ದುರ್ಗಾ ದೇವಿಯ ಒಲುಮೆಗೆ ಪಾತ್ರರಾಗುವುದಕ್ಕೆ ದಿವ್ಯಾ’ಸ್ತ್ರ ಇಲ್ಲಿದೆ.

0
1907

ನವರಾತ್ರಿಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಅತ್ಯಂತ ಶ್ರೇಷ್ಠ. ದುರ್ಗಾ ಸಪ್ತ ಶತಿಯಲ್ಲಿದೆ ಸಾಕ್ಷಾತ್ ದೇವಿಯೇ ಹೇಳಿರುವ ಮಾತುಗಳು. ದುರ್ಗಾ ಇಚ್ಛಾ ಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳ ಸಂಗಮ. ನವರಾತ್ರಿಯಲ್ಲಿ ಪೂಜಿಸಲ್ಪಡುವ ಶ್ರೀ ದುರ್ಗಾ ಶ’ಕ್ತಿ ಸ್ವರೂಪಿಣಿ. ದೈ’ತ್ಯ ರಾ’ಕ್ಷಸರ ಸಂ’ಹಾರ ಮಾಡುವ ಶಕ್ತಿ ಸ್ವರೂಪಿಣಿಯೇ ದುರ್ಗಾ. ಸಂ’ಸಾರ ಬಂ’ಧನಕ್ಕೆ ಈಡು ಮಾಡುವ ಕಾರ್ಯ, ದುಃ’ಖ, ಶೋ’ಕ, ನ’ರಕ, ಯಮನ ದಂ’ಡನೆ, ಜನ್ಮ, ಮೃ’ತ್ಯು ಇವನ್ನೆಲ್ಲಾ ಶ’ಮನಗೊಳಿಸುವ ಮತ್ತು ನಾ’ಶಗೊಳಿಸುವ ಮಹಾಶಕ್ತಿಯೇ ದುರ್ಗಾ.

ದುರ್ಗಿಯ ನಾಮಸ್ಮರಣೆ ಮಾಡಿದರೆ ಸಾಕು, ಶ’ತ್ರುಗಳು ನಾ’ಶವಾಗುತ್ತಾರೆ. ಮನುಷ್ಯರನ್ನು ಅಷ್ಟೇ ಅಲ್ಲ, ಇಂದ್ರಾದಿ ದೇ’ವತೆಗಳು ಕೂಡ ಮಹಾತಾಯಿ ದುರ್ಗೆಯ ಕಷ್ಟಗಳಿಂದ ಪಾರು ಮಾಡುತ್ತಾಳೆ ಮತ್ತು ರ’ಕ್ಷಿ’ಸುತ್ತಾಳೆ. “ಏಕೈಕ ವಾಹಂ ಜಗತ್ಯತ್ರ ದ್ವಿತೀಯಕ ಮಾಮಾ ಪರಾ” ಈ ಶ್ಲೋಕವೇ ಹೇಳುವಂತೆ ಜಗತ್ತಿನಲ್ಲಿರುವ ಶ’ಕ್ತಿ ದುರ್ಗೆಯೂಬ್ಬಳೇ. ಇವಳನ್ನು ಬಿಟ್ಟು ಎರಡನೆಯ ಶ’ಕ್ತಿಸ್ವರೂಪಿಣಿ ಬೇರೆ ಯಾವುದು ಇಲ್ಲ. ದುರ್ಗೆ ಅನಂತಳು, ಸರ್ವವ್ಯಾಪಿ ಹಾಗೂ ಸರ್ವ ಶ’ಕ್ತಿಯ ಪ್ರತೀಕ. ಈ ತಾಯಿಗೆ ಮಿಗಿಲಾದ ಶ’ಕ್ತಿ ಈ ಬ್ರ’ಹ್ಮಾಂಡದಲ್ಲಿ ಬೇರೆ ಯಾವುದೂ ಇಲ್ಲ.

