ಸರಿಗಮಪದ ವೈ’ರಲ್ ಸಿಂಗರ್ ಸುಪ್ರೀತ್ ಕೊಟ್ರು ಹೊಸ ಸಾಂಗ್. ವಾಹ್ ಎನ್ನುತ್ತಿದ್ದಾರೆ ಕೇಳಿದ ಜನ.

0
2746

ಸರಿಗಮಪ ವೇದಿಕೆಯಲ್ಲಿ ಸಂಚಲನ ಮೂಡಿಸಿದ್ದ ಖ್ಯಾತ ಗಾಯಕ ಸುಪ್ರೀತ್ ಶರ್ಮಾರವರು ಹೊಸ ತಂಡದೊಂದಿಗೆ ಸೇರಿಕೊಂಡು ಕಾಣದಾ ದೇವರೆ ಎಂಬ ಒಂದು ಸುಂದರ ರಚನೆಯನ್ನು ಹಾಡಿದ್ದಾರೆ. ಈ ಹಾಡು ಎಲ್ಲೆಡೆ ವೈ’ರಲ್ ಆಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಕೆಲವೇ ಗಂಟೆಗಳಲ್ಲಿ 5000 ವೀಕ್ಷಣೆಗಳ ಗಡಿ ದಾಟುತ್ತಿದೆ. ಈ ಸಂದರ್ಭದಲ್ಲಿ ಸುಪ್ರೀತ್ ಅವರು ನಮ್ಮ ಮಾಹಿತಿಗುರು ಅಂಕಣಕ್ಕೆ ಸಂದರ್ಶನ ನೀಡಿದ್ದಾರೆ.

ಸುಪ್ರೀತ್ ಅವರು ಹುಟ್ಟಿದ್ದು ಬೆಳೆದಿದ್ದು ಎಲ್ಲಿ. ನಾನು ಹುಟ್ಟಿದ್ದು ಬೆಳೆದಿದ್ದೆಲ್ಲ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ. ನನ್ನ ತಂದೆ-ತಾಯಿ ಸದಾ ನನ್ನ ಬೆನ್ನೆಲುಬಾಗಿ ನಿಲ್ಲುತ್ತಾರೆ. ನನ್ನ ಬಾಲ್ಯವನ್ನು ಕೂಡ ನಾನು ಮುಳಬಾಗಿಲಿನಲ್ಲಿ ಕಳೆದಿದ್ದೇನೆ.

ಸುಪ್ರೀತ್ ಅವರ ವಿದ್ಯಾಭ್ಯಾಸ. ನಾನು ಬಿಕಾಂ ಇನ್ ಫೈನಾನ್ಸ್ ಹಾಗೂ ಎಂಬಿಏ ಎಚ್ ಅರ್ ಅಂಡ್ ಫೈನಾನ್ಸ್ ವಿದ್ಯಾಭ್ಯಾಸ ಮಾಡಿದ್ದೇನೆ. ನಾನು ಓದಿದ್ದು ಇಂಡಿಯನ್ ಅಕಾಡೆಮಿ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಹೆಣ್ಣೂರು ರೋಡ್ ಬೆಂಗಳೂರಿನಲ್ಲಿ.

ಸುಪ್ರೀತ್ ಅವರು ಸದಾ ನೆನೆಸಿಕೊಳ್ಳುವ ವ್ಯಕ್ತಿಗಳು. ನನ್ನ ಪ್ರತಿಯೊಂದು ಹಾದಿಯಲ್ಲಿಯು ನನಗೆ ನನ್ನ ತಂದೆ ತಾಯಿ ದೊಡ್ಡಮ್ಮ ಅಕ್ಕ ಹಾಗೂ ನನ್ನ ಮಿತ್ರರು ನನ್ನ ಬೆನ್ನೆಲುಬಾಗಿ ನಿಲ್ಲುತ್ತಾರೆ. ಯಾವುದೇ ಉತ್ತಮ ಕೆಲಸಗಳನ್ನು ಮಾಡಲು ಹೊರಟರೂ ಸಹ ಇವರ ಬೆಂಬಲ ಸದಾ ನನಗೆ ಇರುತ್ತದೆ.

ನಿಮ್ಮ ಜೀವನದ ಬದಲಾದ ಒಂದು ಘಟನೆ. ಹೀಗೆ ನಾನು ಹಾಡನ್ನು ಅಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ನನಗೆ ಈಟಿವಿಯಲ್ಲಿ ಎದೆತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಸ್ಪರ್ಧಿಸುವ ಅವಕಾಶ ಸಿಕ್ಕಿತ್ತು, ಹಾಗೆಯೇ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ನಾನು ವಿಜೇತನಾದ ನಂತರ ನನಗೆ ಬಹಳಷ್ಟು ಅವಕಾಶಗಳು ಬರಲು ಶುರುವಾದವು. ಈ ಸಂದರ್ಭದಲ್ಲಿ ಸಂಗೀತದ ದೇವರಾದ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ನೆನೆಸಿಕೊಳ್ಳುತ್ತೇನೆ.

