ಓ ಪರಮ ಪಾವನ ಪುಣ್ಯ ಜನರೇ. ತಪ್ಪು ತಿಳಿಯ ಬೇಡಿ. ನಿಮ್ಮಲ್ಲಿ ನನ್ನದೊಂದಿಷ್ಟು ಪ್ರಶ್ನೆ. ನೀವು ಜ್ಯೋತಿಷ ಕೇಳುವಾಗ ಹಣ ಕೇಳುತ್ತೀರಾ ಎನ್ನುತ್ತೀರಾ. ಆದರೆ ನಿಮಗೆ ಕೇಳಿದ್ದಕ್ಕೆ ಯತ್ ಕಿಂಚಿತ್ ದಕ್ಷಿಣೆ ಇಡುವ ಮನಸ್ಸೇಕೆ ಬರುವುದಿಲ್ಲ. ಜ್ಯೋತಿಷ ಹಣ ಮಾಡುವ ಬಿಸಿನೆಸ್ ಎನ್ನುತ್ತೀರಾ. ನೀವು ಕೇಳುವ ಪ್ರಶ್ನೆ ಮಾತ್ರ ನಮಗೆ ಉದ್ಯೋಗ ಯಾವಾಗ ಆಗುತ್ತೆ. ನಮಗೆ ಹಣ ಯಾವಾಗ ಸಿಗುತ್ತೇ. ಹಾಗಾದರೆ ನೀವು ಒಂದಿಷ್ಟು ಸಮಾಜ ಸೇವೆ ಏಕೆ ಮಾಡುತ್ತಿಲ್ಲ.
ನೆನಪಿಡಿ ಯಾವ ಜ್ಯೋತಿಷಿಯು ಸುಮ್ಮನೆ ಬಂದು ಜ್ಯೋತಿಷ ಹೇಳುತ್ತಿಲ್ಲ. ಸುಮಾರು 10 ವರ್ಷಗಳ ದೀರ್ಘ ಅಧ್ಯಯನದ ನಂತರ ಜ್ಯೋತಿಷ ಹೇಳುತ್ತಾರೆ. ಜ್ಯೋತಿಷಿ ನಿಮ್ಮ ಹಾಗೆ ಬೇರೆ ವೃತ್ತಿ ಮಾಡುವುದಿಲ್ಲ. ಅವನಿಗೂ ನಿಮ್ಮ ಹಾಗೇ ಹೆಂಡತಿ ಮಕ್ಕಳಿರುತ್ತಾರೆ. ಇಷ್ಟೆ ಕೊಡಿ ಎನ್ನುವ ಜ್ಯೋತಿಷಿ ತಪ್ಪಿರಬಹುದು. ಆದರೆ ಯತ್ ಕಿಂಚಿತ್ ದಕ್ಷಿಣೆ ಕೊಡಬಹುದಲ್ಲವೇ. ತಿಂಗಳಿಗೆ ಇಂಟರ್ ನೆಟ್ ಗಾಗಿ ವೇಚ್ಛ ಮಾಡುತ್ತೀರಾ. ಹೊರಗಡೆ ಹೋದಾಗ ತಿನ್ನಲು ಖರ್ಚು ಮಾಡುತ್ತೀರಾ.
ಯಾವೂದಾದರು ಕೇಸ್ ಇದ್ದರೆ ಲಾಯರ್ ಬಳಿ ಎಷ್ಟಾದರು ಕೊಡುತ್ತೀರಾ. ಡಾಕ್ಟರ್ಗೆ ಲಕ್ಷ ಲಕ್ಷ ಸುರಿಯುತ್ತೀರಾ. ನಿಮ್ಮ ಜೀವನದ ಡಾಕ್ಟರ್ ಗೆ ಏನಾದರು ಯತ್ ಕಿಂಚಿತ್ ದಕ್ಷಿಣೆ ಇಟ್ಟು ಜ್ಯೋತಿಷ ಕೇಳಿ. ನಿಮಗೂ ಒಳ್ಳೆಯದು. ಹೇಳಿದ ಫಲವೂ ಸಿದ್ಧಿಸುವುದು. ಹೀಗೆ ಮಾಡಿದರೆ ನೀವು ಅವರಿಗೆ ಒಂದು ರೀತಿಯ ಗೌರವ ತೋರಿದಹಾಗೆ. ಅಷ್ಟೇ ಅಲ್ಲದೆ ಅವರ ದೀರ್ಘ ಕಾಲದ ಅಧ್ಯಯನಕ್ಕೆ ನೀವು ಒಂದು ರೀತಿಯ ಗೌರವವನ್ನು ಸಲ್ಲಿಸಿದ ಹಾಗೆ ಕೂಡ ಆಗುತ್ತದೆ.
ದೇವರ ಕೃಪೆಗೆ ಪಾತ್ರರಾಗಲು ಮೊದಲ ಮೆಟ್ಟಿಲು ಎಂದರೆ ಅದು ಈ ಸಾಧಕರು. ಅವರು ನಮ್ಮನ್ನು ದೇವರ ಪ್ರೀತಿ ಹಾಗು ಆಶೀರ್ವಾದಗಳನ್ನು ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು ನೀಡುತ್ತಾರೆ. ನಮ್ಮನ್ನು ಭಕ್ತಿಯೆಡೆಗೆ ಕರೆದೊಯ್ಯುತ್ತಾರೆ. ಇಂತಹವರಿಗೆ ನಾವು ಒಂದಿಷ್ಟು ದಕ್ಷಿಣೆ ಕೊಡುವುದರಿಂದ ನಮಗೆ ನಷ್ಟವೇನೂ ಆಗುವುದಿಲ್ಲ. ಆದರೆ ಯಾರು ಸತ್ಯವಾಗಿಯೂ ಸಾಧಕರು ಹಾಗೂ ಯಾರು ಅಲ್ಲ ಎಂಬುವುದು ನಿರ್ಧಾರ ಮಾಡುವುದು ನಿಮ್ಮ ಕರ್ತವ್ಯ.
ಸಾಧಕರು ಎಂದಿಗೂ ನಿಮ್ಮಲ್ಲಿ ಇಷ್ಟೇ ಬೇಕು ಅಷ್ಟೇ ಬೇಕು ಎಂಬ ಬೇಡಿಕೆ ಇಡುವುದಿಲ್ಲ. ಯಾರೋ ಹತ್ತು ಜನದಲ್ಲಿ ಇಬ್ಬರು ಮೋಸಗಾರರು ನುಸುಳಿರಬಹುದು. ಅದನ್ನು ನೋಡಿ ಇರುವವರೆಲ್ಲಾ ಮೋಸಗಾರರು ಎಂಬ ತಪ್ಪು ಕಲ್ಪನೆಗೆ ನಾವು ಎಂದಿಗೂ ಬರಬಾರದು. ನಿಮ್ಮ ಜೀವನದ ವೈದ್ಯರನ್ನು ಗೌರವದಿಂದ ಕಾಣಿರಿ. ಎಲ್ಲರಿಗೂ ಒಳಿತಾಗಲಿ. ಶ್ರೀ ಕೃಷ್ಣಾರ್ಪಣ ಮಸ್ತು. ಸರ್ವೇಜನಃ ಸುಖಿನೋಭವಂತು. ಸನ್ಮಂಗಳಾನಿಭವಂತು.
ಈ ಮಾಹಿತಿಯು ನಿಮಗೆ ಸರಿ ಎನಿಸಿದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.