ಸಕಾರಾತ್ಮಕ ಯೋಚನೆ. ಮಹಿಳೆಯೊಬ್ಬಳು ತನ್ನ ದಿನದ ಸಂತೋಷವನ್ನು ಪ್ರತಿದಿನ ಮಲಗುವ ಮೊದಲು ಕಾಗದದ ಮೇಲೆ ಬರೆಯುತ್ತಿದ್ದಳು. ಒಂದು ರಾತ್ರಿ ಅವಳು ಹೀಗೆ ಬರೆದಳು: ನಾನು ಖುಷಿಯಾಗಿದ್ದೇನೆ. ನನ್ನ ಪತಿ ರಾತ್ರಿಯಿಡೀ ಜೋರಾಗಿ ಗೊರಕೆ ಹೊಡೆಯುತ್ತಾರೆ ಎಂಬುದು ನನಗೆ ಸಂತೋಷದ ವಿಷಯ, ಏಕೆಂದರೆ ಅವನು ಸುಖವಾಗಿದ್ದಾನೆ ಮತ್ತು ಅವನು ನನ್ನ ಬಳಿ ಇದ್ದಾನೆ. ಇದಕ್ಕಾಗಿ ದೇವರಿಗೆ ಧನ್ಯವಾದ.
ನಾನು ಖುಷಿಯಾಗಿದ್ದೇನೆ. ನನ್ನ ಮಗನದು ದಿನಾ ಬೆಳಿಗ್ಗೆ ಒಂದೇ ದೂರು ರಾತ್ರಿಯಿಡೀ ಸೊಳ್ಳೆಗಳು ಮತ್ತು ಕೀಟಗಳು ಮಲಗಲು ಬಿಡುವುದಿಲ್ಲ ಎಂಬ ವಿಷಯದಲ್ಲಿ ಎಂದು ನನಗೆ ಸಂತೋಷವಾಗಿದೆ. ಅಂದರೆ, ಅವನು ರಾತ್ರಿಯನ್ನು ಮನೆಯಲ್ಲಿ ಕಳೆಯುತ್ತಾನೆ, ಮತ್ತು ಅಲ್ಲಿ ಇಲ್ಲಿ ತಿರುಗಾಡಲು ಹೋಗುವುದಿಲ್ಲ. ಧನ್ಯವಾದ ದೇವರೆ..
ನಾನು ಖುಷಿಯಾಗಿದ್ದೇನೆ. ಪ್ರತಿ ತಿಂಗಳು, ವಿದ್ಯುತ್, ಗ್ಯಾಸ್, ಪೆಟ್ರೋಲ್, ನೀರು ಇತ್ಯಾದಿಗಳಿಗೆ ಸಾಕಷ್ಟು ಹಣ ಪಾವತಿಸಬೇಕಾಗುತ್ತದೆ. ಅಂದರೆ, ಈ ಎಲ್ಲಾ ವಸ್ತುಗಳು ನನ್ನ ಬಳಿ ಇವೆ, ಮತ್ತು ನನ್ನ ಬಳಕೆಯಲ್ಲಿವೆ. ಇದು ಇಲ್ಲದಿದ್ದರೆ, ಜೀವನ ಎಷ್ಟು ಕಷ್ಟ? ಧನ್ಯವಾದ ದೇವರೆ.
ನಾನು ಖುಷಿಯಾಗಿದ್ದೇನೆ. ದಿನದ ಕೊನೆಗೆ ನನಗೆ ಆಯಾಸವಾಗುತ್ತದೆ ನಿಜ, ಅಂದರೆ ದಿನವಿಡೀ ಕಷ್ಟಪಟ್ಟು ದುಡಿಯುವ ಶಕ್ತಿ ಮತ್ತು ಧೈರ್ಯ ನನ್ನಲ್ಲಿದೆ, ದೇವರ ದಯೆಯಿಂದ ಮಾತ್ರ ಇದು ಸಾಧ್ಯವಾಗಿದೆ.
