ನಿಮ್ಮ ಮನೆಯಲ್ಲಿ ಲಕ್ಷ್ಮೀ ಸದಾ ನೆಲೆಸಬೇಕೆಂದರೆ ಈ ವಸ್ತುಗಳನ್ನು ತಪ್ಪದೇ ತನ್ನಿ.

0
3666

ಲಕ್ಷ್ಮಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಕರೆಯುತ್ತಾರೆ. ಅವಳನ್ನು ಪೂಜಿಸಿದರೆ ಸಂಪತ್ತು ನಿಮ್ಮ ಮನೆ ತುಂಬುತ್ತದೆ ಎನ್ನುವ ನಂಬಿಕೆ ಇದೆ. ನವರಾತ್ರಿಯ ದಿನಗಳಲ್ಲೂ ಕೂಡ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ನವರಾತ್ರಿಯಂದು ಲಕ್ಷ್ಮಿ ಪೂಜೆ ಮಾಡುವಾಗ ಯಾವೆಲ್ಲಾ ವಸ್ತುಗಳನ್ನು ಬಳಸಬೇಕು ತಿಳಿದುಕೊಳ್ಳಿ. ನವರಾತ್ರಿಯಲ್ಲಿ ಆರಾಧಿಸುವ ಶಕ್ತಿ ದೇವತೆಗಳಲ್ಲಿ ಲಕ್ಷ್ಮಿ ಸಹ ಒಬ್ಬಳು. ಒಂಭತ್ತು ದಿನಗಳ ಹಬ್ಬದಲ್ಲಿ ನಾಲ್ಕು, ಐದು ಹಾಗೂ ಆರನೇ ದಿನದಂದು ದೇವಿಯನ್ನು ಆರಾಧಿಸುವುದರಿಂದ ಸಂಪತ್ತು ಹೆಚ್ಚುತ್ತದೆ. ಶ್ರೀಮಂತರಾಗುತ್ತಿರ ಎನ್ನುವ ನಂಬಿಕೆ ಭಕ್ತರಲ್ಲಿದೆ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮನೆಯಲ್ಲಿ ಇಟ್ಟುಕೊಳ್ಳಬೇಕಾದ ವಸ್ತುಗಳು ಯಾವುವು ಎನ್ನುವುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

​ಕುಬೇರನ ಮೂರ್ತಿ : ಕುಬೇರನ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ಲಕ್ಷ್ಮಿ ಸಂತಸಗೊಳ್ಳುತ್ತಾಳೆ ಎಂದು ನಂಬಲಾಗಿದೆ. ಪ್ರಪಂಚದ ಸಂಪತ್ತನ್ನು ಕುಬೇರ ರಕ್ಷಿಸುತ್ತಾನೆ ಎಂದು ಹೇಳಲಾಗುತ್ತದೆ. ಕುಬೇರನ ಮೂರ್ತಿಯನ್ನು ಮನೆಯ ಯಾವುದೇ ಸ್ಥಳದಲ್ಲಾದರೂ ಇಡಬಹುದು. ಆದರೆ ಆ ಜಾಗ ಸ್ವಚ್ಛವಾಗಿರಲಿ. ಪಾದರಸದ ಲಕ್ಷ್ಮೀ ಮೂರ್ತಿ : ಪಾದರಸದಿಂದ ಮಾಡಿರುವ ವಿಗ್ರಹಕ್ಕೆ ವಿಶೇಷ ಸ್ಥಾನಮಾನವಿದೆ. ಪಾದರಸದಿಂದ ಮಾಡಿದ ಲಕ್ಷ್ಮಿಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ದೇವಿಯ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ.

