ಮದುವೆ ಮುಂದೂಡಿಕೆಯ ಜೊತೆಗೆ ಮತ್ತೊಂದು ದುಃಖಕರ ಸುದ್ದಿ ಹಂಚಿಕೊಂಡ ಕಾವ್ಯ ಗೌಡ.

0
8949

ಮದುವೆ ಮುಂದೂಡಿಕೆಯ ಜೊತೆಗೆ ಮತ್ತೊಂದು ದುಃಖಕರ ಸುದ್ದಿ ಹಂಚಿಕೊಂಡ ಕಾವ್ಯ ಗೌಡ. ಮದುವೆಯು ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂದು ಹೇಳುತ್ತಾರೆ. ಆದರೆ ಈಗ ಇಡೀ ಭೂಮಿಯೇ ನರಕವಾಗಿದೆ. ಎಲ್ಲೆಡೆ ಕೋವಿಡ್ 19 ಮಹಾಮಾರಿ ಹಬ್ಬಿರುವ ಕಾರಣ ಹಲವಾರು ಕಾರ್ಯಕ್ರಮಗಳು ಮದುವೆ, ವಿವಾಹ ವಾರ್ಷಿಕೋತ್ಸವಗಳು ಕೂಡ ಮುಂದೆ ಹೋಗುತ್ತಿದೆ.

ಅಷ್ಟೇ ಅಲ್ಲದೆ ಮನುಷ್ಯನು ಮನೆಯಿಂದ ಹೊರ ಬರಲಾರದ ಪರಿಸ್ಥಿತಿಯಲ್ಲಿ ಇದ್ದಾನೆ. ಒಂದು ಕ್ಷಣ ಯಾಮಾರಿದರೂ ಕೂಡ ಜೀವವೇ ಹೋಗುವಂತಹ ಪರಿಸ್ಥಿತಿಯು ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಮನೆಯವರು ನೋಡಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕನ್ನಡ ಕಿರುತೆರೆ ಧಾರಾವಾಹಿಗಳು ನಾಯಕಿಯ ಪಾತ್ರ ವಹಿಸುತ್ತಿದ್ದ ಖ್ಯಾತನಟಿ ಕಾವ್ಯ ಗೌಡ ಅವರು, ತಮ್ಮ ಮದುವೆ ವಿವಾಹ ಮಹೋತ್ಸವವನ್ನು ಮುಂದೂಡಿದ್ದಾರೆ.

ಮದುವೆಯು ಒಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯವಾದ ಮೈಲುಗಲ್ಲು. ಇಂತಹ ಒಂದು ಸುಂದರ ಕ್ಷಣಗಳಲ್ಲಿ ನಮ್ಮ ಪ್ರೀತಿ ಪಾತ್ರರು ಕುಟುಂಬದವರು ಬಂಧು ಮಿತ್ರರು ಪ್ರತಿಯೊಬ್ಬರೂ ಇರಬೇಕು ಎಂಬುದು ನನ್ನ ಭಾವನೆ. ನನ್ನ ಜೀವನವನ್ನು ಬಹಳ ಸುಮಧುರವಾಗಿಸಿದ ನೂರಾರು ಜನರ ಮಧ್ಯೆ ನಾನು ಹೊಸ ಜೀವನಕ್ಕೆ ಕಾಲಿಡಬೇಕು ಎಂಬ ಬಯಕೆಯನ್ನು ಹೊಂದಿದ್ದೇನೆ.

ಮದುವೆ ಮಾಡಿಕೊಂಡರೆ ನಿಮ್ಮೆಲ್ಲರ ಉಪಸ್ಥಿತಿಯಲ್ಲಿ ಮಾಡಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ್ದೇವೆ. ನನ್ನ ಮದುವೆ ಮಹೋತ್ಸವದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂಬ ಹೆಬ್ಬಯಕೆ ಇದೆ. ಆದರೆ ಈಗ ಇರುವ ಪರಿಸ್ಥಿತಿಯನ್ನು ಹಾಗೂ ಕಷ್ಟಕರ ಸಮಯವನ್ನು ನೋಡಿದರೆ ನಾನು ಇಂತಹ ಪರಿಸ್ಥಿತಿಯಲ್ಲಿ ಮದುವೆ ಮಾಡಿಕೊಳ್ಳುವುದು ಉತ್ತಮವಲ್ಲ ಎಂದು ಅನಿಸುತ್ತಿದೆ.