ಸರಿಗಮಪ ವೇದಿಕೆಯಿಂದ ನೀವು ಕಲಿತದ್ದೇನು. ಸರಿಗಮಪ ವೇದಿಕೆ ನನಗೆ ಬಹಳಷ್ಟು ಉತ್ತಮ ವಿಚಾರಗಳನ್ನು ಹಾಗೂ ಒಳ್ಳೆಯ ಅನುಭವವನ್ನು ಕೊಟ್ಟಿದೆ. ನಾನು ಇಂದು ಒಬ್ಬ ಒಳ್ಳೆಯ ಸಂಗೀತ ಸಂಯೋಜಕ, ಸಂಗೀತ ರಚನೆಕಾರ ಹಾಗೂ ಹಿನ್ನೆಲೆಗಾಯಕನಾಗುವ ಪ್ರಯತ್ನದಲ್ಲಿ ಇದ್ದೀನಿ ಎಂದರೆ ಅದಕ್ಕೆ ಸರಿಗಮಪ ವೇದಿಕೆ ಕಾರಣ. ಸರಿಗಮಪ ನನಗೊಂದು ಕುಟುಂಬವನ್ನು ಕೂಡ ನೀಡಿದೆ.

ಸರಿಗಮಪ ವೇದಿಕೆಯಲ್ಲಿ ನಿಮ್ಮ ಎಕ್ಸ್ಪಿರಿಯನ್ಸ್. ಈ ವೇದಿಕೆಗೆ ಬಂದಾಗ ನಾನು ಬಹಳಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ನಾನು ಏನಾದರೂ ಸಾಧಿಸಬಲ್ಲೆ ಸಂಗೀತ ಕ್ಷೇತ್ರದಲ್ಲಿ ಅನ್ನುವಂತಹ ಒಂದು ಭರವಸೆ ಈ ವೇದಿಕೆ ನನಗೆ ಕೊಟ್ಟಿದೆ. ಕರ್ನಾಟಕದ ಮನೆಮನೆಗಳಲ್ಲಿನನ್ನ ಮಾತಾಡುವ ತರ ಮಾಡಿದ್ದೆ ಈ ಕಾರ್ಯಕ್ರಮ. ಇನ್ನು ಕಲಿಯುವ ವಿಚಾರ ಸಾಕಷ್ಟಿದೆ ಅಂತ ಅನ್ನಿಸಿದ್ದೆ ಅಲ್ಲಿರುವ ಪ್ರತಿಭೆಗಳನ್ನು ನೋಡಿದ ನಂತರ.

ಸುಪ್ರೀತ್ ಅವರು ಕಾಣದ ದೇವರೆ ಹಾಡನ್ನು ಮಾಡಿರುವ ಬಗ್ಗೆ. ಇದು ಒಂದು ತಂಡದ ಕೆಲಸ, ಹಾಡಿನ ಬಗ್ಗೆ ತುಂಬಾ ಕೆಲಸ ಮಾಡಿದ್ದೇವೆ ಹಾಗೂ ಇದು ಸಂಪೂರ್ಣವಾಗಿ ನನ್ನ ತಂಡದ ಶ್ರಮ. ವಿಡಿಯೋ ಚಿತ್ರೀಕರಣವನ್ನು ನಿರ್ದೇಶಕ ಪವನ್ ಕುಮಾರ್ ಮತ್ತು ಜಿತೇಂದ್ರ ನಾಯಕ, ಆಕ್ಟರ್ ಹಾಗೂ ಎಡಿಟರ್ ತುಂಬಾ ಕೆಲಸ ಮಾಡಿದ್ದಾರೆ. ವಿಭಿನ್ನತೆ ಮತ್ತು ವಿಶಿಷ್ಟ ಕಾನ್ಸೆಪ್ಟ್ ಅನ್ನು ಕಟ್ಟುವ ಪ್ರಯತ್ನ ಮಾಡಿದ್ದೇವೆ. ನಮ್ಮ ನಿರ್ಬಂಧತೆ ಗಳನ್ನು ಮೀರಿ ನಾವು ಪ್ರಯತ್ನ ಮಾಡಿದ್ದೇವೆ. ನಿರ್ಮಾಪಕರಾದ ಪ್ರಶಾಂತ್ ತಾಳ್ಳ ಅವರ ಬೆಂಬಲ ನಮಗೆ ಆನೆಬಲ.

ಎಲ್ಲರಿಗೂ ಇಷ್ಟ ಆಗುತ್ತೆ ಅನ್ನೋ ಒಂದು ನಂಬಿಕೆಯ ಮೇಲೆ ಕರುನಾಡ ಜನತೆಗೆ ಮಡಿಲಿಗೆ ಈ ಗೀತೆಯನ್ನು ಅರ್ಪಿಸುತ್ತಿದ್ದೇವೆ. ನಿಮ್ಮ ಹಾರೈಕೆ ಹೀಗೆ ಇರಲಿ ಎಂದು ಹೇಳಿದ್ದಾರೆ. ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ಸುಪ್ರೀತ್ ಅವರು ಜನವರಿ 29 ರಂದು ಸಂಜೆ 5 ಗಂಟೆಗೆ ಯೂಟ್ಯೂಬ್ನಲ್ಲಿ ತಮ್ಮ ಹಾಡನ್ನು ರಿಲೀಸ್ ಮಾಡಿದ್ದಾರೆ. ಅವರಿಗೆ ಸದಾ ಯಶಸ್ಸು, ಶ್ರೇಯಸ್ಸು ಸಿಗಲಿ ಎಂಬುದೇ ಕನ್ನಡಿಗರ ಹಾರೈಕೆ.

LEAVE A REPLY

Please enter your comment!
Please enter your name here