ಹೀಗೆ ಮಾಡಿದರೆ ಚಿತ್ರಗುಪ್ತನು, ತನ್ನ ಪುಸ್ತಕದಲ್ಲಿ ದಾಖಲಾಗಿರುವ ಪಾಪಗಳನ್ನು ಅಳಿಸಿಹಾಕುವನು.

0
2318

ಮಾಘಮಾಸದ ಮಹತ್ವ ತಿಳಿಯಿರಿ. ಭಾಗ-1 : ಪುಷ್ಯ ಮಾಸದ ಪೂರ್ಣಿಮಾದoದು ಮಾಘಸ್ನಾನವು ಪ್ರಾರಂಭವಾಗುತ್ತದೆ ಮಾಘ ಶುದ್ಧ ಹುಣ್ಣಿಮೆಯವರೆಗೂ ಒಂದು ತಿಂಗಳು ಪೂರ್ಣವಾಗಿ ಅರುಣೋದಯ ಕಾಲ ಅಥವ ಪ್ರಾತಃ ಕಾಲದಲ್ಲಿ ನದ್ಯಾದಿಗಳಲ್ಲಿ ಸ್ನಾನವನ್ನು ಮಾಡಬೇಕು. ಸೂರ್ಯನು ಸ್ವಲ್ಪ ಉದಿತನಾದಾಗ ಸ್ನಾನ ಮಾಡುವ ಯಾವ ಬ್ರಹ್ಮಜ್ಞನನ್ನು ಸುರಾಪಾನಿಯನ್ನು ಪವಿತ್ರ ಮಾಡೋಣವೆಂದು ನೀರಿನ ಅಭಿಮಾನಿ ದೇವತೆಗಳು ಕೂಗುತ್ತೀರುತ್ತಾರೆ.

“ಮಾಘಮಾಸೇ ರಟoತ್ಯಾಪಃ ಕಿoಚಿದಭ್ಯುದಿತೆ ರವೌ ಬ್ರಹ್ಮಜ್ಞಂ ವಾ ಸುರಾಪಂ ವಾ ಕಪತಂತಂ ಪುನೀಮಹೇ” ಸ್ನಾನ ಕಾಲ -ನಕ್ಷತ್ರವಿರುವಾಗಲೇ ಮಾಡುವ ಮಾಘ ಸ್ನಾನವು ಉತ್ತಮವಾದದ್ದು. ನಕ್ಷೆಗಳು ಕಾಣಿಸದಿರುವಾಗ ಮಾಡುವ ಸ್ನಾನವು, ಮಧ್ಯಮ ಸೂರ್ಯನುದಿಸುತ್ತಿರುವಾಗ ಮಾಡುವ ಸ್ನಾನ, ಅಧಮ ಸೂರ್ಯೋದಯ ನಂತರದಲ್ಲಿ ಮಾಡುವ ಸ್ನಾನ ಕನಿಷ್ಠವೆನಿಸಿದೆ.

“ಉತ್ತಮಂ ತು ಸನಕ್ಷತ್ರಂ ಲುಪ್ತತಾರಂ ತು ಮಧ್ಯಮಂ ಸವಿತರ್ಯುದಿತೇ ಭೂಪ ತತೋ ಹೀನಂ ಪ್ರಕೀರ್ತಿತಮ್”

