ನೀವು ಯಾವಾಗಲಾದ್ರೂ ಬಿಸಿ ನೀರು ಕುಡಿತೀರಾ ಹಾಗಾದ್ರೆ ಈ ವಿಚಾರ ತಿಳಿದಿಕೊಳ್ಳೋದು ತುಂಬ ಮುಖ್ಯ.

0
7009

ನೀವು ಯಾವಾಗಲಾದ್ರೂ ಬಿಸಿ ನೀರು ಕುಡಿತೀರಾ ಹಾಗಾದ್ರೆ ಈ ವಿಚಾರ ತಿಳಿದಿಕೊಳ್ಳೋದು ತುಂಬ ಮುಖ್ಯ. ಬೇಡದ ಬೊಜ್ಜು ಶೇಖರಣೆ, ರ’ಕ್ತದೊತ್ತಡ, ಮುಟ್ಟಿನ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳಿಗೆ ಕಾರಣ ತಿಳಿಯೋಣ ಬನ್ನಿ. ಊಟದ ನಂತರ ತಣ್ಣೀರು ಕುಡಿಯುವುದರಿಂದ ಆಗುವ ಪರಿಣಾಮಗಳೇನು ಎಂದು ಎಂದಾದರೂ ಯೋಚಿಸಿದ್ದೀರಾ. ಊಟದ ನಂತರ ತಣ್ಣೀರು ಕುಡಿಯುವುದರಿಂದ ಆಹಾರ ಪದಾರ್ಥದಲ್ಲಿ ಇರುವ ಎಣ್ಣೆಯ ಪದಾರ್ಥವು ಗಟ್ಟಿಗೊಳ್ಳುತ್ತದೆ. ಇದರಿಂದ ಕರುಳಿನ ಕೆಳಭಾಗದಲ್ಲಿ ಕೊಬ್ಬಿನಂಶ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಇದು ದೀರ್ಘಾವಧಿಯ ಕರುಳು ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಬರೀ ಕುಡಿಯೋದಷ್ಟೇ ಅಲ್ಲ, ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ದೇಹದ ಎಲ್ಲಾ ಭಾಗದಲ್ಲೂ ರ’ಕ್ತ ಪರಿಚಲನೆಯು ಸುಗಮವಾಗಿ ಆಗುವುದು. ಅಲ್ಲದೆ ಅಪಧಮನಿ ಮತ್ತು ಅಭಿಧಮನಿಗಳ ಕಾರ್ಯವು ಸುಗಮವಾಗುವುದು. ಬೆಳಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣಕಾರಿ ಗ್ರಂಥಿಗಳನ್ನು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಪ್ರಚೋದಿಸುತ್ತದೆ.

ಇಷ್ಟೇ ಅಲ್ಲದೆ ಬೆಚ್ಚಗಿನ ನೀರು ರ’ಕ್ತದ ಹರಿವು ಆರೋಗ್ಯಕರವಾಗಿರುತ್ತದೆ. ರ’ಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗದು. ಜೊತೆಗೆ ಹೃದಯ ರ’ಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ನೀರಿನ ಕೊರತೆಯು ದೀರ್ಘಾವಧಿಯ ಮಲಬದ್ಧತೆಯನ್ನು ಸೃಷ್ಟಿಸುತ್ತದೆ. ಆಹಾರ ಪದಾರ್ಥಗಳು ಕರುಳಿನಲ್ಲಿ ಸಂಗ್ರಹವಾದಾಗ, ಕರುಳಿನ ಚಲನೆ ನಿಧಾನವಾಗುತ್ತದೆ. ಹೊಟ್ಟೆ ಖಾಲಿ ಇರುವಾಗ ಬೆಚ್ಚಗಿನ ನೀರು ಕುಡಿದರೆ ಜೀರ್ಣ ಕ್ರಿಯೆ ಸುಗಮವಾಗುತ್ತದೆ.

ಋುತುಚಕ್ರದ ಸಮಯದಲ್ಲಿ ಉಂಟಾಗುವ ಸೆಳೆತವನ್ನು ಬಿಸಿ ನೀರು ಕುಡಿಯುವುದರ ಮೂಲಕ ನಿಯಂತ್ರಿಸಬಹುದು. ಸ್ವಲ್ಪ ಜೀರಿಗೆಯನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಮುಟ್ಟಿನ ಸೆಳೆತವು ಕಡಿಮೆಯಾಗುತ್ತದೆ. ಇದು ಕಿಬ್ಬೊಟ್ಟೆಯ ಸ್ನಾಯುಗಳ ಮೇಲೆ ಪರಿಣಾಮ ಬೀರಿ ನೋವನ್ನು ಶ’ಮನಗೊಳಿಸುತ್ತದೆ. ಇಷ್ಟೆಲ್ಲಾ ಪ್ರಯೋಜನಗಳು ಬಿಸಿನೀರಿನಿಂದ ಸಿಗುವುದಾದರೆ ಇಂದಿನಿಂದ ಬಿಸಿ ನೀರನ್ನು ಬಿಡದೇ ಕುಡಿಯೋಣ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ. ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here