ನವರಾತ್ರಿಯಂದು ನವವಿಧ ಪೂಜೆ ಹೀಗೆ ಮಾಡಿದರೆ ದೇವಿ ಕೈ ಬಿಡುವ ಮಾತೇ ಇಲ್ಲ.

0
2168

ನವರಾತ್ರಿ ಮೊದಲದಿನ ಯಾವ ದೇವಿಯನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂದು ನಾವು ತಿಳಿದುಕೊಳ್ಳೋಣ. ಮೊದಲ ದಿನ ದೇವಿ ಮಾಹೇಶ್ವರಿಯನ್ನು ಪೂಜಿಸಬೇಕು. ನೈವೇದ್ಯವಾಗಿ ಖಾರ ಹುಗ್ಗಿಯನ್ನು ಅರ್ಪಿಸಬೇಕು. ತಾಯಿಗೆ ಮಲ್ಲಿಗೆ ಹೂಗಳಿಂದ ಪೂಜಿಸಬೇಕು. ತಿಥಿ : ಪಾಡ್ಯ ರಾಗ : ತೋಡಿ ಶ್ಲೋಕ : ಓಂ ಶ್ವೇತವರ್ಣೀಯಾ ವಿದ್ವಮೇ ಶೂಲ ಹಸ್ತಾಯ ಧೀಮಹಿ ತನ್ನೋ ಮಾಹೇಶ್ವರಿ ಪ್ರಚೊದಯಾತ್. ನವರಾತ್ರಿಯ ಎರಡನೆಯ ದಿನದಂದು ಯಾವ ದೇವಿಯ ರೂಪವನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂದು ನಾವು ತಿಳಿದುಕೊಳ್ಳೋಣ.

ಎರಡನೇಯ ದಿನದಂದು ಕೌಮಾರಿ ದೇವಿಯನ್ನು ಪೂಜಿಸಬೇಕು. ತಿಥಿ : ಬಿದಿಗೆ. ತಾಯಿಗೆ ಕಣಗಲೆ ಹೂವುಗಳಿಂದ ಪೂಜಿಸಬೇಕು. ಪುಳಿಯೋಗರೆಯನ್ನು ಮಾಡಿ ನೈವೇದ್ಯವನ್ನು ಅರ್ಪಿಸಬೇಕು. ರಾಗ : ಕಲ್ಯಾಣಿ ಶ್ಲೋಕ : ಓಂ ಶಿಕಿ ವಾಹನಾಯ ವಿದ್ಮಹೇ ಶಕ್ತಿ ಹಸ್ತಾಯೈ ಧೀಮಹಿ ತನ್ನೋ ಕೌಮಾರಿ ಪ್ರಚೋದಯಾತ್. ನವರಾತ್ರಿಯ ಮೂರನೇ ದಿನದಂದು ಯಾವ ದೇವಿಯನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂದು ನಾವು ತಿಳಿದುಕೊಳ್ಳೋಣ. ಮೂರನೇ ದಿನದಂದು ವಾರಾಹಿ ದೇವಿಯನ್ನು ಪೂಜಿಸಬೇಕು. ತಿಥಿ : ತದಿಗೆ. ಸಂಪಿಗೆ ಹೂವನ್ನು ದೇವಿಗೆ ಅರ್ಪಿಸಬೇಕು. ಸಿಹಿ ಹುಗ್ಗಿಯನ್ನು ನೈವೇದ್ಯಕ್ಕಾಗಿ ಅರ್ಪಿಸಬೇಕು. ರಾಗ : ಕಾಂಭೋಧಿ. ಶ್ಲೋಕ: ಓಂ ಮಹಿಶತ್ವಜಾಯ ವಿದ್ಮಹೇ ತಂಡ ಹಸ್ತಾಯ ಧೀಮಹಿ ತನ್ನೋ ವಾರಾಹಿ ಪ್ರಚೋದಯತ್.