ಭಾಗ-2 : ಕಾರ್ತಿಕ ಮಾಸವು ಸರ್ವಮಾಸಗಳಲ್ಲಿ ಶ್ರೇಷ್ಠವೆನಿಸಿದ್ದು ಕಾರ್ತೀಕಮಾಸಕ್ಕಿಂತಲೂ ಮಾಘಮಾಸವು ಲಕ್ಷಪಟ್ಟು ಶ್ರೇಷ್ಠವೆನಿಸಿದೆ ಬ್ರಹ್ಮಹ’ತ್ಯಾದಿ ಸಮಸ್ತ ಪಾಪಗಳನ್ನು ಮಾಘ ಸ್ನಾನವು ಪರಿಹರಿಸುತ್ತದೆ. “ಪ್ರಾತಃ ಸ್ನಾನಂ ಪುನಾತೀತಿ ಮಾಘೋ ಗರ್ಜತಿ ಗರ್ಜತಿ ಅತ್ಯುಗ್ರಪಾಪಿನಂ ವಾsಪಿ ಪ್ರಾತಃ ಸ್ನಾನತ್ ಪುನೀಮಹೇ” ಮಾಘ ಸ್ನಾನವನ್ನು ಮಾಡಿದವನ ಪಾಪಗಳನ್ನು ಚಿತ್ರಗುಪ್ತನು, ತನ್ನ ಪುಸ್ತಕದಲ್ಲಿ ದಾಖಲಾಗಿರುವ ಪಾಪಗಳನ್ನು ಅಳಿಸಿಹಾಕುವನು. ಇದು ಯಮನ ಆಜ್ಞೆಯಾಗಿದೆ.

“ಲಿಖಿತಾನಿ ಚ ಪಾಪಾನಿ ಬಹೂನಿ ಯಮಶಾಸನೆ ಪರಿಮಾರ್ಜಯತಿ ಕ್ಷಿಪ್ರಂ ಚಿತ್ರಗುಪ್ತೋ ಯಮಾಜ್ಞಯ” ಸಂಕಲ್ಪವಿಲ್ಲದೆ ಮಾಡಿದ ಸ್ನಾನದಾನದಿಗಳಿಗೆ ಅಲ್ಪ ಫಲವು ಹಾಗೆಯೇ ಬಂದ ಪುಣ್ಯದಲ್ಲಿ ಅರ್ಧವು ನಶಿಸುತ್ತದೆ. “ಸಂಕಲ್ಪೇನ ವಿನ ಕರ್ಮ ಯತ್ಕಿಂಚಿತ್ ಕುರುತೇ ನರಃ
ಫಲo ಚಾಪ್ಯಲ್ಪಕಂ ತಸ್ಯ ಧರ್ಮಸ್ಯಾರ್ಧಕ್ಷಯೋ ಭವೇತ್”.

ಭಾಗ-3 : ಮಾಘಸ್ನಾನದ ಫಲ. ಮಾಘದಲ್ಲಿ ಮನೆಯಲ್ಲಿಯೇ ಬಿಸಿನೀರಿನ ಸ್ನಾನಮಾಡಿದರೆ 6 ವರ್ಷಸ್ನಾನ ಮಾಡಿದ ಫಲ ಮನೆಯಿಂದ ಹೊರಗೆಹೋಗಿ ಭಾವಿಯಲ್ಲಿ ಸ್ನಾನಮಾಡಿದರೆ 12 ವರ್ಷಸ್ನಾನಮಾಡಿದ ಫಲ ಪ್ರಾಪ್ತವಾಗುತ್ತದೆ. ಕೆರೆ ಮೊದಲಾದ ಮಾನವ ನಿರ್ಮಿತ ತಟಾಕಗಳಲ್ಲಿ ಸ್ನಾನಮಾಡಿದರೆ ಭಾವಿಯಲ್ಲಿ ಸ್ನಾನ ಮಾಡಿದರೆ ಬರುವ ಪುಣ್ಯಕ್ಕಿoತ ದುಪ್ಪಟ್ಟು ಫಲ (24ವರ್ಷ ಸ್ನಾನಫಲ) ಲಭಿಸುತ್ತದೆ. ನದಿಯಲ್ಲಿ ಸ್ನಾನ ಮಾಡಿದರೆ ನಾಲ್ಕು ಪಟ್ಟು(48 ವರ್ಷ ಸ್ನಾನ ಫಲ) ಪುಣ್ಯಫಲವು ಬರುವುದು ದೇವ ದೇವತೆಗಳು ಸನ್ನಿಹಿತರಾಗಿರುವ ಪುಷ್ಕರಿಣಿಗಳಲ್ಲಿ (ದೇವಖಾತ)ತಟಾಕ.

