ಅರ್ಥಗರ್ಭಿತ ಗಾದೆಗಳು ಹಾಗೂ ಅದರ ಹಿಂದೆ ಅಡಗಿರುವ ಸತ್ಯವನ್ನು ತಿಳಿಯಿರಿ.

0
4941

ಅರ್ಥಗರ್ಭಿತ ಗಾದೆಗಳು ಹಾಗೂ ಅದರ ಹಿಂದೆ ಅಡಗಿರುವ ಸತ್ಯವನ್ನು ತಿಳಿಯಿರಿ. 1. ಚಿಂತೆಯೇ ಮುಪ್ಪು-ಸಂತೋಷವೇ ಯೌವನ. ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.

ಚಿಂತೆಯು ಆಯುಷ್ಯವನ್ನು ತಿನ್ನುತ್ತದೆ ಎನ್ನುವ ಮಾತಿನಂತೆ, ಮಾನಸಿಕ ಚಿಂತೆ ಮನುಷ್ಯರಿಗೆ ಅಕಾಲದ ಮುಪ್ಪನ್ನು ತರುತ್ತದೆ. ಚಿಂತೆಗೂ ಚಿತೆಗೂ ವ್ಯತ್ಯಾಸ ಸೊನ್ನೆ. ಆದರೆ ಚಿಂತೆ ಬದುಕಿದವರನ್ನು ಸುಟ್ಟರೆ, ಚಿತೆ ನಿರ್ಜೀವ ವಸ್ತುವನ್ನು ಸುಡುತ್ತದೆ. ಚಿಂತೆಯು ನಮ್ಮ ಮನಸ್ಸಿನ ಸಂತೋಷವನ್ನು ಹಾಳುಮಾಡುತ್ತದೆ. ಮನುಷ್ಯನನ್ನು ನಿರುತ್ಸಾಹಿಯಾಗಿ ಮಾಡಿ, ದುಡಿಯುವ ಶಕ್ತಿ, ಚೈತನ್ಯವನ್ನು ಕುಗ್ಗಿಸುತ್ತದೆ.

ಚಿಂತಿಸುತ್ತಾ ಹೋದರೆ ಅದು ನಮ್ಮ ಆಯುಷ್ಯವನ್ನು ತಿಂದು ಅಕಾಲ ವೃದ್ದಾಪ್ಯವನ್ನುಂಟುಮಾಡಿ ಬದುಕನ್ನು ನಶ್ವರಗೊಳಿಸುತ್ತದೆ. ಆದ್ದರಿಂದ ಚಿಂತಿಸುವುದನ್ನು ಬಿಟ್ಟು ಬದುಕಿರುವಷ್ಟು ಕಾಲ ಸುಖಃ ಸಂತೋಷದಿಂದ ಜೀವನವನ್ನು ಕಳೆಯಬೇಕು. ಮನಸ್ಸಿನ ಸಂತೋಷ ವೃದ್ದನಲ್ಲೂ ಯೌವನವನ್ನು ಮೂಡಿಸುತ್ತದೆ.ಶಕ್ತಿಯನ್ನು ತುಂಬುತ್ತದೆ.

ಯಾರ ಬದುಕಿನಲ್ಲಿ ಸಂತೋಷ ಇರುವುದೋ ಅವರು ಆರೋಗ್ಯದಿಂದ ಬಾಳುತ್ತಾರೆ. ಬದುಕಬೇಕು, ಸಾಧಿಸಬೇಕು, ಗೆಲ್ಲಬೇಕು ಎಂಬ ಛಲವನ್ನು ಹೊಂದಿರುತ್ತಾರೆ. ಆದ್ದರಿಂದ ನಾವು ನಗುನಗುತಾ ಸಂತೋಷದಿಂದ ಬಾಳಬೇಕು. ಚಿಂತೆಯಿಂದ ದೂರ ಇರಬೇಕು.ಸಂತೋಷವು ಯೌವನೌವಸ್ಥೆಯ ಸಾಮಥ್ರ್ಯವನ್ನು ತಂದು ಕೊಡುತ್ತದೆ.

2. ಕಟ್ಟುವುದು ಕಠಿಣ-ಕೆಡಹುವುದು ಸುಲಭ. ಗಾದೆ ವೇದಕ್ಕೆ ಸಮಾನ , ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ.ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.