ನವರಾತ್ರಿಯ ನಾಲ್ಕನೇಯ ದಿನದಂದು ಯಾವ ದೇವಿಯನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂದು ನಾವು ತಿಳಿದುಕೊಳ್ಳೋಣ. ನಾಲ್ಕನೇ ದಿನವು ಲಕ್ಷ್ಮೀ ದೇವಿಯನ್ನು ಪೂಜಿಸಬೇಕು. ಜಾಜಿ ಹೂಗಳಿಂದ ದೇವಿಯನ್ನು ಭಕ್ತಿಯಿಂದ ಪೂಜಿಸಬೇಕು. ತಿಥಿ : ಚತುರ್ಥಿ ರಾಗ : ಭೈರವಿ. ಶ್ಲೋಕ: ಓಂ‌ ಪದ್ಮ ವಾಸನ್ಯೈ ಚ ವಿದ್ಮಹೀ ಪದ್ಮಲೋಚನೀ ಸ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್. ನವರಾತ್ರಿಯ ಐದನೇ ದಿನದಂದು ಯಾವ ದೇವಿಯನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂದು ನಾವು ತಿಳಿದುಕೊಳ್ಳೋಣ. ಐದನೆಯ ದಿನದಂದು ವೈಷ್ಣವಿ ದೇವಿಯನ್ನು ಪೂಜಿಸಬೇಕು.

ಪಾರಿಜಾತ ಹೂಗಳಿಂದ ಪೂಜಿಸಬೇಕು. ಮೊಸರನ್ನ ನೈವೇದ್ಯವಾಗಿ ಅರ್ಪಿಸಬೇಕು. ತಿಥಿ : ಪಂಚಮಿ ರಾಗ : ಪಂಚಮ ವರ್ಣ ಕೀರ್ತನೆ. ಶ್ಲೋಕ: ಓಂ ಶ್ಯಾಮವರ್ಣಾಯೈ ವಿದ್ಮಹಿ ಚಕ್ರ ಹಸ್ತಾಯೈ ಧೀಮಹಿ ತನ್ನೋ ವೈಷ್ಣವಿ ಪ್ರಚೋದಯಾತ್. ನವರಾತ್ರಿಯ ಆರನೆಯ ದಿನದಂದು ಯಾವ ದೇವಿಯನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂದು ನಾವು ತಿಳಿದುಕೊಳ್ಳೋಣ. ಆರನೆಯ ದಿನ ಇಂದ್ರಾಣಿ ದೇವಿಯನ್ನು ಪೂಜಿಸಬೇಕು. ದಾಸವಾಳ ಹೂವುಗಳಿಂದ ಪೂಜಿಸಬೇಕು. ತೆಂಗಿನಕಾಯಿ ಅನ್ನ ನೈವೇದ್ಯವಾಗಿ ತಾಯಿಗೆ ಭಕ್ತಿಯಿಂದ ಅರ್ಪಿಸಬೇಕು. ತಿಥಿ : ಷಷ್ಠಿ ರಾಗ : ನೀಲಾಂಬರಿ ಶ್ಲೋಕ : ಓಂ ಕಜತ್ವಜಾಯೈ ವಿದ್ಮಹಿ ವಜ್ರ ಹಸ್ತಾಯ ಧೀಮಹಿ ತನ್ನೋ ಇಂದ್ರಾಯೀ ಪ್ರಚೋದಯಾತ್.

ನವರಾತ್ರಿಯ ಏಳನೆ ದಿನದಂದು ಯಾವ ದೇವಿಯನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂದು ನಾವು ತಿಳಿದುಕೊಳ್ಳೋಣ. ಏಳನೆಯ ದಿನದಂದು ಸರಸ್ವತಿ ದೇವಿಯನ್ನು ಶ್ರದ್ಧಾಪೂರ್ವಕವಾಗಿ ಪೂಜಿಸಬೇಕು. ಮಲ್ಲಿಗೆ ಮತ್ತು ಮೊಲ್ಲೆ ಹೂವುಗಳಿಂದ ತಾಯಿಯನ್ನು ಪೂಜಿಸಬೇಕು. ತಿಥಿ : ಸಪ್ತಮಿ. ನೈವೇದ್ಯಕ್ಕಾಗಿ ನಿಂಬೆಹಣ್ಣಿನ ಅನ್ನ ಮಾಡಿ ತಾಯಿಗೆ ನೈವೇದ್ಯ ಅರ್ಪಿಸಬೇಕು. ರಾಗ : ಬಿಲ್ಲ್ಹಾರಿ. ಶ್ಲೋಕ : ಓಂ ವಾಗ್ಧೇವ್ಯೈ ವಿದ್ಮಹಿ ವೃಂಜಿ ಪತ್ನಯೈ ಸ ಧೀಮಹಿ ತನ್ನೋ ವಾಣಿ ಪ್ರಚೋದಯಾತ್. ನವರಾತ್ರಿ ಎಂಟನೆಯ ದಿನದಂದು ಯಾವ ದೇವಿಯನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂದು ನಾವು ತಿಳಿದುಕೊಳ್ಳೋಣ.

