ಕರುನಾಡಲ್ಲಿ ಕನ್ನಡ ಯುವಕರು ಸಾಧನೆ ಮಾಡುವುದರಲ್ಲಿ ಎಂದಿಗೂ ಹಿಂದೆ ಇಲ್ಲ. ಒಂದಲ್ಲ ಒಂದು ಕ್ಷೇತ್ರದಲ್ಲಿ ತಮ್ಮದೇ ಆದ ವಿಭಿನ್ನ ಪ್ರತಿಭೆಯನ್ನು ತೋರಿಸುತ್ತಾ ಕನ್ನಡಿಗರು ತಮ್ಮ ಟ್ಯಾಲೆಂಟ್ ಅನ್ನು ಪ್ರದರ್ಶಿಸುತ್ತಿರುತ್ತಾರೆ. ಹಾಗೆಯೇ ಇಂದು ಹಾಸನದ ಒಬ್ಬ ಯುವಕ ದೇಶೀಯ ಮಟ್ಟದಲ್ಲಿ ಉನ್ನತ ಸ್ಥಾನವನ್ನು ಗಳಿಸಿ ಉತ್ಕೃಷ್ಟ ಸಾಧನೆ ಮಾಡಿರುವ ವಿಚಾರ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಹಲೋ ಗೈಸ್ ನಮಸ್ಕಾರ ನಾನು ಸಂದೀಪ್ ಫ್ರಮ್ ಟೆಕ್ ಇನ್ ಕನ್ನಡ. ಈ ಧ್ವನಿಯನ್ನು ನೀವು ನೂರಾರು ಬಾರಿ ಯೂಟ್ಯೂಬ್ನಲ್ಲಿ ಕೇಳಿರುತ್ತೀರಿ. ಮೊದಮೊದಲಿಗೆ ಟೆಕ್ ಇನ್ ಕನ್ನಡ ಯೂಟ್ಯೂಬ್ ವಾಹಿನಿಯನ್ನು ಶುರು ಮಾಡಿದ ಸಂದೀಪ್ ಅವರು ಅತ್ಯುನ್ನತ ಕಮೆಂಟ್ಗಳನ್ನು ಹಾಗೂ ಉತ್ತಮ ವ್ಯೂ ಪಡೆದುಕೊಂಡು ಈಗ ಕರ್ನಾಟಕದಲ್ಲಿ ಟೆಕ್ ವಿಚಾರದ ಕ್ರಿಯೇಟರುಗಳ ಮಧ್ಯದಲ್ಲಿ ತಾವೇ ಮೊದಲಿಗರಾಗಿದ್ದಾರೆ.
ಮೂಲತಹ ಹಾಸನದ ಯುವಕನಾದ ಸಂದೀಪ್ ಗೌಡ ಅವರು ಓದಿದ್ದು ಬೆಳೆದಿದ್ದು ಹಾಸನದಲ್ಲಿ. ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ 1 ಲಕ್ಷದ 60 ಸಾವಿರಕ್ಕೂ ಹೆಚ್ಚು ಹಾಗೂ ಇನ್ಸ್ಟಾಗ್ರಾಂ ಖಾತೆಯಲ್ಲಿ 20 ಸಾವಿರಕ್ಕೂ ಹೆಚ್ಚು ಹಾಗೂ ತಮ್ಮ ಯೂಟ್ಯೂಬ್ ಖಾತೆಯಲ್ಲಿ 5 ಲಕ್ಷದ 20 ಸಾವಿರಕ್ಕು ಹೆಚ್ಚು ಸಬ್ಸ್ಕ್ರಿಬರ್ಸ್, ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಕರ್ನಾಟಕದಲ್ಲಿರುವ ಲೀಡ್ ಯುಟ್ಯೂಬರ್ ಆಗಿ ಹೊರ ಹೊಮ್ಮಿರುವ ಸಂದೀಪ್ ಅವರು ಭಾರತದ ಎಲ್ಲಾ ಮೇಜರ್ ಮೊಬೈಲ್ ಕಂಪನಿಗಳಾದ ಸ್ಯಾಮ್ಸಂಗ್, ರಿಯಲ್ಮಿ, ವಿವೋ, ಮೈಕ್ರೋಮ್ಯಾಕ್ಸ್, ಅಮೆಜಾನ್, ಸೋನಿ, ಫ್ಲಿಪ್ಕಾರ್ಟ್, ಟಾಟಾ ಸೇರಿದಂತೆ ಹತ್ತು ಹಲವಾರು ಅಂತರಾಷ್ಟ್ರೀಯ ಬ್ರಾಂಡ್ ಗಳ ಜೊತೆ ಜೊತೆಗೂಡಿ ಕೆಲಸ ಮಾಡುತ್ತಿದ್ದಾರೆ.
ಯೂಟ್ಯೂಬ್ ವತಿಯಿಂದ ನಡೆದಿದ್ದ ನೆಕ್ಸ್ಟ್ ಅಪ್ ಎಂಬ ಕಾರ್ಯಕ್ರಮದಲ್ಲಿ ವಿನ್ನರ್ ಗಳ ಸ್ಥಾನದಲ್ಲಿ ತಾವು ಕೂಡ ಇದ್ದು ಯೂಟ್ಯೂಬ್ ಅಧಿಕೃತ ಖಾತೆಯಿಂದ ಪ್ರಶಂಸೆಗೂ ಕೂಡ ಒಳಗಾಗಿದ್ದಾರೆ. ಟೆಕ್ ಇನ್ ಕನ್ನಡ ಹಾಗೂ ವಿ ಲಾಗ್ ಇನ್ ಕನ್ನಡ ಎಂಬ ಎರಡು ಖಾತೆಗಳನ್ನು ಕೂಡ ಸಂದೀಪ್ ಅವರು ಹೊಂದಿದ್ದಾರೆ.
ಇತ್ತೀಚೆಗಷ್ಟೇ ಸ್ಯಾಮ್ಸಂಗ್ ಕಂಪನಿಯವರು ಗ್ಯಾಲಕ್ಸಿ X21 ಎಂಬ ಹೊಸ ಮೊಬೈಲನ್ನು ಹೊರ ತರಲಿದ್ದು ಆ ಪೈಕಿ ಭಾರತದ ಉತ್ತಮ ಬ್ಲಾಗರ್’ಗಳಲ್ಲಿ ಸಂದೀಪ್ ಅವರು ಕೂಡ ಒಬ್ಬರು ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ಸಂದೀಪ್ ಅವರು ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುವುದೇ ಕನ್ನಡಿಗರ ಆಶಯ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.