ಯಾವುದೇ ಕೆಲಸವನ್ನು ಸರಿಯಾಗಿ ಮಾಡಬೇಕಾದರೆ ಕಷ್ಟಪಡಬೇಕು. ಆದರೆ ಹಾಳು ಮಾಡಲು ಕಷ್ಟ ಪಡಬೇಕಾಗಿಯೂ ಇಲ್ಲ. “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಎಂಬ ಗಾದೆಯು ಇದೆ ಅರ್ಥವನ್ನು ಹೋಲುತ್ತದೆ. ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಮಣ್ಣು ತಂದು ಅರಳನ್ನು ಬೇರ್ಪಡಿಸಿ ಮಣ್ಣನ್ನು ಹದಮಾಡಿ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ. ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪಟ್ಟು ಸಾಕು.

ಯಾವುದೇ ಒಂದು ಉತ್ತಮ ಕೆಲಸ ಮಾಡುವುದು ತುಂಬಾಕಠಿಣ. ಆದರೆ ಅದೇ ಕೆಲಸವನ್ನು ಹಾಳು ಮಾಡುವುದು ಸುಲಭ ಪ್ರಾಚೀನ ಭಾರತೀಯರು ಕಠಿಣ ಶ್ರಮವಹಿಸಿ ಭಾರತದ ಪ್ರಾಚೀನ ವಾಸ್ತುಶಿಲ್ಪಗಳನ್ನು ನಿರ್ಮಿಸಿದರು. ಆದರೆ ವಿದೇಶಿಯರು ಒಂದು ಕ್ಷಣಮಾತ್ರದಲ್ಲಿ ವಾಸ್ತುಶಿಲ್ಪಗಳನ್ನು ಕೆಡವಿ ಹಾಕಿದರು. ಹಾಗಯೇ ಮನುಷ್ಯ ತನ್ನ ಉತ್ತಮವಾದ ಜೀವನದ ಭವಿಷ್ಯವನ್ನು ನಿರ್ಮಿಸಲು ಜೀವನವೆಲ್ಲ ಕಷ್ಟಪಡಬೇಕು.

ಆದರೆ ವ್ಯಕ್ತಿತ್ವ ಹಾಳು ಮಾಡಿಕೊಳ್ಳುವುದಕ್ಕೆ ಒಂದರಗಳಿಗೆ ಸಾಕು. ಒಂದು ಕೊಡ ಹಾಲು ಕೆಡಲು ತೊಟ್ಟು ಹುಳಿ ಸಾಕಲ್ಲವೇ. ಆದ್ದರಿಂದ ಮಾನವ ತನ್ನ ತೆಯನ್ನರಿತು ಕಾರ್ಯನಿರ್ವಹಿಸಬೇಕು ಎಂಬುದನ್ನು ಪ್ರಸ್ತುತ ಗಾದೆಯು ತಿಳಿಸುತ್ತದೆ.

3. ಅತಿ ಆಸೆ ಗತಿ ಕೆಡಿಸಿತು. ಗಾದೆ ವೇದಕ್ಕೆ ಸಮಾನ , ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ. ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.

ಮನುಷ್ಯನಿಗೆ ಆಸೆ ಇರಬೇಕು. ಆಸೆ ಮನುಷ್ಯನ ಸಹಜ ಪ್ರವೃತ್ತಿ. ಆಸೆ ಇಲ್ಲದವ ಬದುಕಲಾರ. ಅಸೆಯೇ ಉತ್ಸಾಹದ ಜನನಿ. ಅದು ಜೀವನದ ಸಂಚಾಲಕಶಕ್ತಿ. ಆಸೆಯ ಆಸರೆ ಇಲ್ಲದಿದ್ದರೆ ಮನುಷ್ಯ ಕಾಡುಪ್ರಾಣಿಯಂತೆ ಜೀವಿಸುತ್ತಿದ್ದ. ಆದರೆ ಆಸೆಯು ಹಿತಮಿತವಾಗಿರಬೇಕು. ಅತಿಯಾದ ಆಸೆ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದಾನೆ. ಅತಿಯಾದರೆ ಅಮೃತವೂ ಕೂಡ ವಿಷವಾಗುತ್ತದೆ.

ಅತಿಯಾಸೆಯಿಂದ ಮನುಷ್ಯ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಪ್ರತಿದಿನ ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ಪಡೆದ ರೈತನೊಬ್ಬನು ಒಂದೇ ಬಾರಿಗೆ ಶ್ರೀಮಂತನಾಗಬೇಕೆಂಬ ಅತಿ ಆಸೆಯಿಂದ ಕೋಳಿಯ ಹೊಟ್ಟಯನ್ನು ಸೀಳಿ ಒಂದೂ ಸಿಗದೆ ನಿರಾಶೆಯಾದನು.

