ಯಮದೀಪಾರಾಧನೆ ಹಾಗೂ ಅದರಿಂದ ಸಿಗುವ ಫಲಗಳೇನು ಎಂದು ನಾವು ತಿಳಿದುಕೊಳ್ಳೋಣ.

0
2152

ನಮಸ್ಕಾರ ಪ್ರಿಯ ಓದುಗರೆ. ಯಮದೀಪಾರಾಧನೆ ಎಂದರೇನು. ಇದರ ಮಹತ್ವ ಏನು. ಇದಕ್ಕೆ ಹೀಗೆ ಹೆಸರು ಬರಲು ಕಾರಣವೇನು. ಇಂದು ಈ ದೀಪವನ್ನು ಹೇಗೆ ಹಚ್ಚಬೇಕು. ಹಾಗೂ ಅದರಿಂದ ಸಿಗುವ ಫಲಗಳೇನು ಎಂದು ನಾವು ಇಂದು ತಿಳಿದುಕೊಳ್ಳೋಣ. ಈ ಮಾಹಿತಿಯನ್ನು ತಪ್ಪದೆ ಹೋದಿರಿ ಹಾಗೂ ನಿಮ್ಮ ಸ್ನೇಹಿತರಿಗೂ ಓದಲು ತಿಳಿಸಿ.

ಯಮದೀಪಾರಾಧನೆ : ಇಂದು ಸಂಜೆ ದಕ್ಷಿಣ ದಿಕ್ಕಿನಲ್ಲಿ ದಕ್ಷಿಣದ ಕಡೆ ಮುಖ ಮಾಡಿ ದೀಪವನ್ನು ಹಚ್ಚಿ. ಇದಕ್ಕೆ ಯಮ ದೀಪಾರಾಧನೆ ಅನ್ನುವರು ಯಾಕೆ ಹೀಗೆ ಏನಿದರ ಕಾರಣ ಇದಕ್ಕೊಂದು ಪೌರಾಣಿಕ ಹಿನ್ನಲೆ ಇದೆ.‌ ಒಂದು ದಿನ ಯಮಧರ್ಮರಾಜನು ತಂಗಿಯನ್ನು ನೋಡಲು ತಂಗಿಯ ಮನೆಗೆ ಹೋದನು ತಂಗಿ ಯಮಿ ಅಣ್ಣನನ್ನು ನೋಡಿ ಸಂತೋಷ ಕೊಂಡು ವಿವಿಧ ಭಕ್ಷ್ಯಗಳನ್ನು ಮಾಡಿ ಬಡಿಸಿ ಅಣ್ಣನ ಅರೈಕೆ ಮಾಡಿದಳು ತಂಗಿ ಇಟ್ಟಿರುವ ಅಣ್ಣನ ಮೇಲೆ ಪ್ರೀತಿಯನ್ನೂ ನೋಡಿ ಅಣ್ಣ ತುಂಬಾ ಸಂತೋಷಪಟ್ಟನು.

ಇವರಿಬ್ಬರೂ ಸೂರ್ಯ ದೇವನ ಮಕ್ಕಳು. ಯಮಧರ್ಮರಾಜನು ನ್ಯಾಯಕ್ಕೆ ಆದರೆ ತಂಗಿ ಯಮಿನಿ ಕಾಲಕ್ಕೆ ಅಧಿಪತಿಯಾದವಳು. ಈಕೆಗೆ ಮುಂದೆ ಹೋಗುವುದು ಗೊತ್ತು ಆದರೆ ಹಿಂದೆ ಬರುವುದು ಗೊತ್ತಿಲ್ಲ. ಆದೆ ಕಾಲ ಈ ಮಾಸದಲ್ಲಿ ಈ ದಿನ ಬಿಟ್ಟರೆ ಈ ಕಾರ್ತಿಕ ಮಾಸ ಮುಗಿಯುವದರೊಳಗೆ ಬೆಳಿಗ್ಗೆ ಅಥವಾ ಸಂಜೆ ಈ ದೀಪದ ಪೂಜೆ ಮಾಡಬಹುದು. ತಂಗಿಯ ಈ ಪ್ರೀತಿಯನ್ನು ಕಂಡು ಅಣ್ಣ ಹೋಗುವಾಗ, ಏನಾದರೂ ಕೇಳು ತಂಗಿ ಕೊಡುವೆ ಎಂದು ಕೇಳಿದ.