ಉದಾಹರಣೆ : ಸ್ವಾಮಿಪುಷ್ಕರಣಿ (ಚಂದ್ರಪುಷ್ಕರಣಿ )ಸ್ನಾನವನ್ನುಮಾಡಿದರೇ ಹತ್ತು ಪಟ್ಟು (120ವರ್ಷ ಸ್ನಾನಫಲ),
ಗಂಗಾ, ಯಮುನ, ಸರಸ್ವತೀ ಮುಂತಾದ ಸಮುದ್ರವನ್ನು ನೇರವಾಗಿ ಸೇರುವ ಮಹಾನದಿಗಳಲ್ಲಿ ಸ್ನಾನ ಮಾಡಿದರೆ 100 ಪಟ್ಟು ಪುಣ್ಯಫಲ (1200ವರ್ಷ ಸ್ನಾನಫಲ) ಮಹಾನದಿಗಳ ಸಂಗಮದಲ್ಲಿ ( ಪ್ರಯಾಗಾದಿಗಳಲ್ಲಿ ) ಸ್ನಾನ ಮಾಡಿದರೆ ನಾನೂರು ಪಟ್ಟು (4800ವರ್ಷ ಸ್ನಾನಫಲ) ಪುಣ್ಯವು ಲಭಿಸುವುದು ಇವೆಲ್ಲವೂ ನದ್ಯಾದಿಗಳಲ್ಲಿ ಸ್ನಾನ ಮಾಡಿದರೆ ಸಹಸ್ರಪಟ್ಟು ಪುಣ್ಯಫಲವು ಲಭಿಸುತ್ತದೆ.

ಭಾಗ-4 : ಮಾಘಸ್ನಾನ ವಿಧಿ. ಮಾಘಮಾಸದಲ್ಲಿ ಮಾಧವರೂಪಿ ಪರಮಾತ್ಮನ ಪ್ರೀತ್ಯರ್ಥವಾಗಿ ಪ್ರತಿನಿತ್ಯ ನದಿಸ್ನಾನವನ್ನು ಅರುಣೋದಯ ಕಾಲದಲ್ಲಿ ಮಾಡಬೇಕು. ಪುಷ್ಯಶುದ್ಧ ಹುಣ್ಣಿಮೆಯಿಂದ ಆರಂಭಿಸಿ ಮಾಘಶುದ್ಧಹುಣ್ಣಿಮೆಯವರೆಗೆ ಒಂದು ತಿಂಗಳು ಪೂರ್ಣವಾಗಿ ಅರುಣೋದಯ ಕಾಲ ಅಥವಾ ಪ್ರಾತಃಕಾಲದಲ್ಲಿ ಮಾಘಸ್ನಾನವನ್ನು ಮಾಡಬೇಕು.

