ಅನಾದಿಕಾಲದಿಂದಲೂ ಪರಮೇಶ್ವರನ ಅನುಗ್ರಹದಿಂದ ಧರೆಯ ಮೇಲೆ ಹುಟ್ಟಿದ ಅಪೂರ್ವವಾದ ವಸ್ತುವೆಂದರೆ ಅದು ರುದ್ರಾಕ್ಷಿ. ಸಾಮಾನ್ಯವಾಗಿ ಹಿಮಾಲಯದ ತಪ್ಪಲಿನಲ್ಲಿ ಕಂಡುಬರುವ ಈ ರುದ್ರಾಕ್ಷಿಯೂ ಏಕಮುಖ, ಪಂಚಮುಖ ಹೀಗೆ ಹಲವಾರು ರೀತಿಯ ರುದ್ರಾಕ್ಷಿಗಳು ಭೂಮಿಯ ಮೇಲೆ ದೊರೆಯುತ್ತವೆ. ಈ ರುದ್ರಾಕ್ಷಿಯೂ ಶಿವನ ಕೊರಳಿನಲ್ಲಿ ಇರುತ್ತದೆ. ಹಿಂದೆಲ್ಲ ರಾಜಮಹಾರಾಜರು ಸಂಪ್ರೀತರಾದಾಗ ಕೊರಳಿನಿಂದ ಬಂಗಾರದ ಹಾರಗಳನ್ನು ನೀಡುತ್ತಿದ್ದರು. ಅದೇ ರೀತಿಯಲ್ಲಿ ಪರಮೇಶ್ವರನ ಆಸ್ಥಾನದಲ್ಲಿ ಪರಮೇಶ್ವರನು ಸಂತೃಪ್ತನಾದಾಗ ಅವನ ಭಕ್ತರಿಗೆ ತನ್ನ ಕೊರಳಿನಲ್ಲಿದ್ದ ಪರಮಪವಿತ್ರ ರುದ್ರಾಕ್ಷಿಯನ್ನು ನೀಡುತ್ತಿದ್ದನು.
ಇದು ಎಲ್ಲ ವಜ್ರವೈಡೂರ್ಯಗಳಿಗಿಂತಲೂ ಅಮೂಲ್ಯವಾದದಾಗಿತ್ತು. ಇಂದು ಈ ರುದ್ರಾಕ್ಷಿ ಕೆಲವು ಮಹತ್ವಗಳನ್ನು ಹಾಗೂ ಮಹಿಳೆಯರು ಧರಿಸುವುದರಿಂದ ಆಗುವ ಲಾಭ ನ’ಷ್ಟದ ಬಗ್ಗೆ ವಿಚಾರಗಳನ್ನು ತಿಳಿಯೋಣ. ಸ್ತ್ರೀಯರು ರುದ್ರಾಕ್ಷಿಧಾರಣೆ ಮಾಡಿಕೊಳ್ಳಬಹುದೇ. ಸ್ತ್ರೀಯರು ರುದ್ರಾಕ್ಷಿಮಾಲೆ ಹಾಕಿಕೊಳ್ಳಬಹುದೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ನಮ್ಮ ಸಂಸ್ಕೃತಿಯಲ್ಲಿ ನಾವು ವೇದ, ಧ್ಯಾನ, ಪಾರಾಯಣ ಎನ್ನುವ ಸಂಗತಿಗಳಿಗೆ ಪ್ರಾಮುಖ್ಯತೆ ನೀಡುತ್ತೇವೆ. ಜಪ, ತಪಗಳು ನಮ್ಮ ಧ’ರ್ಮ.
ಪೂಜೆ ಪುನಸ್ಕಾರಗಳಲ್ಲಿ ಅತಿ ಮುಖ್ಯಸ್ಥಾನ ಪಡೆದುಕೊಳ್ಳುವುದು ಎನ್ನುವುದರಲ್ಲಿ ಸಂದೇಹವೇ ಇಲ್ಲ. ರುದ್ರಾಕ್ಷಿ ಎಂದರೆ ದೈವಿಕ ಶಕ್ತಿ ಎಂಬುದು ಸತ್ಯ ಸಂಗತಿ. ನಮ್ಮ ಮೇಲೆ ಧರ್ಮದ ರಕ್ಷಣೆ ಇರುವಂತೆ ಮಾಡುವ ಮಣಿಗಳ ಸಮೂಹವೇ ಈ ಪವಿತ್ರವಾದ ರುದ್ರಾಕ್ಷಿ. ನಮ್ಮ ಮೈ’ಮೇಲೆ ರುದ್ರಾಕ್ಷಿಗಳನ್ನು ಹಾಕಿಕೊಂಡರೆ ಮನಸ್ಸು ಅಧ್ಯಾತ್ಮಕತೆ ಕಡೆಗೆ ಹರಿಯುತ್ತದೆ. ಆಗ ನಾವು ಸಾತ್ವಿಕ ರಾಗಿ ಇರುತ್ತೇವೆ ತಾತ್ವಿಕತೆಗೆ ಮನಸ್ಸನ್ನು ಒಳಪಡಿಸುವುದು ಸುಲಭ ಅಲ್ಲ. ಅದಕ್ಕಾಗಿಯೇ ರುದ್ರಾಕ್ಷಿ ನಮಗೆ ಕೋ’ಪ, ತಾಪ ತಾಳಿಕೊಂಡು ಮುಂದೆ ಸಾಗಲು ಅನುಕೂಲ ಮಾಡಿಕೊಡುತ್ತದೆ.