ಇದರಲ್ಲಿ ದುರ್ಗ ತತ್ವ ಇರುತ್ತದೆ. ದೈ’ತ್ಯನಾದ ಮಹಿಷಾ’ಸುರ ದೇವತೆಗಳನ್ನು ಅಪಾರವಾಗಿ ಪೀ’ಡಿಸುತ್ತಾನೆ. ಅ’ಸುರರನ್ನು ಸಂ’ಹರಿಸಲು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಸಾಧ್ಯವಾಗುವುದಿಲ್ಲ. ಆಗ ತ್ರಿಮೂರ್ತಿಗಳು ದುರ್ಗಾ ತಾಯಿ ಪ್ರಾಹಿಮಾಮ ಪ್ರಾಹಿಮಾಮ ಎನ್ನುತ್ತಾ ಶ್ರೀ ದುರ್ಗಾ ಮಾತೆಗೆ ಶ’ರಣಾಗುತ್ತಾರೆ. ಆಗ ಶಿವ ಶ’ಕ್ತಿ ಸ್ವರೂಪಿಣಿಯಾದ ಎಲ್ಲಾ ದೇವತೆಗಳು ನೀಡಿದ ಶ’ಸ್ತ್ರಾ’ಸ್ತ್ರಗಳನ್ನು ಪಡೆದು, ಭ’ಯಾನ’ಕವಾದ ರೂಪಗಳನ್ನು ತಳೆಯುತ್ತಾಳೆ, ನಂತರ ಯು’ದ್ಧದಲ್ಲಿ ಮ’ಹಿಷಾ’ಸುರನನ್ನು ಸಂ’ಹರಿಸುತ್ತಾಳೆ.

ದುರ್ಗೆಯ ಇನ್ನೂ ಅನೇಕ ಮಹತ್ವದ ವಿಷಯಗಳು ಸೇರಿದಂತೆ ದುರ್ಗಾ ಸಪ್ತಶತಿ ಗ್ರಂಥದಲ್ಲಿ ವಿವರಿಸಲಾಗಿದೆ. ದುರ್ಗಾ ಸಪ್ತಶತಿಯಲ್ಲಿ ಏನಿದೆ. ದುರ್ಗಾ ಸಪ್ತಶತಿಯಲ್ಲಿ ದೇವಿಯ ವರ್ಣನೆ ಪ್ರಮುಖವಾಗಿರುತ್ತದೆ. ಸಪ್ತ ಶತಿಯನ್ನು ಮಾರ್ಕಂಡೇಯ ಮಹರ್ಷಿಗಳು ರಚಿಸಿದ್ದಾರೆ. ಸಪ್ತಶತಿಯಲ್ಲಿ ಒಟ್ಟಾರೆಯಾಗಿ 700 ಶ್ಲೋಕಗಳಿವೆ, ಒಟ್ಟಾರೆಯಾಗಿ 13 ಅಧ್ಯಾಯಗಳಾಗಿ ಈ ಶ್ಲೋಕಗಳ ವಿಂಗಡಣೆ ಮಾಡಲಾಗಿದೆ. ಇಲ್ಲಿ ಜಗನ್ಮಾತೆಯನ್ನು ಮ’ಹಾಕಾ’ಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಈ 3 ರೂಪಗಳಲ್ಲಿ ವಿಶೇಷವಾಗಿ ವರ್ಣನೆ ಮಾಡಲಾಗಿದೆ.

ದೇವಿ ಆರಾಧನೆಯಿಂದ ಸಿಗುವ ಫಲಗಳು : ನವರಾತ್ರಿಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಅತ್ಯಂತ ಶ್ರೇಷ್ಠ. ಸಪ್ತಶತಿ ಪಾರಾಯಣ ದೇವಿಯ ಒಲುಮೆಗೆ ಪಾತ್ರರಾಗುವುದಕ್ಕೆ ದಿವ್ಯಾಸ್ತ್ರವಾಗಿದೆ. ದೇವಿಯ ಒಲುಮೆಗೆ ಪಾತ್ರರಾಗುವುದಕ್ಕೆ ದುರ್ಗಾ ಸಪ್ತಶತಿ ಪಾರಾಯಣ ಮಾಡಬೇಕು. ದುರ್ಗಾ ಸಪ್ತಶತಿಯ ಪಾರಾಯಣದ ಫಲಗಳು ಇಂತಿವೆ. ನವರಾತ್ರಿ ಎಂದರೆ ಮಹಾಶಕ್ತಿಯ ಆರಾಧನೆಯ ಪರ್ವಕಾಲ. ಈ ಒಂಬತ್ತು ದಿನಗಳಲ್ಲಿ ಬ್ರ’ಹ್ಮಾಂ’ಡದ ಶ’ಕ್ತಿ ಜಾ’ಗೃತವಾಗಿರುತ್ತದೆ. ನವರಾತ್ರಿಯ ಒಂಬತ್ತು ದಿನ ದು’ರ್ಗಾಶ’ಕ್ತಿಯನ್ನು ಆರಾಧಿಸುವುದರಿಂದ ಬದುಕಿಗೆ ಹೊಸ ಚೈ’ತನ್ಯ ಬರುತ್ತದೆ.