ನಾನು ಖುಷಿಯಾಗಿದ್ದೇನೆ. ಪ್ರತಿದಿನ ನನ್ನ ಮನೆಯನ್ನು ಸ್ವಚ್ಛ ಮಾಡಬೇಕು ಅಲ್ಲದೇ, ಬಾಗಿಲು ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸಬೇಕು ಎಂಬದು ನನಗೆ ಸಂತೋಷದ ವಿಷಯ. ಅದೃಷ್ಟವಶಾತ್, ನನಗೆ ಮನೆ ಇದೆ. ಸೂರು ಇಲ್ಲದವರ ಗತಿಯೇನು? ಧನ್ಯವಾದಗಳು ದೇವರೇ, ಧನ್ಯವಾದಗಳು.
ನಾನು ಖುಷಿಯಾಗಿದ್ದೇನೆ. ಕೆಲವೊಮ್ಮೆ, ನಾನು ಸ್ವಲ್ಪ ಅನಾರೋಗ್ಯಕ್ಕೆ ಒಳಗಾಗುತ್ತೇನೆ. ಅಂದರೆ, ನಾನು ಹೆಚ್ಚಾಗಿ ಆರೋಗ್ಯವಾಗಿರುತ್ತೇನೆ. ಧನ್ಯವಾದಗಳು ದೇವರೇ, ಧನ್ಯವಾದಗಳು.
ನಾನು ಖುಷಿಯಾಗಿದ್ದೇನೆ. ಪ್ರತಿ ವರ್ಷ ಹಬ್ಬ ಹರಿದಿನಗಳನ್ನು ಅದ್ಧೂರಿಯಾಗಿ ಆಚರಿಸುವಾಗ, ಉಡುಗೊರೆಗಳನ್ನು ನೀಡುವಾಗ ಪರ್ಸ್ ಖಾಲಿಯಾಗುತ್ತದೆ. ಅಂದರೆ, ನನಗೆ ಪ್ರೀತಿಪಾತ್ರರು, ನನ್ನ ಹಿತೈಷಿಗಳು, ಸಂಬಂಧಿಕರು, ಸ್ನೇಹಿತರು, ನನ್ನ ಸ್ವಂತದವರು ಯಾರಿಗೆಲ್ಲಾ ನಾನು ಉಡುಗೊರೆಗಳನ್ನು ನೀಡಬಹುದು? ಅದಿಲ್ಲದಿದ್ದರೆ ಜೀವನ ಎಷ್ಟು ನೀರಸ. ಧನ್ಯವಾದಗಳು ದೇವರೇ, ಧನ್ಯವಾದಗಳು.
ನಾನು ಖುಷಿಯಾಗಿದ್ದೇನೆ ಎಂದು ಪ್ರತಿದಿನ ಅಲಾರಾಂ ಶಬ್ದ ಕೇಳಿದ ಮೇಲೆ ಎದ್ದೇಳುತ್ತೇನೆ. ಅಂದರೆ, ಪ್ರತಿದಿನ, ನಾನು ಹೊಸ ಬೆಳಿಗ್ಗೆ ನೋಡುತ್ತೇನೆ. ಇದು ಕೂಡ ದೇವರ ವರವೆ. ಈ ಜೀವನ ಸೂತ್ರವನ್ನು ಅನುಸರಿಸಿ, ತನ್ನ ಮತ್ತು ತನ್ನ ಜನರ ಜೀವನ ಸುಖಮಯವಾಗಿರಲಿ ಮತ್ತು ಶಾಂತಿ ನೆಮ್ಮದಿ ಇರಲಿ ಎಂದು ಬಯಸೋಣ.
ಚಿಕ್ಕದೋ ದೊಡ್ಡದೋ ಕಷ್ಟದಲ್ಲಿಯೂ ಸುಖವನ್ನು ಹುಡುಕು, ಅದೇನೇ ಇರಲಿ, ಆ ದೇವರಿಗೆ ಕೃತಜ್ಞತೆ ಸಲ್ಲಿಸಿ, ಜೀವನ ಸುಖಮಯವಾಗಿರಲಿ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.