ನೆಮ್ಮದಿಯಿಂದ ಬದುಕು ನಡೆಸುವುದು ಹೇಗೆ ಎಂದು ತಿಳಿಯಲು ಇದನ್ನು ಒಮ್ಮೆ ನೋಡಿ.

0
5610

ಬದುಕಲು ಕಲಿಯಿರಿ ಜೀವನವನ್ನು ಆನಂದಿಸಿ ಉತ್ತಮ ವಿಚಾರಗಳನ್ನು ರೂಢಿಸಿಕೊಳ್ಳಿ. ನಾವು ಹೆಚ್ಚು ವರ್ಷಗಳು ಬದುಕಿರುವುದಿಲ್ಲ
ಹಾಗೂ ಹೋಗುವಾಗ ಏನನ್ನೂ ಕೊಂಡೊಯ್ಯುವುದಿಲ್ಲ. ಹಾಗಾಗಿ, ಬದುಕಿನಲ್ಲಿ ಆಸೆಬುರುಕತನ ಒಳ್ಳೆಯದಲ್ಲ.

ಮಿತವಾಗಿ ಖರ್ಚು ಮಾಡಿ, ಜೀವನವನ್ನು ಆನಂದಿಸಿ ಹಾಗೂ ನಿಮ್ಮ ಕೈಲಾದ್ದನ್ನು ದಾನ ಮಾಡಿ. ನಾವು ಸತ್ತ ನಂತರ ಏನಾಗುವುದೋ ಎಂದು ಚಿಂತಿಸಬೇಡಿ. ಏಕೆಂದರೆ ನಾವು ಮಣ್ಣಲ್ಲಿ ಮಣ್ಣಾಗಿ ಹೋದ ನಂತರ ನಮಗೆ ಜನರ ಹೊಗಳಿಕೆ ಹಾಗೂ ತೆಗಳಿಕೆಗಳು ಅರಿವಿಗೆ ಬರುವುದಿಲ್ಲ. ಜೊತೆಗೆ ಈ ಜಗತ್ತಿನಲ್ಲಿರುವ ಸಂತೋಷಗಳನ್ನು ಅನುಭವಿಸುವ ಅವಕಾಶವನ್ನೂ ಕಳೆದುಕೊಳ್ಳುತ್ತೇವೆ.

ನಿಮ್ಮ ಮಕ್ಕಳ ಬಗ್ಗೆ ಬಹಳ ಯೋಚಿಸಬೇಡಿ; ಅವರಿಗೆ ಅವರದ್ದೇ ಆದ ಗುರಿಗಳು ಇರುತ್ತವೆ ಹಾಗೂ ಅದನ್ನು ತಲುಪುವ ಮಾರ್ಗವನ್ನು ಅವರೇ ಕಂಡುಕೊಳ್ಳುತ್ತಾರೆ. ಮಕ್ಕಳಿಗೆ ಕಾಳಜಿ ತೋರಿಸಿ, ಅವರನ್ನು ಪ್ರೀತಿಸಿ ಹಾಗೂ ಉಡುಗೊರೆಗಳನ್ನು ನೀಡಿ. ಹಾಗೆಯೇ ನಿಮ್ಮ ಸಂಪಾದನೆಯನ್ನೂ ಅನುಭವಿಸಿ.

ಜೀವನವೆಂದರೆ ಹುಟ್ಟಿನಿಂದ ಸಾಯುವವರೆಗೆ ದುಡಿಯುವುದೋಂದೇ ಅಲ್ಲ. 40 ವರ್ಷ ಹಾಗೂ ಮೇಲ್ಪಟ್ಟ ವಯಸ್ಕರೇ ಆಸ್ತಿ ಸಂಪಾದನೆಯ ಭರದಲ್ಲಿ ನಿಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ. ಏಕೆಂದರೆ, ನಿಮ್ಮ ಬಳಿ ಎಷ್ಟೇ ಹಣ ಇದ್ದರೂ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ.

