ಕೊರೊನಾದಿಂದ ಪಾರಾಗಲು ಮಹಾಭಾರತದ ಈ ಸನ್ನಿವೇಶ ನಮಗೆ ಬಹಳ ಸಹಾಯಕಾರಿಯಾಗಲಿದೆ.

0
5627

ಎಮೋಶನಲ್ ಕಂಟಾಜಿಯನ್. ಇದೂ ಸೇರಿ ನಾಲ್ಕನೇ ಬಾರಿ, ಹತ್ತಿರದವರಿಗೆ ಕೊರೊನಾ ಬಂದಿತು ಅಂತ ಕೇಳಿದ ಕೂಡಲೇ ನಿಧಾನವಾಗಿ ಗಂಟಲ ನೋವು ಶುರುವಾಗುತ್ತದೆ, ತಲೆನೋವು, ಮೈಕೈ ನೋವು ಸಹಾ. ಸಣ್ಣಗೆ ಜ್ವರ ಬಂದಿದೆ ಅನಿಸುತ್ತದೆ. ಮಾರನೆಯ ದಿನ ಅಥವ ಸ್ವಲ್ಪ ಕಡಿಮೆ ಆಗಿರುತ್ತದೆ. ಇದು ನನಗಷ್ಟೇ ಅಲ್ಲ. ಬಹಳಷ್ಟು ಜನರಿಗೆ ಹೀಗೆಯೇ ಆಗಿರಬಹುದು.

ಮದುವೆಮನೆಯಲ್ಲಿ ಇನ್ನೇನು ಮದುಮಗಳನ್ನು ಒಪ್ಪಿಸುವ ಸಮಯ , ಅಮ್ಮ ಬಿಕ್ಕಳಿಸಿ ಅಳಲಾರಂಭಿಸುತ್ತಾಳೆ. ಅಪ್ಪ ಕಣ್ಣಂಚನ್ನು ಒರೆಸಿಕೊಳ್ಳುತ್ತಾನೆ. ಇದನ್ನು ನೋಡಿ ಮಗಳು ಅಳಲಾರಂಭಿಸುತ್ತಾಳೆ. ಅಲ್ಲಿದ್ದ ಇನ್ನಿತರರ ಕಣ್ಣು ಸಹಾ ತೇವವಾಗುತ್ತದೆ. ಯಾವದೋ ಸಿನಿಮಾ ನೋಡುತ್ತಾ ನೋಡುತ್ತಾ ಅಲ್ಲಿನ ಭಾವನೆಗಳಲ್ಲಿ ನಾವೂ ಪಾತ್ರವಾಗಿ ಹೋಗಿರುತ್ತೇವೆ.

ಆಸ್ಪತ್ರೆಯಲ್ಲಿ ಯಾರೋ ಹುಷಾರಿಲ್ಲದವರನ್ನು ನೋಡಿದ ಕೂಡಲೇ ನಮಗೂ ಅದೇ ರೀತಿ ಅನುಭವವಾದಂತೆ ಭಾಸ ಆಗುತ್ತದೆ. ಯಾಕೆ ಹೀಗೆ?
ದೇಹಕ್ಕೆ ಸಂಬಂಧ ಪಟ್ಟ ವೈರಸ್ಗಳು ಒಬ್ಬರಿಂದ ಒಬ್ಬರಿಗೆ ಹರಡುವುದು ಸರಿ. ಆದರೆ ಭಾವನೆಗಳು ಹೇಗೆ ಹರಡುತ್ತವೆ . ಹರಡಿದ ಭಾವನೆಗಳು ನಮ್ಮ ದೇಹದ ಮೇಲೆ ಹೇಗೆ ಮತ್ತು ಏಕೆ ಹರಡುತ್ತವೆ.

ನಾವು ಯಾವುದೇ ವ್ಯಕ್ತಿ ಇಂದ ಪ್ರೇರಣೆ ಪಡೆದರೆ, ಆಲೋಚನೆ, ಅಥವ ಅದೇ ವ್ಯಕ್ತಿಯ ಹಾವಭಾವ ಅಥವ ವರ್ತನೆಗಳು ನಮ್ಮಲ್ಲೂ ಕಂಡು ಬರುತ್ತವೆ. ಏಕೆ ಈ ವರ್ತನೆ, ಭಾವನೆ, ಹಾವಭಾವಗಳೂ ವೈರಸಿನಂತಹ ಸೂಕ್ಷ್ಮ ಜೀವಿಯನ್ನು ಹೊಂದಿವೆಯೇ? ಇದ್ದರೆ ಅದು ಹೇಗೆ ಹರಡುತ್ತದೆ. ಈ ಭಾವನೆಗಳು ಮತ್ತು ವರ್ತನೆಗಳು ಒಬ್ಬರಿಂದ ಒಬ್ಬರಿಗೆ ಹರಡುವ ಪ್ರಕ್ರಿಯೆಗೆ ಎಮೋಶನಲ್ ಕಂಟಾಜಿಯನ್ ಅಥವ ಭಾವನೆಗಳ ಸೋಂಕು ಎಂದು ಕರೆಯುತ್ತಾರೆ.

ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳ ಪ್ರಕಾರ ಮಿರರ್ ನ್ಯೂರಾನ್ ಇದಕ್ಕೆ ಕಾರಣ. ಒಂದು ಪ್ರಯೋಗದಲ್ಲಿ ಮಂಗಗಳ ಎರೆಡು ಗುಂಪನ್ನು ಮಾಡಿ, ಒಂದು ಗುಂಪಿಗೆ ಒಂದು ಬಗೆಯ ಇಲೆಕ್ಟ್ರಿಕಲ್ ಶಾಕ್ ಕೊಟ್ಟರು ಆಗ ಅವುಗಳ ನರಮಂಡಲದಲ್ಲಿ ಆದಂತಹ ಬದಲಾವಣೆಯೇ ಯಾವ ಶಾಕ್ ಕೊಡದ ಮಂಗಗಳ ಗುಂಪಿನ ನರವ್ಯೂಹದಲ್ಲಿಯೂ ಆಯಿತು.

ನೀವು ಬೇಕಾದರೆ ನೋಡಿ ಯಾರಾದರೂ ನಕ್ಕರೆ ಪ್ರತಿಯಾಗಿ ನೀವೂ ನಗುತ್ತೀರಾ. ನಿಮ್ಮ ಸ್ನೇಹಿತರು ಇಲ್ಲ ಕುಟುಂಬದವರೋ ಬೇಸರ ಅಥವ ದುಃಖದಲ್ಲಿ ಮುಳುಗಿದೆ ನೀವೂ ಸಹಾ ಅತ್ತದ್ದು ಇದೆ. ಕೆಲವರಂತೂ ಮನುಷ್ಯರಿರಲಿ ಪ್ರಾಣಿಗಳ ಭಾವನೆಯನ್ನೂ ಸಹಾ ಮಿರರ್ ಮಾಡಬಲ್ಲರು. ಸಾಕು ಪ್ರಾಣಿ ನೋವಿನಿಂದ ಕೂಗಿದರೆ ಸಾಕಿದವರೂ ಅತ್ತದ್ದುಂಟು.

ಇಲ್ಲಿಯವರೆಗಿನ ಅಧ್ಯಯನಗಳ ಪ್ರಕಾರ ಮನುಷ್ಯನ ಅದ್ಭುತ ಶಕ್ತಿಗಳಲ್ಲಿ ಈ ಎಮೋಶನಲ್ ಕಂಟಾಜಿಯನ್ ಸಹಾ ಒಂದು. ನಮಗೆ ಗೊತ್ತಿಲ್ಲದೆ ಎದುರಿರುವ ಸನ್ನಿವೇಶ, ವ್ಯಕ್ತಿ ಅಥವ ಓದುತ್ತಿರುವ ಕಾದಂಬರಿ ಇವುಗಳಲ್ಲಿ ಮುಳುಗಿ ಅರಿವಿಲ್ಲದೆ ಮನಸು ಭಾರವೋ ಇಲ್ಲ ಹಗುರವೋ ಆಗುತ್ತದೆ. ವಿಸ್ಮಯವೆಂದರೆ ಈ ಪ್ರಕ್ರಿಯೆ ಜಾಗೃತ ಮತ್ತು ಸುಪ್ತ ಮನಸಿನಲ್ಲಿಯೂ ನಡೆಯುತ್ತದೆ.

ಇನ್ನೊಂದು ಪ್ರಯೋಗದಲ್ಲಿ ಸೋಶಿಯಲ್ ಈ ಎಮೋಶನಲ್ ಕಂಟಾಜಿಯನ್ ಹೇಗೆ ಕೆಲಸ ಮಾಡುತ್ತದೆ ಎಂದು ಪರಿಶೀಲಿಸಲು ಪ್ರಯೋಗ ಒಂದನ್ನು ಮಾಡಿದರು. ಹೌದು ನೆಗೆಟೀವ್ ಪೋಸ್ಟ್ಗಳನ್ನ ವೀಕ್ಷಿಸಿಧ ಬಳಕೆದಾರರು ಹೆಚ್ಚು ಹೆಚ್ಚು ನೆಗೇಟೀವ್ ಎಮೋಶನ್ ಇರುವ ಪೋಸ್ಟ್ ಗಳನ್ನ ಮಾಡಿದರು. ಅದೇ ರೀತಿ ಪಾಸಿಟೀವ್ ಎಮೋಶನ್ ಸ್ಟೇಟಸ್ ಗಳನ್ನು ನೋಡಿದವರು ಹೆಚ್ಚು ಪಾಸಿಟೀವ್ ಪೋಸ್ಟ್ ಗಳನ್ನು ಮಾಡಿದರು.

