ಈ ಬೇಸಿಗೆಗೆ ತ್ವಚೆಯ ಈ ಆರೈಕೆ ತಪ್ಪಿದರೆ ತೊಂದರೆ ಕಟ್ಟಿಟ್ಟ ಬುತ್ತಿ.

0
2071

ಸೂರ್ಯ ಮುಳುಗುವ ಸಮಯದಲ್ಲಿ ಕಿರಣಗಳು ಮನುಷ್ಯನ ಮೇಲೆ ಸೋಕಿದರೆ ಏನಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಸೂರ್ಯ ದೇವರ ರೂಪದಲ್ಲಿ ಆರಾಧಿಸಲ್ಪಡುತ್ತಾನೆ. ಸೂರ್ಯನು ಜಗತ್ತಿಗೆ ಬೆಳಕು ಆಹಾರ ನೀಡುವ ದೇವರು. ಅವನಿಂದ ಮನುಷ್ಯನು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಅಂತಹ ಸೂರ್ಯನ ಬೆಳಕು ಹಾಕುವುದರಿಂದ ಜನ್ಮವು ಸಾರ್ಥಕವಾಗುತ್ತದೆ. ಸದಾಕಾಲ ಮಳೆ ಸುರಿಯುತ್ತಿದ್ದರೆ ಒಂದು ಬಾರಿ ಮನುಷ್ಯನ ಬದುಕು ಯಾವ ರೀತಿ ಇರುತ್ತದೆ ಎಂದು ನೀವೇ ಯೋಚನೆ ಮಾಡಿ.

ಮನುಷ್ಯನು ಜಡಗಟ್ಟಿ ಹೋಗುತ್ತಾನೆ. ಸಾಮಾನ್ಯವಾಗಿ ಮಕ್ಕಳು ಪ್ರಖರ ಸೂರ್ಯನ ಬೆಳಕು ಅಂದರೆ ಮಧ್ಯಾಹ್ನ ದ ಸಮಯದಲ್ಲಿ ಹೊರಗೆ ಆಟವಾಡಲು ಹೋಗುತ್ತಾರೆ. ಆದರೆ ಇದಕ್ಕೆ ಮನೆಯ ಹಿರಿಯರು ಒಪ್ಪುವುದಿಲ್ಲ. ಹಾಗೂ ಅವರನ್ನು ಹೊರಗಡೆ ಆಟವಾಡಲು ಕಳಿಸುವುದಿಲ್ಲ. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಆಟವಾಡಬೇಡಿ ಎಂದು ಬುದ್ದಿವಾದ ಹೇಳುತ್ತಾರೆ. ಇದಕ್ಕೆ ಕಾರಣ ಏನೆಂದು ಎಂದಾದರೂ ಯೋಚಿಸಿದ್ದೀರಾ.

ಹಿರಿಯರು ಹೇಳುವ ಪ್ರಕಾರ ಸೂರ್ಯನ ಪ್ರಖರ ಬೆಳಕು ಮನುಷ್ಯನ ಪಾಲಿಗೆ ಆಯಾಸ ಸುಸ್ತು ಉಂಟುಮಾಡುತ್ತದೆ. ಹೀಗಾಗಿ ಸೂರ್ಯನ ಕಿರಣಗಳು ಮಧ್ಯಾಹ್ನದ ವೇಳೆಯಲ್ಲಿ ಬಹಳ ಹೆಚ್ಚಿರುವುದರಿಂದ ಅಂತಹ ಸಮಯದಲ್ಲಿ ಆಟವಾಡುವುದು ಸೂಕ್ತವಲ್ಲ. ನಮ್ಮ ಪಾಲಿಗೆ ಕಿರಣಗಳು ಆರೋಗ್ಯದಾಯಕ ಆಗಿರಬೇಕು. ಸೂರ್ಯನ ಕಿರಣಗಳು ಮುದ ನೀಡಬೇಕು. ಅಂತಹ ಎಳೆಬಿಸಿಲು ಈಗ ತಾನೆ ಜನ್ಮ ತಾಳಿರುವ ಮಗುವಿನ ಆರೋಗ್ಯಕ್ಕೂ ಕೂಡ ಬಹಳ ಸಹಕಾರಿ.