ಆಚಮನ ಪ್ರಾಣಾಯಾಮಗಳನ್ನು ಮಾಡಿ ಸ್ನಾನ ಸಂಕಲ್ಪವನ್ನು ಮಾಡುವುದು. ಶುಭೇ ಶೋಭನೇ ಮಹೂರ್ತೇ-ಆದ್ಯಬ್ರಹ್ಮಣಃ ದ್ವಿತೀಯ ಪರಾರ್ಧೇ-ಶಾಲಿವಾಹನಶಕೆ, ಬೌದ್ಧಾವತಾರೆ – ಶ್ರೀರಾಮಕ್ಷೆತ್ರೇ- ಅಸ್ಮಿನ್ ವರ್ತಮಾನೆ- ಸಂವತ್ಸರೇ -ಆಯಣೇ -ಋತೌ-ಮಾಸೇ-ಪಕ್ಷೇ -ತಿಥೌ-ವಾಸರೇ-ನಕ್ಷತ್ರೇ-ಯೋಗೆ-ಕರಣೆ-ಏವಂ ಗುಣವಿಶಿಷ್ಟಾಯಾಂ-ಶುಭ ತಿಥೌ-ಸಾರ್ಧತ್ರಿಕೋಟಿ ಸಮಸ್ತ ತೀರ್ಥಾಭಿಮಾನಿ ದೇವತಾ ಸನ್ನಿಧೌ, ಸಾಲಿಗ್ರಾಮ, ಚಕ್ರಾಂಕಿತ -ಶ್ರೀವಿಷ್ಣು-ವೈಷ್ಣವ-ಗೊ-ತುಳಸಿ – ವೃಂದಾವನ ಸನ್ನಿಧೌ-ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಮಾಧವಪ್ರೀತ್ಯರ್ಥಂ ಮಾಘಸ್ನಾನಮಹo ಕರಿಷ್ಯೇ” ಎಂದು ಸಂಕಲ್ಪಿಸಿ, ನಂತರ ಮಾಧವನನ್ನು ಪ್ರಾರ್ಥಿಸಬೇಕು. ಹೀಗೆ ಸಂಕಲ್ಪಿಸಿ ನಂತರ ಮಾಧವನನ್ನು ಪ್ರಾರ್ಥಿಸಿ ಮೌನಿಯಾಗಿ ಸ್ನಾನವನ್ನು ಮಾಡಬೇಕು

ಮಾಘಸ್ನಾನಮಿದಂ ಪೂರ್ಣಂ ನ್ನಾಸ್ಯೇಹಂ ದೇವ ಮಾಧವ ತೀರ್ಥಸ್ಯಾಸ್ಯ ಜಲೆನಿತ್ಯಮಿತಿ ಸಂಕಲ್ಪ್ಯ ಚೇತಸಿ ಎಂದು ಯಾವುದಾದರೂ ತೀರ್ಥದಲ್ಲಿ ಒಂದು ತಿಂಗಳವರೆಗೂ ಸ್ನಾನಮಾಡುವುದಾಗಿ ಸಂಕಲ್ಪಮಾಡಬೇಕು. ಸ್ನಾನಮಂತ್ರ : ಮಾಘಮಾಸೇ ರಟಂತ್ಯಾಪಃ ಕಿಂಚಿಬ್ಯುದಿತೇ ರವೌ ಬ್ರಹಘ್ನಂ ವಾ ಸುರಾಪಾಂ ವಾ ಕಂ ಪತಂತಂ ಪುನೀಮಹೇ. ದುಃಖದಾರಿದ್ರ್ಯನಾಶಾಯ ಶ್ರೀವಿಷ್ಣೋಸ್ತೋಷಣಾಯ ಚ ಪ್ರಾತಃಸ್ನಾನಂ ಕರೋಮ್ಯದ್ಯ ಮಾಘೇಪಾಪವಿನಾಶನಮ್. ಮಕರಸ್ಥೆರವೌ ಮಾಘೇ ಗೋವಿಂದಾಚ್ಯುತ ಮಾಧವ ಸ್ನಾನೇನಾನೇನ ಮೇ ದೇವ ಯಥೋಕ್ತ ಫಲದೋ ಭವ.