ಶರದ ಋತುವಿನಲ್ಲಿ ಬರುವ ಶರನ್ನವರಾತ್ರಿಯ ಒಂಬತ್ತು ದಿನಗಳು, ದೇವಿಯ ಒಂದೊಂದು ದಿನ ಒಂದೊಂದು ರೂಪದಲ್ಲಿ ಪ್ರಕಟಗೊಳ್ಳುತ್ತಾಳೆ. ರಾ’ಕ್ಷಸ’ರನ್ನು ಸಂ’ಹಾರ ಮಾಡಿದಂತೆ, ದುರ್ಗೆಯು ನಮ್ಮೊಳಗಿರುವ ಅಂ’ಧಕಾರವನ್ನು ದೂರ ಮಾಡುತ್ತಾಳೆ. ಜಗನ್ಮಾತೆಯನ್ನು ಆರಾಧಿಸುವ ಈ ಪರ್ವ ಕಾಲದಲ್ಲಿ ದುರ್ಗ ಸಪ್ತಶತಿ ಪಾರಾಯಣ ಅತ್ಯಂತ ಶ್ರೇಷ್ಠ. ದೇವಿಯ ಒಲುಮೆಗೆ ಪಾತ್ರರಾಗಲು ದಿವ್ಯಾಸ್ತ್ರ ದುರ್ಗಾಸಪ್ತಶತಿ. ದೇವಿಯ ವರ್ಣನೆಯೇ ಪ್ರಮುಖವಾಗಿರುವ ದುರ್ಗಾ ಸಪ್ತಶತಿಯಲ್ಲಿ ಒಟ್ಟು 700 ಶ್ಲೋಕಗಳಿವೆ ಮತ್ತು 13 ಅಧ್ಯಾಯಗಳಿವೆ. ಜಗನ್ಮಾತೆಯ ಸಾಹಸ, ಶೌ’ರ್ಯದ ಗುಣಗಳನ್ನು ಸಪ್ತಶತಿ ಹಾಡಿಹೊಗಳಿದೆ. ಮೊದಲ ಅಧ್ಯಾಯದಲ್ಲಿ ದುರ್ಗೆ ಮಹಾಕಾ’ಳಿ ರೂಪದಲ್ಲಿ ಸ್ತುತಿಸಲ್ಪಡುತ್ತಾಳೆ.

