ಅಮಾವಾಸ್ಯೆ ದಿನ ಮಗು ಜನಿಸಿದರೆ ಈ ರೀತಿ ಆಗಲಿದೆ.

0
3725

ಅಮಾವಾಸ್ಯೆ ದಿನ ಮಗು ಜನಿಸಿದರೆ ಅದರಿಂದ ಆಗುವ ಶುಭ ಅಶುಭ ಫಲಗಳು. ಅಮಾವಾಸ್ಯೆ ಹುಣ್ಣಿಮೆ ಬಂತು ಎಂದರೆ ಸಾಕು ಏನೋ ಒಂದು ರೀತಿಯಲ್ಲಿ ಜನರು ಯಾವುದೇ ಕೆಲಸವನ್ನು ಮಾಡಲು ಕೂಡ ಹಿಂಜರಿಯುತ್ತಾರೆ. ಕೆಲವು ಜನರು ಈ ಅಮಾವಾಸ್ಯೆ ದಿನ ಅಂತೂ ಹೊರಗಡೆ ಬರಲು ಕೂಡ ಹಿಂಜರಿಯುತ್ತಾರೆ. ಏನೋ ಅನಾಹುತ ಆಗಿ ಬಿಡುತ್ತದೆ ಎಂಬ ಭಯದಲ್ಲೇ ಇರುತ್ತಾರೆ. ಜೊತೆಗೆ ಅಮಾವಾಸ್ಯೆಯ ದಿನ ಯಾವುದೇ ರೀತಿಯ ತೊಂದರೆ ಆಗದೆ ಇರಲಿ ಎಂದು ಹಲವರು ಪೂಜೆ ಹೋಮ ಹವನವನ್ನು ಮಾಡಿಸುತ್ತಾರೆ ಅಲ್ಲವೇ.

ಅಷ್ಟೆಲ್ಲ ನಂಬಿಕೆ ಇಂದ ಇರುವ ಇನ್ನೂ ಈ ಅಮಾವಾಸ್ಯೆಯ ದಿನ ಮಕ್ಕಳು ಜನಿಸಿದರೆ ಸಾಕು ಅದು ಏನೋ ಅಪಶಕುನ ತೊಂದರೆ ಎಂದು ಭಾವಿಸಿ ಬಿಡುತ್ತಾರೆ. ಆದರೆ ಅಮಾವಾಸ್ಯೆ ದಿನ ಮಕ್ಕಳು ಹುಟ್ಟುವುದರಿಂದ ಏನೆಲ್ಲಾ ಆಗುತ್ತದೆ ಬನ್ನಿ ತಿಳಿಯೋಣ. ಅಮಾವಾಸ್ಯೆಯ ದಿನ ಹೆಣ್ಣು ಮಕ್ಕಳ ಜನನ ಆದರೆ ಅದರಲ್ಲೂ ಅಮಾವಾಸ್ಯೆ ಶುಕ್ರವಾರ ಅಥವಾ ಮಂಗಳವಾರ ಅವರು ಜನಿಸಿದರೆ ಅವರ ಸ್ಥಾನ ಯಾವಾಗಲೂ ಕೂಡ ಉನ್ನತವಾಗಿ ಇರುತ್ತದೆ. ಅವರು ಎಲ್ಲದರಲ್ಲೂ ಕೂಡ ಮುನ್ನಡೆಯನ್ನು ಸಾಧಿಸುತ್ತಾರೆ. ಅವರು ಕೈ ಹಾಕಿದ ಕೆಲಸಗಳು ಎಲ್ಲವೂ ಕೂಡ ಸುಗಮವಾಗಿ ಸಾಗುತ್ತದೆ.

ಹಾಗೆಯೇ ಅ ದಿನದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಮದುವೆ ಆಗಿ ಗಂಡನ ಮನೆಗೆ ಹೋದ ಮೇಲೂ ಕೂಡ ಗಂಡನ ಮನೆಗೆ ಶ್ರೇಯಸ್ಸು, ಆರೋಗ್ಯ, ಐಶ್ವರ್ಯ ಎಲ್ಲವೂ ಕೂಡ ಬರುತ್ತದೆ. ಜೊತೆಗೆ ಆ ಮನೆಯಲ್ಲಿ ಅವರು ಯಾವುದಾದರೂ ಕಷ್ಟದಲ್ಲಿ ಇದ್ದರೆ ಆ ಕಷ್ಟ ಎಲ್ಲವೂ ಕೂಡ ಮಂಜಿನಂತೆ ಕರಗಿ ಹೋಗುತ್ತವೆ. ಆದರೆ ಗಂಡನ ಮನೆಗೆ ಆ ಹೆಣ್ಣು ಹೋದಾಗ ಆ ಹೆಣ್ಣಿನ ತವರು ಮನೆಯಲ್ಲಿ ಕಷ್ಟಗಳು ಎದುರಾಗುತ್ತವೆ. ಹಾಗೆಯೇ ಅಮವಾಸ್ಯೆ ದಿನ ಗಂಡು ಮಕ್ಕಳು ಜನಿಸಿದರೆ ಸ್ವಲ್ಪ ಕಷ್ಟವನ್ನ ಎದುರಿಸಬೇಕು.