ಆ ಮಗು ತನ್ನ ಕಣ್ಣುಗಳನ್ನು ಪಿಳಿ ಪಿಳಿ ಬಿಟ್ಟುಕೊಂಡು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಮಗುವಿಗೆ ಇದೀನಿ ಬಿಸಿಲು ಬಿದ್ದರೆ ಬಹಳ ಸಹಾಯಕಾರಿ. ಮಗುವಿನ ಚರ್ಮ ಆರೋಗ್ಯದಿಂದ ಕೂಡಿರುತ್ತದೆ. ಬೆಳಗಿನ ಸಮಯದಲ್ಲಿ ಸೂರ್ಯನ ಕಿರಣಗಳು ಸಾಕುವುದರಿಂದ ಕಣ್ಣುಗಳ ಅಲರ್ಜಿ ಚರ್ಮರೋಗಗಳು ನಿವಾರಣೆ ಆಗುತ್ತದೆ. ಇದನ್ನು ವಾಸ್ತವಿಕತೆಯಿಂದ ಯೋಚಿಸುವುದಾದರೆ ಮುಂಜಾನೆಯ ಸೂರ್ಯನ ಕಿರಣಗಳು ಹಾಕುವುದರಿಂದ ಕಣ್ಣುಗಳ ಅಲರ್ಜಿ ಚರ್ಮರೋಗಗಳು ನಿವಾರಣೆಯಾಗುತ್ತವೆ.

ದೇಹ ಆರೋಗ್ಯದಿಂದ ಇರಲು ಬೇಕಾಗಿರುವ ವಿಟಮಿನ್ ಡಿ ದೊರಕಲು ಸೂರ್ಯನ ಕಿರಣಗಳು ಸಹಕಾರಿಯಾಗುತ್ತದೆ. ಚರ್ಮದ ಮೇಲೆ ಉಂಟಾಗುವ ಸುಕ್ಕು, ಮಾಸಲು ಬಣ್ಣ ಸಹ ಸೂರ್ಯನ ಕಿರಣಗಳು ಸೋಕಿ ಉತ್ತಮ ಕಾಂತಿ ಹೊಂದುತ್ತದೆ. ವಿಟಮಿನ್-ಡಿ ದೇಹದಲ್ಲಿ ಕಡಿಮೆ ಇದ್ದರೆ ಬೆರ್ರೀ ಬೆರ್ರೀ ಎನ್ನುವ ರೋಗ ಬರುತ್ತದೆ. ಹೀಗೆ ಸೂರ್ಯನ ಉದಯ ಮತ್ತು ಸೂರ್ಯಾಸ್ತ ಸಮಯದಲ್ಲಿ ಸೂರ್ಯನ ಕಿರಣಗಳು ಪ್ರಕಾರವಾಗಿ ಇರುವುದಿಲ್ಲ. ಹೀಗಾಗಿ ದೇಹದ ಕಾಂತಿ ಹೆಚ್ಚುತ್ತದೆ. ಚರ್ಮದ ಸೌಂದರ್ಯ ಹೆಚ್ಚಾಗುತ್ತದೆ.

ನಾವು ನಮ್ಮ ಅಂದವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು. ಇದನ್ನೇ ವೈಚಾರಿಕತೆಯಿಂದ ಯೋಚಿಸುವುದಾದರೆ ಸೂರ್ಯ ನಮ್ಮೆಲ್ಲರ ಪಾಲಿಗೆ ದೇವರು. ಹಾಗಾಗಿ ಮುಂಜಾನೆ ಕಿರಣಗಳಿಗೆ ದೇಹ ಒಡ್ಡಿ ಹಿಂದಿನ ಕಾಲದಲ್ಲಿ ಸ್ನಾನ ಮಾಡಲು ಜನರು ನದಿಗೆ ಹೋಗುತ್ತಿದ್ದರು. ಇಂದು ನಾವು ಎಳೆ ಬಿಸಿಲಿನ ಕಿರಣಗಳು ನಮ್ಮನ್ನು ಸೋಕಲಿ ಎಂದು ಉದ್ಯಾನವನಗಳಲ್ಲಿ ನಡೆಯುವ ಅಭ್ಯಾಸ ರೂಡಿಸಿಕೊಂಡು ಬಂದಿದ್ದೇವೆ.

