ನಿಮ್ಮ ಜೀವನವನ್ನು ಬೆಳಕಿನತ್ತ ಕರೆದೊಯ್ಯುವ ಸ್ವಾಮಿ ವಿವೇಕಾನಂದರ ಆಯ್ದ 20 ಸಿಂಹವಾಣಿ ಇಲ್ಲಿವೆ. ತಪ್ಪದೇ ಪೂರ್ತಿ ನೋಡಿ.

0
1768

ನಿಮ್ಮ ಜೀವನವನ್ನು ಬೆಳಕಿನತ್ತ ಕರೆದೊಯ್ಯುವ ಸ್ವಾಮಿ ವಿವೇಕಾನಂದರ ಆಯ್ದ 20 ‘ಸಿಂಹವಾಣಿ’ ಇಲ್ಲಿವೆ. ಯಾವುದೇ ಕೆಟ್ಟ ಅಥವಾ ಬೇಸರದ ಸಮಯದಲ್ಲಿ ಒಮ್ಮೆ ಇದನ್ನು ನೆನಪಿಸಿಕೊಳ್ಳಿ. ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ. ಗೆದ್ದರೆ ಸಂತೋಷ, ಸೋತರೆ ಅನುಭವ. ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು, ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ. ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ. ಕೆಡುವುದು ಜನರ ನಡತೆ ಮತ್ತು ಆಚಾರ- ವಿಚಾರ ಮಾತ್ರ. ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು.

ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ. ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

ನೀನು ಯೋಚನೆ ಮಾಡದೆ ಹೇಳುವ ಒಂದೊಂದು ಮಾತು, ನಿನ್ನನ್ನು ಒಂದೊಂದು ನಿಮಿಷವೂ ಯೋಚನೆ ಮಾಡಿಸುತ್ತೆ. ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು? ಹೊಸ ಮಾರ್ಗ ಸೃಷ್ಟಿಸುವ ಧೈರ್ಯ, ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ. ಹಣವಂತರ ಜೊತೆ ನೂರಾರು ವರ್ಷ ಬದುಕುವುದಕ್ಕಿಂತ, ಹೃದಯವಂತರ ಜೊತೆ ಮೂರು ದಿನ ಬದುಕಿದರೂ ಜೀವನ ಸಾರ್ಥಕ.

ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ, ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ. ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು. ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ. ಕೆಲಸವಿಲ್ಲದವ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.

ನಿನ್ನ ನಂಬಿದವರನ್ನು ಎಂದಿಗೂ ಮೋಸ ಮಾಡಬೇಡ, ಸಹಾಯ ಮಾಡಿದರವರನ್ನು ಮರೆಯಬೇಡ, ಮನೆ ಬಾಗಿಲಿಗೆ ಬಂದವರನ್ನು ಅವಮಾನ ಮಾಡಬೇಡ. ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗ ಮಾಡಿ. ಆದರೆ, ಯಾವುದಕ್ಕೂ ಸತ್ಯವನ್ನು ತ್ಯಾಗ ಮಾಡಬೇಡಿ. ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು. ಅವರು ನಿನ್ನ ಎದುರು ಸುಳಿದಾಗೆಲ್ಲಾ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.

ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here