ದುರ್ಗಾ ಸಪ್ತಶತಿಯ ಮಹಾಕಾ’ಳಿ ಸ್ವರೂಪ : ಮೊದಲನೇ ಅಧ್ಯಾಯದಲ್ಲಿ ತಾಯಿ ಮಧು, ಕೈಟಭ ಎಂಬ ರಾ’ಕ್ಷಸರ’ನ್ನು ಸಂ’ಹಾರ ಮಾಡುತ್ತಾಳೆ. ದುರ್ಗಾ ಸಪ್ತಶತಿಯ ಎರಡು, ಮೂರು ಮತ್ತು ನಾಲ್ಕನೇ ಅಧ್ಯಾಯ ಅತ್ಯಂತ ಮಹತ್ವಪೂರ್ಣ. ಈ ಅಧ್ಯಾಯಗಳಲ್ಲಿ ಮಹಾಲಕ್ಷ್ಮಿಯ ಸ್ವರೂಪದಲ್ಲಿ ಆರಾಧಿಸಲ್ಪಡುತ್ತಾಳೆ. ದುರ್ಗಾ ಸಪ್ತಶತಿಯಲ್ಲಿದೆ ಮಹಾಲಕ್ಷ್ಮಿ ಸ್ವರೂಪ : ದುರ್ಗಾ ಸಪ್ತಶತಿಯ ಎರಡು, ಮೂರು ಮತ್ತು ನಾಲ್ಕನೇ ಅಧ್ಯಾಯದಲ್ಲಿ ದೇವಿ ಮಹಾಲಕ್ಷ್ಮಿ ಸ್ವರೂಪದಲ್ಲಿ ಇರುತ್ತಾಳೆ. ಎರಡನೇ ಅಧ್ಯಾಯದಲ್ಲಿ ದೇವಿ ಮಹಿಷಾ’ಸುರ ಸೈನ್ಯವನ್ನು ಹೇಗೆ ನಾ’ಶ ಮಾಡುತ್ತಾಳೆ ಎನ್ನುವುದರ ಬಗ್ಗೆ ಉಲ್ಲೇಖವಿದೆ.

ಮೂರನೇ ಅಧ್ಯಾಯದಲ್ಲಿ ಮಹಿಷಾಸು’ರನ ವ’ಧೆ ಮಾಡುವ ದೇವಿ ಸ್ವರೂಪವಿದೆ, ನಾಲ್ಕನೇ ಅಧ್ಯಾಯದಲ್ಲಿ ಮಹಿಷಾಸು’ರನ ವದೆ ಮಾಡಿದ ನಂತರ ಉ’ಗ್ರವಾದ ದೇವಿಯನ್ನು ಇಂದ್ರಾದಿ ದೇವತೆಗಳು ಗಾಯಿತ್ರಿ ಸ್ತೋತ್ರವನ್ನು ಸ್ತುತಿಸಿ ಶಾಂತ ಮಾಡುವ ಸನ್ನಿವೇಶ ಬರುತ್ತದೆ. ದುರ್ಗಾ ಸಪ್ತಶತಿಯ ಐದರಿಂದ – ಹದಿಮೂರನೇ ಅಧ್ಯಾಯದಲ್ಲಿ ದೇವಿ ಮಹಾಸರಸ್ವತಿಯ ರೂಪದಲ್ಲಿ ಇರುತ್ತಾಳೆ. ದುರ್ಗೆ ಮಹಾ ಸರಸ್ವತಿಯಾಗಿ ಲೋಕ ರಕ್ಷಣೆಯನ್ನು ಮಾಡುತ್ತಾಳೆ. ದುರ್ಗಾ ಸಪ್ತಶತಿಯಲ್ಲಿರುವ ಹದಿಮೂರನೇ ಅಧ್ಯಾಯದಲ್ಲಿ ದುರ್ಗೆಯ ಮಹಾಸರಸ್ವತಿ ರೂಪದಲ್ಲಿರುವ ವರ್ಣನೆ ಇದೆ.

5 ನೇ ಅಧ್ಯಾಯದಲ್ಲಿ ಶುಂಭ-ನಿಶುಂಭ ರಾ’ಕ್ಷಸರ ಸಂಹಾರಕ್ಕಾಗಿ ಋಷಿ-ಮುನಿಗಳು ಸ್ತೋತ್ರದ ಮೂಲಕ ದುರ್ಗಿಯನ್ನು ಪ್ರಾರ್ಥಿಸುತ್ತಾರೆ. ಆರನೇ ಅಧ್ಯಾಯದಲ್ಲಿ ಧೂಮ್ರಲೋಚನ ಎಂಬ ರಾ’ಕ್ಷಸನನ್ನು ದೇವಿ ಸಂಹರಿಸುತ್ತಾಳೆ. 7 ನೇ ಅಧ್ಯಾಯದಲ್ಲಿ ಚಂಡ – ಮುಂಡರ ಸಂ’ಹಾರದ ಬಗ್ಗೆ ಉಲ್ಲೇಖವಿದೆ. ಎಂಟನೇ ಅಧ್ಯಾಯದಲ್ಲಿ ರ’ಕ್ತಬೀಜಾ’ಸುರ ಎಂಬ ರಾ’ಕ್ಷಸನನ್ನು ಸಂಹರಿಸುತ್ತಾಳೆ. 9 ಮತ್ತು 10ನೇ ಅಧ್ಯಾಯದಲ್ಲಿ ದುರ್ಗೆಯಿಂದ ಶುಂಭ – ನಿಶುಂಭ ಎನ್ನುವ ರಾ’ಕ್ಷಸರ ಸಂ’ಹಾರ ಮಾಡುತ್ತಾಳೆ.

