ನಾವೇ ಬೆಳೆದ ಕಾಫಿ ನಮ್ಮ ಸಂಸ್ಕೖತಿಯಾಗುತ್ತಿಲ್ಲ ಯಾಕೆ.

0
1579

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ನಮಸ್ಕಾರ ಪ್ರಿಯ ಓದುಗರೇ. ಲೇಖನಗನ್ನು ಓದುವ ಒಳ್ಳೆಯ ಹವ್ಯಾಸ ಬೆಳೆಸಿಕೊಂಡಿರುವ ನಿಮಗೆಲ್ಲ ಸ್ವಾಗತ. ನಮ್ಮ ಸುತ್ತಲೇ ಹರಡಿಕೊಂಡಿರುವ ಕಾಫಿ. ಬೆಳಗ್ಗಿನ ಆಹ್ಲಾದದೊಂದಿಗೆ ಘಮಘಮಿಸುತ್ತಾ ಮೈ ಮನ ತಣಿಸುವ ನಮ್ಮ ಜೀವನದ ಭಾಗವೇ ಆಗಿರುವ ಕಾಫಿಗೆ ಇಂದು ವಿಶೇಷ ದಿನ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಕಾಫಿ ದಿನವನ್ನಾಗಿ ಅಕ್ಟೋಬರ್ 1 ನ್ನು ಆಚರಿಸಲಾಗುತ್ತದೆ. ಕಾಫಿಗೆ ಮಾನ್ಯತೆಯೊಂದಿಗೆ ಘನತೆಯನ್ನೂ ತಂದುಕೊಡುವ ದಿನ ಇಂದು.

ಕೊಡಗಿನ ಆಥಿ೯ಕತೆ ನಿಂತಿರುವುದೇ ಕಾಫಿ ಕೖಷಿ ಮೇಲೆ. ಕಾಫಿಗೆ ಬೆಲೆಯಿಲ್ಲ, ಕಾಫಿ ಬೆಳೆಯಿಲ್ಲ, ಕಾಫಿಗೆ ಕಾಮಿ೯ಕರಿಲ್ಲ, ಕಾಫಿಗೆ ಗುಣಮಟ್ಟವಿಲ್ಲ ಎಂಬೆಲ್ಲಾ ಕೊ’ರಗುಗಳ ನಡುವೇ ಕೖ’ಷಿಕರ ಜೀವನವನ್ನು ಹಸನಾಗಿಸಿದ್ದು ಇದೇ ಕಾಫಿ. ಕಾಫಿ ಹಲವರ ಪಾಲಿನ ಪ್ರೀತಿಗೆ, ಮಮತೆಗೆ, ಬಾಂಧವ್ಯಕ್ಕೆ ಕಾರಣವಾಗಿದೆ. ಒಂದು ಕಪ್ ಕಾಫಿ ಅನೇಕ ಸಂ’ಬಂ’ಧಗಳನ್ನು ಬೆಸೆದಿದೆ. ಕಾಫಿ ಮೂಟೆಗಳು ಬಂಗಲೆಗಳ ನಿಮಾ೯ಣಕ್ಕೆ ಆಧುನಿಕ ವಾಹನಗಳ ಸೌಕಯ೯ಕ್ಕೆ, ವಿದೇಶಗಳ ಸುತ್ತಾಟಕ್ಕೆ, ಎಲ್ಲಾ ರೀತಿಯ ಮೋ’ಜುಮ’ಸ್ತಿಗೆ, ಕಾಫಿ ಮೂಲಾಧಾರ.

