ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿಕೊಟ್ಟ ಖ್ಯಾತ ಗಾಯಕಿ ನಂದಿತ. ವಾಹ್ ಎನ್ನುತ್ತಿದ್ದಾರೆ ಅಭಿಮಾನಿಗಳು.

0
6570

ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಜನ ತಮ್ಮ ವೃತ್ತಿ ಬದುಕಿನ ಜೊತೆಗೆ ತಮಗಿಷ್ಟವಾದ ಪ್ಯಾಶನ್ ಅನ್ನು ಕೂಡ ಜನರಿಗೆ ತೋರಿಸೋದಕ್ಕೆ
ಸೋಶಿಯಲ್ ಮೀಡಿಯಾವನ್ನು ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ನಮ್ಮ ಕನ್ನಡ ಚಲನಚಿತ್ರದಲ್ಲಿ ಒಂದು ಕಾರ್ಯದಲ್ಲಿ ಮಿಂಚಿದ್ದ ಹಲವಾರು ನಟ ನಟಿಯರು, ಗಾಯಕಿಯರು ಈಗ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ.

ಮೂಲತಹ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರಾದ ಕನ್ನಡದ ಖ್ಯಾತ ಗಾಯಕಿ ನಂದಿತಾ ರಾಕೇಶ್ ಅವರು ನಮ್ಮ ಕರ್ನಾಟಕದ ಹೆಮ್ಮೆ. ಸರಿಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಗಾಯಕಿ ನಂದಿತಾ ಇದ್ದಕ್ಕಿದ್ದಹಾಗೆ ಕನ್ನಡ ಚಿತ್ರರಂಗದಿಂದ ಮಾತ್ರವಲ್ಲದೆ ಸಾಮಾಜಿಕ ಕೂಡ ಕಾಣಿಸಿಕೊಂಡಿದ್ದು ನೋಡಿರಲಿಲ್ಲ.

ಆದರೆ ಕಾಲ ಬದಲಾಗಿದೆ, ಡಿಜಿಟಲ್ ಯುಗದಲ್ಲಿ ಒಬ್ಬ ಕಲಾವಿದನಿಗೆ ಸಾಮಾಜಿಕ ಜಾಲತಾಣಗಳ ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ಟ್ವಿಟರ್ ಹೀಗೆ ನೂರಾರು ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಕಲೆಯನ್ನು ಜನರಿಗೆ ತೋರಿಸಿಕೊಡುವ ಸಾಮರ್ಥ್ಯವಿದೆ. ಇದನ್ನು ಅರಿತ ಗಾಯಕಿ ನಂದಿತಾ ಅವರು ಈಗ ಸಾಮಾಜಿಕ ಜಾಲ ತಾಣಕ್ಕೆ ಲಗ್ಗೆ ಇಟ್ಟಿದ್ದಾರೆ. ಸಾಮಾಜಿಕ ಜಾಲ ತಾಣಕ್ಕೆ ನಂದಿತಾ ಅವರ ಆಗಮನ ಸಾವಿರಾರು ಕನ್ನಡ ಚಿತ್ರಗೀತೆ ಅಭಿಮಾನಿಗಳ ಮುಖದಲ್ಲಿ ಸಂತಸ ತರಿಸಿದೆ.

ಗಣ್ಯಾತಿಗಣ್ಯರಿಗೆ ಹಾಗೂ ಅವರ ಚಿತ್ರಗಳಿಗೆ ಧ್ವನಿಯನ್ನು ನೀಡಿ ಅದರ ಜೊತೆಗೆ ಬ್ಲಾಕ್ಬಸ್ಟರ್ ಚಿತ್ರಗಳಿಗೆ ಹಾಡುಗಳನ್ನು ಹಾಡುತ್ತಿದ್ದ ನಂದಿತಾ ಅವರು ತಮ್ಮ ಕುಟುಂಬ ಹಾಗೂ ವೈಯಕ್ತಿಕ ಕಾರಣಗಳಿಂದ ಸ್ವಲ್ಪ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆದರೆ ಈಗ ಮತ್ತೊಮ್ಮೆ ತಮ್ಮ ವೀಣೆಯೊಂದಿಗೆ ಹಳೆಯ ಚಿತ್ರಗೀತೆಗಳನ್ನು, ಹೊಸ ಚಿತ್ರಗೀತೆಗಳನ್ನು ಹಾಗೂ ವಿವಿಧ ಶೈಲಿಯ ಗಾಯನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಸಾವಿರಾರು ಮೆಚ್ಚುಗೆಗಳನ್ನು ಪಡೆಯುತ್ತಿದ್ದಾರೆ.

ಇತ್ತೀಚೆಗಷ್ಟೇ ಅವರು ಮಾಡಿದ ಫೇಸ್ ಬುಕ್ ಲೈವ್ ಒಂದು ಲಕ್ಷಕ್ಕೂ ಅಧಿಕ ವಿಯೂಸ್ ಪಡೆದುಕೊಂಡಿದ್ದು ವಿಶೇಷ. ಇನ್ಸ್ಟಾಗ್ರಾಮ್ ನಲ್ಲಿ 15 ಸಾವಿರಕ್ಕೂ ಹೆಚ್ಚು ಅಭಿಮಾನಿಗಳನ್ನು ಅತಿ ಕಡಿಮೆ ಅವಧಿಯಲ್ಲಿ ಪಡೆದುಕೊಂಡಿದ್ದಾರೆ. ಫೇಸ್ಬುಕ್ನಲ್ಲಿ 50 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಪಡೆದುಕೊಂಡು ಅತ್ಯುತ್ತಮವಾದ ಕಂಟೆಂಟ್ ಕ್ರಿಯೇಶನ್ ಮಾಡುತ್ತಿದ್ದಾರೆ. ವೀಣೆ ಹಿಡಿದು ಹಾಡುತ್ತಿರುವ ಹಾಡುಗಳೆಲ್ಲವೂ ವೈರಲ್ ಆಗುತ್ತಿದೆ. ಹಾಗೂ ಈ ವಿಶೇಷ ವಿಡಿಯೋಗಳ ಮೂಲಕ ನಂದಿತ ಅವರು ಮತ್ತಷ್ಟು ಫಾಲೋವರ್ಸ್ ಗಳನ್ನು ಪಡೆದುಕೊಳ್ಳಲು ಸಹಾಯವಾಗುತ್ತಿದೆ.

ಯೂಟ್ಯೂಬ್ನಲ್ಲಿ ಇಂದಿಗೂ ಸಹ ನಂದಿತಾ ಅವರ ಹಾಡುಗಳು ರಾರಾಜಿಸುತ್ತಿರುತ್ತವೆ. ಈಗ ರೀಲ್ ನಲ್ಲಿ ಹಳೆಯ ಹಾಡುಗಳು ಪಾಪುಲರ್ ಆಗುತ್ತಿರುವುದು ತಿಳಿದಿರುವ ವಿಚಾರ. ಈಗಾಗಲೇ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಬ್ಲೂಟಿಕ್ ಪಡೆದುಕೊಂಡಿರುವ ನಂದಿತಾ ಅವರು ಟ್ವಿಟ್ಟರ್ ಯೂಟ್ಯೂಬ್ ಅಷ್ಟೇ ಅಲ್ಲದೆ ಮತ್ತಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಾರ, ಹಾಗೂ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದು ಎಂದಿನಂತೆ ಟಾಪ್ ಹಿಟ್ಗಳನ್ನು ಕೊಡುತ್ತಾರ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here