ಇಡೀ ದೇಶವೇ ಮಹಾಮಾ’ರಿಯಿಂದ ತತ್ತರಿಸಿ ಹೋಗಿರುವಾಗ ನಾನು ಖುಷಿಯಿಂದ ಮದುವೆ ಸಂಭ್ರಮವನ್ನು ಅನುಭವಿಸುವುದು ಅಷ್ಟು ಒಳ್ಳೆಯದಲ್ಲ ಎಂದು ಭಾವಿಸುತ್ತಾ ನನ್ನ ಮದುವೆ ಸಮಾರಂಭವನ್ನು ಮುಂದೂಡುತ್ತಿದ್ದೇನೆ. ಈಗಿನ ಪರಿಸ್ಥಿತಿಯು ಆದಷ್ಟು ಬೇಗ ಸುಧಾರಿಸಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಹಾಗೂ ನೀವೆಲ್ಲರೂ ನನ್ನ ಪ್ರಾರ್ಥನೆಯಲ್ಲಿ ಇರುತ್ತೀರಿ.

ಹಾಗಾಗಿ ನಾನು ನಿಮಗೆ ತಿಳಿಯ ಬಯಸುವುದೇನೆಂದರೆ ನಾನು ನನ್ನ ಮದುವೆಯನ್ನು ಮುಂದೂಡಲು ಇಷ್ಟಪಟ್ಟಿದ್ದೇನೆ ಈ ಕತ್ತಲಿನಿಂದ ಬೆಳಕಿಗೆ ಬಂದು ನಿಮ್ಮೆಲ್ಲರ ಆಶೀರ್ವಾದದಿಂದ ಮದುವೆ ಮಾಡಿಕೊಳ್ಳಬೇಕು ಎಂಬ ಆಸೆ ನನಗಿದೆ. ಪ್ರಪಂಚದಲ್ಲಿ ಮತ್ತೊಮ್ಮೆ ಎಲ್ಲವೂ ಶಾಂತವಾಗಿ ಈ ಸಂದಿಗ್ಧ ಪರಿಸ್ಥಿತಿಯ ದೂರವಾಗಿ ಮತ್ತೊಮ್ಮೆ ಎಲ್ಲರೂ ಕೂಡುವ ಸಂದರ್ಭ ಆದಷ್ಟು ಬೇಗನೆ ಬರುತ್ತದೆ ಎಂದು ಭಾವಿಸುತ್ತಾ ನನ್ನ ಮದುವೆಯನ್ನು ನಾನು ಮುಂದೂಡುತ್ತೇನೆ. ಹೀಗೆಂದು ಕಾವ್ಯ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಈ ಪೋಸ್ಟ್ ಅನ್ನು ಹಾಕಿದ ಕೆಲವೇ ಕ್ಷಣಗಳ ನಂತರ ಅವರ ಪ್ರೀತಿಪಾತ್ರವಾದ ಅಜ್ಜಿಯು ತೀ’ರಿಕೊಂಡಿದ್ದಾರೆ ಎಂದು ಅವರ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ. ಆದರೆ ಅವರು ಸ್ವಂತ ಅಜ್ಜಿಯೋ ಅಥವಾ ಸಂಬಂಧಿಕರೋ ಎಂದು ತಿಳಿದು ಬಂದಿಲ್ಲ. ಯಾರೇ ಆಗಿರಲಿ ಅವರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ದೇಶದೆಲ್ಲೆಡೆ ಕೊರೋನಾ ಮಹಾಮಾ’ರಿ ಅತಿ ಬೇಗನೆ ತೊಲಗಿ ಮತ್ತೊಮ್ಮೆ ದೇಶವು ಶುಭವಾಗಲಿ ಎಂಬುದೇ ನಮ್ಮ ಹಾರೈಕೆ.

LEAVE A REPLY

Please enter your comment!
Please enter your name here