ನಮ್ಮೆಲ್ಲಾ ಸು’ಖಗಳಿಗೆ ಕಾರಣವಾಗಿರುವ ಪ್ರೀತಿಯ ಕಾಫಿಯನ್ನು ನಾವೆಷ್ಟು ಪ್ರೀತಿಸಿದ್ದೇವೆ. ಕಾಫಿ ಎಂಬ ಕಪ್ಪು ಬೆಡಗಿ ತನ್ನ ಅಂತರಂಗದ ಮಾತನ್ನು ಆಡುವ ಶಕ್ತಿ ಹೊಂದಿದ್ದರೆ ನಮ್ಮನ್ನು ಹೇಗೆಲ್ಲಾ ದೂಷಿಸುತ್ತಿತ್ತೋ ಏನೋ. ಯಾಕೆಂದರೆ, ಗಮನಿಸಿ ನೋಡಿ, ಕಾಫಿ ಬೆಳೆಗಾರರಿಗೆ ತಮ್ಮ ಕಾಫಿಗೆ ಸೂಕ್ತ ಮಾರುಕಟ್ಟೆ ಬೇಕು. ಕಾಫಿ ಖರೀದಿಯಾಗಬೇಕು. ಆದರೆ, ತಾವು ಮಾತ್ರ ಕಾಫಿ ಕುಡಿಯಲು ಸಿದ್ದರಿಲ್ಲ, ಕಾಫಿ ಬೆಳೆಗಾರರಾಗಿಯೂ ಕಾಫಿಯ ಬಗ್ಗೆ ಒಳ್ಳೇ ಮಾತನಾಡಲು ಸಿದ್ದರಿಲ್ಲ.

ಸಮಾರಂಭಗಳಲ್ಲಿ. ಕಾಯ೯ಕ್ರಮಗಳಲ್ಲಿ, ಬಂಧು, ಮಿತ್ರರ ಮನೆಯಲ್ಲಿ ಕಾಫಿ ಬದಲಿಗೆ ಹಲವರ ಆದ್ಯತೆ ಚಹಾ. ನಮಗೇ ಕಾಫಿ ಪೇ’ಯವಾಗಿ ಬೇಡದೇ ಹೋದರೆ ಅದೇ ಕಾಫಿಯನ್ನು ಬೇರೆಯವರು ಪ್ರೀತಿಸಲಿ ಎಂಬ ಬಯಕೆ ಎಷ್ಟರ ಮಟ್ಟಿಗೆ ಸರಿ ಹೋದೀತು. ಕಾಫಿ ಬೆಳೆಸುವವರೇ ಕಾಫಿ ಕುಡಿಯದೇ ಹೋದರೆ, ಕಾಫಿಯ ಆಂತರಿಕ ಮಾರುಕಟ್ಟೆ ಹೇಗೆ ವೖದ್ದಿಯಾದೀತು.

ಸಂಸ್ಕೖತಿಗಳನ್ನು ಪ್ರೀತಿಸುವ ಕೊಡಗಿನ ಜನರಾಗಿ ನಾವೇ ನಮ್ಮದೇ ಕಾಫಿಯನ್ನು ಸಂಸ್ಕೖತಿಯನ್ನಾಗಿ ನೋಡುತ್ತಿಲ್ಲ ಯಾಕೆ. ಊಟಿ ಹೇಳಿಕೇಳಿ ತಮಿಳುನಾಡಿನ ಗಿರಿಧಾಮ. ಊಟಿಯಲ್ಲಿ ಚಹಾ ಬೆಳೆಯಲಾಗುತ್ತದೆ. ಎಲ್ಲಿ ನೋಡಿದರೂ ಟೀ ಅಂಗಡಿಗಳು, ಕಾಫಿ ಬೇಕೆಂದರೆ ದೂರದೂರ ಅಂಗಡಿ ಹುಡುಕಬೇಕು. ತಾವು ಬೆಳೆಸುವ ಬೆಳೆಯಿಂದ ತಯಾರಾಗುವ ಚಹಾ ಮೇಲೆ ಅವರ ಪ್ರೀತಿ ಅಪಾರ. ಆದರೆ, ನಮ್ಮಲ್ಲಿ ಕಾಫಿ ಪಾಪದ ಕೂಸು. ಕಾಫಿ ಎಂಬ ಕಪ್ಪು ಸುಂದರಿ ಮೇಲೆ ಬೆಳ್ಳಗಿನ ಹಾಲು ಸುರಿದಾಗ ಸಿಗುವ ಸ್ವಾದ ಅಮೖತ ಸಮಾನ, ಹೀಗಾಗಿಯೇ ವಿಶ್ವವ್ಯಾಪಿ ಕಾಫಿಗೆ ದೊರಕಿರುವ ಪ್ರತಿಷ್ಟಿತೆಯ ಮಾನ್ಯತೆ ಚಹಾಕ್ಕೆ ದೊರಕಿಲ್ಲ. ಹಿತ್ತಲ ಗಿಡ ಮದ್ದಲ್ಲ ಸರಿ. ಹಿತ್ತಲ ಗಿಡದ ಕಾಫಿ ಮುದ್ದಲ್ಲ ಯಾಕೆ.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

