ಮೊಹಮ್ಮದ್ ಅನ್ಸಾರ್ ರವರು ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಬರೆದಿರುವ ವಿಚಾರಪೂರ್ಣ ಲೇಖನ.

0
1606

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಮಂಗಳೂರಿನ ಹೊರವಲಯದ ಮುಡಿಪು ಗ್ರಾಮದ ನಿವಾಸಿಗಳೂ, ವೃತ್ತಿಯಲ್ಲಿ ವಕೀಲರೂ ಆಗಿರುವ ‘ಮೊಹಮ್ಮದ್ ಅನ್ಸಾರ್’ ರವರು ಬ್ರಾಹ್ಮಣ್ಯ ಹಾಗೂ ಬ್ರಾಹ್ಮಣರ ಬಗ್ಗೆ ಬರೆದಿರುವ ವಿಚಾರಪೂರ್ಣ ಲೇಖನ. ಬ್ರಾಹ್ಮಣರು ಯಾರು. ಬ್ರಾಹ್ಮಣತ್ವ ಎಂದರೇನು. ಬ್ರಾಹ್ಮಣರೇ ಪೂಜೆಯನ್ನೇಕೆ ಮಾಡುತ್ತಾರೆ. ‘ಬ್ರಾಹ್ಮಣತ್ವ’ ಎನ್ನುವುದು ಒಂದು ಸಿದ್ಧಾಂತ.

ಪ್ರಾಚೀನ ಕಾಲದಲ್ಲಿ ಆ ಸಿದ್ಧಾಂತದ ಶ್ರೇಷ್ಠತೆಯನ್ನು ಕಂಡವರು, ಜೀವನದಲ್ಲಿ ಆ ತತ್ವಗಳನ್ನು ಅಳವಡಿಸಿಕೊಂಡು ಬಂದರು‌. ಸಹಜವಾಗಿ, ಆಡು ಮಾತಿನಲ್ಲಿ ‘ಬ್ರಾಹ್ಮಣತ್ವ’ ಕ್ಕೆ ಜಾತಿ ಎನ್ನುವುದು ಬಂದಿದೆಯಾದರೂ, ಬ್ರಾಹ್ಮಣತ್ವವೆಂಬುದು ಯಾವುದೇ ಜಾತಿಯಲ್ಲ. ಸರಕಾರದ ಕಾನೂನಿನ ಸಿದ್ಧಾಂತ ದ ಪ್ರಕಾರವೂ ಬ್ರಾಹ್ಮಣರಿಗೆ ಇಂದಿಗೂ, ‘ಜಾತಿ’ಯ ಮಾನದಂಡವೇ ಇಲ್ಲ.

ಬ್ರಾಹ್ಮಣ ಸಿದ್ಧಾಂತದ ಅನುಯಾಯಿಗಳು ಇಂದಿಗೂ ಜಾತಿಯ ಧೃಢೀಕೃತ ಪ್ರಮಾಣ ಪತ್ರ ಹೊಂದಿಲ್ಲದಿರುವುದೇ ಇದಕ್ಕೊಂದು ಸ್ಪಷ್ಟವಾದ ನಿದರ್ಶನ. ಯಾವುದೇ ರೀತಿಯಲ್ಲಿ ಜಾತಿಯನ್ನು ಬಂಡವಾಳ ಮಾಡಿಕೊಳ್ಳದೇ, ತಮ್ಮ ತನದಲ್ಲೇ ಇರುವ ಒಂದು ಪಂಕ್ತಿಯಲ್ಲಿ ಬರುವುದು, ಈ ಬ್ರಾಹ್ಮಣರು ಮಾತ್ರ. ಎಷ್ಟೋ ಜನ, ಈ ಬ್ರಾಹ್ಮಣರನ್ನು ಜರೆಯುತ್ತಾರೆ.