ಇವರ ಜೀವನದಲ್ಲಿ ಅಭಿವೃದ್ದಿ ಎಂಬುದು ಇರುವುದಿಲ್ಲ. ಇವರು ಮಾಡುವ ಕೆಲಸಗಳಿಂದ ಬೇರೆಯವರಿಗೆ ಸಹಾಯ ಆಗುತ್ತದೆ ವಿನಃ ಇವರಿಗೆ ಬರಿ ಕಷ್ಟಗಳೇ ಇರುತ್ತವೆ. ಆದರೆ ಕೆಲವೊಂದು ಅಮಾವಾಸ್ಯೆಯ ತಿಥಿಗಳಲ್ಲಿ ಜನಿಸಿದರೆ ಅವರಿಗೆ ಒಂದು ವಿಶಿಷ್ಟವಾದ ಶಕ್ತಿಯೇ ಇರುತ್ತದೆ. ಅಂದರೆ ಇವರು ಕಷ್ಟ ಸುಖ ಎಲ್ಲವನ್ನೂ ಕೂಡ ಸಮಾನವಾಗಿ ತೆಗೆದುಕೊಳ್ಳುತ್ತಾರೆ. ಹೇಗೆಂದರೆ ಅಮಾವಾಸ್ಯೆಯ ತಿಥಿಯಲ್ಲಿ ಹುಟ್ಟಿದವರಿಗೆ ಗೋಚಾರ ಫಲ ಮತ್ತು ಜಾತಕ ಎರಡೂ ಕೂಡ ಇವರಿಗೆ ಕೆಲಸ ಮಾಡುತ್ತದೆ.

ಈ ಗೋಚಾರ ಫಲದಲ್ಲಿ ಗುರು ಮತ್ತು ಶನಿ ಇದ್ದರೆ ಅವರು ಉತ್ತಮ ಸ್ಥಾನದಲ್ಲಿ ಇರುತ್ತಾರೆ. ಹಾಗೂ ಜನ್ಮ ಕುಂಡಲಿಯಲ್ಲಿ ಶನಿ ಮತ್ತು ಗುರು ನೀಚ ಸ್ಥಾನದಲ್ಲಿದ್ದರೆ ಅಂದರೆ ಗುರು ಮಕರ ರಾಶಿಯಲ್ಲಿ ಶನಿ ಮೇಷ ರಾಶಿಯಲ್ಲಿ ಸ್ಥಿತನಾಗಿದ್ದರೆ ಅವರ ಜೀವನ ಪೂರ್ತಿ ಸಮಸ್ಯೆಗಳೇ ಇರುತ್ತವೆ. ಇದರ ಜೊತೆಗೆ ಡಿಸೆಂಬರ್, ನವಂಬರ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯ ದಿನ ಹುಟ್ಟಿದವರಿಗೆ ಯೋಗ ತುಂಬಾ ಚೆನ್ನಾಗಿರುತ್ತದೆ.

ಅಮಾವಾಸ್ಯೆಯಲ್ಲಿ ಹುಟ್ಟಿ ಲಗ್ನ ಕುಂಡಲಿಯಲ್ಲಿ, ಸ್ವಕ್ಷೇತ್ರದಲ್ಲಿ ಶನಿ ಇದ್ದರೆ ಮಕರ, ಕುಂಭ ರಾಶಿಯಲ್ಲಿ ಶನಿ ಇದ್ದು, ಅಲ್ಲೇ ಲಗ್ನವು ಇದ್ದರೆ ಅವರಿಗೆ ಪ್ರತಿಯೊಂದು ರಂಗದಲ್ಲೂ ಕೂಡ ಉನ್ನತ ಮಟ್ಟ ಏರುತ್ತಾರೆ. ಅವರಿಗೆ ಕಷ್ಟಗಳು ಎಂಬುದು ಹೇಗೆ ಬರುತ್ತದೋ ಹಾಗೆಯೇ ದೂರ ಆಗಿ ಬಿಡುತ್ತದೆ. ಅದಕ್ಕಾಗಿ ಅಮಾವಾಸ್ಯೆಯ ದಿನ ಮಕ್ಕಳು ಜನಿಸಿದರೆ ಅದಕ್ಕೆ ಹೆದರ. ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಫೋನ್ ಮುಕಾಂತರ ನಿಮ್ಮ ಜಾತಕ ವಿಮರ್ಶೆ ಮಾಡಲಾಗುವು. ಪೋಸ್ಟ್ನ ಮೂಲಕ ನಿಮ್ಮ ಹಾಗೂ ನಿಮ್ಮ ಮಕ್ಕಳ ಜಾತಕ(ಜನ್ಮ ಕುಂಡಲಿ)ವನ್ನು ಪಡೆಯಲು ಸಂಪರ್ಕಿಸಿ.

LEAVE A REPLY

Please enter your comment!
Please enter your name here