ದೀಪದ ಬಗ್ಗೆ ಈ ಮುಖ್ಯ ಮಾಹಿತಿಯನ್ನು ತಿಳಿದು ಹಚ್ಚಿದರೆ ಕೋಟ್ಯಾಧಿಪತಿಗಳಾಗುತ್ತಾರೆ.

0
5532

ತಮಸೋಮಾ ಜ್ಯೋತಿರ್ಗಮಯ. ಸಾಮಾನ್ಯವಾಗಿ ದೀಪಗಳನ್ನು ಎಲ್ಲರ ಮನೆಯಲ್ಲೂ ದೇವರ ಕೋಣೆಯಲ್ಲಿ ಬೆಳಗುತ್ತಾರೆ. ಅದು ಅಲ್ಲದೆ ಅವರವರ ನಂಬಿಕೆ ಆಚರಣೆಯ ವಿಷಯದಲ್ಲಿ ಅವರವರ ಇಷ್ಟ ದೇವತೆಗಳಿಗೆ ಆಯಾಯ ಸಂಕಲ್ಪಗಳಿಗೆ ಅನುಗುಣವಾಗಿ ದೀಪಗಳನ್ನು ಬೆಳಗುತ್ತಾರೆ. ಆದರೆ ದೀಪಎಂದರೇನು. ಅದರ ವಿಶೇಷತೆಗಳೇನು ಎಂಬುದು ಮೊದಲು ನಾವು ತಿಳಿದುಕೊಳ್ಳಬೇಕಾಗಿದೆ. ಅದಕ್ಕಾಗಿ ಇಲ್ಲಿ ದೀಪದ ಕುರಿತು ಒಂದು ಪುಟ್ಟ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದೇವೆ.

ನಂದಾದೀಪ ಎಂದರೇ : ದಿನವಿಡಿ ನಂದಿಹೋಗದೆ ದೇವರನ್ನು ಬೆಳಗುವ ದೀಪವೇ ನಂದಾದೀಪ. ನಂದ ಎಂದರೆ ಭಗವಂತ (ಅನಂದೋ ನಂದನೋ ನಂದಃ ವಿಷ್ಣುಸಹಸ್ರನಾಮ) ನಂದಯತಿ ಭಕ್ತಾನ್ ಇತಿನಂದಃ. ನಂದಾದೀಪ ಯಾರ ಮನೆಯಲ್ಲಿ ಬೆಳಗುತ್ತದೆಯೋ ಅಂತಹ ಮನೆಯಲ್ಲಿ ದೈವೀ ಪ್ರಭಾವ ಮತ್ತು ಶಕ್ತಿ ಹೆಚ್ಚಾಗಿರುತ್ತದೆ. ದೀಪ – ದಿಕ್ಕು – ಫಲ : ಪೂರ್ವ ದಿಕ್ಕಿನಲ್ಲಿ ಹಚ್ಚಿದರೆ ಮನೆಯಲ್ಲಿ ಸು’ಖ ಶಾಂತಿ ನೆಮ್ಮದಿ ದೊರಯುವುದು, ಮಾ’ಟ, ಮಂ’ತ್ರ ದೋ’ಷ, ವಾಸ್ತುದೋ’ಷ ನಿವಾರಣೆಯಾಗುತ್ತದೆ.