ಕಾಫಿಯ ಅಚ್ಚರಿಗಳು ಹೀಗಿವೆ. ಹೆಂಡತಿ ಕಾಫಿ ಚೆನ್ನಾಗಿ ತಯಾರಿಸಿಲ್ಲ ಎಂದಾದರೆ ಆಕೆಯನ್ನು ವಿ’ಚ್ಚೇದಿಸುವ ಹಕ್ಕು ಪುರಾತನ ಕಾಲದಲ್ಲಿ ಅರಬ್ ದೇಶಗಳಲ್ಲಿ ಇತ್ತಂತೆ. ಪುಣ್ಯ ಈ ನಿಯಮ ನಮ್ಮಲ್ಲಿ ಇಲ್ಲ, ಹಾಗಿದ್ದರೆ ಅದೆಷ್ಟು ಮನೆಗಳಲ್ಲಿ ವಿ’ಚ್ಚೇದನವಾಗುತ್ತಿತ್ತೋ ಎಂಬುದು ಹಾಸ್ಯವಂತೂ ಅಲ್ಲ. 1500 ರಲ್ಲಿ ಇಥೋಪಿಯ ದೇಶದಲ್ಲಿ ಆಡು ಮೇಯಿಸುವವನೋವ೯ ಕಾಫಿ ಹಣ್ಣು ತಿಂದ ತನ್ನ ಆಡು ಅನಂತರ ಅತ್ಯಂತ ಸಕ್ರಿಯವಾಗಿ ರಾ’ತ್ರಿ ಕೂಡ ನಿದ್ರಿಸದೇ ಇರುವುದನ್ನು ಕಂಡುಕೊಂಡ. ಈ ಕುತೂಹಲಕಾರಿ ವಿಚಾರವನ್ನು ಆತ ಗ್ರಾಮದ ಸ’ನ್ಯಾಸಿಗಳಿಗೆ ತಿಳಿಸಿದ. ಸ’ನ್ಯಾಸಿಗಳೂ ಇದನ್ನು ಗಮನಿಸಿ ತಾವೂ ಕಾಫಿ ಬೀ’ಜದಿಂದ ಪಾನೀಯ ತಯಾರಿಸಿ ಕುಡಿದರು.

ಈ ಪೇಯದ ಬಗ್ಗೆ ಸ’ನ್ಯಾಸಿಗಳು ವಿಶ್ವವ್ಯಾಪಿ ವಿಚಾರ ಮುಟ್ಟಿಸಿದರು. ಹಾಗೇ ಕಾಫಿ ಜಗತ್ತಿನ ಎಲ್ಲೆಡೆ ತನ್ನ ಘಮಲು ಬೀರತೊಡಗಿತು. ಕಾಫಿಯ ಮೂಲಹೆಸರು – ಕ್ಯಾವ. ಟಕಿ೯ಯಲ್ಲಿ ಅದು ಕೋಫಿ ಎಂದಾಯಿತು. ಇಂಗ್ಲೀಷ್ ನಲ್ಲಿ ಕಾಫಿ ಎಂದಾಯಿತು. ಇಷ್ಟಕ್ಕೂ ಕಾಫಿಯ ನಿಜಾಥ೯ ಏನು ಎಂದರೆ ವೈ’ನ್ ಎಂದು. ಚಿಕ್ಕಮಗಳೂರಿನ ಸಂತ ಬಾಬಾ ಬುಡನ್ ಮೆಕ್ಕಾ ಯಾತ್ರೆಗೆಂದು ತೆರಳಿದ್ದ ಸಂದಭ೯ ಯಾಮಾನ್ ಗ್ರಾಮದ ತೋಟದಲ್ಲಿ ಸಿಕ್ಕಿದ್ದ 7 ಕಾಫಿ ಬೀಜಗಳನ್ನು ತನ್ನ ಗಡ್ಡದಲ್ಲಿ ಅಡಗಿಸಿಕೊಂಡು ಭಾರತಕ್ಕೆ ಮರಳಿ 1670 ರಲ್ಲಿ ಚಿಕ್ಕಮಗಳೂರಿನ ಗಿರಿಯಲ್ಲಿ ಕಾಫಿ ಕೖಷಿ ಪ್ರಾರಂಭಿಸಿದರು.