ಎಂಟನೆಯ ದಿನದಂದು ದುರ್ಗಾ ದೇವಿಯನ್ನು ಪೂಜಿಸಬೇಕು. ಗುಲಾಬಿ ಹೂವುಗಳನ್ನು ಜಗನ್ಮಾತೆಗೆ ಅರ್ಪಿಸಬೇಕು. ಪಾಯಸಾನ್ನ ನೈವೇದ್ಯವಾಗಿ ಅರ್ಪಿಸಬೇಕು. ತಿಥಿ : ಅಷ್ಟಮಿ ರಾಗ: ಪುನ್ನಗವರಾಲಿ. ಶ್ಲೋಕ: ಓಂ ಮಹಿಷಮರ್ದಿನ್ಯೈ ಚ ವಿದ್ಮಹೀ ದುರ್ಗಾ ದೇವ್ಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್. ನವರಾತ್ರಿಯ ಒಂಬತ್ತನೇಯ ದಿನದಂದು ಯಾವ ದೇವಿಯನ್ನು ಪೂಜಿಸಬೇಕು ಹಾಗೂ ಹೇಗೆ ಪೂಜಿಸಬೇಕು ಎಂದು ನಾವು ತಿಳಿದುಕೊಳ್ಳೋಣ. ಒಂಬತ್ತನೆಯ ದಿನದಂದು ತಾಯಿ ಜಾಮುಂಡಿಯನ್ನು ಭಕ್ತಿಯಿಂದ ಪೂಜಿಸಬೇಕು. ತಾವರೆ ಹೂವುಗಳನ್ನು ಅರ್ಪಿಸಬೇಕು.

ಕ್ಷೀರಾನ್ನವನ್ನು ನೈವೇದ್ಯಕ್ಕಾಗಿ ಅರ್ಪಿಸಬೇಕು. ತಿಥಿ : ನವಮಿ. ರಾಗ : ವಸಂತ. ಶ್ಲೋಕ: ಓಂ ಕೃಷ್ಣವರ್ಣಾಯೈ ವಿದ್ಮಹೀ ಶೂಲ ಹಸ್ತಾಯೈ ಧೀಮಹಿ ತನ್ನೋ ಜಾಮುಂಡಾ ಪ್ರಚೋದಯಾತ್. ವಿಜಯ ದಶಮಿಯಂದು ವಿಜಯ ದೇವಿಯನ್ನು ಪೂಜಿಸಬೇಕು. ಮಲ್ಲಿಗೆ, ಗುಲಾಬಿ ಹೂವುಗಳನ್ನು ಅರ್ಪಿಸಬೇಕು. ಕಲ್ಲು ಸಕ್ಕರೆ ಅನ್ನ ಹಾಗೂ ಸಿಹಿ ಭಕ್ಷ್ಯಗಳನ್ನು ತಾಯಿಗೆ ನೈವೇದ್ಯವಾಗಿ ಸಮರ್ಪಿಸಬೇಕು. ಶ್ಲೋಕ : ಓಂ ವಿಜಯಾ ದಿವ್ಯೈ ವಿದ್ಮಹೀ ಮಹಾ ನಿತ್ಯಾಯೈ ಧೀಮಹಿ ತನ್ನೋ ದೇವಿ ಪ್ರಚೋದಯಾತ್ ಎಲ್ಲರಿಗೂ ನವರಾತ್ರಿ ಹಾಗೂ ವಿಜಯದಶಮಿಯ ಶುಭಾಶಯಗಳು.

ಆ ಮಹಾ ಮಹಿಮಳು ತಮ್ಮ ಸಂಸಾರಕ್ಕೆ ಸುಖ ಸೌಭಾಗ್ಯ, ಆಯುರ್ ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೊಟ್ಟಿಗೆ ಹಂಚಿಕೊಳ್ಳಿ. ಒಳ್ಳೆಯ ವಿಚಾರವನ್ನು ತಿಳಿಯುವುದು ಹಾಗೂ ಹಂಚಿಕೊಳ್ಳುವುದು ಒಳ್ಳೆಯ ಕೆಲಸ. ಇಂತಹ ಉಪಯುಕ್ತ ಮಾಹಿತಿಗಳನ್ನು ಪ್ರತಿದಿನ ಪಡೆಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಫಾಲೋ ಮಾಡಿ.

LEAVE A REPLY

Please enter your comment!
Please enter your name here