ದೇವರು ನಿಮ್ಮ ಕಣ್ಣುಗಳಿಗೆ ಕಾಣಿಸಬೇಕೆಂಬ ಹಂಬಲವೇ. ಹಾಗಾದರೆ ಇದನ್ನು ಒಮ್ಮೆ ನೋಡಿ.

0
28920

ದೇವರು ಕಾಣಿಸಬೇಕೆಂಬ ಹಂಬಲವೇ. ದೇವರು ಕಾಣಿಸಲಿಲ್ಲವೆ. ಸಾಮಾನ್ಯವಾಗಿ ಕಷ್ಟದಲ್ಲಿರುವಾಗ ದೇವರ ಬಗ್ಗೆ ನಮ್ಮ ಅಳಲು ಹೆಚ್ಚು. ನಮ್ಮ ಒಳ್ಳೆಯತನ, ಪೂಜೆ ಪುನಸ್ಕಾರ ಎಲ್ಲವನ್ನೂ ನೆನೆದು ಏಕೆ ಅವನು ನಮ್ಮ ಬಗ್ಗೆ ಕರುಣೆ ತೋರುತ್ತಿಲ್ಲವೆಂದು ಹಂಬಲಿಸುತ್ತೇವೆ. ಎಲ್ಲವೂ ಚೆನ್ನಾಗಿದ್ದಾಗ ಧಾರಾಳವಾಗಿ ಹರಕೆಗಳನ್ನು ಮುಂದಕ್ಕೆ ಹಾಕುತ್ತೇವೆ. ಅವನ ಸೇವೆಗೆ ಸಮಯವನ್ನು ನಿಗದಿ ಮಾಡುತ್ತೇವೆ. ಆದರೆ ಕಷ್ಟದ ಸಮಯದಲ್ಲಿ ಕೂಡಲೇ ಅವನ ಸಹಾಯ ಹಸ್ತವನ್ನು ಬೇಡುತ್ತೇವೆ.

ಇದು ತಪ್ಪು ಸರಿ ಅನ್ನುವುದಕ್ಕಿಂತ ಮನುಷ್ಯನ ಸಹಜ ಸ್ವಭಾವ. ಹಸಿವಾದಾಗ ತಂತಾನೇ ಅಡುಗೆ ಕಡೆ ಗಮನ ಹರಸಬೇಕಾಗುತ್ತದೆ. ಹಾಗಾದರೆ ಅವನನ್ನು ಕಾಣುವ ಬಗೆ ಹೇಗೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸ್ವಲ್ಪ ಗಮನ ಕೊಟ್ಟು ಆ ಬಗ್ಗೆ ಚಿಂತನೆ ನಡೆಸಬೇಕು ಅಷ್ಟೆ.

ಸೃಷ್ಟಿಯ ಧಾರಾಳತನವನ್ನು ಗಮನಿಸಿದಾಗ ಅರಿವಾಗುವುದು ಅವನು ಎಲ್ಲವನ್ನೂ ಕೊಟ್ಟಿದ್ದಾನೆ. ಕೊಟ್ಟಿರುವ ವಿವಿಧ ರೂಪಗಳಲ್ಲಿ ಅವನು
ದರುಶನ ಕೊಡುತ್ತಿದ್ದಾನೆ. ಪ್ರಕೃತಿ, ಋತುಮಾನಗಳು, ಗ್ರಹಗಳ ಚಲನೆ, ಬದುಕಲು ಬೇಕಾದ ಆಹಾರ, ಗಾಳಿ, ಬೆಂಕಿ, ನೀರು, ಆಕಾಶ, ಭೂಮಿ ಹೀಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನಾವು ಅದರ ಬಳಕೆಗಳಲ್ಲಿ ವ್ಯತ್ಯಯ ಮಾಡಿಕೊಂಡು ಎಲ್ಲ ಹೊಣೆಯನ್ನು ಅವನ ಮೇಲೆ ಹಾಕುವುದು ಎಷ್ಟು ಸರಿ.