ಕೃಷ್ಣಾಚ್ಯುತ ನಿಮಜ್ಜಾಮಿ ಪ್ರಭಾತೇಸ್ಮಿನ್ ಶುಭೋದಕೇ ಅನೇನ ಮಾಘಸ್ನಾನೇನ ಸುಪ್ರಿತೋ ಮಾಂ ಸಮುದ್ಧರ. ಮಾಘಸ್ನಾನಂ ಕರಿಷ್ಯಾಮಿ ಮಕರಸ್ಥೇ ದಿವಾಕರೇ ಅಸಮಾಪ್ತಿ ಮಹಾದೇವ ನಿರ್ವಿಘ್ನಂ ಕುರು ಮಾಧವ. ಈ ಮಂತ್ರಗಳನ್ನು ಹೇಳಿ ಸ್ನಾನಮಾಡಬೇಕು. ಸ್ನಾನಾ ನಂತರ ಮಾಧವರೂಪಿ ಪರಮಾತ್ಮನಿಗೆ ಮತ್ತು ಸೂರ್ಯನಿಗೆ ವಿಶೇಷವಾಗಿ ಅರ್ಘ್ಯವನ್ನು ಕೊಡಬೇಕು.

ಅರ್ಘ್ಯಮಂತ್ರ : ಶ್ರೀಮಾಧವಾರ್ಘ್ಯ ಮಂತ್ರ. ತಪಸ್ಯರ್ಕೋದಯೇ ನದ್ಯಾಂ ಸ್ನಾತೋಹಂ ವಿಧಿಪೂರ್ವಕಮ್ ಮಾಧವಾಯ ದದಾಮಿದಂ ಅರ್ಘ್ಯಂ ಸಮ್ಯಕ್ ಪ್ರಸಿದತು. ಮಾಧವಾಯನಮಃ ಇದಂ ಅರ್ಘ್ಯಂ ಸಮರ್ಪಯಾಮಿ. ಸೂರ್ಯಾರ್ಘ್ಯ ಮಂತ್ರ : ಸವಿತ್ರೆ ಪ್ರಸವಿತ್ರೇ ಚ ಪರಂ ಧಾಮ್ನೇ ನಮೋಸ್ತುತೆ ತ್ವತ್ತೇಜಸಾ ಪರಿಭೃಷ್ಟಂ ಪಾಪಂ ಯಾತು ಸಹಸ್ರಧಾ. ಸವಿತ್ರೇನಮಃ ಇದಮರ್ಘ್ಯಂ ಸಮರ್ಪಯಾಮಿ ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ ಪರಿಪೂರ್ಣಂ ಕುರುಷ್ವೇದಂ ಮಾಘಸ್ನಾನಂ ಮಯಾಕೃತಮ್ ಎಂದು ಅರ್ಘ್ಯವನ್ನು ಕೊಟ್ಟು ಸೂರ್ಯನನ್ನು ಪ್ರಾರ್ಥಿಸಬೇಕು.

ಭಾಗ- 5 : ಮಾಘಮಾಸದ ಕರ್ತವ್ಯಗಳು ಮತ್ತು ಮಾಘಮಾಸದಲ್ಲಿ ಕೊಡಬೇಕಾದ ದಾನಗಳು – ತ್ರಿಕಾಲಂ ಚಾರ್ಚಯೇದ್ವಿಷ್ಣುಂ ವಾಸುದೇವಂ ಸನಾತನಂ. ದಾತವ್ಯೋ ದೀಪಕೋಖಂಡೋ ದೇವ ಮುದ್ಧಿಶ್ಯ ಮಾಧವಂ ಇಂಧನಂ ಕಂಬಲಂ ವಸ್ತ್ರಮುಫಾತ್ಕುಂಕುಮಂ ಘೃತಮ್. ತೈಲಂ ಕಾರ್ಪಸಕೋಷ್ಠಂ ಚ ಉಷ್ಣೀಂ ತೂಲವತೀಂ ಪಟೀಮ್ ಅನ್ನo ಚೈವ ಯಥಾಶಕ್ತಿ ದೇಯ ಮಾಘೇ ನರಾದಿಪ.

