ನಮ್ಮ ಧಾರ್ಮಿಕ ಆಚರಣೆಗಳಲ್ಲಿ ಅಡಗಿರುವ 5 ವೈಜ್ಞಾನಿಕ ಸತ್ಯಗಳು.

0
2086

೧) ಹೆಂಗಸರು ಏಕೆ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ : ಕಾಲುಂಗುರ ಹಾಕಿಕೊಳ್ಳುವುದು ಕೇವಲ ಮದುವೆಯಾಗಿದ್ದೇವೆ ಎಂದು ತೋರಿಸಲಷ್ಟೇ ಅಲ್ಲ. ಅದರ ಹಿಂದೆ ವೈಜ್ಞಾನಿಕ ಕಾರಣವು ಸಹ ಇದೆ. ಅದೇನೆಂದರೆ ಸಾಮಾನ್ಯವಾಗಿ ಹೆಂಗಸರು ತಮ್ಮ ಕಾಲಿನ ಎರಡನೆ ಬೆರಳಿಗೆ ಈ ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ. ಇದರಲ್ಲಿರುವ ನರವು ನೇರವಾಗಿ ಗ’ರ್ಭಾ’ಶಯ, ಹೃದಯವನ್ನು ಸಂಪರ್ಕಿಸುತ್ತದೆ. ಇದಕ್ಕೆ ಕಾಲುಂಗುರವನ್ನು ಹಾಕಿ ಕೊಳ್ಳುವುದರಿಂದ ಗ’ರ್ಭಾ’ಶಯವು ಸದೃಢಗೊಳ್ಳುತ್ತದೆ.

ಇದರಿಂದ ಗ’ರ್ಭಕೋ’ಶಕ್ಕೆ ನಿರಂತರವಾಗಿ ರ’ಕ್ತ ಪೂರೈಕೆಯು ಸರಾಗವಾಗಿ ಸಾಗುತ್ತದೆ ಮತ್ತು ಋತು ಚಕ್ರವು ಯಾವುದೇ ದೋ’ಷಗಳಿಲ್ಲದೆ ನಡೆಯುತ್ತದೆ. ಬೆಳ್ಳಿಯು ಅತ್ಯುತ್ತಮವಾದ ವಾಹಕವಾಗಿದ್ದು, ಇದು ಭೂಮಿಯಲ್ಲಿನ ಧೃವೀಯ ಶಕ್ತಿಗಳನ್ನು ಎಳೆದು ಕೊಂಡು ಅದನ್ನು ದೇಹಕ್ಕೆ ರವಾನಿಸುತ್ತದೆ. ೨) ನಾವೇಕೆ ತುಳಸಿ ಗಿಡಗಳನ್ನು ಪೂಜಿಸುತ್ತೇವೆ : ಹಿಂದೂ ಧರ್ಮವು “ತುಳಸಿ” ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. “ಪವಿತ್ರ ತುಳಸಿ” ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲೂ ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕ, ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ.

ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯ ಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣಬಹುದು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ರಕ್ಷಿಸುತ್ತಿದ್ದೇವೆ. ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗೂ ತಿಳಿದ ವಿಚಾರವೇ.

ಇದೊಂದು ಅದ್ಭುತವಾದ ಆ್ಯಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿ’ರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋ’ಗಗಳು ಕಾಡುವ ಅ’ಪಾಯವಿರುವುದಿಲ್ಲ. ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿ ಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.

೩) ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ : ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳು ಆಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ (ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ) ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ.

ಇದನ್ನು ಕರುಣಾ ಎಂದು ಕರೆಯುತ್ತಾರೆ. ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು, ಲೌ’ಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಮನಸ್ಸು, ಹೃದಯಗಳೆರಡುನ್ನೂ ಬೆಸೆಯುತ್ತದೆ. ಇದೇ ಕ್ರಿಯೆಯನ್ನು ಹಸ್ತ ಲಾಘವ ಮಾಡುವ ಮೂಲಕ ಹಾಗೂ ಅಪ್ಪಿಕೊಳ್ಳುವ ಮೂಲಕ ಸಹ ಮಾಡಬಹುದು. ಮೆದುಳಿನಿಂದ ಆರಂಭವಾಗುವ ನ’ರಗಳು ನಿಮ್ಮ ಇಡೀ ದೇಹದ ತುಂಬಾ ಹರಡಿಕೊಂಡಿರುತ್ತವೆ. ಈ ನ’ರಗಳು ನಿಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ.

