ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಮನೆ ಮದ್ದು.

0
2431

ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿ ಮನೆ ಮದ್ದು. ಎಲ್ಲರೂ ಇದನ್ನು ತಪ್ಪದೇ ಪಾಲಿಸಿ. ಯಾವುದೇ ರೀತಿಯ ಜೀರ್ಣಶಕ್ತಿ ಸಮಸ್ಯೆಗಳು ನಿಮ್ಮ ಹತ್ತಿರ ಕೂಡ ಸುಳಿಯುವುದಿಲ್ಲ. ಹೊಟ್ಟೆಯಲ್ಲಿ ಕಡಿಮೆ ಆಮ್ಲೀಯತೆ ಉಂಟಾಗುವುದಕ್ಕೆ ಹಲವಾರು ಕಾರಣಗಳಿದ್ದು, ದೈಹಿಕ ಚಟುವಟಿಕೆಗೆ ಇದು ನಿರ್ಬಂಧವನ್ನು ಹೇರುತ್ತದೆ. ಪೋಷಕಾಂಶಗಳ ಅಭಾವ ನಿಮ್ಮನ್ನು ಕಾಡಬಹುದು. ಆಮ್ಲೀಯತೆಯ ಪ್ರಮಾಣ ಕಡಿಮೆಯಾದರೆ ಹಲವಾರು ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಉಂಟಾಗುತ್ತವೆ.

ಆಹಾರದಲ್ಲಿನ ಮೂಲ ಅಂಶಗಳನ್ನು ಗ್ರಹಿಸುವಲ್ಲಿ ಕಡಿಮೆ ಆಮ್ಲೀಯತೆ ವಿಫಲಗೊಳ್ಳುತ್ತದೆ. ಜೀರ್ಣಕ್ರಿಯೆ ನಿಧಾನಗೊಂಡು ಮಲಬದ್ಧತೆ, ವಾಯು, ಹೊಟ್ಟೆ ಊದುವಿಕೆ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇಲ್ಲಿ ನಾವು ನೀಡಿರುವ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ಆಮ್ಲೀಯತೆ ಸಮಸ್ಯೆಯನ್ನು ನಿಮಗೆ ನಿಯಂತ್ರಿಸಬಹುದಾಗಿದೆ.

ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು ಯಾವುವು ಎಂದು ನೋಡೋಣ. ನಿಮ್ಮ ಹೊಟ್ಡೆಯಲ್ಲಿ ಆಮ್ಲೀಯತೆ ಸಾಕಷ್ಟಿಲ್ಲದಿದ್ದರೆ, ಪ್ರೋಟೀನ್‌ಗಳು ಸೂಕ್ತವಾಗಿ ಕರಗುವುದಿಲ್ಲ, ಹಾಗೂ ಸಣ್ಣ ಕರುಳಲ್ಲಿ ಅವುಗಳು ತೊಂದರೆಯನ್ನುಂಟು ಮಾಡಿ ರ’ಕ್ತ ಪ್ರವಾಹದಲ್ಲಿ ಪೂರ್ಣವಾಗಿ ಹೀರಲ್ಪಡುತ್ತವೆ.

ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ಮಾಡುವ ಮಿನರಲ್ ಕೊರತೆಗೆ ಲೋ ಸ್ಟೊಮಕ್ ಆ್ಯಸಿಡ್ ಹೊಟ್ಟೆಯ ಕಡಿಮೆ ಆಮ್ಲೀಯತೆ ಕಾರಣವಾಗುತ್ತದೆ. ನಿಮ್ಮ ದೇಹದ ಆರೋಗ್ಯಕ್ಕೆ ಬೇಕಾಗಿರುವುದು ಸೂಕ್ತ ಹಾಗೂ ಪ್ರಮಾಣಬದ್ಧವಾದ ಹೊಟ್ಟೆಯ ಆಮ್ಲೀಯ ಮಟ್ಟವಾಗಿದೆ.

ಕಡಿಮೆ ಆಮ್ಲೀಯತೆಯ ಸಾಮಾನ್ಯ ರೋಗಲಕ್ಷಣಗಳೆಂದರೆ ವಿಪರೀತ ಬೆಲ್ಚಿಂಗ್ ಅಥವಾ ವಾಯು ನಿರ್ದಿಷ್ಟವಾಗಿ ಊಟದ ನಂತರ, ಮಲ ಅವ್ಯವಸ್ಥೆ, ಹೊಟ್ಟೆ ಊದುವುದು, ಎದೆಯುರಿ (ಹೆಚ್ಚು ಪ್ರಮಾಣದ ಹೊಟ್ಟೆ ಆಮ್ಲೀಯತೆಯಿಂದ ಉಂಟಾಗಬಹುದು), ಒಣ ತ್ವಚೆ, ಕಬ್ಬಿಣದ ಕೊರತೆ, ಮಲದಲ್ಲಿ ಕರಗದ ಆಹಾರಗಳು, ತೀವ್ರ ಬಳಲಿಕೆ ಇತ್ಯಾದಿ.

ಆಹಾರದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆಯಾಗುವುದು ನೈಸರ್ಗಿಕವಾಗಿ ಹೊಟ್ಟೆಯ ಆಮ್ಲೀಯತೆಯನ್ನು ಸುಧಾರಿಸುವ ಉತ್ತಮ ವಿಧಾನವಾಗಿದೆ, ಹೆಚ್ಚು ಪ್ರಕ್ರಿಯಿಸಿದ ಆಹಾರಗಳು ಅಂದರೆ ಫಾಸ್ಟ್ ಫುಡ್‌ಗಳನ್ನು ನಿರ್ಲಕ್ಷಿಸಬೇಕು ಮತ್ತು ಪೋಷಕಾಂಶವುಳ್ಳ ಆಹಾರ ಹಾಗೂ ಪಾನೀಯವನ್ನು ನಿಮ್ಮ ಆಹಾರದಲ್ಲಿ ತೆಗೆದುಕೊಳ್ಳಿ.

ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಟಾಪ್ ಟಿಪ್ಸ್. ಈ ವಿಧಾನದಲ್ಲಿ ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವುದು ಉತ್ತಮ ಅಲ್ಲವೇ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here