ಯಾಕೆಂದರೆ, ಬ್ರಾಹ್ಮಣರು ಯಾವತ್ತೂ ಈ ತರ ಕಿತ್ತಾಡುವವರನ್ನು ಗಣನೆಗೆ ತೆಗೆದುಕೊಂಡು, ರಂಪಾಟ ಮಾಡಿದವರೇ ಅಲ್ಲ. ಹಾಗಾಗಿ, ಈ ತರಹ ಮನ ಬಂದ ರೀತಿಯಲ್ಲಿ ಸಮಾಜಕ್ಕೆ ತಪ್ಪಾದ ಮಾಹಿತಿ ಕೊಡುವಲ್ಲಿ, ಸಮಾಜದ ದೃಷ್ಟಿಯಿಂದ ಕೆಲ ವಿಲಕ್ಷಣ ಜನರು ಮೇಲುಗೈ ಸಾಧಿಸಿ, ತಮ್ಮ ಬೇಳೆ ಬೇಯಿಸಿಕೊಂಡಿರಬಹುದು. ಆದರೆ, ಅವರೊಳಗಿನ ಆತ್ಮಸಾಕ್ಷಿಗೆ ಇದು ವಿರುದ್ಧವಾಗಿಯೇ ಇರುತ್ತದೆ.

ಬ್ರಾಹ್ಮಣರ ಮೂಲ ಭಾರತ ದೇಶವೇ ಮತ್ತು ಮೂಲಮಂತ್ರ ಭರತಖಂಡ. ಅಂದಿಗೂ,ಇಂದಿಗೂ, ಎಂದಿಗೂ ಸೌಹಾರ್ದತೆಯಿಂದ ತುಂಬಿದ ಜನರಿರಬೇಕು ಎನ್ನುವ ಅಖಂಡ ಭಾರತದ ಮೂಲಧ್ಯೇಯವನ್ನು ಹೊತ್ತವರು.ತಮ್ಮ ಜನಸಂಖ್ಯೆ ಕೇವಲ ೨-೩ ಶೇಖಡದಷ್ಟಿದ್ದರೂ ‘ಸರ್ವೇ ಜನಾಃ ಸುಖಿನೋ ಭವಂತು’ ಎಂದು ಇಂದಿಗೂ ಹರಸುವರು. ಎಷ್ಟೋ ವಿಚಾರಗಳಲ್ಲಿ ನಾವು ನೋಡುವುದೇನೆಂದರೆ, ಬ್ರಾಹ್ಮಣರಲ್ಲಿನ ಮಡಿತ್ವ, ಜೀವಿತಾವಧಿಯ ಸಸ್ಯಾಹಾರ ಶಾಸ್ತ್ರ, ನಿತ್ಯಾನುಷ್ಠಾನ.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

ನಿಜವಾಗಿ ನೋಡಲು ಹೋದರೆ, ಇವುಗಳೆಲ್ಲ ಅವರ ಬ್ರಾಹ್ಮಣತ್ವದ ವಿಧಿವಿಧಾನಗಳಿಗಷ್ಟೇ ಮೀಸಲಾಗಿದೆ.ಯಾರ ಮೇಲೂ ಹೇರುತ್ತಿಲ್ಲ. ಹಿಂದುತ್ವವೆನ್ನುವುದು ಸಂಕುಚಿತವಲ್ಲ. ಎಲ್ಲವನ್ನೊಳಗೊಂಡ ಸಮ್ಮಿಶ್ರತೆಯ ಬಂಧ. ಈ ತರಹದ ‘ವಿವಿಧತೆಯಲ್ಲಿ ಏಕತೆ’ ಯನ್ನು ಹೊಂದಿದ ಭಾರತ ದೇಶವು ಇಡೀ ವಿಶ್ವದಲ್ಲೇ ಭಿನ್ನ. ಈ ದೇಶದಲ್ಲಿ ಪ್ರತಿಯೊಂದು ಕಾಯಕಗಳಿಗೂ ಅದರದೇ ಆದ ಮಹತ್ವವಿದೆ.

