ಭೈರಪ್ಪನವರ ಕೃತಿಗಳಿಂದ ಕೊರೋನ ಅಡ್ಡ ಪರಿಣಾಮಗಳ ವರ್ಣನೆ. ಮತ್ತೆ ಮತ್ತೆ ಓದಬೇಕು ಎನಿಸುತ್ತದೆ.

0
4082

ನಮಸ್ಕಾರ ಪ್ರಿಯ ಓದುಗರೇ. ಭೈರಪ್ಪನವರ ಕೃತಿಗಳಿಂದ ಕೊರೋನ ಅಡ್ಡ ಪರಿಣಾಮಗಳ ವರ್ಣನೆ. ಎಷ್ಟು ಸೊಗಸಾಗಿದೆ ಈ ಲೇಖನ ಎಂದು ನೀವೇ ನೋಡಿ. ಮತ್ತೆ ಮತ್ತೆ ಓದಬೇಕು ಎನಿಸುವಂತಹ ಒಂದು ಸೊಗಸಾದ ಬರಹ ಇದು. ವಿಶ್ವದಲ್ಲೆಡೆ ಬಂದೇ ಬಿಟ್ಟಿದೆ, ಕರೋನಾದ “ಪರ್ವ” ಕಾಲ. ಅದಕ್ಕೆ , ಅಪಾರ ಜನಗಳು ಬಲಿಯಾಗುತ್ತಿರುವುದೇ “ಸಾಕ್ಷಿ”. ಹೇಗಾದರೂ ಮಾಡಿ ಈ ಮಹಾ ಸಂಕಟವನ್ನು “ದಾಟ” ಲೇ ಬೇಕಾಯ್ತು.

ಅದಕ್ಕೆ,ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನಗಳು ಒಬ್ಬರಿಂದೊಬ್ಬರು “ದೂರ ಸರಿದರು”. ಹಾಗೂ, ಎಲ್ಲೂ ಸುತ್ತಾಡದೇ ತಮ್ಮ ತಮ್ಮ ಮನೆಯಲ್ಲೇ ೬ ತಿಂಗಳು “ನೆಲೆ” ನಿಂತರು. ಹಲವಾರು ಮನೆಗಳಲ್ಲಿ ಕರೋನ ಬಾಧಿಸಿ, “ಗೃಹಭಂಗ” ಉಂಟಾಯ್ತು. ಅಗಾಧ ಸಮಸ್ಯೆಗಳು, ರೋಗಗಳು “ನಾಯಿನೆರಳಿ” ನಂತೆ ಹಿಂಬಾಲಿಸಿದವು.

ಈ ಕಾಲದಲ್ಲಿ, ವಿವಾಹಕ್ಕಾಗಿ ಸೂಕ್ತ ಗಂಡು, ಹೆಣ್ಣಿನ “ಅನ್ವೇಷಣೆ” ಗಳು ಎಲ್ಲೆಲ್ಲೂ ನಡೆದವು. ಸಕಾಲದಲ್ಲಿ ಮದುವೆಗಳೇ ನಡೆಯದೇ, “ವಂಶವೃಕ್ಷ” ಬೆಳೆಯುವುದೇ ಕಷ್ಟವಾಯ್ತು. ದೇಶದ “ಅಂಚಿ” ನಲ್ಲಿ ಯುದ್ಧದ ಭೀತಿ ಬೇರೆ ಶುರುವಾಯ್ತು. ಮೂರ್ಮೂರು “ಗ್ರಹಣಗಳು” ಬೇರೆ ಒಟ್ಟಿಗೆ ಕಾಡಿದವು.

ಎಲ್ಲೆಲ್ಲೂ ಅತಿವೃಷ್ಟಿಯಾಗಿ “ಜಲಪಾತಗ” ಳು ಭೋರ್ಗರೆದವು. ಆದರೂ ಜನಗಳು, ನಮೋ ಪರ “ಮತದಾನ” ಮಾಡಿದ್ದು ಸಾರ್ಥಕವಾಯ್ತು ಅಂದ್ರು. ಹೊಸ, ಹೊಸ ವ್ಯಾಕ್ಸೀನು ಕಂಡು ಹಿಡಿಯಲು “ಕವಲು” ದಾರಿಗಳು ಹುಟ್ಟಿದವು. ಲಸಿಕೆಗಳು ಸಫಲವಾಗಬಹುದೆಂಬ ಹೊಸ “ಬೆಳಕು ಮೂಡಿತು”.

ಭೀಮಕಾಯ ಹೊಂದಿದ್ದವರೂ ಕೊರೋನಾದಿಂದ ಪಾರಾಗದೇ ಧರ್ಮಶ್ರೀ ಗಳ ಮೊರೆ ಹೋಗಬೇಕಾಯಿತು. ಇದನ್ನು ನಿರಾಕರಣೆ ಮಾಡಿದವರು ತಬ್ಬಲಿಯು ನೀನಾದೆ ಮಗನೆ ಎಂದು ತಮ್ಮನ್ನು ತಾವೇ ಹಳಿದುಕೊಳ್ಳುವಂತಾಯಿತು.

ಇವರ ಮಂದ್ರ ಸ್ಥಾಯಿಯ ಗೋಳು ಇಡೀ ಆವರಣ ದಲ್ಲಿ ತಂತು ಗಳಾಗಿ ಪಸರಿಸಿದರೂ ನೆಲೆ ಸಿಕ್ಕದಾಯಿತು. ವಿಶ್ವಾದ್ಯಂತ, ಸಮುದ್ರ, ವಿಮಾನ “ಯಾನ” ಗಳೇ ನಿಂತುಹೋದವು. ಇವೆಲ್ಲದರ “ಉತ್ತರಕಾಂಡ” ಹೇಗಿದೆ ಎಂದು ನೋಡಲು ಇನ್ನೂ ಬಹಳ ಕಾಲ ಕಾಯಬೇಕು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here