ಪಶ್ಚಿಮ ದಿಕ್ಕಿನಲ್ಲಿ ಹಚ್ಚಿದರೆ : ಕ’ಲಹ ಹೆಚ್ಚು, ನೆಮ್ಮದಿ ಕಮ್ಮಿ, ಮನೆಯ ಯಜಮಾನರು, ಮಕ್ಕಳ ಅಭಿವೃದ್ಧಿ ಕುಂ’ಠಿತವಾಗುತ್ತದೆ, ಸೋ’ಮಾರಿಗಳಾಗುತ್ತಾರೆ. ದಕ್ಷಿಣ ದಿಕ್ಕಿನಲ್ಲಿ ಹಚ್ಚಿದರೆ : ಆದಾಯ ಕಡಿಮೆ ಇದ್ದು ಖರ್ಚು ಹೆಚ್ಚಾಗುವುದು, ಅನಾರೋಗ್ಯ ಸಮಸ್ಯೆಗಳು ಜಾಸ್ತಿಯಾಗುತ್ತವೆ. ಉತ್ತರ ದಿಕ್ಕಿನಲ್ಲಿ ಹಚ್ಚಿದರೆ, ಸ್ವಲ್ಪ ಈಶಾನ್ಯ ಮೂಲೆಗೆ ತಿರುಗಿಸಿ ಹಚ್ಚಿದರೆ : ಶ್ರೀ ಲಕ್ಷ್ಮೀ ಕಟಾಕ್ಷವಾಗಿ ಸದಾ ನೆಮ್ಮದಿಯಿಂದ ಕೂಡಿರುತ್ತದೆ. ಶ್ರೀ ಲಕ್ಷ್ಮೀ ಅಭಿವೃದ್ಧಿಯಾಗಿ ಮನೆಯು ಅಭಿವೃದ್ಧಿ ಆಗುತ್ತದೆ. ಶುಭಕಾರ್ಯಗಳು ಬೇಗ ನಡೆಯುತ್ತವೆ.

ದೀಪದ ಅರ್ಥ : ದೀಪ್ಯತೇ ದೀಪಯತಿ ವಾ ಸ್ವo ಪರಂ ಚೇತಿ ದೀಪಃ ಅಂದರೆ ಭಗವಂತನನ್ನು ತೋರಿಸುವ ವಸ್ತುವೇ ದೀಪ. ರವೇರಸ್ತ ಸಮಾರಭ್ಯ ಯಾವತ್ ಸೂರ್ಯೋದಯೋ ಭವೇತ್ ಯಸ್ಯ ತಿಷ್ಠತಿ ಗೃಹೇ ದೀಪಃ ತಸ್ಯ ನಾಸ್ತಿ ದರಿದ್ರತಾ. ಸೂರ್ಯಾಸ್ತವಾದ ಕೊಡಲೆ ಗೃಹಿಣಿಯು ದೇವರ ಮುಂದೆ ಮುಂದಿನ ದಿನ ಸೂರ್ಯೋದಯ ಆಗುವವರೆಗೂ ದೀಪವು ನಂದಿಹೋಗದಂತೆ ನೋಡಿಕೊಳ್ಳಬೇಕು. ಹೀಗೆ ದೀಪ ಬೆಳಗಿದ ಮನೆಯಲ್ಲಿ ಕಷ್ಟಗಳು ಸುಳಿಯುವುದಿಲ್ಲ. ದಾರಿದ್ರ್ಯವು ಬರಲಾರದು.

ಲಕ್ಷ್ಮೀದೇವಿಯ ಸನ್ನಿಧಾನ ವಿಶೇಷವಿರುವ ತುಳಸಿ ಕಾಷ್ಠದಿಂದ ದೇವರಿಗೆ ದೀಪವನ್ನು ಹಚ್ಚಿದರೆ ಭಗವಂತನು ಹೆಚ್ಚು ಸಂತುಷ್ಟನಾಗುವನು. ದೀಪದಲ್ಲಿರುವ ದೇವತೆಗಳು : ಭೂದೇವಿಯರು ಪ್ರಣತಿಯೊಳಗೆ, ಲಕ್ಷ್ಮೀದೇವಿಯರು ಎ’ಣ್ಣೆಯೊಳಗೆ ಶೇಷದೇವರು ಬತ್ತಿಯೊಳಗೆ, ವಾಯುದೇವರು ಪ್ರಕಾಶದೊಳಗೆ, ರು’ದ್ರದೇವರು ಕಪ್ಪಿನೊಳಗೆ, ಶಚಿಪತಿ ಇಂದ್ರದೇವರು ದೀಪಕ್ಕೆ ಅಭಿಮಾನಿ. ದೀಪ ಹಚ್ಚುವಾಗ ಹೇಳಬೇಕಾದ ಮಂತ್ರ : ದೀಪ ದೇವಿನಮಸ್ತುಭ್ಯಂ ಮಂಗಲೇ ಪಾಪನಾಶಿನೀ ಆಜ್ಞಾನಾಂಧಸ್ಯ ಮೇ ನಿತ್ಯಂ ಸುಜ್ಞಾನಂದೇಹಿ ಸುಪ್ರಭೆ.

