ನವಗ್ರಹಗಳ ಆರಾಧನೆ ಅಂದರೆ ಕೇವಲ ಪೂಜಾ ಹೋಮ ಮಾಡುವುದಲ್ಲ. ಇದನ್ನು ಪೂರ್ತಿ ಓದಿ.

0
9029

ಪ್ರತಿಯೊಂದು ಗ್ರಹಕ್ಕೂ ಅದರದ್ದೇ ಆದ ಗ್ರಹಾಧಿಪತಿಯೊಬ್ಬರು ಇರುತ್ತಾರೆ. ಕೇವಲ ಪೂಜಾಫಲಗಳಿಂದ ಅಷ್ಟೇ ಅಲ್ಲ ಕಾಯಕವೇ ಕೈಲಾಸ ಎಂಬಂತೆ ನಾವು ಮಾಡುವ ಉತ್ತಮ ಕೆಲಸ ಗಳಿಂದಲೂ ಹೇಗೆ ನವಗ್ರಹ ಗಳಿಂದ ಅನುಗ್ರಹವನ್ನು ಪಡೆಯಬಹುದು ಎಂಬ ಹೆಚ್ಚಿನ ಮಾಹಿತಿಯು ಇಲ್ಲಿ ನಿಮಗೆ ದೊರೆಯುತ್ತದೆ. ನವಗ್ರಹಗಳ ಆರಾಧನೆ ಅಂದರೆ ಕೇವಲ ಪೂಜಾ ಹೋಮ ಮಾಡುವದಲ್ಲ. ನಿಜವಾದ ಆರಾಧನಾ ಕ್ರಮ. ಅದನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನ ಹಸಿರಾಗುವುದರಲ್ಲಿ ಅನುಮಾನವೇ ಇಲ್ಲ.

ಹೇಚ್ಛೆನೂ ಮಾಡಬೇಕಿಲ್ಲ. ಈ ಕೆಲವು ಜೀವನದ ಉತ್ತಮ ಹಾದಿಯನ್ನು ಪಾಲಿಸಿದರೆ ಸಾಕು. 1. ನಿಮ್ಮ ತಂದೆಯನ್ನು ಆರಾಧಿಸಿ. ಅವರಿಗೆ ಸಾಕಷ್ಟು ಪ್ರೀತಿ, ವಿಶ್ವಾಸ ಆರಾಧನೆಯಿಂದ ಗೌರವಿಸಿ. ತಂದೆಯನ್ನು ಆಧರಿಸಿ, ಗೌರವಿಸಿದರೆ ರವಿಯು ತೃಪ್ತಿ ಪಡುವನು. 2. ನಿಮ್ಮ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳಿ. ತಾಯಿಯನ್ನು ಪೋಷಿಸಿ, ಪ್ರೀತಿಯಿಂದ ನೋಡಿಕೊಂಡರೆ ಚಂದ್ರನು ಅನುಗ್ರಹಿಸುವನು.

3. ಆಪತ್ಕಾಲದಲ್ಲಿ ಇರುವ ಭ್ರಾತೃಗಳನ್ನು ಪೋಷಿಸಿ ಸಹಾಯ ಮಾಡಿದರೆ ಕುಜನಿಗೆ ಪ್ರೀತಿಯಾಗುವುದು. 4. ವಿದ್ಯಾವಂತರನ್ನು, ಬುದ್ಧಿವಂತರನ್ನು ಗೌರವಿಸಿ, ಸನ್ಮಾನಿಸಿದರೆ ಬುಧನು ಪ್ರೀತಿಯಾಗುವನು. 5. ಮಕ್ಕಳು ದೇವರಿಗೆ ಸಮ ಎನ್ನುತ್ತಾರೆ. ಮಕ್ಕಳಿಗೆ ಸಿಹಿ ಹಂಚಿ, ಮಕ್ಕಳನ್ನು ಪ್ರೀತಿಸಿ ಪೋಷಿಸಿದರೆ ಗುರುವು ಪ್ರೀತಿಯಾಗುವನು. 6. ಪರ ಸ್ತ್ರೀಯರನ್ನು ತಾಯಿಯಂತೆ ಕಾಣಬೇಕು. ಹೆಂಡತಿಯೊಬ್ಬಳನ್ನು ಬಿಟ್ಟು ಉಳಿದ ಎಲ್ಲಾ ಹೆಂಗಸರನ್ನು ತಮ್ಮ ತಾಯಿಯಂತೆ ಕಾಣಿರಿ. ಹಾಗೂ ಶೋಷಣೆಗೆ ಒಳಗಾಗಿರುವ ಸ್ತ್ರೀಯರಿಗೆ ಸಹಾಯ ಮಾಡಿರಿ.

