹಕಾರಿ.

ಆರೋಗ್ಯಕರ ಕೂದಲಿಗಾಗಿ ವ್ಯಾಯಾಮ ಮಾಡಿ : ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದೂ ಕೂದಲಿನ ರಕ್ಷಣೆಯ ಒಂದು ಮಾರ್ಗ ಎನ್ನಲಾಗುತ್ತದೆ. ಹಾಗೆಂದು ಗಂಟೆಗಟ್ಟಲೆ ಜಿಮ್‌ನಲ್ಲಿ ಕಾಲ ಕಳೆಯುವುದು ಎಲ್ಲದಕ್ಕೂ ಪರಿಹಾರವಲ್ಲ. ದಿನನಿತ್ಯ ಕೊಂಚ ಕಾಲ ದೈಹಿಕವಾಗಿ ವ್ಯಾಯಾಮ ಮಾಡುವುದು, ಚಟುವಟಿಕೆಗಳಲ್ಲಿ ನಿರತವಾಗಿರುವುದು ದೇಹದ ಆರೋಗ್ಯಕ್ಕೆ ಹಾಗೂ ಕೂದಲಿನ ಬೆಳವಣಿಗೆಗೂ ಒಳ್ಳೆಯದು. ಎಣ್ಣೆ ಮಸಾಜ್‌ ಮಾಡಿಕೊಳ್ಳಿ : ಹೆಚ್ಚಿನವರು ತಲೆಗೆ ಎಣ್ಣೆ ಹಾಕಿ ಮಸಾಜ್‌ ಮಾಡುವುದನ್ನು ಮರೆತೇ ಬಿಡುತ್ತಾರೆ.

ಅಷ್ಟೇ ಏಕೆ, ಅನೇಕರು ತಲೆಗೆ ಎಣ್ಣೆ ಹಾಕುವ ಅಭ್ಯಾಸವನ್ನೇ ಇಟ್ಟುಕೊಳ್ಳುವುದಿಲ್ಲ. ವಾರದಲ್ಲಿ ಕನಿಷ್ಠ 20 ನಿಮಿಷದಷ್ಟು ಕಾಲ ತಲೆಗೆ ಎಣ್ಣೆ ಹಾಕಿ ಮಸಾಜ್‌ ಮಾಡುವುದು ಮಾಡಿದರೆ ಕೂದಲಿಗೆ ಬೇಕಾದ ಆರೈಕೆ ಸಿಗುತ್ತದೆ. ಇದರಿಂದಾಗಿ ಕೂದಲು ಸೊಂಪಾಗಿ ಬೆಳೆಯುವುದು. ಕೂದಲಿನ ಬುಡ ಒಣಗಲು ಬಿಡಬೇಡಿ. ಆಹಾರದಲ್ಲಿ ಈ ಅಂಶಗಳಿರಲಿ : ನೀವು ಸೊಂಪಾದ ಕೂದಲಿಗಾಗಿ ಕಬ್ಬಿಣ, ಸತು, ಸಿಲಿಕಾ ಹಾಗೂ ವಿಟಮಿನ್‌ಗಳಿರುವ ಆಹಾರವನ್ನು ಸೇವಿಸಿ. ವಾಲ್ನಟ್ಸ್‌, ಓಟ್ಸ್‌, ಸ್ಟ್ರಾಬೆರಿಗಳನ್ನು ತಿನ್ನುವುದು ಒಳ್ಳೆಯದು.

ಈರುಳ್ಳಿ ಮ್ಯಾಜಿಕ್‌ ತಿಳಿಯಿರಿ : ಕೂದಲು ಉದುರುವಿಕೆ ತಡೆಯಲು ಈರುಳ್ಳಿ ಪರಿಣಾಮಕಾರಿ ಮನೆಮದ್ದು. ಕೂದಲಿನ ಬೆಳವಣಿಗೆಗೂ ಇವುಗಳು ಸಹಕಾರಿ. ಈರುಳ್ಳಿಯನ್ನು ಹೀಗೆ ಬಳಸಿ ಕೂದಲು ಉದುರುವುದನ್ನು ತಡೆಗಟ್ಟಿ. ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ತಲೆಗೆ ಶ್ಯಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಕೊನೆಯಲ್ಲಿ ಬಿಸಿನೀರಿಗೆ ಈರುಳ್ಳಿ ರಸ ಹಾಕಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ಬಹುಬೇಗ ಕಡಿಮೆಯಾಗುತ್ತದೆ.