ಮಾಘಮಾಸದಲ್ಲಿ ತ್ರಿಕಾಲಗಳಲ್ಲೂ ವಾಸುದೇವನನ್ನು ಪೂಜಿಸುವುದು, ತೀಲಾಜ್ಯ (ಎಳ್ಳು ಮತ್ತು ತುಪ್ಪ )ದಿoದ ಹೋಮಿಸುವುದು, ನೆಲದ ಮೇಲೆ ಮಲಗುವುದು, ಶ್ರೀಹರಿ ಮಾಧವನನ್ನು ಉದ್ದೇಶಿಸಿ ಅಖಂಡ ದೀಪಗಳನ್ನು : ದಾನವನ್ನು ಕೊಡಬೇಕು. ಕಂಬಳಿ, ಧಾವಳಿ, ಶಾಲು, ವಸ್ತ್ರ, ದಾನ, ಪಾದರಕ್ಷೆ, ತುಪ್ಪ ಕುಂಕುಮ, ಎಣ್ಣೆ, ಹತ್ತಿ, ಬಟ್ಟೆ ಯಥಾಶಕ್ತಿ ಅನ್ನದಾನ, ಸುವರ್ಣದಾನ ಮಾಡುವುದು ವಿಹಿತವಾಗಿದೆ.

ಶಾಲಿಗ್ರಾಮದಾನ, ಶಾಲು ದಪ್ಪ ನೂಲಿನವಸ್ತ್ರ, ಮತ್ತು ಬೆಚ್ಚಗಿನ ಅಗ್ನಿತಾಪನ, ಸಾಧನಗಳನ್ನು ದಾನ ಮಾಡಬೇಕು ಎಂದು ಮಾಘಮಾಸ ಮಹಾತ್ಮೆಯಲ್ಲಿ ತಿಳಿಸಿದ್ದಾರೆ. ಮಾಘಮಾಸದಲ್ಲಿ ಪ್ರತಿದಿವಸ ದಂಪತಿಗಳಿಗೆ ಭೋಜನ ಮಾಡಿಸಿ ವಸ್ತ್ರ ದಾನ ಮಾಡಬೇಕು. ಮಾಘೇ ಮಾಸ್ಯುಷಸಿ ಸ್ನಾನಂ ಕೃತ್ವಾ ದಂಪತ್ಯಮರ್ಚಯೇತ್ ಭೋಜಯಿತ್ವಾ ಯಥಾಶಕ್ತಿ ಮಾಲ್ಯವಸ್ತ್ರವಿಭೂಷಣೈಃ.

ಮಾಘಮಾಸದಲ್ಲಿ ತಿಲ(ಎಳ್ಳು) ಪಾತ್ರದಾನದ ಮಹತ್ವ : ಮಾಘಮಾಸದಲ್ಲಿ ತಿಲ(ಎಳ್ಳು )ದಾನವು ಅತ್ಯoತ ಶ್ರೇಷ್ಠವಾಗಿದ್ದು ಎಳ್ಳಿನ (ತಿಲ)ದಾನವು ಮಾಧವನಿಗೆ ಪ್ರೀತಿಯನ್ನುoಟು ಮಾಡುತ್ತದೆ ಎಳ್ಳನ್ನು ತಾಮ್ರ, ಕಂಚು ಮುಂತಾದ ಲೋಹದ ಪಾತ್ರೆಗಳಲ್ಲಿ ಹಾಕಿ ವಿಪ್ರನಿಗೆ ದಾನ ಮಾಡಿದರೆ ಮಾತು-ಮನಸ್ಸು -ದೇಹ ಇವುಗಳಿಂದ ಮಾಡಿದ ಪಾಪಗಳು ನಾಶವಾಗುತ್ತದೆ.

“ತಾಮ್ರ ಪಾತ್ರೆ ತಿಲಾನ್ ಕೃತ್ವಾ ಸಹಿರಣ್ಯಂ ಸ್ವಶಕ್ತಿತಃ” “ನಾಶಯೇತ್ ತ್ರಿವಿದಂ ಪಾಪಂ ವಾಙ್ಮನಃಕಾಯ ಸಂಭವಮ್”. ಪ್ರಾತಃಕಾಲದಲ್ಲಿ ತಿಲ ದಾನವನ್ನು ಮಾಡಿದರೆ ದುಃಸ್ವಪ್ನಗಳು ಫಲವನ್ನು ನೀಡಲಾರವು.

