ಯಾವ ದೇವರಿಗೆ ಯಾವ ಬಣ್ಣದ ಹಾಗೂ ಯಾವ ಹೂವಿನಿಂದ ಅರ್ಚನೆ ಮಾಡಬೇಕು. ಭಾವನಾತ್ಮಕತೆಯಿಂದ ನೋಡುವುದಾದರೆ ದೇವರಪೂಜೆ ಎನ್ನುವುದು ನಮ್ಮ ಮನಸ್ಸಿಗೆ ಮುದ ಸಂತೋಷ ಸಂತೃಪ್ತಿ ನೀಡುವ ಕೆಲಸ ಕಾಯಕ ಹಾಗೂ ಆರಾಧನೆ. ದೇವರಮನೆ ಪ್ರತಿನಿತ್ಯ ಸ್ವಚ್ಛ ಪಡಿಸಿ ಸಾರಿಸಿ ರಂಗೋಲಿ ಕೆಮ್ಮಣ್ಣು ಲೇಪಿಸಿ, ಸುಂದರ ತಾಜಾ ಹೂಗಳಿಂದ ಅಲಂಕಾರ ಮಾಡಬೇಕು.
ನೀಲಾಂಜನ ದಲ್ಲಿ ದೀಪಹಚ್ಚಿ ಸುತ್ತಲೂ ಮಂದಬೆಳಕು ಹರಡುವುದರಿಂದ ಒಂದು ಬಗೆಯ ದೈವಿಕ ಕಾಂತಿ ಸುತ್ತಲೂ ಹರಡುತ್ತದೆ. ಆದರೆ ನಮ್ಮ ಪ್ರಾಚೀನ ಶಾಸ್ತ್ರ ಪ್ರತಿಯೊಂದು ದೇವರಿಗೂ ಒಂದೊಂದು ಬಗೆಯ ಹೂವು ಬಳಸಿ ಅರ್ಚನೆ ಮಾಡಿ ಎಂದು ಕಾರಣಸಹಿತ ಉಲ್ಲೇಖ ಮಾಡಿದೆ. ಆಯಾ ಹೂಗಳು ಭಗವಂತನ ಅಧಿಕ ಪ್ರೀತಿಗೆ ಕಾರಣ ಆಗುತ್ತದೆ. ಸೂರ್ಯ ಗಣಪತಿಗೆ ಕೆಂಪು ಗಳನ್ನು ಬಳಸಿ ಅರ್ಚನೆ ಮಾಡಬೇಕು. ಆಂಜನೇಯ ಸ್ವಾಮಿಗೆ ಕಾಂಚನ ಪುಷ್ಪಗಳಿಂದ ಅರ್ಚನೆ ಮಾಡಬೇಕು.
ದಾಸವಾಳದ ಹೂಗಳಿಂದ ಲಲಿತಾ, ತ್ರಿಪುರ ಸುಂದರಿ, ದುರ್ಗೆ, ಚಾಮುಂಡೇಶ್ವರಿಯ ಆರಾಧನೆ ಮಾಡಿ. ಶಿವ ಮಹಾಲಕ್ಷ್ಮಿಗೆ ನಂದಿವರ್ಧನ ನಾಗಮಲ್ಲಿಗೆ ಮಲ್ಲಿಗೆ ಮಾಲತಿ ಮುಂತಾದ ಹೂವುಗಳಿಂದ ಅರ್ಚನೆ ಮಾಡಿ. ಇವುಗಳು ಬಿಳಿ ಬಣ್ಣದಲ್ಲಿ ಇರುತ್ತದೆ. ಶ್ರೀ ಮಹಾಲಕ್ಷ್ಮಿಗೆ ಸಂಪಿಗೆಹೂ ತುಂಬಾ ಪ್ರೀತಿ ಪಾತ್ರ. ಕಾಳಿ ದುರ್ಗೆ ಲಲಿತೆಗೆ ಕದಂಬ ಹೂಗಳನ್ನು ಬಳಸಿ ಅರ್ಚನೆ ಮಾಡಿ.
