ನಮ್ಮ ಬಾಲ್ಯದ ಸಿಹಿ ನೆನಪುಗಳನ್ನು ನೆನಪಿಸಿಕೊಂಡರೆ ಈಗಲೂ ಕಣ್ಣಂಚಿನಲ್ಲಿ ನೀರು ತುಂಬುತ್ತದೆ.

0
1563

ಮಿತ್ರರೇ ನಮ್ಮದೂ ಒಂದು ಕಾಲವಿತ್ತು. ೫ ನೆಯ ಕ್ಲಾಸ್ ತನಕ ಪಾಟಿ ಪೆನ್ಸಿಲ್ (ಕಡ್ಡಿ / ಬಳಪ) ನಿಂದಲೇ ಅಭ್ಯಾಸ, ನಾಲಿಗೆಯಿಂದ ಕಡ್ಡಿ ಚೀಪುವುದು, ಇದು ಕಾಮನ್ ಆಗಿತ್ತು. ಅದಕ್ಕೆ ಏನೋ, ನಮಗ್ಯಾರಿಗೂ ಕ್ಯಾಲ್ಸಿಯಂ ಗುಳಿಗೆ ಬೇಕಾಗಲಿಲ್ಲ. ನಾವು ಎoಜಲು ಕಡ್ಡಿಯಿಂದ
ಬರೆದರೂ, ಸರಸ್ವತಿ ದೇವಿಯ ಕೃಪೆ ಇತ್ತು ನಮ್ಮ ಮೇಲೆ. ಅವಳು ಎಂದೂ ಸಿಟ್ಟು ಆಗುತ್ತಿರಲಿಲ್ಲ ನಮ್ಮ ಮೇಲೆ.

ಪುಸ್ತಕಗಳಲ್ಲಿ, ಪುಟಗಳ ನಡುವೆ, ನವಿಲಿನ ಪುಚ್ಚ (ಗರಿ), ಕೆಲವು ಗಿಡಗಳ ಎಲೆ ಮುಚ್ಚಿ ಇಡುವ ಚಟ ಇತ್ತು. ಇದರಿಂದ ಸರಸ್ವತಿ ದೇವಿಯ ಕೃಪೆ ಹೆಚ್ಚಾಗುವದೆಂದು ಹುಚ್ಚು ಭಾವನೆ. ಹಳೆಯ ಪ್ಯಾಂಟಿನ ಬ್ಯಾಗ್ ನಮ್ಮದು, ಅಥವಾ ಅಕ್ಕನ ಹರಿದ ಪರಕಾರದಿಂದಾ ತಯ್ಯಾರಾದ ಶಾಲಾ ಬ್ಯಾಗ್ ನಮ್ಮದು. ಎಲ್ಲ ಪುಸ್ತಕ ಮತ್ತು ನೋಟ್ ಬುಕ್ ಗೆ ಕವರ್ ಹಾಕುವದೇ ಒಂದು ಉತ್ಸವ ನಮಗೆ. ಹಳೆಯ ಕ್ಯಾಲೆಂಡರಿನ ಹಾಳೆಗಳೇ ಕವರ್ಗೆ ಸಿಗುವ ಪೇಪರ್ಗಳು.

ತಂದೆ ತಾಯಿಗೆ ಶಿಕ್ಷಣದ ಕುರಿತಂತೆ ಹೆಚ್ಚಿನ ಚಿಂತೆ ಇರಲಿಲ್ಲ. ಯಾರೂ ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗುವ ಕನಸೂ ಕಂಡಿರಲಿಲ್ಲ.
ವರ್ಷಗಟ್ಟಲೆ, ಯಾವ ಪೋಷಕರು ಶಾಲೆಯ ದಾರಿಗೂ ಹೋಗಿರಲಿಲ್ಲ. ಸೈಕಲ್ ಸವಾರಿ, ಡಬ್ಬಲ್ ರೈಡ್, ಒಮ್ಮೊಮ್ಮೆ ತ್ರಿಬಲ್ ರೈಡ್ ಕೂಡ ಮಾಡುತ್ತಿದ್ದೆವು.