ಮನುಷ್ಯನು ತನ್ನ ಬದುಕು ಜೀವನ ಪ್ರಕೃತಿಯ ಮಡಿಲಿನಲ್ಲಿ ರೂಪಿಸಿಕೊಂಡಿದ್ದಾರೆ. ಆಯಾ ಕಾಲಕ್ಕೆ ಋತುಗಳಿಗೆ ಅನುಗುಣವಾಗಿ ತನ್ನ ಆರೋಗ್ಯ ಸುಧಾರಿಸಿಕೊಳ್ಳಲು ಬೇಕಾಗಿರುವ ಎಲ್ಲ ವಸ್ತುಗಳನ್ನು ತಾನೇ ಸೃಷ್ಟಿ ಮಾಡಿಕೊಂಡಿರುವನು. ತನ್ನ ಬಳಿ ಇರುವ ಅವಕಾಶಗಳನ್ನು, ದೇವರು ಅವನಿಗೆ ನೀಡಿರುವ ಎಲ್ಲ ನೈಸರ್ಗಿಕ ವಸ್ತುಗಳನ್ನು ಸೂಕ್ತವಾಗಿ ಬಳಸಿಕೊಂಡು ಹೋದರೆ ಸಾಕು. ಹೀಗೆ ಮಾಡಿದರೆ ವೈದ್ಯರ ಬಳಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ.

ಇನ್ನು ಹಾನಿಗೊಳಗಾಗಿರುವ ತ್ವಚೆಯನ್ನು ಸರಿ ಮಾಡುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬೇಸಿಗೆ ಕಾಲದಲ್ಲಿ ಮೌರ್ಯರೈಸರ್, ಸನ್ ಸ್ಕ್ರೀನ್ ಲೋಷನ್ ಗಳನ್ನು ಬಳಸುವುದು ಸರ್ವೇ ಸಾಮಾನ್ಯ. ಆದರೆ ನಮ್ಮ ಹಿರಿಯರು ನಮಗೆ ಮಾರ್ಗದರ್ಶನ ನೀಡಿರುವ ಪ್ರಕಾರ ನೈಸರ್ಗಿಕವಾಗಿ ಸಿಗುವ ಎಣ್ಣೆಗಳನ್ನು ಬಳಸಿ ತ್ವಚೆಗೆ ಮಸಾಜ್ ಮಾಡಿಕೊಳ್ಳುವುದರಿಂದ ಎಲ್ಲಾ ರೀತಿಯ ಡ್ಯಾಮೇಜ್ ಕ್ರಮೇಣವಾಗಿ ಮಾಯವಾಗುತ್ತದೆ.

ಹಾಗಾಗಿ ಹೆಚ್ಚು ರಾ’ಸಾಯನಿಕ ಕ್ರೀಮ್ ಗಳನ್ನು ಅಥವಾ ಲೋಷನ್ ಗಳನ್ನು ಬಳಸಬೇಡಿ. ಇದರ ಬದಲು ನೈಸರ್ಗಿಕವಾಗಿ ಸಿಗುವ ಕೊಬ್ಬರಿಎಣ್ಣೆ ಬಾದಾಮಿ ಎಣ್ಣೆ, ಎಳ್ಳೆಣ್ಣೆ ಮುಂತಾದ ನೈಸರ್ಗಿಕ ಎಣ್ಣೆಗಳನ್ನು ವಾರಕ್ಕೊಮ್ಮೆಯಾದರೂ ಇಡೀ ಮಯ್ಯಿಗೆ ಹಚ್ಚಿಕೊಂಡು ಸ್ನಾನ ಮಾಡಿರಿ.

LEAVE A REPLY

Please enter your comment!
Please enter your name here