ದೀಪಾವಳಿ ಧನಲಕ್ಷ್ಮಿ ಪೂಜೆಯನ್ನು ಹೀಗೆಯೇ ಮಾಡಿ. ಈ ಒಂದು ತಪ್ಪನ್ನು ಮಾಡಿದರೆ ನಿಮಗೆ ದಾರಿದ್ರ ಖಚಿತ.

0
2242

ಶ್ರೀ ಕ್ಷಿಪ್ರ ಗಣಪತಿ ಪ್ರಸನ್ನ. ನಮಸ್ಕಾರ ಸ್ನೇಹಿತರೆ. ದೀಪಾವಳಿ ಧನಲಕ್ಷ್ಮೀ ಪೂಜೆಯ ಕೆಲವು ವಿಚಾರಗಳನ್ನ ಇಂದು ನಾವು ನಿಮಗೆ ತಿಳಿಸಲು ಪ್ರಯತ್ನಿಸಿದ್ದೇವೆ. ಈ ವಿಚಾರವನ್ನು ತಪ್ಪದೇ ಶಿಸ್ತಿನಿಂದ ಪಾಲಿಸಿ. ಹೀಗೆ ಪಾಲಿಸಿದರೆ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಸನ್ಮಂಗಳವಾಗುತ್ತದೆ. ನಿಮಗೆ ಹಣಕಾಸಿನ ಯಾವುದೇ ತಾಪತ್ರಯಗಳು ಬರುವುದಿಲ್ಲ. ತೃಪ್ತಿಯಿಂದ, ಸಂತೋಷದಿಂದ ಜೀವನವನ್ನು ಸಾಗಿಸಬಹುದು. ಆದರೆ ಯಾವುದೇ ಪೂಜೆ-ಪುನಸ್ಕಾರಗಳನ್ನು ಮಾಡುವ ಮೊದಲು ನಾವು ನಮ್ಮ ಮನಸ್ಸನ್ನು ತಿಳಿಯಾಗಿಟ್ಟುಕೊಳ್ಳಬೇಕು.

ಯಾವುದೇ ರೀತಿಯ ಕಲ್ಮಶ ಭಾವನೆಗಳು ನಮ್ಮ ಮನಸ್ಸಿನಲ್ಲಿ ಇರಲೇಬಾರದು. ದೇಹ ಮತ್ತು ಮನಸ್ಸು ಶುದ್ಧವಾಗಿರಬೇಕು. ಪ್ರತಿನಿತ್ಯ ನಮ್ಮ ದಿನಚರಿಯಲ್ಲಿ ಒಂದು ರೀತಿಯ ಶಿಸ್ತನ್ನು ನಾವು ಅಳವಡಿಸಿಕೊಳ್ಳಬೇಕು. ಇವೆಲ್ಲವನ್ನು ಮಾಡುವುದರಿಂದ ಶೀಘ್ರ ಪಲ ನಿಮ್ಮ ಕಣ್ಣುಮುಂದೆಯೇ ನೋಡಲು ಸಿಗುತ್ತದೆ. ನೀವು ತೃಪ್ತಿದಾಯಕ ಜೀವನವನ್ನು ಹೊಂದುವಿರಿ. ಹಾಗೂ ಈ ಒಂದು ತಪ್ಪನ್ನು ಎಂದಿಗೂ ಮಾಡಲೇಬೇಡಿ. ಹಾಗೆ ಮಾಡಿದರೆ ನಿಮಗೆ ಜೀವನ ಪರ್ಯಂತ ನಷ್ಟ ಕಟ್ಟಿಟ್ಟ ಬುತ್ತಿ. ಈ ಪೂಜೆ ಮಾಡಲು ಯಾವ ಯಾವ ವಸ್ತುಗಳು ಬೇಕು ಹಾಗೂ ಈ ಪೂಜೆ ವಿಧಿವತ್ತಾಗಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ. ಅಂತೆಯೇ ತಪ್ಪದೇ ಇದನ್ನು ಪಾಲಿಸಬೇಕು.