ಬ್ರಾಹ್ಮಣತ್ವದ ಸಿದ್ಧಾಂತ ಅಳವಡಿಸಿಕೊಂಡ ಜನರು, ಆ ಸಿದ್ಧಾಂತಗಳನ್ನು ಮುಂದುವರೆಸಿಕೊಂಡು ಬಂದರು. ಗುರು ಪರಂಪರೆಯ ಮುಖೇನ ಆ ಸಿದ್ಧಾಂತ ಹೆಣೆಯಲ್ಪಟ್ಟಿತು. ಇಂದಿಗೂ ಗುರುವೊಬ್ಬರ ಬೇರು ಈ ಬ್ರಾಹ್ಮಣರ ಸಿದ್ಧಾಂತದಲ್ಲಿದೆ. ಹಿಂದೂ ಧರ್ಮದ ಮೂಲ ಸಿದ್ಧಾಂತದ ಅಡಿಯಲ್ಲಿಯೇ ಎಲ್ಲವೂ ಬರುವುದು.

ಯಾಕೆ ಬ್ರಾಹ್ಮಣರೇ ಪೂಜಾ ವಿಧಾನಗಳನ್ನು ಮಾಡಬೇಕು? ಹೇಳುತ್ತೇನೆ ಕೇಳಿ, ಯಾರೋ ಬುದ್ಧಿ ಜೀವಿಗಳೆನಿಸಿಕೊಂಡವರು ನೀಚ ಮಾತುಗಳನ್ನಾಡಿ ನಿಂದಿಸಿದಾಗಲೂ, ಈ ಪೂಜಾ ಕೈಂಕರ್ಯಗಳ ಗೊಡವೆ ತಮಗೇಕೆ ಎಂದು ತಮ್ಮ ಪೂರ್ವಜರ ಮೂಲ ತತ್ವವನ್ನು ತೊರೆಯದೇ, ಗುರುಪರಂಪರೆ, ಋಷಿಮೂಲದ ಬೇರನ್ನು ಬಿಡದೇ, ನಿಷ್ಠೆಯಿಂದ ನೀರೆರೆದು ಇನ್ನೂ ತಮ್ಮ ಪಾಡಿಗೆ ತಾವು ಕರ್ತವ್ಯ ನಿರ್ವಹಿಸುತ್ತಿರುವುದನ್ನು ಸ್ವಲ್ಪ ವಿವೇಚನೆಯಿಂದ ಯೋಚಿಸಿದರೆ, ಅವರೇ ಯಾಕೆ ಪೂಜಾ ವಿಧಾನಗಳನ್ನು ಮಾಡಲು ಯೋಗ್ಯರೆಂಬುವುದನ್ನು ನಾವು ಮನಗಾಣಬಹುದು.

ಬ್ರಾಹ್ಮಣತ್ವವನ್ನು ಒಂದು ಚೌಕಟ್ಟಿನಲ್ಲಿ ತಂದಿಟ್ಟು, ಅದಕ್ಕೊಂದು ಮಾನದಂಡ ಕೊಟ್ಟು, ಇಂದಿಗೂ ಉಳಿಸಿಕೊಂಡು ಬಂದಿರುವವರು ಬ್ರಾಹ್ಮಣರು. ಮುಂದೂ ಬ್ರಾಹ್ಮಣ ಸಿದ್ಧಾಂತದ ಸಾರ ಹೀಗೇ ಮುಂದುವರೆಯುತ್ತದೆ. ಬ್ರಾಹ್ಮಣ ಸಿದ್ಧಾಂತವನ್ನು ತನ್ನ ಜೀವಿತಾವಧಿಯಲ್ಲಿ ಪರಿಪಾಲಿಸಿಕೊಂಡು ಹೋಗುವ ಯೋಗ್ಯತೆ, ಅದರ ಮೇಲಿನ ಪೂಜ್ಯತೆ ಇದ್ದರೆ, ಶ್ರದ್ಧೆಯಿಂದ, ಯಾರಾದರೂ ಪೂಜಾ ಕೈಂಕರ್ಯಗಳನ್ನು ಮಾಡಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here