ನವರಾತ್ರಿಯ ವೇಳೆ ದುರ್ಗೆಯ ಮೂರು ಸ್ವರೂಪಗಳ ಆರಾಧನೆ ಅತ್ಯಂತ ವಿಶೇಷ. ಅ’ಸುರರ ಸಂ’ಹಾರಕ್ಕಾಗಿ ದೇವಿ ಮಹಾಕಾ’ಳಿ, ಮಹಾಲಕ್ಷ್ಮಿ, ಮಹಾಸರಸ್ವತಿಯ ರೂಪವನ್ನು ತಳೆಯುತ್ತಾಳೆ. ಇಂತಹ ದೇವಿಯ ಮಹಿಮೆಯನ್ನು ದುರ್ಗಾ ಸಪ್ತಶತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ರಾ’ಕ್ಷಸರನ್ನು ಸಂ’ಹಾರ ಮಾಡಿದ ದುರ್ಗೆ ತನ್ನ ಮೂಲ ಸ್ವರೂಪದಲ್ಲಿ ಇರುತ್ತಾಳೆ. ಇಂತಹ ದುರ್ಗೆಯನ್ನು ದೇವಾನುದೇವತೆಗಳು ಗಾಯಿತ್ರಿ ಸ್ತುತಿ ಹೇಳುವ ಮೂಲಕ ಶಾಂತ ಮಾಡುತ್ತಾರೆ. ಸಪ್ತಶತಿ 11 ನೇ ಅಧ್ಯಾಯ ಈ ಅಧ್ಯಾಯದಲ್ಲಿ ಸಾಕ್ಷಾತ್ ದೇವಿಯನ್ನು ಹಾಡಿ ಹೊಗಳಿದ್ದಾರೆ.

ಯಾರು ಸಪ್ತಶತಿ ಪಾರಾಯಣ ಅಥವಾ ಶ್ರವಣ ಮಾಡುತ್ತಾರೋ, ಅದರಿಂದ ಸಿಗುವ ಫಲಗಳ ಬಗ್ಗೆ ದೇವಿಯೇ ಹೇಳುತ್ತಾಳೆ. ದುರ್ಗಾ ಸಪ್ತಶತಿ ಪಾರಾಯಣಕ್ಕೆ ಇದೆ ಅದ್ಭುತ ಶಕ್ತಿ. ನವರಾತ್ರಿಯಲ್ಲಿ ಸಪ್ತಶತಿ ಪಾರಾಯಣ ಮಾಡಿದರೆ ದೇವಿಯ ಸಂಪೂರ್ಣ ಶ್ರೀರಕ್ಷೆ ನಮ್ಮ ಮೇಲೆ ಇರುತ್ತದೆ. ನವರಾತ್ರಿಯಲ್ಲಿ ದುರ್ಗಾಸಪ್ತಶತಿ ಪಾರಾಯಣಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ದುರ್ಗಾಸಪ್ತಶತಿ, ದೇವಿ ಭಾಗವತ್ ಉಪಾಸನೆಯ ಸರ್ವಶ್ರೇಷ್ಠ ಗ್ರಂಥ. ದುರ್ಗಾ ಸಪ್ತಶತಿ ಪಾರಾಯಣದಿಂದ ಧನ, ಧಾನ್ಯ, ಸುಖ, ಸಮೃದ್ಧಿಯ ಜೊತೆಗೆ ನವದುರ್ಗೆಯರ ಆಶೀರ್ವಾದವೂ ಪ್ರಾಪ್ತಿಯಾಗುತ್ತದೆ.

LEAVE A REPLY

Please enter your comment!
Please enter your name here