ಭಾರತದಲ್ಲಿ ಕೊರೊನ ಅ’ಟ್ಟಹಾಸವು ತನ್ನ ಹಿಡಿತವನ್ನು ಸಾಧಿಸಿದೆ. ಹೆಚ್ಚಿನ ಜೀವ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

0
1883

ಭಾರತದಲ್ಲಿ ಕೊರೊನ ಅ’ಟ್ಟಹಾಸವು ತನ್ನ ಹಿಡಿತವನ್ನು ಸಾಧಿಸಿದೆ ಮತ್ತು ಸಾಧಿಸುತ್ತಲಿದ್ದು ಇನ್ನೂ ತನ್ನ ಮರಣ ಮ್ರಿದಂಗ ವನ್ನು ಭಾರಿಸುತ್ತಾ ಇದೆ. ಪ್ರಕೃತ ಬ್ರೆಝಿಲ್ ಪ್ರಥಮ ಸ್ಥಾನದಲ್ಲಿದ್ದು ಭಾರತವು ದ್ವಿತೀಯ ಸ್ಥಾನದಲ್ಲಿರುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಭಾರತವು ಮೊದಲನೇ ಸ್ಥಾನಕ್ಕೇರುವುದರಲ್ಲಿ ಸಂಶಯವೇ ಇಲ್ಲ.

ಸೂರತ್ ನ ಕತೆಯು ಹೃದಯ ವಿದ್ರಾವಕವಾಗಿರುತ್ತದೆ. ಅಲ್ಲಿಯ ಚಿತಾಗಾರಗಳು ದಿನದ ಇಪ್ಪತ್ತನಾಲ್ಕು ಗಂಟೆ ಕೆಲಸ ನಿರ್ವಹಿಸುತ್ತಿರುವುದಾದರೂ ಬಂದಂತಹ ಎಲ್ಲಾ ಮೃತದೇಹಗಳನ್ನು ವಿಲೇವಾರಿ ಮಾಡಲಾಗುತ್ತಿಲ್ಲ. ಅಲ್ಲಿಯ ಪ್ರತಿ ಚಿತಾ ಗಾರಗಳಲ್ಲಿ ದಿನ ಒಂದಕ್ಕೆ ನೂರಕ್ಕಿಂತಲೂ ಹೆಚ್ಚಿನ ದೇಹಗಳ ದಹನ ಮಾಡಲಾಗುತ್ತಿದೆ.

ಈ ಕಾರಣದಿಂದ ಆ ಚಿತಾಗಾರಗಳಲ್ಲಿ ದೇಹಗಳನ್ನು ಇರಿಸುವ ಕಬ್ಬಿಣದ ಚೌಕಟ್ಟು ಅಧಿಕ ಉಷ್ಣದಿಂದಾಗಿ ಕರಗಿ ಹೋಗುತ್ತಿವೆ ಎಂದರೆ ಪರಿಸ್ಥಿತಿಯ ಅರಿವು ನಮಗೆ ಆಗದೇ ಇರಲಾರದು. ಇವುಗಳ ಉಷ್ಣತೆಯು 600 ಡಿಗ್ರೀ ಗಳಿಗಿಂತಲೂ ಜಾಸ್ತಿಯಾಗಿ ಕಬ್ಬಿಣದ ಚೌಕಟ್ಟು ಮತ್ತು ತಗಡುಗಳು ಕರಗಲು ಆರಂಭವಾಗಿವೆ. ಚಿಮ್ನಿಗಳೂ ಕರಗಿ ಹೋಗುತ್ತಿವೆ.

ಇದು ಸೂರತ್ ನ ಒಂದೇ ಪಟ್ಟಣದ ಕಥೆಯಲ್ಲ. ಮುಂಬೈ ಮತ್ತು ಪೂನಾ ಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ತುಂಬಾ ಭಿನ್ನವಾಗಿಲ್ಲ. ಇದೇ ತರಹನಾದ ಸ್ಥಿತಿ ನಮ್ಮ ಪಟ್ಟಣ ಗಳಿಗೆ ಬರುವುದೂ ಸಹ ತುಂಬಾ ದೂರವಿಲ್ಲವೆಂದೆನಿಸುತ್ತಿದೆ. ಇದೊಂದು ಈ ಶತಮಾನದ ವಿಪರ್ಯಾಸವೆಂದೇ ಹೇಳಬಹುದು .