ತಿಲದಾನಮಂತ್ರ : ದೇವ ದೇವ ಜಗನ್ನಾಥ ವಾoಚಿತಾರ್ಥ ಫಲಪ್ರದ, ತಿಲ ಪಾತ್ರಂ ಪ್ರಾದಸ್ಯಾಮಿ ತವಾಂಗೇ ಸಂಸಸ್ಥಿತೋ ಹ್ಯಹಮ್. ಇದಂ ತಿಲಪಾತ್ರಂ ಯಮ ದೈವತ್ಯಂ, ಬ್ರಹ್ಮಲೋಕಪ್ರಾಪ್ತಿಕಾಮಃ ಸಂಪ್ರದದೆ ದತ್ತಂ ನ ಮಮ, ಆನೇನ ತಿಲ ಪಾತ್ರದಾನೇನ ಮಾಧವಃ ಪ್ರೀಣಾತು. ಈ ಮಂತ್ರದಿಂದ ಬ್ರಾಹ್ಮಣನಿಗೆ ತಿಲ ಪಾತ್ರೆಯನ್ನು ದಾನ ಕೊಡುವುದು.

ಮಾಘಮಾಸದಲ್ಲಿ ಎಳ್ಳಿನಿಂದ ಸ್ನಾನ, ಎಳ್ಳು ದಾನ, ಎಳ್ಳೆಣ್ಣೆ ದೀಪದಾನ, ತಿಲದಿಂದ ಹೋಮಾದಿಗಳು ವಿಶೇಷವಾಗಿದ್ದು ಪಾಪ ಪರಿಹಾರಕವಾಗಿವೆ.

ತಿಲ ಶರ್ಕರದಾನದ ಮಹತ್ವ : ಮಾಘಮಾಸದಲ್ಲಿ ಪೂರ್ತಿ ಮೂರುಭಾಗ ಎಳ್ಳು, ಒಂದು ಭಾಗ ಸಕ್ಕರೆಯನ್ನು ಮಿಶ್ರ ಮಾಡಿ ದೊಡ್ಡ ಮೊತ್ತದ ದಕ್ಷಿಣೆಯೊoದಿಗೆ ಬ್ರಾಹ್ಮಣರಿಗೆ ದಾನ ಮಾಡಬೇಕು ಇದರರ್ಥ ಎಳ್ಳು ಮತ್ತು ಸಕ್ಕರೆಯಿoದ ತಯಾರಿಸಿದ ಎಳ್ಳುಂಡೆಗಳನ್ನು ಮಾಡಿ ಭಗವಂತನಿಗೆ ನೀವೇದಿಸಿ ದಾನ ಮಾಡಿದರೆ ಮಾಸ- ನಿಯಾಮಕನಾದ ಮಾಧವ ರೂಪಿ ಪರಮಾತ್ಮನು ಪ್ರೀತನಾಗುವನು. ಪ್ರತಿದಿವಸದಲ್ಲಿ ದಾನವು ಅಶಕ್ಯವಾದಾಗ ‘ರಥಸಪ್ತಮಿ’ ಪೌರ್ಣಿಮೆ ಮುಂತಾದ ದಿವಸಗಳಲ್ಲಾದರು ದಾನವನ್ನು ಮಾಡಬೇಕು. ಶ್ರೀಕೃಷ್ಣಾರ್ಪಣಮಸ್ತು ಶ್ರೀ ದಶಪ್ರಮತಿ ವ್ರತಾನುಷ್ಠಾನ ಚಿಂತನ.

LEAVE A REPLY

Please enter your comment!
Please enter your name here