ಸ್ತ್ರೀಯರು ರುದ್ರಾಕ್ಷಿಯನ್ನು ಧರಿಸಬಹುದು. ಆದರೆ ಮಡಿ ಮೈಲಿಗೆಯಿಂದ ದೂರ ಇರುವ ಸ್ತ್ರೀಯರು, ಅಂದರೆ ಮುಟ್ಟು ನಿಂತ ನಂತರ ಮಾತ್ರ ರುದ್ರಾಕ್ಷಿ ಧಾರಣೆ ಮಾಡಿಕೊಳ್ಳಬಹುದು. ಆಗ ಹೆಣ್ಣುಮಕ್ಕಳಿಗೆ ಪ್ರಕೃತಿ ಸಹಜವಾಗಿ ಆಗುವ ತಿಂಗಳ ಮುಟ್ಟು ಬರುವುದಿಲ್ಲ. ಆಗ ಯಾವುದೇ ರೀತಿ ಮಡಿ, ಮೈಲಿಗೆಯ ಜಂ’ಜಾಟ ಇಲ್ಲದಂತೆ ರುದ್ರಾಕ್ಷಿಯನ್ನು ಹಾಕಿಕೊಳ್ಳಬಹುದು. ಜೊತೆಗೆ ಮನಸ್ಸು ದೇವರು ಜಪ ತಪಗಳ ಕಡೆಗೆ ಹರಿಯುವಂತೆ ಮಾಡಿಕೊಳ್ಳಬಹುದು.
ಮನಸ್ಸಿಗೆ ಕ’ಡಿವಾಣ ಹಾಕಿಕೊಳ್ಳುವುದು ಬಹಳ ಮುಖ್ಯ. ಯಾವ ವ್ಯಕ್ತಿ ಯಾವುದೇ ರೀತಿ ಆ’ಧ್ಯಾತ್ಮ, ದೇವರು, ಪ್ರಕೃತಿ ಎಂದು ಚಿಂತನೆ ಮಾಡದಿದ್ದರೆ ಅಂತ ವ್ಯಕ್ತಿಯ ಮನಸ್ಸಿಗೆ ಕಡಿವಾಣ ಇರುವುದಿಲ್ಲ. ಇಂತಹ ವ್ಯಕ್ತಿ ಲಗಾಮು ಇಲ್ಲದ ಕುದುರೆಯ ರೀತಿ ವರ್ತನೆ ಮಾಡುತ್ತಾನೆ. ಹೀಗೆಂದು ನಮ್ಮ ಹಿರಿಯರು ಹೇಳಿದ್ದನ್ನು ನಾವು ಕೇಳಿದ್ದೇವೆ. ಎಷ್ಟು ಜನ ಇದು ಸತ್ಯ ಎಂದು ಕೂಡ ನಂಬುತ್ತಾರೆ. ಆದರೆ ನಾವು ನಮ್ಮ ಮನಸ್ಸಿಗೆ ಕೋ’ಪ, ತಾ’ಪಗಳು ಸೇರಿಕೊಳ್ಳದೆ ಇರುವ ಹಾಗೆ ನೋಡಿಕೊಳ್ಳಬೇಕು.
ಇದಕ್ಕೆ ಒಂದು ಉತ್ತಮ ಮಾರ್ಗವೆಂದರೆ ದೈವಿಕತೆ ಬೆಳೆಸಿಕೊಳ್ಳುವುದು. ಸ್ತ್ರೀಯರು ರುದ್ರಾಕ್ಷಿಯನ್ನು ಧರಿಸಬಾರದು ಎಂದು ಯಾವ ಶಾಸ್ತ್ರಗಳು ಸಹ ಹೇಳಿಲ್ಲ. ಒಂದು ವಿಷಯ ನಾವು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ಅದೇನೆಂದರೆ ತಿಂಗಳ ಮುಟ್ಟಿನ ಸಮಯದಲ್ಲಿ ಮನಸ್ಸು ಖಿ’ನ್ನ, ಬೇ’ಸರ, ಅ’ಸಹನೆ, ಬ’ಲಹೀ’ನ ಆಗಿರುತ್ತದೆ. ಅಂತಹ ಸಮಯದಲ್ಲಿ ನಾವು ಜಪ ತಪಗಳನ್ನು ಮಾಡಲು ಆಗುವುದಿಲ್ಲ. ಮನಸ್ಸಿನ ಮು’ಜುಗರ ಕಳೆಯಬೇಕು. ಆಗಲೇ ಇಂತಹ ದೈವಿಕ ಕೆಲಸಗಳಲ್ಲಿ ಸ್ತ್ರೀಯರು ತಮ್ಮನ್ನು ತಾವು ತೊಡಗಿಸಿಕೊಳ್ಳಬಲ್ಲರು.
ಹೀಗೆ ನಮಗೆ ನಾವೇ ಸಂಗತಿಗಳನ್ನು ವಿಶ್ಲೇಷಣೆ ಮಾಡಿಕೊಂಡು ಮುಂದೆ ಸಾಗಬೇಕು. ಇಂತಹ ಯೋಚನೆಗಳಿಗೆ ಸಕಾರಾತ್ಮಕ ಚಿಂತನೆ ಎಂದು ಕರೆಯುತ್ತಾರೆ. ಈ ರೀತಿಯ ಯೋಚನೆಗಳಿಂದ ನಮಗೂ ಹಾಗು ನಮ್ಮ ಕುಟುಂಬದವರಿಗೂ ಒಳಿತಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಮಗೆ ತಿಳಿದಿದ್ದನ್ನು ಮತ್ತೊಬ್ಬರಿಗೆ ತಿಳಿಸುವುದು ಸಹ ಒಂದು ಒಳ್ಳೆಯ ಕೆಲಸ. ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಮತ್ತಷ್ಟು ಉಪಯುಕ್ತ ಮಾಹಿತಿಗಳನ್ನು ಪ್ರತಿದಿನ ಪಡೆಯಿರಿ.