ಹೆತ್ತವರ ಪ್ರೀತಿ ಅತಿಯಾದ ಮುದ್ದು ಹಾಳುಮಾಡಿತೇ ಇಲ್ಲ ಹೆಣ್ಣು ಅನ್ನೋ ಸ್ವಾತಂತ್ರ್ಯ ಗೌರವ ಹೆಣ್ಣ ಹಾದಿ ತಪ್ಪಿಸಿತೇ.

0
2779

ಹೆತ್ತವರ ತ್ಯಾಗ ಪ್ರೀತಿ ಅತಿಯಾದ ಮುದ್ದು ಹಾಳುಮಾಡಿತೇ ಇಲ್ಲ ಹೆಣ್ಣು ಅನ್ನೋ ಸ್ವಾತಂತ್ರ್ಯ ಗೌರವ ಹೆಣ್ಣ ಹಾದಿ ತಪ್ಪಿಸಿತೇ. ಹೆಣ್ಣು ಮಕ್ಕಳಿಗೆ ನಾವು ನೀಡುವ ಸ್ವಾತಂತ್ರ್ಯ ಗೌರವ ಮತ್ತು ಪ್ರೀತಿ ಕಾಳಜಿ ಹೆಚ್ಚಾಗಿದೆ. ರಾತ್ರಿ ಒಬ್ಬಳೇ ಹೋಗುವಾಗ ರಕ್ಷಣೆಗೆ ಅಣ್ಣ, ಅಪ್ಪ ಜೊತೆಗಿದ್ದರೆ ತನ್ನ ಜೀವ ಕೊಟ್ಟಾದರೂ ಆಕೆಯ ಮಾನ, ಪ್ರಾಣ ಉಳಿಸಿಕೊಳ್ಳುತ್ತಾರೆ.

ಆದ್ರೆ ನಿರ್ಜನವಾದ ಪ್ರದೇಶದಲ್ಲಿ ಮನೆ ಬಿಟ್ಟು ದೂರದಲ್ಲಿ ವ್ಯಾಸಂಗ ಮಾಡುವ ಹೆಣ್ಣು ಮಕ್ಕಳು ಬೇಲಿ ಇಲ್ಲದ ಹೊಲದಂತೆ ಆಗಿಬಿಡುತ್ತಾರೆ. ತಾವು ಮಾಡಿದ್ದೆ ಸರಿ, ನಡೆದಿದ್ದೇ ದಾರಿ ಆಗುತ್ತೆ. ಈಗಿನ ಟ್ರೆಂಡ್ ಗೆ ತಕ್ಕಂತೆ ಹಣ ಮಾಡುವ ದುರಾಸೆ ಕೆಲವೊಂದು ವಿದ್ಯಾರ್ಥಿ ಸಮೂಹಕ್ಕೆ ಮಾರಕವಾಗಿದೆ. ಒಬ್ಬ ವಿದ್ಯಾವಂತರಾಗಿದ್ದುಕೊಂಡು ಡೇಟಿಂಗ್ ಅಂತ ಇಪ್ಪತ್ತು ಸಾವಿರದಿಂದ ಪ್ರಾರಂಭವಾಗುವ ಬೇಡಿಕೆ, ವಯಸು ಮತ್ತು ಸೌಂದರ್ಯ ಹೆಚ್ಚಾದಂತೆ ಹೆಣ್ಣಿನ ದೇಹ ಅನ್ನೋದು ಹಣದ ಮುಂದೆ ಮಾಂಸ ದ ದಂಧೆಯಾಗಿ ಪರಿವರ್ತನೆಗೊಳ್ಳುತ್ತೆ . ಎಲ್ಲ ಹೆಣ್ಣು ಮಕ್ಕಳು ಈಗಿರಲ್ಲ ಅಂತ ವಾದಿಸುವವರು ಇದ್ದಾರೆ.