ವಾಸ್ತವವಾಗಿ ನೋಡುವುದಾದರೆ ನಮ್ಮ ಪ್ರಕೃತಿ ನಮ್ಮ ಪಾಲಿನ ದೇವರು. ಆ ಪ್ರಕೃತಿಯಲ್ಲಿ ಸಿಗುವ ಹೂ, ಪುಷ್ಪ, ಗರಿಕೆ, ಹುಲ್ಲು, ಪತ್ರೆಗಳನ್ನು ದೇವರಿಗೆ ಅರ್ಪಿಸುವುದು ವಾಡಿಕೆ. ಋತುಗಳು ಕಾಲಮಾನ ಗಳಿಗೆ ಅನುಸಾರವಾಗಿ ಹೂಗಳು ಅರಳುತ್ತದೆ. ಆಯಾ ದೇವರುಗಳಿಗೆ ಇಂತಹ ಪುಷ್ಪಗಳು ಎಂದು ಉಲ್ಲೇಖ ಮಾಡಿರುವುದರಿಂದ ಸಿಗುವ ಹೂಗಳಲ್ಲಿ ಮುಖ್ಯ ಯಾವುದು ಎಂದು ತಿಳಿದು ಪೂಜಿಸುವುದರಿಂದ ದೇವರು ಸಂಪ್ರೀತನಾಗುತ್ತಾನೆ.
ಬಿಳಿ ಬಣ್ಣ ಶಾಂತಿ ಪ್ರತಿಕ. ಹಾಗೆಯೇ ಕೆಂಪುಬಣ್ಣ ನೋಡಲು ಬಹಳ ಆಕರ್ಷಕ. ಸಂಪಿಗೆ ಶ್ರಾವಣ ಮಾಸದಲ್ಲಿ ಅರಳುತ್ತದೆ. ಈ ಹೂ ಶ್ರಾವಣಮಾಸದಲ್ಲಿ ದೇವಿಗೆ ಅರ್ಚನೆ ಮಾಡುವುದರಿಂದ ತಾಯಿ ಸಂಭ್ರಮಿಸುತ್ತಾಳೆ. ಶ್ರಾವಣ ಮಾಸ ತಾಯಿಗೆ ಬಹಳ ಮುಖ್ಯವಾದ ಕಾಲ.
ಇದೇ ಕಾರಣದಿಂದಾಗಿ ಯಾವುದೇ ವ್ರತ ಉಪಾಸನೆಗಳನ್ನು ಎಲ್ಲರೂ ಶ್ರಾವಣಮಾಸ ದಿಂದಲೇ ಶುರು ಮಾಡುವುದು. ಹೀಗೆ ಮಾಡುವುದರಿಂದ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಬಹಳ ಹಳೆಯ ಕಾಲದಿಂದಲೂ ಸಹ ಇದೆ. ಹಾಗೂ ಈ ನಂಬಿಕೆ ಸತ್ಯ ಎಂದು ಸಹ ಸಾಬೀತಾಗಿದೆ. ಇನ್ನು ಈ ಎಲ್ಲಾ ವಿಷಯಗಳನ್ನು ವೈಚಾರಿಕತೆಯಿಂದ ನೋಡುವುದಾದರೆ ಮನೆ, ಕೈತೋಟ, ಹಿತ್ತಲು ಸುಂದರವಾಗಿರಲು ಕಾರಣ ದೇವರು ಎಂದರೆ ತಪ್ಪಾಗಲಾರದು.
ನಮ್ಮ ಆಚಾರ-ವಿಚಾರಗಳು ದೇವರ ಸುತ್ತಲೂ ತಿರುಗುವುದರಿಂದ ಹೂಗಳು, ಪತ್ರೆ, ಬಣ್ಣ, ಬಣ್ಣದ ಹೂಗಳನ್ನು ಬೆಳೆಸುತ್ತೇವೆ. ರೂಪಿಸಿಕೊಳ್ಳಲು ದೇವರ ಪೂಜೆ ಬಹಳ ಮುಖ್ಯ ಕಾರಣವಾಗುತ್ತದೆ. ಇದಕ್ಕಾಗಿಯೇ ಹೇಳುವುದು ಬೆಳಿಗ್ಗೆ ಬೇಗನೆ ಎದ್ದು ಪ್ರಾತಃ ಕಾಲದಲ್ಲಿ ಸ್ನಾನ ಸಂಧ್ಯಾವಂದನೆ ಮೊದಲಾದ ನಿತ್ಯಕರ್ಮಗಳನ್ನು ಮುಗಿಸಿ ದೇವರನ್ನು ಭಕ್ತಿಯಿಂದ ಪೂಜಿಸಬೇಕು. ಹೀಗೆ ಮಾಡಿದರೆ ನಮ್ಮ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ.