ಕಾಶಿಯಲ್ಲಿನ ಕೆಲವು ವಿಚಿತ್ರಗಳು. ವಿಶೇಷಗಳು.

0
2950

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಕಾಶಿಯಲ್ಲಿನ ಕೆಲವು ವಿಚಿತ್ರಗಳು. ವಿಶೇಷಗಳು. 1. ಕಾಶಿಯಲ್ಲಿ ಹದ್ದುಗಳು ಹಾರುವುದಿಲ್ಲ, ಹಸುಗಳು ಗುಮ್ಮುವುದಿಲ್ಲ, ಹಲ್ಲಿಗಳು ಶಬ್ದ ಮಾಡುವುದಿಲ್ಲ, ಶವಗಳಿಂದ ಕೆಟ್ಟ ವಾಸನೆ ಬರುವುದಿಲ್ಲ, ಕಾಶಿಯಲ್ಲಿ ಮರಣ ಹೊಂದಿದ ಪ್ರತಿ ಜೀವಿಯ ಬಲ ಕಿವಿ ಮೇಲಕ್ಕೆ ಎದ್ದಿರುತ್ತದೆ. 2. ಕಾಶಿಯಲ್ಲಿ ಮಂದಿರದ ಸುತ್ತಲೂ ಅನೇಕ ಚಿಕ್ಕ ಪುಟ್ಟ ಸಂದುಗಳು ಇದ್ದು ಅಂತಹ ಸಂದುಗಳು ಅನೇಕ ವಲಯಾಕಾರವಾಗಿ ಸುತ್ತಿದ ಹಾಗೆ ಇದ್ದು ಒಂದು ಪದ್ಮ ವ್ಯೂಹದ ಹಾಗೆ ಹೊಸಬರಿಗೆ ಸುಳಿವು ಸಿಗದ ಹಾಗೆ ಇರುತ್ತದೆ.

3. ಇದಃ ಪೂರ್ವ ಇಲ್ಲಿ ಅನೇಕ ಸುಂದರವಾದ ವನಗಳು, ಹೂವಿನ ಗಿಡಗಳ ಮಧ್ಯ ಇದ್ದ ಮಂದಿರವನ್ನು ವಿದೇಶೀ ದಂಡ ಯಾತ್ರಿಕರ ದಾಳಿಗಳಿಂದ ಕಾಪಾಡುವುದಕ್ಕಾಗಿ ಪ್ರಜೆ ಗಳೆಲ್ಲಾ ಗುಡಿಯ ಸುತ್ತಲೂ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿ ಶತ್ರು ಸೈನಿಕರಿಗೆ ದಾರಿ ಇಲ್ಲದ ಹಾಗೆ ಮಾಡಿದ್ದಾರೆ. 4. ಅನೇಕ ದೇಶಗಳಿಂದ ದೊಡ್ಡ ದೊಡ್ಡ ಶಾಸ್ತ್ರವೇತ್ತರು ಬಂದು ಕಾಶಿಯಲ್ಲಿ ಅನೇಕ ರೀಸರ್ಚ್ಗಳನ್ನು ಮಾಡಿ ಆಶ್ಚರ್ಯ ಪಟ್ಟರು.

5. ಅಸಲು ಈ ಕಾಸ್ಮೋರ್ಸ್ ಎಲ್ಲಿಂದ ಬರುತ್ತಿದೆ. 6. ಆಗಿನ ಪೂರ್ವಿಕರು ಶಕ್ತಿ ಚಲನೆ ಇದ್ದ ಕಡೆಗಳಲ್ಲೆಲ್ಲಾ ಮಂದಿರಗಳನ್ನು ನಿರ್ಮಿಸಿದ್ದಾರೆ. 7. ಅಷ್ಟು ಪರಿಜ್ಞಾನ ಆ ಕಾಲದವರಿಗೆ ಎಲ್ಲಿಂದ ಬಂತು ಅಂತ ಆಶ್ಚರ್ಯಕ್ಕೆ ಗುರಿಯಾದರು. 8. ಕಾಶಿ ವಿಶ್ವೇಶ್ವರನಿಗೆ ಶವಭಸ್ಮ ಲೇಪನದಿಂದ ಪೂಜೆ ಪ್ರಾರಂಭಿಸುತ್ತಾರೆ.

9. ಕಾಶಿಯಲ್ಲಿನ ಪರಾನ್ನ ಭುಕ್ತೇಶ್ವರನ ದರ್ಶಿಸಿದರೆ ಜೀವಿಗೆ ಪರರ ಅನ್ನ ತಿಂದ ಋಣದಿಂದ ಮುಕ್ತಿ ಲಭಿಸುತ್ತದೆ. 10. ಕಾಶಿ ಕ್ಷೇತ್ರದಲ್ಲಿ ಪುಣ್ಯ ಮಾಡಿದರೆ ಕೋಟಿ ಸಂಖ್ಯೆಯಲ್ಲಿ ಫಲ ಇರುತ್ತದೆ; ಪಾಪ ಮಾಡಿದರೂ ಕೋಟಿ ಸಂಖ್ಯೆಯಲ್ಲಿ ಪಾಪ ಅಂಟಿಕೊಳ್ಳುತ್ತದೆ. 11. ವಿಶ್ವನಾಥನನ್ನು ಅಭಿಷೇಕಿಸಿದ ನಂತರ ಕೈಯ ರೇಖೆಗಳು ಬದಲಾಗುತ್ತದೆ.

12. ಇಲ್ಲಿನ ಶಕ್ತಿ ಪೀಠ ವಿಶಾಲಾಕ್ಷಿ ಅಮ್ಮನವರು, ಜಗತ್ತಿನ ಎಲ್ಲರಿಗೂ ಅನ್ನವಿಡುವ ಅನ್ನಪೂರ್ಣ ದೇವಿ ನಿವಾಸ ಸ್ಥಳ ಕಾಶಿ. 13. ಪ್ರಪಂಚದಲ್ಲಿ ಇರುವ ಎಲ್ಲಾ ಭಾಷೆಗಳಿಗೆ ತಾಯಿ ಆಗಿರುವ ಅತೀ ಪ್ರಾಚೀನ ಸಂಸ್ಕ್ರತ ಪೀಠ ಕಾಶಿಯಲ್ಲೇ ಇರುವುದು.

Advertisement: Sri Choudi Mahashakti Jyotish Peetha Pradhaan tantrik and divine priest Scholar Sri Sri Damodar Guruji. One stop solution for all your personal problems. Permanent solutions for all your problems. Call 900 8906 888 for solutions within two days for various long-standing issues.

ಕಾಶಿಯಲ್ಲಿ ಗಂಗೆಯ ತೀರದಲ್ಲಿ 84 ಘಾಟ್ ಗಳು ಇದೆ. ಇದರಲ್ಲಿ ದೇವತೆಗಳು, ಋಷಿಗಳು, ರಾಜರು ಗಳೊಂದಿಗೆ, ಎಷ್ಟೋ ಜನರು ತಮ್ಮ ತಪಃ ಶಕ್ತಿಯಿಂದ ನಿರ್ಮಿಸಿರುವ ಎಷ್ಟೋ ಇದೆ. ಅದರಲ್ಲಿ ಕೆಲವು: 1. ದಶಾಶ್ವಮೇಧ ಘಾಟ್ : ಬ್ರಹ್ಮ ದೇವನು 10 ಸಾರಿ ಅಶ್ವಮೇಧ ಯಾಗ ಮಾಡಿರುವುದು ಇಲ್ಲೇ. ಪ್ರತಿದಿನ ಸಾಯಂಕಾಲ ವಿಶೇಷವಾದ ಗಂಗಾ ಹಾರತಿ ನಡೆಯುತ್ತದೆ.

2. ಪ್ರಯಾಗ್ ಘಾಟ್ : ಇಲ್ಲಿ ಭೂಗರ್ಭದಲ್ಲಿ ಗಂಗೆಯೊಂದಿಗೆ ಯಮುನಾ, ಸರಸ್ವತೀ ನದಿ ಸಂಗಮವಾಗುತ್ತದೆ. 3. ಸೋಮೇಶ್ವರ ಘಾಟ್: ಚಂದ್ರನಿಂದ ನಿರ್ಮಿತವಾಗಿದೆ. 4. ಮೀರ್ ಘಾಟ್ : ಸತೀದೇವಿ ಕಣ್ಣು ಬಿದ್ದ ಸ್ಥಳ. ವಿಶಾಲಾಕ್ಷಿ ದೇವಿ ಶಕ್ತಿ ಪೀಠ. ಇಲ್ಲೇ ಯಮನು ಪ್ರತಿಷ್ಠಾಪಿಸಿದ ಲಿಂಗ ಇರುತ್ತದೆ.