ಹೆಣ್ಣಿನ ಬಗ್ಗೆ ಕೀಳಾಗಿ ನೋಡಬೇಡಿ ಅನ್ನುವವರು ಇದ್ದಾರೆ ಆದ್ರೆ ಹೆಣ್ಣನ್ನು ಸೂಕ್ಷ್ಮವಾಗಿ ಕಾಪಾಡಿ ಅವಳು ವಯಸ್ಸಿಗೆ ಬರುವಾಗ ಅವಳಿಗೆ ಸ್ವಯಂರಕ್ಷಣೆಯ ಧಯ್ರ ನೀಡಿ ,ಒಳ್ಳೆಯ ಸಂಸ್ಕಾರ ನಡತೆ ಕಲಿಸಿ ಅಂದಾಗ ನಾವು ಆರ್ ಎಸ್ ಎಸ್ ಹಿನ್ನೆಲೆಯವರೆಂದು ಸಂಸ್ಕಾರ ಹಳೆ ಕಾಲದ ಒಂದು ಕೆಟ್ಟ ಪದ್ಧತಿ ಎಂಬಂತೆ ಕಾಣುತ್ತೀರಿ. ಮುದ್ದಾದ ಮಗಳಿಗೆ ಸಿಕ್ಕ ಸಿಕ್ಕ ಮಾಡಲ್ ಉಡುಗೆಗಳನ್ನು ನೀಡುತ್ತಿರಿ ಆದ್ರೆ ಅದು ಅವಳ ಮೈ ತುಂಬಲ್ಲ ಚಿಕ್ಕ ಮಗಳು ಬೆಳೆದರೂ ಹೆತ್ತವರಿಗೆ ಮಗಳಾದರೂ ಚಿಕ್ಕ ಉಡುಗೆಯಿಂದ ಅವಳು ಕೆಲವರ ಕಣ್ಣಿಗೆ ಬೇಟೆಯ ಜಿಂಕೆಯಂತೆ ಗೋಚರಿಸುತ್ತಾಳೆ.

ಕೆಟ್ಟ ದೃಷ್ಠಿಯಲ್ಲಿ ನೋಡುವವರ ದೃಷ್ಠಿ ಬದಲಾಯಿಸಿಕೊಳ್ಳಿ ಎಂದು ಹೇಳುವವರಿದ್ದಾರೆ .ವಾಸ್ತವವಾಗಿ ಹೆಣ್ಣು ಮಗಳು ಎಲ್ಲರಂತೆ ಇರಬೇಕೆಂದು ಬಯಸುತ್ತಾಳೆ. ಅವಳು ಹೇಳಿದಂತೆ ಹೆತ್ತವರು ಕೇಳುತ್ತಾರೆ. ಹೆತ್ತವರು ಕೇಳಿದ ಹಾಗೆ ಮಕ್ಕಳು ಕೇಳುವುದನ್ನು ಬಿಡುತ್ತಾರೆ ಕೊನೆಗೆ ಹೆತ್ತವರ ಅತಿಯಾದ ನಂಬಿಕೆಗೆ ಪ್ರೀತಿಗೆ ತ್ಯಾಗಕ್ಕೆ ಮೋಸವಾದಾಗ ಘಾಸಿಯಿಂದ ಕುಸಿದುಬೀಳುತ್ತಾರೆ.

ನಮ್ಮ ದೇಶದಲ್ಲಿ ಅತ್ಯಾಚಾರ ಸಂಖ್ಯೆ ಕಡಿಮೆಯಾಗಬೇಕಾದರೆ ಮಾತೃ ಸಮೂಹ ಎಳೆವೆಯಲ್ಲೇ ತಮ್ಮ ಮಕ್ಕಳಿಗೆ ಪ್ರಸ್ತುತ ಕಾಲ ಘಟ್ಟದಲ್ಲಿ ಸಂಸ್ಕಾರದ ಜೊತೆ ಜೊತೆಗೆ ಕರಾಟೆ ಕಲಿಸಿಕೊಡುವುದು ಅನಿವಾರ್ಯ. ಈಗಿನ ಕಾಲದಲ್ಲಿ ಸ್ವಂತದವರೇ ಹೆಣ್ಣನ್ನು ದುರ್ಬಳಕೆ ಮಾಡುವ ಅನೇಕ ಘಟನೆಗಳನ್ನು ನೋಡುತ್ತಿದ್ದೇವೆ . ಹೆಣ್ಣು ಮಕ್ಕಳಿಗೆ ಮೊದಲ ಗುರು ಮನೆಯಲ್ಲಿನ ತಾಯಿ.

ತನ್ನ ಹೆಣ್ಣು ಮಗಳ ಉಡುಗೆ ತೊಡುಗೆ, ಗುಣ ನಡತೆ, ವಿನಯದಿಂದ ಮಾತುಗಳು ಎಲ್ಲವೂ ತಾಯಿ ಅಥವಾ ತಂದೆಯಿಂದ ಬರುವ ಗುಣಗಳು. ಹೆಣ್ಣು ಮಕ್ಕಳು ಹೆಚ್ಚಾಗಿ ತಾಯಿಗಿಂತಲೂ ತಂದೆಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಕಾರಣ ಹೆಣ್ಣು ಮಗಳ ಮೇಲೆ ತಾಯಿಗೆ ಭಯ ಇರುತ್ತೆ , ಯಾವತ್ತೂ ಬುದ್ದಿಮಾತು ಹೇಳುತ್ತಲೇ ಇರುತ್ತಾರೆ ಆದ್ರೆ ತಂದೆ ಹೆಣ್ಣು ಮಗಳನ್ನು ರಾಣಿಯಂತೆ ನೋಡಿಕೊಳ್ಳುತ್ತಾರೆ.