ಅದಕ್ಕೆ ಯಮಿ ಅಣ್ಣ ಯಾರು ಈ ಮಾಸದಲ್ಲಿ ಈ ತಿಥಿಯಂದು ತಂಗಿಯ ಕೈ ಊಟ ಮಾಡುವರೊ ಅವರಿಗೆ ಅಕಾಲಮೃತ್ಯು ನಿವಾರಣೆ ಮಾಡು. ಪ್ರತಿಯೊಂದು ಹೆಣ್ಣು ಮಕ್ಕಳು ಪ್ರತಿ ವರ್ಷವೂ ಅಣ್ಣ ಈ ಮಾಸದಲ್ಲಿ ಬರುವನು ಎಂದು ಎದುರು ನೋಡಲಿ ಎಂದು ವರವನ್ನು ಬೇಡಿಕೊಂಡಳು. ಆಗ ಯಮಧರ್ಮರಾಜನು ತಂಗಿಗೆ ಸುಪ್ರಸನ್ನನಾಗಿ ವರವನ್ನು ಕೊಟ್ಟನು. ಆದ್ದರಿಂದ ಈ ಮಾಸದಲ್ಲಿ ತಂಗಿ ಮನೆಗೆ ಹೋಗಿ ಊಟ ಮಾಡಿ ಬರುವುದು ಸಾಧ್ಯವಿಲ್ಲದೆ ಇರುವವರು ಪ್ರತಿಯೊಬ್ಬರು ಈ ಯಮ ದೀಪಾರಾಧನೆ ಮಾಡಿದರೆ ಅಕಾಲಮೃ’ತ್ಯು ಹಾಗೂ ದಾರಿದ್ರ್ಯ ನಿವಾರಣೆಯಾಗುತ್ತದೆ.

ಆದ್ದರಿಂದ ಇವತ್ತು ಸಂಜೆ ಮನೆಯ ದಕ್ಷಿಣ ದಿಕ್ಕು ನೋಡುವಂತೆ ದೀಪವಿಟ್ಟು ದೀಪ ಬೆಳಗಬೇಕು. ಆಗ ಈ ಕೆಳಗಿನ ಮಂತ್ರ ಹೇಳಬೇಕು ದೀಪ ಹಚ್ಚುವಾಗ.‌ ನಂತರ ಶ್ಲೋಕ ಹೇಳಬೇಕು.‌ ದೀಪವನ್ನು ಇಡುವ ಮೊದಲು ನೆಲ ಒರಸಿ ರಂಗವಲ್ಲಿ ಹಾಕಿ ದೀಪವಿಟ್ಟು ಹೂ ಇಟ್ಟು ಅರಿಶಿನ ಕುಂಕುಮವ ಹಚ್ಚಿ ಹಚ್ಚಬೇಕು. ಯಮದೀಪ ಹಚ್ಚುವಾಗ ಈ ಮಂತ್ರ ಹೇಳಿ : ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾ ಸಹ ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ ಅಂತ ಹೇಳುತ್ತಾ ದೀಪ ಹಚ್ಚಿ ನಂತರ ಈ ಸ್ತೋತ್ರ ಹೇಳಿ.

ಸ್ತೋತ್ರ : ಯಮಾಯ ಧರ್ಮರಾಜಾಯ ಮೃತ್ಯವೇ ಚಾಂತಕಾಯ ಚ ವೈವಸ್ವತಾಯ ಕಾಲಾಯ ಸರ್ವಭೂತ ಕ್ಷಯಾಯ ಚ ಔದುಂಬರಾಯ ದಧ್ಯಾಯ ನೀಲಾಯ ಪರಮೇಷ್ಟಿನೇ ವೃಕೋದರಾಯ ಚಿತ್ತಾಯ ಚಿತ್ರಗುಪ್ತಾಯ ವೈ ನಮಃ ಹೀಗೆ ಮಾಡಿದರೆ ಯಮನ ಅನುಗ್ರಹ ಸಿಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here