ಅರ್ಜುನ್ ಜನ್ಯ ಮನೆಯಲ್ಲಿ ದುಃಖದ ಸಾಗರ. ಸುದ್ದಿ ಹಂಚಿಕೊಂಡರು ಗಾಯಕಿ ಶಮಿತಾ ಮಲ್ನಾಡ್.

0
12717

ದೇಶದಲ್ಲೆಡೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕೋವಿಡ್ ಮಹಾಮಾ’ರಿಯು ರ’ಣಕೇಕೆ ಹಾಕುತ್ತಿದೆ. ಸಾಕಷ್ಟು ಬಾಲಿವುಡ್ ಹಾಲಿವುಡ್ ಹಾಗೂ ಸ್ಯಾಂಡಲ್ವುಡ್ ನಟ ನಟಿಯರು ಈ ಮಹಾ ರೋಗಕ್ಕೆ ತುತ್ತಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಹಲವಾರು ಗಣ್ಯ ವ್ಯಕ್ತಿಗಳನ್ನು ನಾವು ಈ ಸಂದರ್ಭದಲ್ಲಿ ಕಳೆದುಕೊಂಡಿದ್ದೇವೆ. ನಟ ನಟಿಯರು, ಅವರ ಸಂಬಂಧಿಕರು, ಅವರ ತಂದೆ ತಾಯಿಯರು, ಅವರ ಅಣ್ಣ ತಂಗಿಯರು ಮತ್ತು ಇತರೆ ಪ್ರೀತಿ ಪಾತ್ರರನ್ನು ಕಳೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ದುಃಖವನ್ನು ತೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗಷ್ಟೇ ಕನ್ನಡ ಚಲನಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ನಿಧನಹೊಂದಿದ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ಸಂಗೀತ ನಿರ್ದೇಶಕನ ಮನೆಯಲ್ಲಿಯೂ ಕೂಡ ದುಃಖ ಮಡುಗಟ್ಟಿದೆ. ಈ ಹಿಂದೆ ಮೊದಲನೆಯ ಅಲೆಯಲ್ಲಿ ಇಷ್ಟು ಪರಿಣಾಮಕಾರಿ ಆಗಿಲ್ಲದ ವೈರಸ್, ಇದ್ದಕ್ಕಿದ್ದ ಹಾಗೆಯೇ ಎರಡನೇ ಅಲೆಯಲ್ಲಿ ಮ್ಯುಟೇಶನ್ ಗೊಂಡ ವೈರಸ್ ಸಾವಿರಾರು ಜೀವಗಳನ್ನು ತೆಗೆಯುತ್ತಿದೆ.

ಎಲ್ಲೆಡೆ ಆಮ್ಲಜನಕ ಹಾಗೂ ವೆಂಟಿಲೇಟರ್ ಗಳು ದೊರೆಯದೆ ನೂರಾರು ಜನ ನಡುಬೀದಿಯಲ್ಲಿ ಪ್ರಾಣ ಬಿಡುತ್ತಿದ್ದಾರೆ. ಇವರ ಮಧ್ಯೆ ಕೆಲವು ಜನ ಕೊರೋನ ಇಲ್ಲವೇ ಇಲ್ಲ ಎಂದು ಮೊಂಡುತನದ ವಾದ ಮಾಡುತ್ತಿದ್ದಾರೆ. ಆದರೆ ಇನ್ನೂ ಕೆಲವರು ಎಷ್ಟೇ ಕಾಳಜಿ ವಹಿಸಿದರೂ ಸಹ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಇದ್ದಾರೆ.

ಕೆಲವು ನಿಮಿಷಗಳ ಹಿಂದೆ ಕನ್ನಡದ ಖ್ಯಾತ ನಟಿ ಶಮಿತಾ ಮಲ್ನಾಡ್ ಅವರು ತಮ್ಮ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಒಂದು ಕಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. “ಮಿತ್ರರೇ ಈ ಮಹಾಮಾರಿ ವೈರಸ್ನಿಂದ ಹಲವಾರು ಜನ ಸಾವು ನೋವುಗಳನ್ನು ಕಾಣುತ್ತಿದ್ದಾರೆ. ಈ ವೈರಸ್ ಯಾರನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ.

ಕಿರಣ್ ಅಣ್ಣ ನಮ್ಮೆಲ್ಲರ ಪ್ರೀತಿಯ ಸಹೃದಯಿ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸ್ವಂತ ಸಹೋದರ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಇದನ್ನು ನಂಬಲು ಅಸಾಧ್ಯ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ನೀಡಲಿ. ಇವರೇ ಇವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡು ಎಂದು ಕೇಳಿಕೊಳ್ಳುವುದು ಒಂದೇ ನಮಗೆ ಇರುವ ದಾರಿ.

ಮನಸ್ಸಿಗೆ ಬಹಳ ಸಂಕಟವಾಗುತ್ತಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹರಿ ಓಂ. ಸಹೋದರ ಕಿರಣ್ ಅವರೇ ನಿಮ್ಮನ್ನು ನಾವು ಎಂದೆಂದಿಗೂ ಮಿಸ್ ಮಾಡಿಕೊಳ್ಳುತ್ತೇವೆ. ಸದಾ ನಿಮ್ಮ ನೆನಪಿನಲ್ಲಿ ಇರುತ್ತೇವೆ. ಎಂದು ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕಿ ಡಾಕ್ಟರ್ ಶಮಿತಾ ಮಲ್ನಾಡ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ದಯವಿಟ್ಟು ಎಲ್ಲರೂ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಿ ಹಾಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಿ. ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಿ. ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here