ಕೆಲವೊಮ್ಮೆ ಒಬ್ಬ ತಂದೆಯ ಅತಿಯಾದ ಪ್ರೀತಿ ಅಕ್ಕರೆ ನಾಳೆ ಮಗಳು ಹಾದಿ ತಪ್ಪುವುದಕ್ಕೆ ಪರೋಕ್ಷವಾಗಿ ಕಾರಣವಾಗುತ್ತೆ. ಕಾಲೇಜು ಕಲಿಯುವ ಸಮಯದಲ್ಲಿ ಎಲ್ಲ ಹುಡುಗರು ಸ್ನೇಹಿತರೆಂದು ಕರೆಯುವ ಹುಡುಗಿಯರು ನಗರಗಳಲ್ಲಿ ಸಂಜೆ ವಿಹಾರ ಅಂತ ಪಾರ್ಕ್ ,ಕಡಲ ಕಿನಾರೆ ಮತ್ತಿತರ ಪ್ರವಾಸತನದಂತಹ ಕಡೆಗಳಲ್ಲಿ ಸುತ್ತಾಡುವುದನ್ನು ಕಾಣುತ್ತೇವೆ.

ಕೈಯಲ್ಲಿ ಪುಸ್ತಕ ಯಾರ ಕೈಯಲ್ಲೂ ಇರಲ್ಲ , ಬದಲಾಗಿ ಮೊಬೈಲ್ ಇರುತ್ತೆ ಕಲಿಯುವವರು ಪಾರ್ಕ್ ,ಲಾಡ್ಜ್ ಅಂತ ಅಲೆದಾಡುವುದಿಲ್ಲ. ಕೆಲವೊಂದು ಅತ್ಯಾಚಾರ ಪ್ರಕರಣಗಳು ನೋಡಿ ಹೆಣ್ಣು ಮಕ್ಕಳು ಬದಲಾಗಬೇಕು ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ,ಒಂದೋ ಹೆಣ್ಣು ಮಕ್ಕಳು ಸ್ವಯಂರಕ್ಷಣೆಗೆ ಕೈಯಲ್ಲಿ ಏನಾದರೂ ಆಯುಧದ ಜೊತೆಗೆ ಮೆಣಸಿನ ಪುಡಿ ಇಟ್ಟುಕೊಕೊಂಡರೆ ಒಳ್ಳೇದು .

ಜೊತೆಗಿರುವವ ಮೂರ್ಛೆ ಹೋದರೆ ಅಥವಾ ಆತನಿಗೆ ಬಡಿದು ಮೂರ್ಛೆ ತಪ್ಪಿದರೆ ಆಕ್ರಮಣ ಮಾಡೋಕೆ ಮೆಣಸಿನ ಹುಡಿ ಎದುರಾಳಿಗಳ ಕಣ್ಣಿಗೆ ಹಾಕಿ ಎಲ್ಲಿ ಬೇಕೋ ಅಲ್ಲಿಗೆ ಕಡಿಯಬಹುದು ಅದು ಹೆಣ್ಣಿನ ಆತ್ಮ ರಕ್ಷಣೆ ,ಮಾನ ರಕ್ಷಣೆಯ ಕಾರ್ಯ , ಹೇಗೆ ಅತ್ಯಾಚಾರಿಗಳ ಪತ್ತೆಗೆ ಸಾಕ್ಷಿ ಇಲ್ಲ ಹಾಗೆ ನೀವು ಮಾಡಿದ ,ನಿಮ್ಮಂತೆ ಇತರರಿಗೆ ಇನ್ನು ಮುಂದೆ ಅಂತಹ ಆಗಬಾರದೆನ್ನುವ ಭಾವನೆ ಒಂದು ರೀತಿಯ ನ್ಯಾಯವೇ.