5. ನೇಪಾಳಿ ಘಾಟ್ : ಪಶುಪತಿನಾಥ್ ಮಂದಿರದ ಬಂಗಾರದ ಕಲಶವನ್ನು ನೇಪಾಳದ ರಾಜ ಕಟ್ಟಿಸಿದ.

6. ಮಣಿ ಕರ್ಣಿಕಾ ಘಾಟ್ : ಇದು ಕಾಶಿಯ ಮೊಟ್ಟ ಮೊದಲನೆಯದು. ಇದನ್ನು ವಿಷ್ಣು ದೇವನು ಸ್ವಯಂ ಸುದರ್ಶನ ಚಕ್ರದಿಂದ ಅಗೆದು ನಿರ್ಮಿಸಿದ. ಇಲ್ಲಿ ಸಕಲ ದೇವತೆಗಳು ಸ್ನಾನ ಮಾಡುತ್ತಾರೆ. ಇಲ್ಲಿ ಗಂಗೆ ನಿರ್ಮಲವಾಗಿ ಹರಿಯುತ್ತಾಳೆ. ಇಲ್ಲಿ ಮಧ್ಯಾಹ್ನ ಸಮಯದಲ್ಲಿ ಯಾರಾದರೂ ಸುಚೇಲ ಸ್ನಾನ ಮಾಡಿದರೆ ಅವರಿಗೆ ಜನ್ಮ ಜನ್ಮದ ಪಾಪಗಳು ತೊಲಗಿ ಹೋಗುವುದು. ಜೀವಿಗೆ ಎಷ್ಟು ಪುಣ್ಯ ಪ್ರಾಪ್ತಿಯಾಗುವುದೋ ಚತುರ್ಮುಖ ಬ್ರಹ್ಮ ದೇವನಿಂದಲೂ ಕೂಡ ವರ್ಣಿಸಲು ಆಗುವುದಿಲ್ಲವಂತೆ.

7. ವಿಶ್ವೇಶ್ವರ್ ಘಾಟ್: ಇವಾಗ ಸಿಂಧಿಯಾ ಘಾಟ್ ಅಂತಾರೆ. ಇಲ್ಲೇ ಅಹಲ್ಯಾ ಬಾಯಿ ತಪಸ್ಸು ಮಾಡಿದ್ದು. ಇಲ್ಲೇ ಸ್ನಾನ ಮಾಡಿ ಬಿಂದು ಮಾಧವನನ್ನು ದರ್ಶಿಸುತ್ತಾರೆ. 8. ಪಂಚ ಗಂಗಾ ಘಾಟ್: ಇಲ್ಲೇ ಭೂಗರ್ಭದಿಂದ ಗಂಗೆಯೊಳಗೆ 5 ನದಿಗಳು ಸೇರುತ್ತದೆ. 9. ಗಾಯ್ ಘಾಟ್: ಗೋ ಪೂಜೆ ನಡೆಯುತ್ತದೆ.

10. ತುಳಸಿ ಘಾಟ್: ತುಳಸಿ ದಾಸ್ ಸಾಧನೆ ಮಾಡಿ ರಾಮಚರಿತ ಮಾನಸ್ ಬರೆಯುವಂತೆ ಶಿವನ ಆದೇಶ ಹೊಂದಿದನು. 11. ಹನುಮಾನ್ ಘಾಟ್:
ಇಲ್ಲಿ ನಡೆಯುವ ರಾಮ ಕಥೆ ಕೇಳಲು ಹನುಮಂತನು ಬರ್ತಾರೆ.ಇಲ್ಲೇ ಸೂರ್ಯನು ತಪಸ್ಸು ಮಾಡಿ ಅನೇಕ ಶಕ್ತಿಗಳನ್ನು ಹೊಂದಿರುವ ಲೋಲಾರ್ಕ್ ಕುಂಡ ಇರುವುದು.ಇಲ್ಲೇ ಶ್ರೀ ವಲ್ಲಭಾಚಾರ್ಯರು ಜನಿಸಿದರು.