ಮನುಷ್ಯ ಪ್ರಕೃತಿಯಲ್ಲಿ ಇರುವುದನ್ನೇ ಕಂಡುಹಿಡಿದನೆ ವಿನಹ ಅವನೇ ಎಲ್ಲವನ್ನೂ ಸೃಷ್ಟಿಮಾಡಿಲ್ಲ. ಈ ರೀತಿಯ ಎಲ್ಲ ಅದ್ಭುತಗಳಲ್ಲೂ ಅವನನ್ನು ಕಾಣುವ ಮನಸ್ಸು ಬೇಕು ಅಲ್ಲವೇ. ಈ ಬಗ್ಗೆ ಒಂದು ಸಣ್ಣ ಪ್ರಸಂಗ. ಹಿಮಾಲಯದ ಮಹಾತ್ಮ ಸ್ವಾಮಿ ರಾಮ ಅವರು ಗುರುಗಳ ಬಳಿ ಚರ್ಚೆ ಮಾಡುವಾಗ ನೀವು ದೇವರನ್ನು ತೋರಿಸಬಲ್ಲಿರಾ ಎಂದು ಕೇಳಿದಾಗ ಆಗಲಿ ತೋರಿಸುತ್ತೇನೆ ಎಂದರಂತೆ ಗುರುಗಳು. ಎಲ್ಲಿ ಹೇಗೆ ನೋಡಬೇಕೆಂಬ ಬಗ್ಗೆ ಸಿದ್ದನಾಗಿ ಬಾ ಅಂದರಂತೆ.

ಒಂದು ನಿಗದಿಯಾದ ದಿನ ಸ್ವಾಮಿ ರಾಮ ಗುರುಗಳಿಗೆ ದೇವರನ್ನು ತೋರಿಸಿ ಅಂದಾಗ ಗುರುಗಳು ಆಯಿತು ನೀನು ದೇವರನ್ನು ಹೇಗೆ ನೋಡಬೇಕೆಂದು ಬಯಸುತ್ತೀಯಾ ಎಂದು ಕೇಳಿದಾಗ ಸ್ವಾಮಿ ರಾಮ ಅವರು ಹೀಗೆ ಹೇಳುತ್ತಾರೆ. ಗುರುಗಳೇ ನೀವೇ ಹೇಳಿದ್ದಲ್ಲವೇ ದೇವರನ್ನು ತೋರಿಸುತ್ತೇನೆ ಎಂದು. ಹೀಗೆಂದಾಗ ಗುರುಗಳು ಆಯಿತು ನಾನು ತೋರಿಸುತ್ತೇನೆ ನಿಜ ಆದರೆ ನೀನು ಅದನ್ನು ದೇವರು ಎಂದು ಒಪ್ಪಬೇಕಲ್ಲ, ಹಾಗಾಗಿ ಕೇಳಿದೆ ನೀನು ಹೇಗೆ ದೇವರನ್ನು ಕಾಣಬೇಕೆಂದು ಬಯಸುತ್ತೀಯಾ ಎಂದು.

ಗುರುಗಳು ಮುಂದುವರೆದು ನೋಡು, ನಾನು ಈ ಅನಂತವಾದ ಆಕಾಶ, ವಿಸ್ತಾರವಾದ ಭೂಮಿ, ಗಾಳಿ ಹೀಗೆ ಇವೇ ದೇವರೆಂದು ಹೇಳಿದರೆ ನಂಬುತ್ತೀಯ. ಅದಕ್ಕೆ ಮೊದಲು ದೇವರನ್ನು ಹೇಗೆ ನೋಡಬೇಕೆಂದು ಮನಸ್ಸಿನಲ್ಲಿ ತಯಾರಿ ಮಾಡಿಕೊ, ನಿರಂತರ ಸಾಧನೆಯಿಂದ ಗುರಿ ತಲುಪುತ್ತೀಯ ಎಂದು ಮನವರಿಕೆ ಮಾಡಿಕೊಟ್ಟರಂತೆ.

ನಿಜ ಅಲ್ಲವೇ ಸ್ನೇಹಿತರೇ. ನಾವು ಯಾರನ್ನೇ ಆಗಲಿ ಅವರನ್ನು ಹೇಗೆ ಕಾಣಬೇಕೆಂಬ ತಯಾರಿ ಇಲ್ಲದಿದ್ದರೆ ಅದು ಹೇಗೆ ಪೂರ್ಣಗೊಳ್ಳಲು ಸಾಧ್ಯ. ದೈವಾಂಶ ಎಲ್ಲರಲ್ಲೂ ಇದೆ. ಅದನ್ನು ಕಾಣಲು ತಪಸ್ಸು ಮಾಡಬೇಕು. ಆ ದೈವಕ್ಕೆ ಶರಣಾಗಬೇಕು. ಅದನ್ನು ಸಂಪೂರ್ಣವಾಗಿ ನಂಬಬೇಕು. ಆಗ ಮಾತ್ರ ಅದು ಖಂಡಿತ ಕಾಣಿಸಲು ಸಾಧ್ಯ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here