ತರುವಾಯ 1840 ರ ವೇಳೆಗೆ ಭಾರತದ ಮೊದಲ ಕಾಫಿ ತೋಟವೂ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿತ್ತು ಎಂದು ದಾಖಲೆಗಳು ತಿಳಿಸುತ್ತವೆ. ತೈ’ಲ ಹೊರತು ಪಡಿಸಿದರೆ ಜಗತ್ತಿನಲ್ಲಿ ಅತ್ಯಧಿಕ ವಹಿವಾಟು ನಡೆಸುವ ಉತ್ಪನ್ನವೇ ಕಾಫಿ ಎಂಬುದು ಬೆಳೆಗಾರರ ಪಾಲಿಗೆ ಹೆಮ್ಮೆಯ ವಿಚಾರ. ನೀರು ಬಿಟ್ಟರೆ ಮನುಷ್ಟರು ಅತೀ ಹೆಚ್ಚು ಕುಡಿಯುವುದೇ ಕಾಫಿಯನ್ನಂತೆ. ಐರಿಷ್ ದೇಶದಲ್ಲಿ ಕಾಫಿಗೆ ವಿ’ಸ್ಕಿಯನ್ನು ಮಿ’ಶ್ರ ಮಾಡಿಕೊಂಡಾಗ ತಯಾರಾಗುವುದೇ ಐರಿಷ್ ಕಾಫಿ. ಅಮೇರಿಕಾದಲ್ಲಿ ಹವಾಯಿ ಮತ್ತು ಕ್ಯಾಲಿಪೋನಿ೯ಯಾಗಳಲ್ಲಿ ಮಾತ್ರ ಕಾಫಿ ಬೆಳೆಸಲಾಗುತ್ತದೆ. 1932 ರಲ್ಲಿ ಬ್ರೆಜಿಲ್ ತನ್ನ ಕ್ರೀಡಾಪಟುಗಳನ್ನು ಲಾಸ್ ಎಂಜಲೀಸ್ ಒಲಂಪಿಕ್ಸ್ ಗೆ ಕಳುಹಿಸುವ ಸಂದಭ೯ ಆಥಿ೯ಕ ಸಮಸ್ಯೆ ಕಾಡಿತ್ತು.