ಎಷ್ಟೋ ಅತ್ಯಾಚಾರಗಳು ನಡೆದಿವೆ ,ನಡೆದ ಮೇಲೆ ಮತ್ತೆಲ್ಲೂ ಮರುಕಳಿಸದಂತೆ ಎಚ್ಚರವಹಿಸಬೇಕು . ನಮ್ಮ ದೇಶದಲ್ಲಿ ಅತ್ಯಾಚಾರಕ್ಕೆ ಅಂತ ಒಂದು ಕಠಿಣ ಕಾನೂನು ಜ್ಯಾರಿಗೆ ಬಂದಿಲ್ಲ. ಹಾಗಾಗಿ ಹೆಣ್ಣು ಮಕ್ಕಳು ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಹುಡುಗರೊಂದಿಗೆ ಸ್ನೇಹ ಪ್ರೀತಿ ಅಂತ ಸಂಜೆ ಅಥವಾ ರಾತ್ರಿ ಹೊತ್ತಿಗೆ ,ನಿರ್ಜನ ಪ್ರದೇಶಗಳಿಗೆ ಸುತ್ತಾಡುವುದನ್ನು ನಿಲ್ಲಿಸಿ.

ನಾವು ಏನು ಬೇಕಾದರೂ ಮಾಡುತ್ತೇವೆ,ಹೇಗೆ ಬೇಕಾದರೂ ಇರುತ್ತೇವೆ, ಕೇಳೋಕೆ ನೀನ್ಯಾರು ಅನ್ನೋರು ಎಲ್ಲಿಗೆ ಬೇಕಾದರೂ ಹೋಗಿ ಸ್ವಯಂ ರಕ್ಷಣೆ ಮಾಡಿಕೊಳ್ಳಿ ನಾಳೆ ಏನಾದರೂ ಹೆಚ್ಚು ಕಮ್ಮಿ ಆದರೆ ಇಡೀ ಪುರುಷ ಸಮಾಜವನ್ನು ಅತ್ಯಾಚಾರಿಗಳೆಂದು ದೂರಬೇಡಿ , ಕೇಂದ್ರ ಸರಕಾರ , ಯಾವುದೇ ರಾಜ್ಯ ಸರಕಾರ ನಿಮ್ಮ ಅತ್ಯಾಚಾರಕ್ಕೆ ಹೊಣೆ ಅಲ್ಲ ನಿಮ್ಮ ಸ್ಥಿತಿಗೆ ಕಾರಣ ನಿಮ್ಮ ಸ್ವೇಚ್ಚಾಚಾರ .

ಹಿಂದೂ ಸಮಾಜ ಹೆಣ್ಣಿಗೆ ಅಥವಾ ಗಂಡಿಗೆ ಒಂದು ಸಂಸ್ಕಾರ ಅಂತ ಕೊಟ್ಟಿದೆ. ಆ ಸಂಸ್ಕಾರದ ಅಡಿಯಲ್ಲಿ ವ್ಯಸನ ಮುಕ್ತ ಸಮಾಜ ಸಂಸ್ಕಾರದಿಂದ ಬೆಳೆಯಬೇಕೆನ್ನುವುದನ್ನು ಹೇಳಿಕೊಡುತ್ತೆ ಆದ್ರೆ ಅದನ್ನು ಪಾಲಿಸುವ ಯುವ ಸಮೂಹ ಕಡಿಮೆ.

ಒಂದು ಸಂದರ್ಭದಲ್ಲಿ ಹೆಚ್ಚಿನ ಕಡೆಗಳಲ್ಲಿ ಸಹೋದರಿಯರನ್ನು ರಕ್ಷಿಸಲು ಭಜರಂಗದಳ ಕಾರ್ಯಕರ್ತರು ಯಾರು ಏನು ಎಲ್ಲಿಯವರು ಎಂದು ಕೇಳಿ ವಿಚಾರಿಸುವ ಕ್ರಮ ಇತ್ತು ಇವಾಗ ಅವರಿಗೆ ಎದುರಾಗಿ ನೈತಿಕಪೊಲೀಸ್ಗಿರಿ ಎಂದು ಹಣೆಪಟ್ಟಿಕಟ್ಟಿದ ನಂತರ ಅನೇಕ ನಗರಗಳಲ್ಲಿ ಏನೇ ಆದರೂ ರಕ್ಷಣೆ ಮತ್ತು ಶಿಕ್ಷೆ ನಡೆಯುತ್ತಿಲ್ಲ .

ಭಜರಂಗದಳ ಕಾರ್ಯಕ್ಕೆ ಅಡ್ಡವಾಗಿ ಬಂದ ಪೊಲೀಸರು ಕೂಡ ನಿರ್ಜನ ಪ್ರದೇಶಗಳಿಗೆ ಗಸ್ತು ತಿರುಗುವುದಿಲ್ಲ ಅನ್ನೋದು ವಾಸ್ತವ. ಇಂತಹ ಅನೇಕ ಘಟನೆಗಳು ಪಾಠವಾಗಿ ನಾವು ಪರಿಗಣಿಸಬೇಕು.

LEAVE A REPLY

Please enter your comment!
Please enter your name here