ಸಿನೆಮಾಗಳಲ್ಲಿ ನೋಡಿದವರಿಗೆ ಈ ಅನುಭವ ಆಗಿರಬಹುದು ಯಾರಾದರೂ ಫ್ರೀಜರ್ ನಲ್ಲಿ ಒದ್ದಾಡುತ್ತಿದ್ದಂತೆ ವೀಕ್ಷಕರಿಗೂ ಅದೇ ಬಗೆಯ ತಣ್ಣಗೇ ಫ್ರೀಜ್ ಆದಂತಹ ಅನುಭವ ಆಗಿರುತ್ತದೆ. ಇದನ್ನು ಫಿಜಿಯಾಲಾಜಿಕಲ್ ಸಿಂಕ್ರನೈಜೇಶಪ್ ಎಂದು ಕರೆಯುತ್ತಾರೆ . ಈ ಬಗ್ಗೆಯೂ ಅಧ್ಯಯನ ನಡೆದಿದೆ. ಮತ್ತು ಇದು ನಿಜ ಎಂದು ದೃಢಪಟ್ಟಿದೆ.

ಇದೆಲ್ಲಾ ಯಾಕೆ ಹೇಳಿದೆ ಅಂದರೆ ಈ ಭಯಭೀತ ಸಮಯದಲ್ಲಿ ನಾವೂ ಭಯಭೀತರಾಗುವುದ ಮತ್ತು ದೇಹವೂ ಅದಕ್ಕೆ ಪ್ರತಿಕ್ರಿಯಿಸುವುದು ಸಹಜ. ಕೆಲವೊಮ್ಮೆ ಎಮೋಶನಲ್ ಕಂಟಾಜಿಯನ್ ಆಗುವುದು ಒಳ್ಳೆಯದೇ. ಇದು ನಮ್ಮ ಸಾಮಾಜಿಕ ಬಂಧವನ್ನು ತೋರಿಸುತ್ತದೆ. ಒಂದು ಹಂತದವರೆಗೆ ಇತರರ ನೋವು ನಲಿವು ಮತ್ತು ಕಷ್ಟಕ್ಕೆ ಸ್ಪಂದಿಸುವ ಈ ಗುಣ ಎಂಪತಿ ಎಂದೂ ಕರೆಯಬಹುದು. ಒಂದು ಸಮಯದವರೆಗೆ ಇದ ನಮಗೆ ಎಚ್ಚರಿಕೆ ಕೂಡ.

ಆದರೆ ಎಮೋಶನಲ್ ಕಂಟಾಜಿಯನ್ ಅಪಾಯಕಾರಿ ಆಗುವುದು ಯಾವಾಗ ಅಂದರೆ ಇತರರ ಎಮೋಶನ್ ನಮ್ಮಲ್ಲಿ ಅನಗತ್ಯ ಭೀತಿ,ಆತಂಕ, ದ್ವೇಷ ಮತ್ತಿತರ ನೆಗೆಟೀವ್ ಭಾವನೆಗಳನ್ನು ಬಿತ್ತುವ ಕೆಲಸ ಮಾಡತೊಡಗಿದಾಗ . ನಾವೂ ಆ ಭಾವನೆಗಳನ್ನು ಇನ್ನಷ್ಟು ಬೆರೆಸಿ ಮತ್ತಿತರರಿಗೆ ಹಂಚತೊಡಗಿದಾಗ , ಅದೊಂದು ಸಮೂಹ ಸನ್ನಿಯಾಗಿ ಬದಲಾಗಿ ಯಾವದು ಸತ್ಯ, ಸುಳ್ಳು ಎಂಬ ತಾರ್ಕಿಕ ಅರಿವು ಇಲ್ಲದೆ ಆಕ್ರೋಶವಾಗಿ ಯಾರನ್ನೋ ( ಮಾನಸಿಕವಾಗಿ , ದೈಹಿಕವಾಗಿ)ಬ’ಲಿ ಪಡೆದಾಗ.