ಆಗ ಕ್ರೀಡಾಳುಗಳ ಜತೆ ಹಡಗಿನಲ್ಲಿ ಕಾಫಿ ಮೂಟೆಗಳನ್ನು ತುಂಬಿ ಹಡಗು ಸಾಗುವ ದೇಶಗಳಲ್ಲಿ ಕಾಫಿಯನ್ನು ಮಾರಾಟ ಮಾಡುತ್ತಾ ಅದರಿಂದ ಬಂದ ಹಣದಲ್ಲಿ ಕ್ರೀಡಾಪಟುಗಳನ್ನು ಒಲಂಪಿಕ್ಸ್ ಗೆ ತಲುಪಿಸಲಾಯಿತು. ಕಾಫಿ ಬೀಜ ತಿಂದ ಕಾಡುಬೆಕ್ಕು ಸೖಜಿಸುವ ಹಿ’ಕ್ಕೆಯಿಂದ ತಯಾರಾಗುವ ಇಂಡೋನೇಶ್ಯಾದ ಕಾಫಿ ಲುವಾಕ್ ಎಂಬ ಹೆಸರಿನ ಕಾಫಿಯೇ ಜಗತ್ತಿನ ಅತ್ಯಂತ ದು’ಬಾರಿ ಕಾಫಿ. ಇದರ ಬೆ’ಲೆ ಕೆಜಿಗೆ 25,000. 47 ವಷ೯ಗಳ ಹಿಂದೆ ಪ್ರಾರಂಭವಾದ ಸ್ಟಾರ್ ಬಕ್ಸ್ ಕಾಫಿ ಮಳಿಗೆ ಈ ವರೆಗೆ ಜಗತ್ತಿನಾದ್ಯಂತ 29,000 ಕಾಫಿ ಶಾಪ್ ಹೊಂದಿದೆ.

ಪ್ರತೀ ದಿನ ಒಂದಲ್ಲ ಒಂದು ಕಡೆ ಕಾಫಿ ಶಾಪ್ ತೆರೆಯುತ್ತಿರುವ ಕಾಫಿ ಉದ್ಯಮ ಸಂಸ್ಥೆ ಇದಾಗಿದೆ. ಕಾಫಿ ಸೇವನೆಯಲ್ಲಿ ಭಾರತ 6 ನೇ ಸ್ಥಾನ ಪಡೆದಿದೆ. ಭಾರತದಲ್ಲಿ ಪ್ರತೀ ನಿತ್ಯ 150 ಲಕ್ಷ ಟನ್ ಹಾಲಿನ ಉತ್ಪಾದನೆಯಾಗುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಾಲು ಸೇವನೆ ಜಾಸ್ತಿಯಿದೆ. ನಗರ ಪ್ರದೇಶಗಳಲ್ಲಿ 10 ವಷ೯ಗಳಿಂದ ಕಾಫಿ ಸೇವನೆ, ಅದರಲ್ಲಿಯೂ ಯು’ವಪೀಳಿಗೆಯಲ್ಲಿ ಹೆಚ್ಚಾಗುತ್ತಿದೆ. ಕಾಫಿ ಡೇ, ಬ್ಯಾರೀಸ್ಟ, ಕೊಡಗಿನ ಮೂಲದ ಎಸ್.ಎಲ್.ಎನ್.ನ ಲೆವಿಸ್ಟಾ, ಸ್ಟಾರ್ ಬಕ್ಸ್ ನಂಥ ಅನೇಕ ಕಾಫಿ ಶಾಪ್ ಗಳ ಸಂಖ್ಯೆ ವೖದ್ದಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ.

ಕಾಫಿ ಶಾಪ್ ಗಳು ಉ’ದ್ಯಮ ವಹಿವಾಟು, ಮದುವೆ ಮಾತುಕತೆ, ವಿ’ಚ್ಚೇ’ದನ, ಗೆಳೆತನ, ರಾಜಕೀಯ ಮಾತುಕತೆ, ಪ್ರೀತಿ, ದ್ವೇ’ಷ, ಸು’ಖ ಶೋ’ಕದ ಮಾತಿಗೂ ಸಾಕ್ಷಿಯಾಗಿದೆ. ಈ ಮೂಲಕ ಕಾಫಿ ಕೇವಲ ಪಾನೀಯ ಮಾತ್ರವೇ ಅಲ್ಲ, ಅದು ಎಲ್ಲಾ ಸಂಬಂಧಗಳನ್ನು ಮೀರಿದ್ದು ಎಂಬುದು ನಿರೂಪಿತವಾಗಿದೆ. ಚಹಾ ರಸ್ತೆ ಬದಿಯಲ್ಲಿ ಸಾಮಾನ್ಯರ ಕೈಗೆಟಕುವ ಪಾನೀಯವಾಗಿದ್ದರೆ ಕಾಫಿಗೆ ಬೆಳೆಗಾರನಷ್ಟೇ ಗ’ತ್ತು ಇದೆ. ಹೀಗಾಗಿಯೇ ಕಾಫಿ ತನ್ನದೇ ಆದ ಹೈ’ಟೆಕ್ ಶಾಪ್ ಗಳನ್ನು ಸೖಷ್ಟಿಸಿಕೊಂಡಿದೆ. ಎಲ್ಲಿಯಾದರೂ ಕಾಫಿಯ ಹಾಗೇ, ಐ’ಷಾರಾಮಿ ಟೀ ಶಾಪ್ ಗಳನ್ನು ನೋಡಿದ್ದೀರಾ. ಅದುವೇ ಕಾಫಿಯ ವೈಭವ, ಪ್ರತಿಷ್ಟೆ.