ದೀಪದಲ್ಲಿರಬೇಕಾದ ಬತ್ತಿಯ ಸಂಖ್ಯೆ : ದೀಪದಲ್ಲಿ ಎರಡು ಬತ್ತಿಗಳಿರಲೇಬೇಕು. ಒಂದು ಬತ್ತಿ ಇಂದ ದೀಪ ಹಚ್ಚಬಾರದು. ಹೊಬತ್ತಿಯನ್ನು ಎರಡು ಇಟ್ಟಿರಬೇಕು. (ಬೇರೆ ಬೇರೆ ಸಂಕಲ್ಪಗಳಿಗನುಗುಣವಾಗಿ ಮೂರು ಐದು ಮುಂತಾದವುಗಳಿರುತ್ತವೆ. ಅದು ಅವರವರ ನಂಬಿಕೆ) ದೀಪದ ತೈಲ ಅಥವಾ ಎಣ್ಣೆ : ಶ್ರೀವಿಷ್ಣುವಿಗೆ ದೀಪವನ್ನು ಹಚ್ಚುವಾಗ ತುಪ್ಪ ತಿಲತೈಲ ಅಥವಾ ಎಳ್ಳೆಣ್ಣೆಯಾಗಲಿ ಹೂವುಗಳಿಂದ ಸುವಾಸಿತಗೊಳಿಸಿ ನಂತರ ಬೆಳಗಬೇಕು ಎಂಬ ಪ್ರಮಾಣ ವಾಕ್ಯವು ಘೃತದೀಪ, ತೈಲದೀಪವು ವಿಷ್ಣುಲೋಕ ಪ್ರಾಪ್ತಿಗೆ ಕಾರಣವೆನ್ನಲಾಗಿದೆ.

ದೀಪಕ್ಕಾಗಿ ತುಪ್ಪ ಮತ್ತು ಎಳ್ಳೆಣ್ಣೆಯನ್ನು ಮಾತ್ರ ಉಪಯೋಗಿಸಬೇಕು. ಉಳಿದ ಎಣ್ಣೆಗಳು ವರ್ಜ್ಯ ಎಂದು ‘ಅಗ್ನಿ ಪುರಾಣ’ ತಿಳಿಸಿದೆ. ಆದರೆ ಒಂದೊಂದು ಕಡೆ ಒಂದೊಂದು ನಂಬಿಕೆ ಇರುವುದರಿಂದ ಅವರವರ ಇಷ್ಟಾನುಸಾರವಾಗಿ ಬೇವು ಹರಳೆಣ್ಣೆ ಮುಂತಾದವುಗಳನ್ನು ಉಪಯೋಗಿಸುತ್ತಾರೆ. ದೇವಾಲಯದ ದೀಪಸ್ಥಂಭದಲ್ಲಿರುವ ದೇವತೆಗಳು : ದೀಪಸ್ಥoಭದಲ್ಲಿ 27 ನಕ್ಷತ್ರ ದೇವತೆಗಳು ಇದ್ದಾರೆ. ನಾಳದಲ್ಲಿ ವಾಸುಕಿ ದೇವತೆ, ಪಾದದಲ್ಲಿ ಚಂದ್ರಸೂರ್ಯರು, ದೂಪ ದೀಪ ಪಾತ್ರದಲ್ಲಿ ಅ’ಗ್ನಿದೇವತೆ.