ಇಂತಹ ಅ’ಪಾಯಕಾರಿ ಎಮೋಶನಲ್ ಕಂಟಾಜಿಯನ್ ವೈರಸ್ ಅನ್ನು ನಮ್ಮ ಮನಸಿಗೆ ಧಾಳಿ ಮಾಡದ ಹಾಗೆ ಮಾಡಬೇಕೆಂದರೆ ಯಾವುದೇ ನೆಗೆಟೀವ್ ವಿಷಯಗಳನ್ನು ಓದಿದ, ನೋಡಿದ ಕೂಡಲೆ ಕಿರುಚಿ ,ಕೂಗಾಡಬಯಸುವ ನಮ್ಮ ಚಿಂಪ್ ಮೈಂಡ್ ( ಮಂಗನ ಮನಸು) ಅನ್ನು ಸುಮ್ಮನಿರಿಸಿ ಮನುಷ್ಯನ ಮನಸನ್ನು ಎಬ್ಬಿಸಬೇಕು. ಮನುಷ್ಯನ ಮನಸು ಸರಿ ತಪ್ಪುಗಳ ವಿಶ್ಲೇಷಣೆ ಮಾಡುತ್ತದೆ.

ಚಿಂಪ್ ಮೈಂಡ್ ಅಷ್ಟು ಸುಲಭವಾಗಿ ಸುಮ್ಮನಾಗುವುದಿಲ್ಲ. ಅದನ್ನು ಗಮನಿಸಿ ಅದು ಬದಲಾಗುವ ಹಂತಹಂತದ ಅರಿವು ಮೂಡಿಸಿಕೊಂಡು ನಂತರ ಮಂಗನ ಮನಸಿನ ಆತಂಕಗಳನ್ನು ಪ್ರಶ್ನಿಸಿ ಸವಾಲು ಹಾಕಬೇಕು. ನಮ್ಮಲ್ಲಿ ಎರೆಡು ಮನಸ್ಸುಗಳು ಒಂದು ಅನಗತ್ಯ ನೆಗೆಟೀವ್ ಭಾವನೆಗಳಿಗೆ ತೀವ್ರವಾಗಿ ಸ್ಪಂದಿಸುವ ಮನಸು ( ದುರ್ಯೋದನ ಅಂದಕೊಳ್ಳಿ) ಮತ್ತು ಆ ಸಮಯದಲ್ಲಿ ಅಷ್ಟು ತೀವ್ರ ಭಾವನ ಒಳ್ಳೆಯದೇ ಎಂದು ತೊಳಲಾಡುವ ಮನವು. (ಅರ್ಜುನನ ಮನಸು)

ಈಗ ಅರ್ಜುನನ ಪ್ರಶ್ನೆ ಗಳಿಗೆ ಉತ್ತರ ಕೊಟ್ಟು ಅವನನ್ನು ಸರಿಯಾದ ಹಾದಿಯಲ್ಲಿ ನಡೆಸುವ ಕೆಲಸ ಕೃಷ್ಣನದು. ಆ ಕೃಷ್ಣನೇ ನಮ್ಮ ವಿವೇಕ.
ಆ ವಿವೇಕ ಒಂದು ನಮ್ಮ ಜೊತೆಗೆ ಇದ್ದರೆ ಯಾವುದೇ ಎಮೋಶನಲ್ ಕಂಟಾಜಿಯನ್ ನಮ್ಮ ಮನಸಿನ ಜೊತೆ ಆಟವಾಡಲಾರದು. ಆದರೆ ಬಹಳಷ್ಟು ಸಮಯಗಳಲ್ಲಿ ನಮ್ಮ ವಿವೇಕವನ್ನು ಬದಿಗೊತ್ತಿ ಯಾರದ್ಧೋ ದ್ವೇಷ, ಆಕ್ರೋಶಗಳ ಭಾವನೆಗಳಿಗೆ ಪಕ್ಕಾಗಿ ಬಲಿಯಾಗಿರುತ್ತೇವೆ. ನಮಗೇ ಗೊತ್ತಿಲ್ಲದೆ ಯಾವದೋ ಗುಂಪಿನ ದಾಳವಾಗಿರುತ್ತೇವೆ.

ಆದ್ದರಿಂದ ವಿಶೇಷವಾಗಿ ಈ ಪ್ಯಾಂಡಿಮಿಕ್ ಸಮಯದಲ್ಲಿ ಕೊರೋನಾ ಸೋಂಕಿನಿಂದ ಮಾತ್ರವಲ್ಲ , ನೆಗೆಟೀವ್ ಭಾವನೆಗಳ ಸೋಂಕನ್ನೂ ದೂರವಿಡೋಣ. ಜನರ ಭಾವನೆಗಳಿಗೆ ನೆಗೆಟೀವ್ ಸೋಂಕು ಹೆಚ್ಚಿಸುವ ಜನ, ಮಾಧ್ಯಮ , ರಾಜಕಾರಣಿ, ಎಲ್ಲವುಗಳಿಂದಲೂ ದೂರವಿರೋಣ. ಸುರಕ್ಷಿತರಾಗಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here