ಎಷ್ಟು ಸಂಪಾದಿಸಬೇಕು ಹಾಗೂ ಯಾವಾಗ ನಿಲ್ಲಿಸಬೇಕು ಎಂಬುದಕ್ಕೆ ಯಾವುದೇ ಮಾನದಂಡವಿಲ್ಲ. ಸಾವಿರಾರು ಎಕರೆ ಭೂಮಿ ಇದ್ದರೂ, ತಿನ್ನುವುದು 3 ಹಿಡಿ ಅನ್ನವನ್ನು ಮಾತ್ರ. ಎಷ್ಟೇ ದೊಡ್ಡ ದೊಡ್ಡ ಬಂಗಲೆಯಿದ್ದರೂ ಮಲಗಲು ಬೇಕಿರುವುದು 8 ಅಡಿ ಜಾಗ ಮಾತ್ರ. ಹೊಟ್ಟೆ ತುಂಬುವಷ್ಟು ಊಟ ಮತ್ತು ಖರ್ಚಿಗೆ ತಕ್ಕಷ್ಟು ಹಣ ಇದ್ದರೆ ಸಾಕಲ್ಲವೇ ನೆಮ್ಮದಿಯ ಬದುಕಿಗೆ.

ನೆನಪಿಡಿ ಪ್ರತಿಯೊಂದು ಸಂಸಾರದಲ್ಲೂ ಸಮಸ್ಯೆ ಇದ್ದೇ ಇರುತ್ತದೆ. ಹಣ, ಆಸ್ತಿ – ಅಂತಸ್ತಿನ ಕುರಿತು ನಿಮ್ಮನ್ನು ಮತ್ತೊಬ್ಬರಿಗೆ ಹೋಲಿಸಿಕೊಳ್ಳಬೇಡಿ. ಬದಲಾಗಿ ಆರೋಗ್ಯ, ಆನಂದ, ಜೀವನದ ಗುಣಮಟ್ಟ ಇವುಗಳನ್ನೇ ನಿಮ್ಮ ಗುರಿಯಾಗಿಸಿಕೊಳ್ಳಿ. ನಿಮ್ಮಿಂದ ಬದಲಿಸಲು ಆಗದ ವಿಷಯಗಳ ಕುರಿತು ಚಿಂತಿಸಬೇಡಿ, ಇದರಿಂದ ಏನೂ ಪ್ರಯೋಜನವಿಲ್ಲ, ಬದಲಾಗಿ ನಿಮ್ಮ ಆರೋಗ್ಯ ಹಾಳಾಗುತ್ತದೆ.

ನಮ್ಮ ಆರೋಗ್ಯದ ಕಾಳಜಿ ನಾವೇ ಮಾಡಬೇಕು, ನಮ್ಮ ಆನಂದವನ್ನು ನಾವೇ ಕಂಡುಕೊಳ್ಳಬೇಕು. ನೀವು ಇರುವಷ್ಟು ಸಮಯದಲ್ಲಿ ಒಳ್ಳೆಯ ವಿಚಾರಗಳ ಬಗ್ಗೆ ಯೋಚಿಸಿ, ಒಳ್ಳೆಯ ಕೆಲಸಗಳನ್ನು ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ದಿನವು ಉಲ್ಲಾಸ ಮಯವಾಗಿರುತ್ತದೆ. ಒಂದು ಆನಂದ ರಹಿತ ದಿನವೆಂದರೆ, ಆ ದಿನ ವ್ಯರ್ಥ ಅದಂತೆ ಒಂದು ದಿನವನ್ನು ಸಂತೋಷವಾಗಿ ಕಳೆದರೆ, ಅದು ಗಳಿಕೆಯಂತೆ.

ಒಳ್ಳೆಯ ಆಲೋಚನೆ, ವ್ಯಾಯಾಮ, ಸೂರ್ಯನ ಕಿರಣ, ಆರೋಗ್ಯಕರ ಆಹಾರದಿಂದ ನೀವು ಇನ್ನೂ 30 – 40 ವರ್ಷಗಳ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮನ್ನು ನೀವು ಪ್ರೀತಿಸಿ. ಸುತ್ತಲಿರುವವರವನ್ನೂ ಪ್ರೀತಿಸಿ ಮತ್ತು ಬೆಂಬಲಿಸಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here