12. ಅಸ್ಸಿ ಘಾಟ್: ಪೂರ್ವದಲ್ಲಿ ದುರ್ಗಾದೇವಿ ಶುಂಭ, ನಿಶುಂಭ ಎನ್ನುವ ರಾಕ್ಷಸರನ್ನು ಸಂಹರಿಸಿ ದಂತಹ ಖಡ್ಗವನ್ನು ಹಾಕಿದ್ದರಿಂದ ಇಲ್ಲಿ ಒಂದು ತೀರ್ಥ ಉದ್ಭವಿಸಿದೆ. 13. ಹರಿಶ್ಚಂದ್ರ ಘಾಟ್: ಸರ್ವವನ್ನು ಕಳೆದುಕೊಂಡು ಹರಿಶ್ಚಂದ್ರನು ಇಲ್ಲಿ ಶವ ದಹನ ಕೂಲಿಯಾಗಿ ಕೆಲಸ ಮಾಡಿ ದೈವ ಪರೀಕ್ಷೆಯಲ್ಲಿ ಗೆದ್ದು ತನ್ನ ರಾಜ್ಯವನ್ನು ಹೊಂದಿದನು. ಇಂದಿಗೂ ಇಲ್ಲಿ ನಿತ್ಯ ಚಿತೆ ಉರಿಯುತ್ತಲೇ ಇರುತ್ತದೆ.

14. ಮಾನಸ ಸರೋವರ ಘಾಟ್: ಇಲ್ಲಿ ಕೈಲಾಸ ಪರ್ವತದಿಂದ ಭೂಗರ್ಭ ಜಲದಾರೆ ಸೇರುತ್ತದೆ. ಇಲ್ಲಿ ಸ್ನಾನ ಮಾಡಿದರೆ ಕೈಲಾಸ ಪರ್ವತ ಸುತ್ತಿದ ಪುಣ್ಯ ಲಭಿಸುತ್ತದೆ. 15. ನಾರದ ಘಾಟ್: ನಾರದನು ಲಿಂಗ ಸ್ಥಾಪಿಸಿದ್ದಾನೆ. 16. ಚೌತಸ್ಸಿ ಘಾಟ್: ಇಲ್ಲೇ ಸ್ಕಂದ ಪುರಾಣದ ಪ್ರಕಾರ ಇಲ್ಲಿ 64 ಯೋಗಿನಿಯರು ತಪಸ್ಸು ಮಾಡಿದ್ದಾರೆ. ಇದು ದತ್ತಾತ್ರೇಯರಿಗೆ ಪ್ರೀತಿ ಪಾತ್ರ ಸ್ಥಳ. ಇಲ್ಲಿ ಸ್ನಾನ ಮಾಡಿದರೆ ಪಾಪಗಳು ತೊಲಗಿ 64 ಯೋಗಿನಿಯರ ಶಕ್ತಿಗಳು ಪ್ರಾಪ್ತಿಸುತ್ತದೆ.

17. ರಾನಾ ಮಹಲ್ ಘಾಟ್: ಇಲ್ಲೇ ಪೂರ್ವದಲ್ಲಿ ಬ್ರಹ್ಮ ದೇವನು ಸೃಷ್ಟಿ ಕಾರ್ಯದಲ್ಲಿ ಬರುವ ವಿಘ್ನಗಳನ್ನು ತೊಲಗಿಸುವಂತೆ ವಕ್ರತುಂಡ
ವಿನಾಯಕನನ್ನು ತಪಸ್ಸು ಮಾಡಿ ಪ್ರಸನ್ನ ಮಾಡಿಕೊಂಡನು. 18. ಅಹಲ್ಯಾ ಬಾಯಿ ಘಾಟ್: ಈಕೆ ಕಾರಣದಿಂದಾಗಿ ನಾವು ಈ ದಿವಸ ಕಾಶಿ ವಿಶ್ವೇಶ್ವರನ ದರ್ಶನ ಮಾಡುತ್ತಿದ್ದೇವೆ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here