ಉತ್ತಮ ಪೋಷಕರಾಗಲು 25 ಸೂತ್ರಗಳು.

0
3908

ಉತ್ತಮ ಪೋಷಕರಾಗಲು 25 ಸೂತ್ರಗಳು. 1. ಮಕ್ಕಳು ಜೊತೆಗಿದ್ದಾಗ ಮೊಬೈಲ್‌ನ್ನು ಪಕ್ಕಕ್ಕಿಟ್ಟು ಬಿಡಿ. 2. ಅವರು ಏನು ಹೇಳುತ್ತಿದ್ದಾರೆ ಎಂಬುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ. 3. ಅವರ ದೃಷ್ಟಿಕೋನ ಹಾಗೂ ಅಭಿಪ್ರಾಯಗಳನ್ನು ಗೌರವದಿಂದ ಒಪ್ಪಿಕೊಳ್ಳಿ. 4. ಅವರ ಜೊತೆ ಸಾಧ್ಯವಾದಷ್ಟು ಮಾತುಕತೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

5. ಅವರನ್ನು ಗೌರವದಿಂದ ಕಾಣಿರಿ, ಹಾಗೂ ಸದಾ ಅವರನ್ನು ರಚನಾತ್ಮಕವಾಗಿ ಹೊಗಳಿ. 6. ಅವರೊಂದಿಗೆ ಸಂತಸದ ವಿಚಾರಗಳನ್ನು ಹಂಚಿಕೊಳ್ಳಿ. 7. ಅವರ ಸ್ನೇಹಿತರ ಬಗ್ಗೆ ಹಾಗು ಅವರಿಷ್ಟಪಡುವ ವ್ಯಕ್ತಿಗಳ ಬಗ್ಗೆ ಒಳ್ಳೆಯ ಮಾತಾಡಿ. 8. ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ನೆನಪಿನಲ್ಲಿಡಿ.

9.ಅವರು ಹೇಳಿದ ವಿಷಯವನ್ನೇ ಪದೇ ಪದೇ ಹೇಳುತ್ತಿದ್ದರೂ ಮೊದಲ ಸಾರಿ ಕೇಳುತ್ತಿರುವಂತೆ ಕುತೂಹಲದಿಂದ ಆಲಿಸಿ. 10. ಗತಿಸಿ ಹೋದ ಕಹಿ ನೆನಪುಗಳನ್ನು ಪದೇ ಪದೇ ಜ್ಞಾಪಿಸಬೇಡಿ. 11. ಅವರ ಉಪಸ್ಥಿತಿಯಲ್ಲಿ ಅವರಿಗೆ ಉಚಿತವಲ್ಲದ ಸಂಭಾಷಣೆ ಬೇಡ. 12. ಮಕ್ಕಳ ಸಣ್ಣ ಪುಟ್ಟ ಸಾಧನೆಯನ್ನು ಹಬ್ಬದಂತೆ ಆಚರಿಸಿ ಉಡುಗೊರೆ ಕೊಡಿ.

13. ಅವರ ಆಲೋಚನೆ, ಅಭಿಪ್ರಾಯಗಳನ್ನು ಅಲ್ಲಗಳೆಯಬೇಡಿ. 14. ಅವರು ಮಾತನ್ನು ಆರಂಭಿಸುವಾಗಲೇ ಬಾಯಿಮುಚ್ಚು ಎಂದು ತಡೆಯಬೇಡಿ. 15. ಅವರಿಗೆ ನಾಯಕತ್ವದ ಅವಕಾಶಗಳನ್ನು ನೀಡಿ. 16. ಅವರ ಜೊತೆಯಲ್ಲೇ ಸಾಗುತ್ತ ಹೆಜ್ಜೆ ಹೆಜ್ಜೆಗು ಆತ್ಮವಿಶ್ವಾಸ ತುಂಬಿ. 17. ಇತರೆ ಮಕ್ಕಳ ಪ್ರಗತಿಯನ್ನು ಮುಂದಿಟ್ಟುಕೊಂಡು, ನಿಮ್ಮ ಮಕ್ಕಳನ್ನು ಹೀಯಾಳಿಸಬೇಡಿ.

18. ಅವರನ್ನು ಆಸಕ್ತಿಯಿಂದ ಆಲಿಸುತ್ತಿರುವಂತೆ ಇರಲಿ ನಿಮ್ಮ ಭಂಗಿ. 19. ನಿಮ್ಮ ಪ್ರಾರ್ಥನೆಗಳಲ್ಲಿ ಅವರು ಸದಾ ಇರಲಿ. 20. ಅವರ ಸಾಮಿಪ್ಯದಲ್ಲಿ ನೀವು ಬೋರಾದಂತೆ, ಸುಸ್ತಾದಂತೆ ಕಾಣಿಸಿಕೊಳ್ಳಬೇಡಿ ಲವಲವಿಕೆಯಾಗಿರಿ. 21.ಅವರ ತಪ್ಪುಗಳನ್ನು ಹಂಗಿಸಬೇಡಿ / ಕುಹಕ ನಗೆ ಬೇಡ.

22. ಅವರೊಂದಿಗೆ ಸಂಭಾಷಿಸುವಾಗ ನಿಮ್ಮ ಶಬ್ದಗಳ ಬಗ್ಗೆ ಜಾಗ್ರತೆಯಿರಲಿ. 23. ಮಕ್ಕಳ ಮುಂದೆ ಕಿತ್ತಾಡಬೇಡಿ. ನಿಮ್ಮಲ್ಲಿ ಸಾಮರಸ್ಯದ ಕೊರತೆಯಿದ್ದರೆ ಅದು ನಿಮ್ಮಲ್ಲೆ ಇರಲಿ. 24. ಮಕ್ಕಳು ನಿಮ್ಮ ಜೀವನದ ಅತ್ಯಂತ ಪ್ರಮುಖ ಆದ್ಯತೆಯಾಗಿರಲಿ. 25. ಮಕ್ಕಳ ಮನಸ್ಸು ವಿಕಸನಗೊಳ್ಳುವ ಕಥೆಗಳನ್ನು ಕೇಳಲು, ನೋಡಲು ಅವರಿಗೆ ಅವಕಾಶ ನೀಡಿ. ಅಂತಿಮವಾಗಿ ನಿಮ್ಮ ಗುರಿ, ನಿಮ್ಮ ಮಕ್ಕಳು ಸತ್ಪ್ರಜೆಯಾಗುವುದಾಗಲಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here