ಒಂದು ಚಮಚ ಕೊಬ್ಬರಿ ಎಣ್ಣೆಯ ಜತೆಗೆ ಒಂದು ಚಮಚ ಈರುಳ್ಳಿ ರಸ, ಒಂದು ಚಮಚ ಬಾದಾಮಿ ಎಣ್ಣೆ ಮಿಶ್ರಣ ಮಾಡಿಕೊಂಡು ತಲೆಗೆ ಮಸಾಜ್‌ ಮಾಡುವುದರಿಂದ ಕೂದಲಿಗೆ ಕಾಂತಿ ಬರುವುದರ ಜತೆಗೆ ಹೊಟ್ಟು ಕೂಡ ನಿವಾರಣೆಯಾಗುತ್ತದೆ. ಈರುಳ್ಳಿಗೆ ಜೇನುತುಪ್ಪ ಸೇರಿಸಿಕೊಂಡು ದಿನನಿತ್ಯ ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಈರುಳ್ಳಿಯನ್ನು ಸಣ್ಣದಾಗಿ ಹಚ್ಚಿ ಅದಕ್ಕೆ ಒಂದು ಚಮಚ ಆಲಿವ್‌ ಎಣ್ಣೆ ಸೇರಿಸಿ ತಲೆಗೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಆರೋಗ್ಯವಾಗಿರುತ್ತದೆ.

ಇನ್ನು ಸೊಂಪು ಕೂದಲಿಗಾಗಿ ಈರುಳ್ಳಿಯನ್ನು ಈ ರೀತಿ ಬಳಸಬಹುದು : ಎರಡು ಈರುಳ್ಳಿ ತೆಗೆದುಕೊಂಡು ಅದರ ಸಿಪ್ಪೆ ಸುಲಿದು ಕ’ತ್ತರಿಸಿ ಒಂದು ಪಾತ್ರೆಯಲ್ಲಿ ಹಾಕಿ. ಒಂದು ಹಿಡಿ ಅಕ್ಕಿ ಅರ್ಧ ಗಂಟೆ ನೀರಿನಲ್ಲಿ ನೆನೆಹಾಕಿ. ಈಗ ಒಂದು ಪಾತ್ರೆಯಲ್ಲಿ ಅಕ್ಕಿ, ಈರುಳ್ಳಿ ಹಾಕಿ ಎರಡು ಲೋಟ ನೀರು ಸೇರಿಸಿ 5 ನಿಮಿಷ ಕುದಿಸಿ. ನಂತರ ಉರಿಯಿಂದ ಇಳಿಸಿ ಸೋಸಿ, ಆ ರಸವನ್ನು 4 ಗಂಟೆ ರೂಮಿನ ಉಷ್ಣತೆಗೆ ಇಡಿ. ನಂತರ ಒಂದು ಡಬ್ಬಕ್ಕೆ ಸುರಿದು ಮುಚ್ಚಳ ಮುಚ್ಚಿ ಫ್ರಿಡ್ಜ್‌ನಲ್ಲಿಟ್ಟು ಪ್ರತಿದಿನ ತಲೆಗೆ ಹಚ್ಚಿ. ಈ ಈರುಳ್ಳಿ ರಸ ಹಚ್ಚುವುದರಿಂದ ತೆಳ್ಳಗಿರುವ ಕೂದಲು ಮಂದವಾಗುವುದು.

ಎಣ್ಣೆ ಮಸಾಜ್ ಮಾಡಿ : ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಎಣ್ಣೆ ಮಸಾಜ್‌ ಕೂಡ ಸಹಕಾರಿ. ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಅದು ಉಗುರು ಬೆಚ್ಚಗೆ ಇರುವಾಗ ಮೆಲ್ಲನೆ ಕೈಯಲ್ಲಿ ತೆಗೆದುಕೊಂಡು ತಲೆಕೂದಲಿನ ಬುಡಕ್ಕೆ ಹಚ್ಚಿ ಮೆಲ್ಲನೆ ಮಸಾಜ್‌ ಮಾಡಿ, ಹೀಗೆ ಮಾಡುವುದರಿಂದ ರ’ಕ್ತ ಸಂಚಾರ ಹೆಚ್ಚುವುದು, ನಂತರ ಒಂದು ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ನಂತರ ತಲೆಗೆ ಸುತ್ತಿ. ಹೀಗೆ ಮಾಡುವುದರಿಂದ ಕೂದಲಿನ ಬುಡ ಎಣ್ಣೆಯನ್ನು ಹೀರಿಕೊಂಡು ಬಲವಾಗುತ್ತದೆ ಹಾಗೂ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯುವುದು.

LEAVE A REPLY

Please enter your comment!
Please enter your name here