15 ಕೆಜಿ ತೂಕ ಇಳಿಸಿಕೊಂಡ ಕೃತ್ತಿಕ. ಟೀಸರ್ ನೋಡಿ ಬಾಯ್ಮೆಲೆ ಬೆರಳಿಟ್ಟ ಜನ. ವಿಡಿಯೋ ಸಮೇತ ನೋಡಿ.

0
4685

ನಮಸ್ಕಾರ ಪ್ರಿಯ ಓದುಗರೇ. ಮೊದಲಿಗೆ ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ವರ್ಷ ನಿಮಗೆ ಒಳಿತಾಗಲಿ. ಸಮಾನ ಮನಸ್ಕರು ಸೇರಿ ನಿರ್ಮಿಸಿರುವ ಸುಕೃಶಿ ಕ್ರಿಯೇಷನ್ಸ್ ಸಂಸ್ಥೆ ವಿನೂತನ ಆಲ್ಬಮ್ ಸಾಂಗ್ ಒಂದನ್ನು ಹೊರತಂದಿದೆ. ಒಲವೇ ಎಂದು ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿರುವ ಈ ಹಾಡು ಸಿನಿಮೀಯ ರೂಪು ರೇಷೆಗಳನ್ನು ಹೊಂದಿರುವುದು ಒಂದು ಪ್ರಮುಖ ಆಕರ್ಷಣೆ.

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ನಟಿ ಕೃತ್ತಿಕಾ ರವೀಂದ್ರ ಅವರು ನಾಯಕಿಯಾಗಿ ಅಭಿನಯಿಸಿರುವ ಈ ಗೀತೆಯಲ್ಲಿ ವರುಣ್ ಹೆಗಡೆ ಅವರು ನಾಯಕನಾಗಿ ನಟಿಸಿದ್ದಾರೆ. ಯುವ ನಿರ್ದೇಶಕಿ, ನಟಿ ಎಂ ಎಸ್ ಶಿವಾನಿ ಯವರ ಪರಿಕಲ್ಪನೆಗೆ ಗಾಯನ,ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಗಾಯಕರಾದ ಡಾ॥ ಸುಚೇತನ್ ರಂಗಸ್ವಾಮಿಯವರು. ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆದಿದ್ದು ಕಾರ್ತಿಕ್ ಹಾಗೂ ನವೀನ್ ಅದ್ಭುತ ಛಾಯಾಗ್ರಹಣವನ್ನು ಮಾಡಿದ್ದಾರೆ.

ಕೆ.ಜಿ.ಎಫ್ ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ಈ ಹಾಡಿನ ವೀಡಿಯೋವನ್ನು ಎಡಿಟ್ ಮಾಡಿದ್ದಾರೆ. ಸುಪ್ರಸಿದ್ಧ ಆಡಿಯೋ ಕಂಪನಿಯಾದ ಆನಂದ್ ಆಡಿಯೋಸ್ ಈ ಗೀತೆಯನ್ನು ಸಮರ್ಪಿಸುತ್ತಿದ್ದು, ಜನವರಿ 3 ರಂದು ಆನಂದ್ ಆಡಿಯೋಸ್ ನ ಎಲ್ಲಾ ಅಂತರ್ಜಾಲ ವೇದಿಕೆಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಹಲವಾರು ಯೋಜನೆಗಳನ್ನು ನಿರ್ಮಿಸಲು ಮುಂದಾಗಿರುವ ಸುಕೃಶಿ ಸಂಸ್ಥೆಯು ಜನರ ಮನ್ನಣೆ ಹಾಗೂ ಪ್ರೋತ್ಸಾಹವನ್ನ ನಿರೀಕ್ಷಿಸುತ್ತಿದೆ.

ಬಿಗ್ಬಾಸ್ ನಂತರ ಹಲವು ಪರ್ಸನಲ್ ಕೆಲಸಗಳಲ್ಲಿ ಬಿಜಿಯಾಗಿದ್ದ ಕೃತಿಕಾ ಅವರು ಈ ಒಂದು ಆಲ್ಬಮ್ ಸಾಂಗ್ ನಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿಗಾಗಿ ಬರೋಬ್ಬರಿ 15 ಕೇಜಿ ತೂಕ ಇಳಿಸಿಕೊಂಡಿರುವ ಕೃತಿಕ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ. ಕಲರ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದ ಚಾಂಪಿಯನ್ ರಿಯಾಲಿಟಿ ಶೋ ನ ಕಂಟೆಸ್ಟೆಂಟ್ ಆದ ಶಿವನಿ ಶ್ರೀಕಂಠಯ್ಯ ಅವರು ಈ ಆಲ್ಬಮ್ ಸಾಂಗ್ ಅನ್ನು ನಿರ್ದೇಶಿಸಿದ್ದಾರೆ.

ಕರ್ನಾಟಕದ ಹೆಸರಾಂತ ಗಾಯಕರಾದ ಡಾಕ್ಟರ್ ಸುಚೇತನ್ ರಂಗಸ್ವಾಮಿಯವರು ಯಾರಿಗೆ ತಾನೇ ಗೊತ್ತಿಲ್ಲ. ಸರಿಗಮಪ ಖ್ಯಾತಿಯ ಸುಚೇತನ್ ಅವರು ಅಮೋಘವಾಗಿ ಈ ಹಾಡನ್ನು ಹಾಡಿದ್ದಾರೆ. ಹೊಸ ಪ್ರತಿಭೆಯಾದ ವರುಣ್ ಹೆಗಡೆ ವಿಶೇಷವಾಗಿ ಈ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಎಲ್ಲರ ಗಮನ ಸೆಳೆದಿದೆ. ಒಟ್ಟಾರೆ ಈ ಆಲ್ಬಮ್ ಸಾಂಗ್ ಮೂರನೇ ತಾರೀಕಿನಂದು ಬಿಡುಗಡೆಯಾಗುತ್ತಿದ್ದು, ಹೊಸ ವರ್ಷಕ್ಕೆ ಹೊಸ ಭರವಸೆಗಳನ್ನು ಮೂಡಿಸಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಟ್ರೆಂಡ ಸೆಟ್ಟ್ ಮಾಡುತ್ತಿದೆ.

ಕೇವಲ ಒಂದು ಟೀಸರ್ ನಿಂದಲೇ ಇಷ್ಟೊಂದು ಫೇಮಸ್ ಆಗಿರುವ ಈ ಹಾಡು, ಜನರು ಹುಬ್ಬೇರಿಸಿ ನೋಡುವಂತೆ ಮಾಡಿದೆ. ಛಾಯಾಗ್ರಹಣ ಹಾಗೂ ಇನ್ನಿತರ ಎಲ್ಲಾ ಆಂಗಲ್ ನಿಂದಲೂ ಪರ್ಫೆಕ್ಟ್ ಆಗಿದೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

LEAVE A REPLY

Please enter your comment!
Please enter your name here