ಪ್ರತಿ ಚತುರ್ದಶಿ ಕೂಡಿದ ಅಮಾವಾಸ್ಯೆಯಲ್ಲಿ ಹಣದ ತೊಂದರೆ ಇರುವವರು ಈ ಧನಲಕ್ಷ್ಮೀ ಪೂಜೆಯನ್ನು ಮಾಡಿ ಒಂದು ಪುಸ್ತಕ. ತುಳಸಿ ಮಾಲೆಯನ್ನು 12 ಅಮಾವಾಸ್ಯೆಗಳಂದು ದಾನ ಮಾಡಿದರೆ ದಾರಿದ್ರ್ಯತೆಯು ಹೋಗಿ ಧನವನ್ನು ಚೆನ್ನಾಗಿ ಸಂಪಾದಿಸುವರು. ಯಾರಿಗೆ ಚಂದ್ರದಶೆˌ ಶುಕ್ರದಶೆˌ ರಾಹುದಶೆˌ ಕೇತುದಶೆಯು ನಡೆಯುತ್ತಿದೆಯೋ ಅವರು ಈ ಪೂಜೆಯನ್ನು ಅಮಾವಾಸ್ಯೆಯ ದಿನ ಮಾಡಿ ಗೋದಾನವನ್ನು ಮಾಡಬೇಕು. ಈ ಪೂಜೆಗೆ ಮುಖ್ಯವಾಗಿ ಹೆಸರುಬೇಳೆ ಕೋಸಂಬರಿ ಮತ್ತು ಪಾನಕವನ್ನು ನೈವೇದ್ಯವಾಗಿ ಇಡಬೇಕು.

ಈ ಪೂಜೆಗೆ ಕೆಂಪು ಹೂವುಗಳನ್ನು ಉಪಯೋಗಿಸುವುದು ಒಳ್ಳೆಯದು. ಪ್ರತಿ ಪೂಜೆಗೂ ಮುನ್ನ ದಿನ ಪ್ರಾಯಶ್ಚಿತ್ತ ಸಂಕಲ್ಪ ಹೇಳಿ ಸದ್ಗೃಹಸ್ಥರಿಗೆ ದಾನ ಮಾಡಿ ಆಮೇಲೆ ಈ ಪೂಜೆ ಮಾಡಬೇಕು. ಹಣಕಾಸಿನ ತೊಂದರೆ ಇರುವವರು. ವ್ಯವಹಾರಗಳಲ್ಲಿ ತಕರಾರು ಇದ್ದವರುˌ ವಾಸ ಮಾಡಲು ಕೂಡ ಸ್ಥಳ ಇಲ್ಲದವರು. ಯಾವಾಗಲೂ ನೋವು ಕಷ್ಟ ದುಃಖ ಜೀವನ ನಡೆಸುತ್ತಿರುವವರು ಈ ಪೂಜೆ ಮಾಡಿದರೆ ಶುಭಫಲ ಕಾಣುವರು. ಯಾವುದೇ ಪೂಜೆ ವ್ರತಗಳ ಮುಕ್ತಾಯದ ನಂತರ ದಾನಗಳನ್ನು ಮಾಡಬೇಕು. ದಾನ ಮಾಡದಿದ್ದರೆ ಪೂಜಾ ಫಲ ನಿಮಗೆ ಸಿಗದೇ ಮಾನಸಿಕವಾಗಿಯೂ ಆರ್ಥಿಕವಾಗಿಯೂ ತೊಂದರೆ ಪಡುವಿರಿ.

ನಮ್ಮ ಹಿರಿಯರು ಹೇಳಿರುವಂತೆ ದೇವರು ನಮ್ಮನ್ನು ಪರೀಕ್ಷಿಸಲು ಯಾವ ರೂಪದಲ್ಲಿ ಬರುತ್ತಾನೆ ಎಂಬುದು ಯಾರಿಗೂ ತಿಳಿದಿಲ್ಲ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದರೆ ಅವರ ಮನಸ್ಸಿನಲ್ಲಿ ಉಂಟಾಗುವ ತೃಪ್ತಿಯಲ್ಲಿ ದೇವರು ಇರುತ್ತಾನೆ. ಅಗತ್ಯವಿರುವವರಿಗೆ ದಾನ ಧರ್ಮವನ್ನು ಮಾಡಿದರೆ ದೇವರು ತೃಪ್ತಿಗೊಳ್ಳುತ್ತಾನೆ. ಆದ್ದರಿಂದ ಯೋಗ್ಯರಿಗೆ ದಾನವನ್ನು ಮಾಡಬೇಕು. ಎಲ್ಲವನ್ನು ಅಚ್ಚುಕಟ್ಟಾಗಿ ಬಿಡದೆ ಪಾಲಿಸಿದಲ್ಲಿ ನಿಮ್ಮ ಜೀವನ ಹಸಿರಾಗುತ್ತದೆ.

ಈ ಎಲ್ಲವನ್ನು ನೀವು ಪಾಲಿಸಿ ಹಾಗೂ ನಿಮ್ಮ ಎಲ್ಲಾ ಸ್ನೇಹಿತರಿಗೂ ಸಹ ಇದನ್ನು ಪಾಲಿಸಲು ಸೂಚಿಸಿ. ಎಲ್ಲರಿಗೂ ಒಳಿತಾಗಲಿ ಎಂಬ ಭಾವನೆ ಮನದಲ್ಲಿ ಇರಲಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here