ಹೀಗೆ ಮಾಡಿದರೆ ಶುಕ್ರನಿಗೆ ಪ್ರೀತಿಯಾಗುತ್ತದೆ. 7. ವೃದ್ಧರಿಗೆ ಹಾಗು ಸಹಾಯ ಹಸ್ತವು ಬೇಕಿರುವವರಿಗೆ ಸಹಾಯ ಮಾಡಿ. ತೀರ್ಥಯಾತ್ರೆಗೆ ಗಂಗಾ ಸ್ನಾನಕ್ಕೆ ಹೋಗುವವರಿಗೆ, ವೃದ್ಧರಿಗೆ ಅನ್ನ, ನೀರು, ಬಟ್ಟೆ ಕೊಟ್ಟು ಕಾಪಾಡಿದರೆ ಶನಿ ಭಗವಂತನು ಪ್ರೀತಿಯಾಗುವರು. 8. ಹಾವುಗಳನ್ನು ಹೊಡೆದು ಹಾಕುವ ಪಾ’ಪವನ್ನು ಜೀವನದಲ್ಲಿ ಎಂದಿಗೂ ಮಾಡಬೇಡಿ. ಹುತ್ತಗಳನ್ನು ಕಾಪಾಡಿದರೆ ರಾಹು ಭಗವಂತನು ಪ್ರೀತಿ ಪಡೆದುಕೊಳ್ಳುತ್ತೀರ. ಈ ಭೂಮಿಯ ಮೇಲೆ ಬದುಕುವ ಹ’ಕ್ಕು ಮನುಷ್ಯರಿಗೆ ಎಷ್ಟಿದೆಯೋ ಅಷ್ಟೇ ಎಲ್ಲ ಪ್ರಾಣಿ-ಪಕ್ಷಿಗಳಿಗೂ ಇದೆ.

ಈ ವಿಷಯವನ್ನು ನಾವು ಎಂದಿಗೂ ಮರೆಯಬಾರದು. 9. ಸಾಧು ಸಂತರು, ಯತಿವರ್ಯರನ್ನು, ಜಂಗಮರನ್ನು ನಮಸ್ಕರಿಸಿ. ಅವರಿಗೆ ಸಹಾಯ ಮಾಡಿ ಪೋಷಿಸಿದರೆ, ಆದರಿಸಿದರೆ ಕೇತು ಭಗವಾನರು ತೃಪ್ತಿ ಪಡುವರು. ಹೀಗೆ ಗ್ರಹಗಳಿಗೆ ಅಧಿಪತ್ಯ ಕಾರಕತ್ವವನ್ನು ಭಗವಂತನು ಕೊಟ್ಟಿರುವನು. ಯಾವುದೇ ಕಾಲಕ್ಕೂ ಇದು ತಪ್ಪುವುದಿಲ್ಲ. ಕಾಲಚಕ್ರವು ಹೀಗೆ ಉರುಳುತ್ತದೆ. ನಾವು ಕಾಲಕ್ಕೆ ಅಧೀನರು. ಕಾಲವೇ ಎಲ್ಲರಿಗೂ ಪಾಠ ಕಲಿಸುತ್ತದೆ. ಕಾಲವೇ ಎಲ್ಲರಿಗೂ ಉತ್ತರಿಸುತ್ತದೆ. ಒಂದು ದಿನ ನಾವೆಲ್ಲರೂ ಕಾಲಗರ್ಭದಲ್ಲಿ ಸೇರಿ ಹೋಗುತ್ತೇವೆ.

ಕಾಲ ನಮಗಿಂತ ವೇಗ ಉಳ್ಳದ್ದು. ಈ ಎಲ್ಲವನ್ನು ನಿಷ್ಠೆಯಿಂದ ಪಾಲಿಸಿದರೆ ಜೀವನದಲ್ಲಿ ಕಷ್ಟಗಳು ಕಡಿಮೆಯಾಗುತ್ತದೆ. ನಾವು ಒಬ್ಬರಿಗೆ ಒಳ್ಳೆಯದನ್ನು ಮಾಡಿದರೆ ನಮಗೆ ಹತ್ತು ಜನರು ಒಳ್ಳೆಯದನ್ನು ಮಾಡುತ್ತಾರೆ ಎಂಬ ಮಾತಿದೆ. ನಾವು ಬದುಕಿರುವವರೆಗೂ ನಮ್ಮ ಕೈಯಲ್ಲಿ ಆಗುವಷ್ಟು ಮತ್ತೊಬ್ಬರಿಗೆ ಸಹಾಯ ಮಾಡೋಣ. ಭಗವಂತನ ಕೃಪೆಗೆ ಪಾತ್ರರಾಗೋಣ. ನಾವು ಮಾಡಿದ ಒಳ್ಳೆಯ ಕಾರ್ಯಗಳು ನಮ್ಮನ್ನು ಹಾಗೂ ನಮ್ಮ ಕುಟುಂಬದವರನ್ನು ಸಹ ಕಾಪಾಡುತ್ತದೆ.

ಇದರೊಂದಿಗೆ ಒಂದು ಮುಖ್ಯವಾದ ಅಂಶವೇನೆಂದರೆ ನಾವು ಮಾಡುವ ಕಾರ್ಯಗಳನ್ನು ನೋಡುತ್ತಾ ನಮ್ಮ ಮಕ್ಕಳು ಸಹ ಅದನ್ನು ಕಲಿಯುತ್ತಾರೆ. ಹಾಗಾಗಿ ಈ ಜಗತ್ತಿನಲ್ಲಿ ನಾವು ಬದುಕಿರುವಷ್ಟು ದಿನ ಮತ್ತೊಬ್ಬರಿಗೆ ಸಹಾಯ ಮಾಡುತ್ತಾ ಜೀವಿಸೋಣ. ಸಹಾಯ ಮಾಡಲು ಸಾಧ್ಯವಾಗದಿದ್ದರೂ ಚಿಂತೆಯಿಲ್ಲ. ಆದರೆ ಯಾರಿಗೂ ಕೆ’ಟ್ಟದ್ದನ್ನು ಮಾತ್ರ ಮಾಡುವುದು ಬೇಡ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆ ವಿಷಯವನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ಕೆಲಸ. ಮರ್ಯಾದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಹೆಚ್ಚಿನ ಉಪಯೋಗಕಾರಿ ವಿಷಯಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here