ಮುಟ್ಟಿದೆಲ್ಲಾ ಚಿನ್ನವಾಗಬೇಕೆಂದು ವರವನ್ನು ಪಡೆದ ಮೈದಾಸ ತನ್ನ ಮಗಳನ್ನು ಚಿನ್ನದ ಗೊಂಬೆಯನ್ನಾಗಿಸಿ ದುಃಖಪಡುತ್ತಾನೆ ಆಸೆಯೆಂಬುದು ಬಹಳ ಕೆಟ್ಟದ್ದು. ಮನುಷ್ಯನು ಮುಪ್ಪನಪ್ಪಿದರೂ ಆಸೆಯು ಬಿಡದು. ಹೀಗೆ ಅತಿ ಆಸೆ ಯಾರಿಗೂ ಎಂದಿಗೂ ಒಳ್ಳೆಯದಲ್ಲ. ಆದ್ದರಿಂದ ಅತಿ ಆಸೆ ಪಡಬಾರದು ಇಲ್ಲವಾದರೆ ಅತಿಆಸೆ ಗತಿಕೆಡಿಸುತ್ತದೆ.

4. ಊಟಬಲ್ಲವನಿಗೆ ರೋಗವಿಲ್ಲ: ಮಾತು ಬಲ್ಲವನಿಗೆ ಜಗಳವಿಲ್ಲ. ಗಾದೆ ವೇದಕ್ಕೆ ಸಮಾನ , ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ.ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.

ಈ ಗಾದೆಯು ಊಟದ ಇತಿಮಿತಿಯನ್ನು ಮಾತಿನ ಮಹತ್ವವನ್ನು ತಿಳಿಸುತ್ತದೆ. ನಾವು ವೇಳೆಗೆ ಸರಿಯಾಗಿ ಹಿತ-ಮಿತವಾದ ಆಹಾರವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಅದೇ ರೀತಿ ಮಾತು ಹಿತಮಿತವಾಗಿದ್ದರೆ ಎಲ್ಲರಿಗೂ ಹಿತವಾಗುತ್ತದೆ. ಬಿಟ್ಟಿ ಊಟ ಸಿಕ್ಕಾಗ ಗೋಣಿಚೀಲ ತುಂಬಿದಂತೆ ಊಟಮಾಡಿದರೆ ಅಜೀರ್ಣ ಉಂಟಾಗಿ ಆರೋಗ್ಯ ಹದಗೆಡುತ್ತದೆ. ಅದೇರೀತಿ ಮಾತು ಪುಕ್ಕಟೆಯೆಂದು ತಿಳಿದಂತೆ ನುಡಿದರೆ ಜಗಳಕ್ಕೆ ಕಾರಣವಾಗಬಹುದು.

ಅಂತೆಯೇ ಮಾತೇ ಮಾಣಿಕ್ಯ ಮಾತೇ ಮೃತ್ಯು ಎಂಬ ಗಾದೆಯು ಪ್ರಚಲಿತದಲ್ಲಿರಬೇಕು. ಬಸವಣ್ಣನವರು ಹೇಳಿದಂತೆ ಮಾತು ನುಡಿದರೆ ಮುತ್ತಿನಹಾರದಂತಿರಬೇಕು. ಅದಕ್ಕಾಗಿ ಡಿ.ವಿ.ಜಿಯವರು ಹಿತವಿರಲಿ ವಚನದಲಿ ಎಂದು ಕಗ್ಗದಲ್ಲಿ ಹೇಳಿದ್ದಾರೆ.

ಒಟ್ಟಿನಲ್ಲಿ ಮಾತುಬಲ್ಲವ ಮಾಣಿಕ್ಯ ತಂದ ಮಾತರಿಯದವ ಜಗಳ ತಂದ ಎಂಬ ಗಾದೆ ಮಾತಿನಂತೆ ಊಟಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯು ವ್ಯಕ್ತಿ ಮಿತಹಾರಿ ಯಾಗಿರಬೇಕೆಂಬುದನ್ನು. ಮತ್ತು ಅವನ ಮಾತು ಮಿತ ಹಿತವಾಗಿರಬೇಕೆಮದು ಸಾದರಪಡಿಸುತ್ತದೆ.

LEAVE A REPLY

Please enter your comment!
Please enter your name here