ದೀಪಸ್ಥoಭಗಳಲ್ಲಿ ಅಗ್ರದಲ್ಲಿಯ ಅಗ್ನಿಯು, ದಂಡದಲ್ಲಿ ರುದ್ರನು, ಬುಡದಲ್ಲಿ ಬ್ರಹ್ಮದೇವನು ಇರುವರು. ಸ್ತ್ರೀಯರು ದೀಪ ಹಚ್ಚುವಾಗ ಭಗವಂತನಲ್ಲಿ ಹೀಗೆ ಪ್ರಾರ್ಥನೆ ಮಾಡಿ. ಆನಂತಾನಂತ ಗುಣಪೂರ್ಣನು ಆದಂತ, ಆನಂತೋತ್ತಮನು ಬ್ರಹ್ಮಾಂಡೋತ್ಪಾದಕನೂ ಆದ ನೀನು ನಮ್ಮನ್ನು ನಿಮಿತ್ತಮಾತ್ರ ಇಟ್ಟಿದ್ದೀ. ಪಾತ್ರೆಯಲ್ಲಿ ಬ್ರಹ್ಮದೇವರ ಸನ್ನಿಧಾನ, ತೈಲದಲ್ಲಿ ನಿಮ್ಮ ಸಹಧರ್ಮಿಣಿ ಲಕ್ಷ್ಮಿಯ ಸನ್ನಿಧಾನ, ಬತ್ತಿಯಲ್ಲಿ ವಾಸುದೇವ ಸಂಕರ್ಷಣನ ಸನ್ನಿಧಾನ, ಬಿಳುಪಿನಲ್ಲಿ ವಾಯುದೇವರ ಸನ್ನಿಧಾನ, ಕೆಂಪಿನಲ್ಲಿ ಇಂದ್ರದೇವರ ಸನ್ನಿಧಾನ, ಕಪ್ಪಿನಲ್ಲಿ ರುದ್ರದೇವರ ಸನ್ನಿಧಾನ, ಇಷ್ಟು ಮಂದಿ ತುಂಬಿರುವ ಈ ದೀಪ ಬಹಳ ಪವಿತ್ರವಾದದ್ದು.

ಹೇ ಮಹಾ ವಿಷ್ಣುವೇ, ನಿಮ್ಮ ಮಹಾದಿವ್ಯ ದೇಹದ ಬೆಳಕೇ ಬೆಳಕು. ನಿಮ್ಮ ಪ್ರಕಾಶವೇ ಕೋಟಿ ಸೂರ್ಯಪ್ರಕಾಶ. ನಿಮ್ಮ ಕಾಂತಿಯೇ ಕಾಂತಿ. ಎನ್ನ ಹೃದಯದಲ್ಲಿ ತುಂಬಿರುವ ಈ ಆಜ್ಞಾನ ಅಂ’ಧಕಾರ ಬಿಡಿಸಿ ಜ್ಞಾನ, ಭಕ್ತಿ, ವೈರಾಗ್ಯ ಕೊಟ್ಟು ರಕ್ಷಿಸಬೇಕೆಂದು ಹಚ್ಚುವಂತಹ ಈ ದೀಪ ಶ್ರೀ ಕ್ರಷ್ಣನಿಗೆ ಅರ್ಪಿತವಾಗಲಿ. ದೇವರ ಕೋಣೆಯಲ್ಲದೇ ದೀಪ ಬೆಳಗಬಹುದಾದ ಮುಖ್ಯ ಸ್ಥಳಗಳು : ಮನೆಯ ದ್ವಾರಗಳಲ್ಲಿ, ದೇವಾಲಯ, ಕಂಭಗಳು, ದೇವಾಲಯದ ಶಿಖರ, ಮನೆಯ ಅಂಗಳ, ಚೌಕಗಳು, ತುಲಸೀ ವೃಂದವನ, ಪುರಾಣ ಪ್ರವಚನ ನಡೆಯುವ ಸ್ಥಳ, ಗೋಹಟ್ಟಿ, ವೇದಾಧ್ಯಯನ ನಡೆಯುವ ಸ್ಥಳ, ಅಶ್ವತ್ಥವನ, ಧಾತ್ರೀ(ನೆಲ್ಲಿ)ವನ, ಮಠಗಳಲ್ಲೀಯೂ ದೀಪಗಳನ್ನು ಬೆಳಗಬಹುದು ಏಕೆಂದರೆ ಈ ಸ್ಥಳಗಳಲ್ಲಿ ಲಕ್ಷ್ಮಿದೇವಿ ವಾಸವಾಗಿರುತ್ತಾಳೆ.