ಎರಡೂ ಕೈ ಬಿಟ್ಟು ನಡೆಸಿ, ಹೀರೋ ಅನ್ನಿಸಿ ಕೊಳ್ಳುವ ಛಲ. ಅದೆಷ್ಟು ಸಲ ಮಾಸ್ಟರ್ ಕೈ ಏಟು ತಿಂದೆವೋ ನೆನಪಿಲ್ಲ. ಆದರೆ, ಒಂದು ಸಲವೂ ಇದರ ಸುಳಿವು ಪೋಷಕರಿಗೆ ಗೊತ್ತಾಗದ ಹಾಗೆ ಕಾದುಕೊಂಡೆವು. ನಾವು ಎಂದೂ ಪೋಷಕರಿಗೆ ಐ ಲವ್ ಯು ಅಮ್ಮ, ಐ ಲವ್ ಯು ಅಪ್ಪ ಅಂತ ಅನ್ನಲೇ ಇಲ್ಲ. (ಈಗ ಹೇಳುವಾ ಅನಿಸಿದರೂ ಕೇಳಲು ತಂದೆ ತಾಯಿ ಯಾರೂ ಉಳಿದಿಲ್ಲ.) ತಂದೆ ತಾಯಿಯರ ಮೇಲಿದ್ದ ನಮ್ಮ ಪ್ರೀತಿಯನ್ನಾ ನಾವೆಂದೂ ವ್ಯಕ್ತ ಪಡಿಸಲೇ ಇಲ್ಲ. (ಆಗ ಅದರ ಅರಿವೂ ನಮಗಿರಲಿಲ್ಲ.)

ಇಂದು ನಾವು ಬಹಳ ಮುಂದು ವರಿದಂತೆ ನಟನೆ ಮಾಡುತ್ತೇವೆ. ಯಾರಿಗೆ ಏನು ಬೇಕೋ ಅದನ್ನು ಗಳಿಸಿದ್ದೇವೆ. ಆದರೂ ಏನೋ. ಏನೋ ಕೊರತೆ ಮನವನ್ನು ಕೊರೆಯುತಿದೆ. ನಾವು ಈ ಜೀವನದ ಓಟದಲ್ಲಿ ಎಲ್ಲೋ ಕಳೆದು ಹೋಗಿದ್ದೇವೆ ಅನಿಸುತ್ತಿದೆ. ಆದರೆ ಒಂದು ಮಾತು ಮಾತ್ರ ನಿಜಾ. ನಾವು ಬೆಳೆದಿದ್ದು, ವಾಸ್ತವಿಕ ಜಗತ್ತಿನಲ್ಲಿ. ಬಟ್ಟೆ ಗಳ ಇಸ್ತ್ರಿ ಬಗ್ಗೆ, ಕಾಲಿನ ಶೂ ಅಥವಾ ಚಪ್ಪಲಿ ಬಗ್ಗೆಯಾಗಲೀ, ಒಣ ಪ್ರತಿಷ್ಠೆ ತೋರಿಸುವುದು ನಮಗೆ (ಇಂದಿನವರಂತೆ) ಎಂದೂ ಬರಲೇ ಇಲ್ಲ. ಈ ವಿಷಯದಲ್ಲಿ ನಾವು ಮೂರ್ಖರಾಗಿಯೇ ಉಳಿದೆವು.

ನಮ್ಮ ಹಣೆಬರಹವನ್ನು ಒಪ್ಪಿಕೊಂಡು ಇವಿತ್ತಿಗೂ ನಾವು ಕನಸು ಕಾಣುತ್ತೇವೆ. ಬಹುಶಃ ಈ ಕನಸುಗಳೇ ನಮಗೆ ಜೀವಿಸುವ ಸ್ಪೂರ್ಥಿ. ಈ ಆಸೆಯ ಕನಸುಗಳು ಇಲ್ಲದಿದ್ದರೆ, ಇದುವರೆಗೆ ನಾವು ಹೇಗೆ ಜೀವಿಸುತ್ತಿದ್ದೆವು. ಇದರ ಕಲ್ಪನೆ ಮಾಡುವದೂ ಕಷ್ಟ. ಮುಂದಿನ ಪೀಳಿಗೆಗೆ ಈ ವಿಷಯ ತಿಳಿ ಹೇಳುವದು ಅಸಾಧ್ಯದ ಮಾತು. ನಾವು ಒಳ್ಳೆಯವರೋ, ಅಥವಾ ಕೆಟ್ಟವರೋ ಗೊತ್ತಿಲ್ಲ. ಇಷ್ಟಂತೂ ನಿಜ.

ನಾವೂ ಬದುಕಿ ಜೀವಿಸಿದೆವು, ಹೊಸ ಪೀಳಿಗೆಗೆ ಜನ್ಮ ಕೊಟ್ಟು ಬೆಳೆಸಿದೆವು. ಹೀಗೆ ನಮ್ಮದೂ ಒಂದು ಕಾಲ ಇತ್ತು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here