ಒಮ್ಮೆ ಅಂಗದನು ರಾಮನ ದೂತನಾಗಿ ರಾವಣನ ರಾಜ್ಯಸಭೆಗೆ ಹೋದನು, ಆಗ ರಾವಣನು ತನ್ನ ಪ್ರಶಂಸೆಯನ್ನು ಮಾಡಿಕೊಂಡು ಅವನನ್ನು ಹೆದರಿಸಿದನು. ಆಗ ಅಂಗದನು ‘ಎಲೈ ರಾವಣನೇ, ಇಲ್ಲಿಯವರೆಗೆ ನಾನು ನಿನ್ನ ಶೌರ್ಯದ ಬಗ್ಗೆ ಕೇಳಿದೆ. ಈಗ ನಾನು ನನ್ನ ಕಾಲನ್ನು ಭೂಮಿಯ ಮೇಲೆ ಇಡುತ್ತೇನೆ, ನೀನು ಅಥವಾ ನಿನ್ನ ಸೈನಿಕರು ಅದನ್ನು ಎತ್ತಿ ತೋರಿಸಬೇಕು ಅಂದರೆ ನಾನು ನಿನ್ನ ಮಾತುಗಳನ್ನು ನಿಜವೆಂದು ನಂಬುತ್ತೇನೆ’ ಎಂದನು.
ಅಂಗದನು ‘ಜೈ ಶ್ರೀರಾಮ’ ಎಂದು ತನ್ನ ಕಾಲನ್ನು ಭೂಮಿಯ ಮೇಲೆ ಇಟ್ಟನು. ಆಶ್ಚರ್ಯದ ಸಂಗತಿಯೆಂದರೆ ರಾವಣ ಅಥವಾ ಅವನ ಎಲ್ಲ ಸೈನಿಕರಿಂದ ಅಂಗದನ ಕಾಲನ್ನು ಅಲುಗಾಡಿಸಲೂ ಆಗಲಿಲ್ಲ. ಇದೇ ರಾಮಭಕ್ತಿ.
ರಾಮಾಯಣ ಶಬ್ದವು ‘ರಂ + ಅಯನ’ ಈ ಎರಡು ಶಬ್ದಗಳಿಂದ ನಿರ್ಮಾಣವಾಗಿದೆ. ರಮ್ ರಮಯತೇ ಎಂದರೆ ತಲ್ಲೀನರಾಗುವುದು, ‘ಸಾಧನೆಯಲ್ಲಿ ತಲ್ಲೀನರಾಗುವುದು’. ಅಯನ ಎಂದರೆ ಸಪ್ತಲೋಕಗಳು. ಸಾಧನೆಯಲ್ಲಿ ತಲ್ಲೀನರಾಗಿ ಆನಂದದಲ್ಲಿದ್ದು, ಸಪ್ತ ಲೋಕಗಳನ್ನು ದಾಟಿ ಮೋಕ್ಷಕ್ಕೆ ಹೋಗುವುದನ್ನು ರಾಮಾಯಣದಲ್ಲಿ ಹೇಳಲಾಗಿದೆ.
‘ಸಮಸ್ತ ಅಯನಂ ರಾಮಾಯಣಮ್’ ಅಯನ ಎಂದರೆ ಹೋಗುವುದು, ಮಾರ್ಗ ಇತ್ಯಾದಿ ಅರ್ಥವಾಗುತ್ತದೆ. ಪರಬ್ರಹ್ಮ ಪರಮಾತ್ಮಸ್ವರೂಪನಾದ ಶ್ರೀರಾಮನ ಕಡೆಗೆ ಕೊಂಡೊಯ್ಯುವ, ಅದರತ್ತ ಹೋಗಲು ಚಾಲನೆ ನೀಡುವ ಅಥವಾ ಸ್ಫೂರ್ತಿ, ಉತ್ಸಾಹ ನೀಡುವ, ಜೀವನದ ನಿಜವಾದ ಮಾರ್ಗವನ್ನು ತೋರಿಸುವುದೆಂದರೆ ‘ರಾಮಾಯಣ’ವಾಗಿದೆ.
ತ್ರೇತಾಯುಗದಲ್ಲಿ ರಾಮನ ಜನ್ಮವಾದಾಗ ಕಾರ್ಯನಿರತವಾಗಿದ್ದ ಶ್ರೀವಿಷ್ಣುವಿನ ಸಂಕಲ್ಪ, ತ್ರೇತಾಯುಗದಲ್ಲಿನ ಅಯೋಧ್ಯಾವಾಸಿಗಳ ಭಕ್ತಿ ಭಾವ ಮತ್ತು ಪೃಥ್ವಿಯಲ್ಲಿನ ಸಾತ್ತ್ವಿಕ ವಾತಾವರಣದಿಂದಾಗಿ ಪ್ರಭು ಶ್ರೀರಾಮನ ಜನ್ಮಕ್ಕೆ ಕಾರಣವಾಗಿತ್ತು.
ಚೈತ್ರ ಶುಕ್ಲ ನವಮಿ,ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು.
ಅನೇಕ ರಾಮ ಮಂದಿರಗಳಲ್ಲಿ ಚೈತ್ರ ಶುಕ್ಲ ಪ್ರತಿಪದೆಯಿಂದ ಒಂಭತ್ತು ದಿನಗಳ ಕಾಲ ಈ ಉತ್ಸವವು ನಡೆಯುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರ ಮುಂತಾದವುಗಳೊಂದಿಗೆ ಈ ಉತ್ಸವವನ್ನು ಆಚರಿಸುತ್ತಾರೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಕೀರ್ತನೆ (ಹರಿಕಥೆ) ಯಾಗುತ್ತದೆ. ಮಧ್ಯಾಹ್ನ ಕುಂಚಿಗೆ (ಮಗುವಿನ ತಲೆಗೆ ಕಟ್ಟುವ ಒಂದು ವಸ್ತ್ರ.
ಈ ವಸ್ತ್ರವು ಬೆನ್ನಿನವರೆಗೆ ಇರುತ್ತದೆ.) ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.’ (ಕೆಲವು ಕಡೆಗಳಲ್ಲಿ ತೆಂಗಿನ ಕಾಯಿಯ ಬದಲು ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಡುತ್ತಾರೆ. – ಸಂಕಲನಕಾರರು) ಈ ಸಂದರ್ಭದಲ್ಲಿ ಶ್ರೀರಾಮನ ಜನ್ಮದ ಗೀತೆಯನ್ನು ಹೇಳಲಾಗುತ್ತದೆ.
ಅದರ ನಂತರ ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಪ್ರಸಾದವೆಂದು ಶುಂಠಿಚೂರ್ಣವನ್ನು ಕೊಡುತ್ತಾರೆ. ಕೆಲವು ಕಡೆಗಳಲ್ಲಿ ಶುಂಠಿಚೂರ್ಣದೊಂದಿಗೆ ಮಹಾಪ್ರಸಾದವನ್ನೂ ನೀಡುತ್ತಾರೆ. ‘ಶ್ರೀರಾಮ ಜಯ ರಾಮ ಜಯ ಜಯ ರಾಮ.