ಮತ್ತೊಮ್ಮೆ ನೆನಪಿಡಿ. ದೀಪವು ಪೂರ್ವ ಅಥವಾ ಉತ್ತರ ದಿಕ್ಕಿಗೆ ಅಭಿಮುಖವಾಗಿ ಉರಿಯುತ್ತಿರಬೇಕು. ದಕ್ಷಿಣ ಮುಖವೂ ಹಾನಿ ಉಂಟುಮಾಡುತ್ತದೆ. ಪೂರ್ವಾಭಿಮುಖವಾದ ದೀಪವು ಆಯುರಾಭಿವೃದ್ಧಿಯನ್ನು ಕರುಣಿಸುತ್ತದೆ. ಪಶ್ಚಿಮ ದಿಕ್ಕು ದುಃ’ಖವನ್ನು ನೀಡುತ್ತದೆ. ಉತ್ತಾರಾಭಿಮುಖವಾದದ್ದು ಸಂಪತ್ತನ್ನು ನೀಡುತ್ತದೆ. ಆದ್ದರಿಂದ ಪೂರ್ವ ಮತ್ತು ಉತ್ತರ ದಿಕ್ಕುಗಳು ದೀಪ ಬೆಳಗಲು ಶ್ರೇಷ್ಠವಾಗಿವೆ. ದೀಪದ ಕುರಿತು ಹೇಳುವುದಾದರೆ ಇನ್ನೂ ಬೇಕಾದಷ್ಟಿದೆ. ಸಾಧ್ಯವಾದಲ್ಲಿ ಮುಂದೆ ನೋಡೋಣ.

ಕೊನೆಯದಾಗಿ ಒಂದು ಟಿಪ್ಸ್. ಅದೇನೆಂದರೆ, ದೀಪವನ್ನು ಎಳ್ಳೆಣ್ಣೆಯಿಂದಲಾದರೂ ಹಚ್ಚಿ ತುಪ್ಪದಿಂದಲಾದರೂ ಬೆಳಗಿ ಆದರೆ ಅದರೊಂದಿಗೆ ಅಚಲ ಭಕ್ತಿ ಹಾಗೂ ಪ್ರೀತಿಯನ್ನು ಬೆರೆಸುವುದ ಮರೆಯದಿರಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರಿಗೂ ತಿಳಿಸಿ ಹಂಚಿಕೊಳ್ಳಿ. ಒಳ್ಳೆಯ ವಿಷಯವನ್ನು ಹಂಚಿಕೊಂಡರೆ ನಮಗೂ ಹಾಗೂ ಎಲ್ಲರಿಗೂ ಒಳ್ಳೆಯದಾಗುತ್ತದೆ. ಇದೇ ರೀತಿಯ ಮತ್ತಷ್ಟು ಉಪಯುಕ್ತ ಮಾಹಿತಿಗಾಗಿ ಪ್ರತಿದಿನ ಈ ಪೇಜ್ ಅನ್ನು ನೋಡುತ್ತಿರಿ.

LEAVE A REPLY

Please enter your comment!
Please enter your name here