ಪ್ರಕೃತಿಯು ಮಾನವನ ಮೇಲೆ ಕೋಪಗೊಂಡಿರುವುದಂತೂ ನಿಜ. ಆದರೆ ಅದಕ್ಕೆ ಮುಖ್ಯವಾಗಿ ನಮ್ಮ ನಿಷ್ಕಳಾಜಿಯೇ ಮುಖ್ಯ ಕಾರಣ. ಹೆಚ್ಚಿನವರಿಗೆ ಇದರ ಅಪಾಯವು ಗೊತ್ತಿಲ್ಲದವರಂತೆ ವರ್ತಿಸುತ್ತಿದ್ದಾರೆ. ಸರಕಾರದ ಕಾನೂನನ್ನೂ ಉಲ್ಲಂಘಸಿ ಮದುವೆ ಇತ್ಯಾದಿ ಸಮಾರಂಭಗಳು ಅವ್ಯಾಹತವಾಗಿ ನಡೆಯುತ್ತಿವೆ.

ಅಲ್ಲದೆ ಈ ಕಾನೂನುಗಳು ತಮಗಲ್ಲ, ಬೇರೆ ಪ್ರಜೆಗಳಿಗೆ ಮಾತ್ರ ಎಂಬಂತೆ ರಾಜಕಾರಣಿಗಳು ಚುನಾವಣಾ ರಾಲಿಗಳಲ್ಲಿ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ರೋಗವನ್ನು ಹರಡಲು ಮುಖ್ಯ ಕಾರಣ ಕರ್ತರಾಗಿದ್ದಾರೆ. ಈಗ ಕಾಲ ಮಿಂಚಿ ಹೋದಂತಿದೆ. ಆದರೂ ಇನ್ನೂ ಹೆಚ್ಚಿನ ಜೀವ ಹಾನಿ ಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ.

ಅದಕ್ಕಾಗಿ ನಾವೇನು ಮಾಡಬಹುದೆಂದು ನಮಗೆಲ್ಲರಿಗೂ ಅರಿವಿದೆ. ಆದರೆ ಈ ನಿಯಮಗಳನ್ನು ಪಾಲಿಸಲು ನಾವು ಹಿಂದೇಟು ಹಾಕುತ್ತಿದ್ದೇವೆ. ಬರೇ ಮೂರು ನಿಯಮಗಳನ್ನು ನಾವು ಶಿಸ್ತುಬದ್ಧವಾಗಿ ಪಾಲಿಸಿದರೆ ನಾವು ಅನೇಕ ಜೀವಗಳನ್ನು ಉಳಿಸಬಹುದು. ಇವೆಲ್ಲವೂ ಯಾವುದೂ ಹೊಸದೇನಲ್ಲ. ಕಳೆದ ಒಂದು ವರ್ಷದಿಂದ ಪಾಲಿಸಿಕೊಂಡು ಬಂದಿದ್ದೇವೆ. ಅವುಗಳನ್ನೇ ಸ್ವಲ್ಪ ಧೃಢವಾಗಿ ಪಾಲಿಸಬೇಕು ಅಷ್ಟೇ.

1) ಹೊರಗಡೆ ಮಾಸ್ಕನ್ನು ಕಡ್ಡಾಯವಾಗಿ ಧರಿಸಬೇಕು. 2) ಕನಿಷ್ಠ ಎರಡು ಮೀಟರ್ ಅಂತರವನ್ನು ಕಾಪಾಡಿಕೊಳ್ಳಬೇಕು. ಜನ ಜಂಗೂಳಿಯಲ್ಲಿ ಸೇರಬಾರದು. 3) ಆಗಾಗ ಕೈ ಗಳನ್ನು ತೊಳೆಯುತ್ತಿರಬೇಕು. ಇವುಗಳೇ ಕೊರೊನವನ್ನು ತೊಲಗಿಸುವ ಮೂಲಮಂತ್ರಗಳು .

ಇವುಗಳನ್ನು ಶಿಸ್ತುಬದ್ಧವಾಗಿ ಪಾಲಿಸಿಲ್ಲವೆಂದಾದರೆ ಗಂಡಾಂತರ ಸಂಭವಿಸುವ ದಿನಗಳು ದೂರವಿಲ್ಲ.. ನಮ್ಮೂರಿನ ಚಿತಾಗಾರಗಳೂ ಸೂರತ್ ನ ಚಿತಾಗಾರಗಳಂತೆ ಆಗುವುದನ್ನು ತಡೆಗಟ್ಟುವುದು ನಮ್ಮೆಲ್ಲರ ಕೈಯಲ್ಲಿದೆ.

LEAVE A REPLY

Please enter your comment!
Please enter your name here