ಯಾವಾಗ ನೀವು ನಿಮ್ಮ ಕೈ ಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ “ಧಾರಕಗಳಾಗಿ” ಕಾರ್ಯ ನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶ’ಕ್ತಿಯನ್ನು ನೀಡುವ ಅಂಶವಾಗಿ ಗುರುತಿಸಲ್ಪಡುತ್ತದೆ. ೪) ನೆಲದ ಮೇಲೆ ಕುಳಿತು ಊಟ ಮಾಡುವುದು : ನೆಲದ ಮೇಲೆ ಕುಳಿತು ಊಟ ಮಾಡುವುದು ಕೇವಲ ಸಂಪ್ರದಾಯವಷ್ಟೇ ಅಲ್ಲ.

ಅದು ಯೋಗ ಸಾಧನೆಯ ಒಂದು ಆಸನವೆನ್ನುವುದು ಬಹುತೇಕ ಮಂದಿಗೆ ತಿಳಿದಿಲ್ಲ. ಯೋಗದಲ್ಲಿ ಸುಖಾಸನ ಎಂಬ ಒಂದು ಆಸನವಿದೆ. ಹೆಸರೇ ಹೇಳುವಂತೆ ಇದು ಸು’ಖವಾಗಿ ಅಂದರೆ ಯಾವುದೇ ನೋವಿಲ್ಲದೆ ಕೂರಬಹುದಾದ ಆಸನ. ಈ ಆಸನದಲ್ಲಿ ಕೂರುವುದರಿಂದ ರ’ಕ್ತ ಪರಿಚಲನೆಯು ಯಾವುದೇ ಅಡೆತಡೆಗಳಿಲ್ಲದೆ ನಡೆದು, ಜೀರ್ಣಾಂಗ ವ್ಯೂಹವು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನೇ ನಾವು ಕುರ್ಚಿಯ ಮೇಲೆ ಕುಳಿತು ಅಥವಾ ನಿಂತು ಊಟ ಮಾಡುವುದರಿಂದ ನಮಗೆ ಈ ಪ್ರಯೋಜನಗಳು ಸಿಗುವುದಿಲ್ಲ.

೫) ಹಣೆಗೆ ತಿಲಕ ಹಚ್ಚುವ ಕ್ರಮ : ಪುರಾತನ ಕಾಲದಿಂದಲು ಹಣೆಯ ಮೇಲೆ ಎರಡು ಹುಬ್ಬುಗಳ ನಡುವಿನ ಭಾಗದಲ್ಲಿ ನೆಲೆಸಿರುವ ಸ್ಥಳವನ್ನು ಮಾನವ ದೇಹದ ಪ್ರಧಾನ ನರಕೇಂದ್ರವೆಂದು ಪರಿಗಣಿಸಲಾಗಿದೆ. ತಿಲಕವು ದೇಹದಲ್ಲಿನ ಶ’ಕ್ತಿಯು ಪೋಲಾಗುವುದನ್ನು ತಡೆಯುತ್ತದೆ. ಎರಡು ಹುಬ್ಬುಗಳ ನಡುವೆ ಇಡುವ ಕೆಂಪು “ಕುಂಕುಮ”ವು ದೇಹದಲ್ಲಿನ ಶಕ್ತಿಯನ್ನು ಮರು ಸಂಚಯಗೊಳಿಸುತ್ತದೆ ಮತ್ತು ಏಕಾಗ್ರತೆಯ ವಿವಿಧ ಘಟ್ಟಗಳನ್ನು ನಿಯಂತ್ರಿಸುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಒಳ್ಳೆಯ ವಿಷಯ ಹಾಗೆ ಮರೆಯದೆ ನಮ್ಮ ಪೇಜ್ ನ್ನು ಲೈಕ್ ಮಾಡಿ ಹೆಚ್ಚಿನ ದಿನ ಭವಿಷ್ಯದ ಬಗ್ಗೆ ಜ್ಯೋತಿಷ್ಯ ಶಾಸ್ತ್ರಗಳ ಬಗ್ಗೆ ಅಪ್ಡೇಟ್ಗಳನ್ನು ಪಡೆಯಿರಿ.

LEAVE A REPLY

Please enter your comment!
Please enter your name here