ದಪ್ಪಮೆಣಸಿನ ಕಾಯಿಯ ಅರೋಗ್ಯ ಲಾಭಗಳು.

0
2678

ದಪ್ಪ ಮೆಣಸಿನಕಾಯಿ ದೊಣ್ಣೆ ಮೆಣಸಿನಕಾಯಿ ಹೀಗೆ ಕರೆಯಲ್ಪಡುವ ಈ ತರಕಾರಿಯು ಅದ್ಭುತವಾದ ಆಂಟಿಆಕ್ಸಿಡೆಂಟ್ ಗುಣವನ್ನು ಹೇರಳವಾಗಿ ಹೊಂದಿದೆ, ಇದೇ ಕಾರಣಕ್ಕಾಗಿಯೇ ಕ್ಯಾಪ್ಸಿಕಂ ಅತಿಹೆಚ್ಚಾಗಿ ತಿನ್ನುವವರಿಗೆ ಕ್ಯಾನ್ಸರ್ ಕಾಯಿಲೆ ಬರುವುದಿಲ್ಲ, ಕ್ಯಾಪ್ಸಿಕಮ್ ಅನ್ನು ಮೊದಲು ಅಮೇರಿಕಾದ ಉಷ್ಣವಲಯದಲ್ಲಿ ಬೆಳೆಯುತ್ತಿದ್ದರು, ಹಾಗೂ ಬದಲಿಗೆ ಈ ತರಕಾರಿಯನ್ನು ಔಷಧಗಳ ತಯಾರಿಕೆಗೆ ಬಳಸುತ್ತಿದ್ದರು.

ಕ್ಯಾಪ್ಸಿಕಮ್ ನಲ್ಲು ಕೊಬ್ಬಿನ ಅಂಶ ಬಹಳ ಕಡಿಮೆ ಇದೆ, ಹಾಗೂ ದೇಹಕ್ಕೆ ಬೇಕಿರುವ ಪೋಷಕಾಂಶ ಅತಿಹೆಚ್ಚಿನ ಪ್ರಮಾಣದಲ್ಲಿ ಇದೆ ಇದರಿಂದಲೇ ಹಲವು ಕಾಯಿಲೆಗಳನ್ನು ಗುಣಪಡಿಸುವಲ್ಲಿ ಈ ತರಕಾರಿ ನೆರವಾಗುತ್ತದೆ, ಹಾಗಾದರೆ ಅಡುಗೆಯಲ್ಲಿ ಬಳಸುವುದರಿಂದ ಇರುವ ಆರೋಗ್ಯದ ಲಾಭಗಳ ಬಗ್ಗೆ ತಿಳಿಯೋಣ ಬನ್ನಿ.

ಕಣ್ಣುಗಳಿಗೆ ಉತ್ತಮ : ಕೆಂಪುಬಣ್ಣದ ದಪ್ಪ ಮೆಣಸಿನಕಾಯಿ ತರಕಾರಿಯಲ್ಲಿ ವಿಟಮಿನ್ ಗೆ ಅಧಿಕವಾಗಿ ಇರುತ್ತದೆ, ಆದ್ದರಿಂದ ಇವು ಕಣ್ಣಿನ ದೃಷ್ಟಿಗೆ ಉತ್ತಮ ಅದರಲ್ಲೂ ಇರುಳು ಕಣ್ಣಿನ ಸಮಸ್ಯೆ ಇದ್ದವರಿಗೆ ಉತ್ತಮ ಔಷಧಿ, ಇದರಲ್ಲಿ ಲುಟಿನ್ ಎಂಬ ಕ್ಯಾರೋಟಿನ್ ಅಧಿಕವಾಗಿದ್ದು, ಕಣ್ಣುಗಳು ತಮ್ಮ ಶಕ್ತಿ ಕಳೆದುಕೊಳ್ಳುವುದನ್ನು ತಪ್ಪಿಸುತ್ತದೆ, ವಯಸ್ಸಿಗೆ-ಸಂಬಂಧಿಸಿದ ದೃಷ್ಟಿದೋಷವನ್ನು ನಿವಾರಿಸುತ್ತದೆ, ಕಣ್ಣಿನ ಪೊರೆ ಗಳು ಬರುವಿಕೆಯನ್ನು ತಡೆಯುತ್ತದೆ ಕಾರಣ ಇದರಲ್ಲಿ ಹೆಚ್ಚಿನ ಪ್ರಮಾಣದ ಬೀಟಾ ಕೆರೋಟಿನ್ ಮತ್ತು ವಿಟಮಿನ್-ಸಿ ಇರುತ್ತದೆ.