​ಕವಡೆ : ಹುಡುಗರು ಕವಡೆ ಬಳಸಿ ಆಟವಾಡುವುದನ್ನು ನೋಡಿದ್ದೀರಿ. ಹಳ್ಳಿಯಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕವಡೆಗಳಿಂದ ಲಕ್ಷ್ಮೀ ದೇವಿಯನ್ನು ಬೇಗ ಒಲಿಸಿಕೊಳ್ಳಬಹುದು. ಕವಡೆಯು ಸಮುದ್ರದಲ್ಲಿ ಸಿಗುತ್ತದೆ. ಲಕ್ಷ್ಮಿ ಜನನ ಕೂಡ ಸಮುದ್ರದಲ್ಲೇ ಆಗುವುದರಿಂದ ಕವಡೆಗಳು ಲಕ್ಷ್ಮಿ ದೇವಿಗೆ ಇಷ್ಟವಾದವು ಎಂದು ಪಂಡಿತರು ಹೇಳುತ್ತಾರೆ. ​ಶಂಖ : ತಂತ್ರ ಮಂತ್ರಗಳಲ್ಲಿ ಶಂಖವನ್ನು ಬಳಸಲಾಗುತ್ತದೆ. ಹಿಂದೆ ಯುದ್ಧಕ್ಕೂ ಮುನ್ನ ಶಂಖ ಊದುತ್ತಿದ್ದರು. ಈಗಲೂ ಸಹ ಶುಭ ಕಾರ್ಯಗಳ ಸಮಯದಲ್ಲಿ ಶಂಖ ಊದುವ ಪದ್ಧತಿ ಇದೆ. ಶಂಖ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ಇರುವ ಪರಿಣಾಮಕಾರಿ ಮಾರ್ಗ ಎಂದು ನಂಬಲಾಗಿದೆ.

​ಬೆಳ್ಳಿಯ ಮೂರ್ತಿಗಳು : ಮನೆಯಲ್ಲಿ ಬೆಳ್ಳಿಯ ಲಕ್ಷ್ಮಿ ಹಾಗೂ ಗಣೇಶನ ಮೂರ್ತಿಗಳನ್ನು ಇಟ್ಟು ಪೂಜಿಸುವುದು ಶ್ರೇಷ್ಠ ಎಂದು ಪಂಡಿತ ಪಾರಮರು ಹೇಳುತ್ತಾರೆ. ಲಕ್ಷ್ಮಿಯನ್ನು ಬೇಗನೆ ಒಲಿಸಿಕೊಳ್ಳಲು ಇದೂ ಸಹ ಒಂದು ಮಾರ್ಗವಾಗಿದೆ. ಶ್ರೀ ಯಂತ್ರ : ತಂ’ತ್ರ ವಿಜ್ಞಾನದಲ್ಲಿ ಶ್ರೀಯಂತ್ರಕ್ಕೆ ವಿಶೇಷ ಸ್ಥಾನಮಾನವಿದೆ. ಇದನ್ನು ಮನೆಯಲ್ಲಿಟ್ಟರೆ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಯಂತ್ರಗಳ ಅಧಿಪತಿ ಎನ್ನಲಾಗುವ ಶ್ರೀ ಯಂತ್ರವನ್ನು ಪೂಜೆಯ ಮನೆಯಲ್ಲಿ ಇಟ್ಟರೆ ಒಳ್ಳೆಯದಾಗುತ್ತದೆ.