ನಾವೇ ಬೆವರು ಸುರಿಸಿ ಪ್ರೀತಿಯ ನೀರೆರೆದು ಬೆಳೆಸುವ ಕಾಫಿಯನ್ನು ಬೇರೆಯವರು ಮಾ’ರುಕಟ್ಟೆ ಮಾಡುತ್ತಾರೆ ಎಂದು ಚಿಂ’ತಿಸಿಕೊಂಡು ಕೂರುವುದಕ್ಕಿಂತ ನಮ್ಮ ಮನೆಗಳಲ್ಲಿ, ಕಾಯ೯ಕ್ರಮಗಳಲ್ಲಿ, ಸಭೆಗಳಲ್ಲಿ ಕಾಫಿಯ ಸರ’ಬರಾಜು ಕ’ಡ್ಡಾಯ ಮಾಡಬೇಕು. ಮನೆಗೆ ಅತಿಥಿಗಳು ಬಂದಾದ ಟೀ ಕುಡಿತೀರಾ ಎಂಬುದರ ಬದಲಿಗೆ ಕಾಫಿ ಕೊಡುತ್ತೇನೆ ಎಂದು ಹೇಳಬೇಕು. ಚೆನ್ನಾಗಿ ಕಾಫಿ ತಯಾರಿಕೆಯಲ್ಲಿ ಯುವಪೀಳಿಗೆಯನ್ನು ಸಿದ್ದಗೊಳಿಸಬೇಕು. ಹೀಗಾದಾಗ ಕಾಫಿಗೆ ದೇಶದಲ್ಲಿಯೇ ಬೇಡಿಕೆ ಯಾಕೆ ದೊರಕಲಾರದು.

ಇಂಥ ಕಾಫಿ ಸಂಸ್ಕೖತಿಗೆ ಇಂದಿನಿಂದಲೇ ತಯಾರಾಗೋಣ. ಕೊಡಗಿನ ಸವಿ ಕಾಫಿಯ ಹಿನ್ನಲೆಯಲ್ಲಿ ಬೆಳೆಗಾರ ಕುಟುಂಬಗಳ ಶ್ರಮವಿದೆ. ಸಾವಿರಾರು ಕಾಮಿ೯ಕರ ಕಷ್ಟವಿದೆ. ಹೀಗಾಗಿಯೇ ಕಾಫಿ ಸದಾ ಶ’ಕ್ತಿವಧ೯’ಕವಾಗಿದೆ. ಘಮಘಮಿಸುವ ಘಮ್ಮ’ತ್ತಿನ ಸ್ವಾದಿಷ್ಟ. ಮನೆಯಂಗಳದಲ್ಲಿಯೇ ಬೆಳೆದ ನಮ್ಮದೇ ಕಾಫಿಯ ಸೇವನೆಯಲ್ಲಿರುವ ತೖ’ಪ್ತಿ ಬೇರೆ ಯಾವ ಪಾ’ನೀಯದಲ್ಲಿ ದೊರಕೀತು ಹೇಳಿ. ಕಾಫಿ ದಿನದಂದು ಕಾಫಿಗೊಂದು ಚಿ’ಯ’ರ್ಸ್ ಹೇಳಿ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here