ತೆಳ್ಳನೆಯ ದೇಹಕ್ಕಾಗಿ : ದಪ್ಪಮೆಣಸಿನಕಾಯಿ ದೈನಂದಿನ ಆಹಾರದಲ್ಲಿ ಬಳಕೆಯಾಗುವುದರಿಂದ ದೇಹದ ಛಾಯ ಪಚನಕ್ರಿಯೆ ಉತ್ತಮಗೊಳ್ಳುತ್ತದೆ, ಹೃದಯದ ಬಡಿತ ಹಾಗೂ ರಕ್ತದ ಒತ್ತಡವನ್ನು ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ನಿರ್ವಹಿಸುವುದರಿಂದ ಪಚನಕ್ರಿಯೆ ಹೆಚ್ಚಾಗಿ ದೇಹದ ಕೊಬ್ಬು ಕರಗಿ ದೇಹವು ತೆಳುವಾಗಿಸುತ್ತದೆ.

ಕ್ಯಾನ್ಸರ್ ವಿರೋಧಿ ಗುಣ : ದಪ್ಪಮೆಣಸಿನಕಾಯಿ ಯಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಪೋಷಕಾಂಶಗಳು ಸಮೃದ್ಧವಾಗಿದೆ, ಇವು ಕ್ಯಾನ್ಸರ್ ಕಣಗಳು ಒಂದಿಗೆ ಹೋರಾಡುವ ಶಕ್ತಿಯನ್ನು ಹೊಂದಿದೆ, ದೇಹದಲ್ಲಿ ದೀರ್ಘಕಾಲದ ಅನಗತ್ಯ ಆಕ್ಸಿದೇಟಿವ್ ಒತ್ತಡದಿಂದ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು, ಮಿತವಾಗಿ ಕ್ಯಾಪ್ಸಿಕಂ ಸೇವನೆ ಮಾಡುವುದರಿಂದ ಈ ಅಪಾಯದಿಂದ ದೂರವುಳಿಯಬಹುದು, ಕ್ಯಾಪ್ಸಿಕಂ ನಲ್ಲಿರುವ ಕಿಣ್ವಗಳು ಗ್ಯಾಸ್ಟ್ರಿಕ್ ಕ್ಯಾನ್ಸರ್ ಮತ್ತು ಅನ್ನನಾಳದ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ.

ಪೊಟ್ಯಾಶಿಯಂ ಪ್ರಯೋಜನ : ಕ್ಯಾಪ್ಸಿಕಂ ತರಕಾರಿಯಲ್ಲಿ ಪೊಟಾಶಿಯಮ್ ಅಕ್ಷ ಉತ್ತಮವಾಗಿತ್ತು, ಈಗ ನಿಜವು ದೇಹದಲ್ಲಿ ಧರ್ಮಗಳು ಮತ್ತು ಖನಿಜಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲದೆ ಸ್ನಾಯುಗಳ ಕಾರ್ಯವನ್ನು ಹೆಚ್ಚಿಸುತ್ತದೆ ಹಾಗೂ ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಕಬ್ಬಿಣ ಅಂಶದ ಕೊರತೆ : ಕ್ಯಾಪ್ಸಿಕಂ ದೈನಂದಿನ ಬಳಕೆಯಿಂದ ದೇಹಕ್ಕೆ ಅಗತ್ಯ ಇರುವ ವಿಟಮಿನ್ ಸಿ 300% ನೀಡುತ್ತದೆ, ಕಬ್ಬಿಣವನ್ನು ಸರಿಯಾಗಿ ಹೀರಿಕೊಳ್ಳಲು ವಿಟಮಿನ್ಸ್ ಅವಶ್ಯಕ, ಆದ್ದರಿಂದ ದೇಹದಲ್ಲಿ ಕಬ್ಬಿಣಾಂಶ ಕೊರತೆ ಇದ್ದವರು ಕ್ಯಾಪ್ಸಿಕಂ ತರಕಾರಿಯನ್ನು ತಮ್ಮ ದೈನಂದಿನ ಅಡುಗೆಯಲ್ಲಿ ಬಳಸಿಕೊಳ್ಳಿ.

LEAVE A REPLY

Please enter your comment!
Please enter your name here