​ಬೆಳ್ಳಿಯ ಪಾದುಕೆಗಳು : ಲಕ್ಷ್ಮಿಯ ಬೆಳ್ಳಿಯ ಪಾದುಕೆಗಳು ಭಕ್ತರ ಮನೆಗೆ ಸುಖ ಸಂಪತ್ತು ತರುತ್ತದೆ ಎಂದು ಪಂಡಿತರು ಹೇಳುತ್ತಾರೆ. ನೀವು ಹಣವನ್ನು ಎಲ್ಲಿ ಇಟ್ಟಿರುತ್ತೀರೋ ಆ ದಿಕ್ಕಿಗೆ ಪಾದುಕೆಯನ್ನು ತಿರುಗಿಸಿ ಇಡಿ. ಲಕ್ಷ್ಮಿ ಕಟಾಕ್ಷದಿಂದ ನಿಮ್ಮ ಸಂಪತ್ತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಮಲ ಬೀಜದ ಮಣಿ ಹಾರ : ಕಮಲದ ಹೂವಿನ ಬೀಜಗಳಿಂದ ಮಾಡಿರುವ ಮಣಿ ಹಾರವನ್ನು ಲಕ್ಷ್ಮಿ ದೇವಿಗೆ ಹಾಕುವುದರಿಂದ ಮನೆಯಲ್ಲಿ ಸಿರಿ ಸಂಪತ್ತು ನೆಲೆಸುತ್ತದೆ ಎನ್ನುವ ನಂಬಿಕೆ ಮೊದಲಿನಿಂದಲೂ ಇದೆ. ಲಕ್ಷ್ಮಿ ಕಮಲದ ಮೇಲೆ ನೆಲೆಸಿರುವುದರಿಂದ ಕಮಲದ ಹೂವು ಹಾಗೂ ಗಿಡಗಳು ಆಕೆಗೆ ಪ್ರಿಯವಾದದ್ದು. ಹಾಗಾಗಿ ಕಮಲ ಬೀಜದ ಮಣಿಹಾರವು ನಿಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತಂದು ಧನ ಪ್ರಾಪ್ತಿಯಾಗುವಂತೆ ಮಾಡುತ್ತದೆ.

​ದಕ್ಷಿಣಾಭಿಮುಖ ಶಂಖ ದಕ್ಷಿಣಾಭಿಮುಖವಾಗಿರುವ ಶಂಖಕ್ಕೆ ತಂತ್ರ ವಿಜ್ಞಾನದಲ್ಲಿ ವಿಶೇಷ ಸ್ಥಾನಮಾನವಿದೆ. ಪೂಜೆ ಕೋಣೆಯಲ್ಲಿ ಇದನ್ನು ಇಡುವುದರಿಂದ ನಿಮ್ಮ ಮನೆಯಲ್ಲಿ ಸಂಪತ್ತು ಯಾವಾಗಲೂ ಇರುತ್ತದೆ. ತಿಜೋರಿಯಲ್ಲಿ ಇಡುವುದರಿಂದಲೂ ನಿಮಗೆ ಧನ ಪ್ರಾಪ್ತಿಯಾಗುತ್ತದೆ. ​ಒಂಟಿ ಕಣ್ಣಿನ ತೆಂಗಿನಕಾಯಿ ತಂತ್ರ ವಿದ್ಯೆಯಲ್ಲಿ ಒಂಟಿ ಕಣ್ಣಿನ ತೆಂಗಿನ ಕಾಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಈ ಕಾಯಿ ಒಂದೇ ಕಣ್ಣನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ನಾವು ಬಳಸುವ ತೆಂಗಿನ ಕಾಯಿಗೆ ಮೂರು ಕಣ್ಣಿರುತ್ತದೆ. ಈ ಕಾಯಿಯಿಂದ ಪೂಜೆ ಮಾಡಿದರೆ ಲಕ್ಷ್ಮಿ ದೇವಿ ಒಲಿಯುತ್ತಾಳೆ ಎನ್ನುವ ನಂಬಿಕೆ ಇದೆ.

ಫೋನ್ ಮುಕಾಂತರ ನಿಮ್ಮ ಜಾತಕ ವಿಮರ್ಶೆ ಮಾಡಲಾಗುವು. ಪೋಸ್ಟ್ನ ಮೂಲಕ ನಿಮ್ಮ ಹಾಗೂ ನಿಮ್ಮ ಮಕ್ಕಳ ಜಾತಕ (ಜನ್ಮ ಕುಂಡಲಿ) ಯನ್ನು ಪಡೆಯಲು ಸಂಪರ್ಕಿಸಿ. 95350 04448 ಜೋತಿಷ್ಯ ಸಲಹೆ ಹಾಗು ಪರಿಹಾರ ವಾಟ್ಸಪ್ ಕೂಡ ಮಾಡಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here