ಇಂದಿನ ಗ್ರಹಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಗ್ರಹಣ ದೋಷ ನಿವಾರಣಾ ಮಂತ್ರವನ್ನು ತಪ್ಪದೆ ಪಠಿಸಿ.

0
4117

ಚಂದ್ರ ಗ್ರಹಣ. ದಿನಾಂಕ 8.11.2022. ಕಾರ್ತಿಕ ಶುದ್ಧ ಹುಣ್ಣಿಮೆಯಂದು ಗ್ರಸ್ತೊದಯ ಚಂದ್ರ ಗ್ರಹಣ ಸಂಭವಿಸಲಿದ್ದು. ಇದು ನಮ್ಮ ದೇಶ ಮತ್ತು ರಾಜ್ಯಕ್ಕೆ ಗೊಚರಿಸಲಿದ್ದು ನಮಗೆ ಈ ಗ್ರಹಣದ ಪ್ರಭಾವ ಇರುವುದರಿಂದ ಆಚರಣೆಯ ಅವಶ್ಯಕಥೆ ಇರುತ್ತದೆ. 8.11.2022ನೇ ಮಂಗಳವಾರದಂದು ಚಂದ್ರನಿಗೆ ರಾಹುಗ್ರಸ್ತ ಚಂದ್ರ ಗ್ರಹಣ ಸಂಭವಿಸುತ್ತದೆ.

ಈ ಗ್ರಹಣವು ಭರಣೀ ನಕ್ಷತ್ರ ಮೇಷ ರಾಶಿಯಲ್ಲಿ ಸಂಭವಿಸುತ್ತದೆ. ಹಾಗಾಗೀ ಭರಣಿ ನಕ್ಷತ್ರದವರಿಗೂ ಎಲ್ಲ ಮೇಷ ರಾಶಿಯವರಿಗೂ ಹೆಚ್ಚಿನ ಅನಿಷ್ಟಕಾರಕವಾಗಿರುತ್ತದೆ. ಅಲ್ಲದೇ ಎಲ್ಲ ಅಶ್ವಿನಿ, ಭರಣಿ, ಕೃತ್ತಿಕ, ಹುಬ್ಬ, ಪೂರ್ವಾಷಾಡ ನಕ್ಷತ್ರದವರಿಗೂ. ವೃಷಭ, ಮಕರ ರಾಶಿಯವರಿಗೂ ಅನಿಷ್ಟದಾಯಕವಾಗಿರುತ್ತದೆ. ಮಿಥುನ, ವೃಶ್ಚಿಕ, ಕನ್ಯಾ, ಕುಂಭ ರಾಶಿಯವರಿಗೆ ಶುಭದಾಯಕವಾಗಿರುತ್ತದೆ.

ಕರ್ಕಾಟಕ. ಸಿಂಹ. ತುಲಾ. ಧನು. ಮೀನ ರಾಶಿಯವರಿಗೆ ಮಿಶ್ರ ಫಲವಿರುತ್ತದೆ. ಈ ದಿನ ಮಧ್ಯಾಹ್ನ 2.40ಕ್ಕೆ ಗ್ರಹಣ ಪ್ರಾರಂಭವಾಗಿ ಸಂಜೆ 6.20ಕ್ಕೆ ಮೊಕ್ಷವಾಗುತ್ತದೆ.
ಈ ದಿನ ಸೂರ್ಯ ಉದಯದ ನಂತರ ಅಂದರೆ ಬೆಳಗ್ಗೆ 6.22ರಿಂದ ಸಂಜೆ ಗ್ರಹಣ ಮೊಕ್ಷದವರೆಗೂ ಭೊಜನ ನಿಷಿದ್ಧ. ಗ್ರಹಣ ಮೋಕ್ಷ ನಂತರ ಸ್ನಾನ ಮಾಡಿ ನಂತರ ಅಡಿಗೆ ಮಾಡಿ ಊಟ ಮಾಡಬಹುದಾಗಿದೆ.

ಅಶಕ್ತರು ಮಧ್ಯಾಹ್ನ 12.30ವಳಗೆ ಉಪಹಾರ ಸೇವಿಸಬಹುದಾಗಿದೆ. ಆದರೆ ಗ್ರಹಣ ಕಾಲದಲ್ಲಿ ಏನೂ ಸೇವಿಸಬಾರದು. ಗ್ರಹಣ ಕಾಲದಲ್ಲಿ ಆದಷ್ಟು ದೇವಿ ಆರಾಧನೆ ಮಾಡುವುದರಿಂದ ಮುಂದಿನ ದಿನಗಳಲ್ಲಿ ಉತ್ತಮ ಫಲ ಕಾಣಬಹುದಾಗಿದೆ.

ಗ್ರಹಣ ದೊಷ ಇರುವ ಎಲ್ಲ ರಾಶಿ ನಕ್ಷತ್ರ ದವರೂ ಬಿಳಿ ಬಟ್ಟೆಯಲ್ಲಿ ಅಕ್ಕಿಯನ್ನೂ ಹೊಗೆ ಬಣ್ಣದ ಬಟ್ಟೆಯಲ್ಲಿ ಉದ್ದನ್ಧು ಹಣದೊಂದಿಗೆ ಗ್ರಹಣಕ್ಕಿಂತ ಮುಂಚೆ ತೆಗೆದಿಟ್ಟು ಗ್ರಹಣ ಕಾಲದಲ್ಲಿ ಸ್ನಾನ ಮಾಡಿ ಲಲಿತ ಸಹಸ್ರನಾಮ ಅಥವ ದುರ್ಗಾ ಅಷ್ಟೊತ್ತರ ಪಠಿಸಿ ಗ್ರಹಣ ನಂತರ ಸ್ನಾನ ಮಾಡಿ ಇದೇ ದಿನ ಅಥವಾ ಮರುದಿನ ದೇವಿ ದೇವಾಲಯದ ಅರ್ಚಕರಿಗೆ ಕೊಡುವುದು ಗ್ರಹಣ ದೊಷಕ್ಕೆ ಪರಿಹಾರ ಆಗಿರುತ್ತದೆ.

ವಿ.ಸೂ. ಸಾಮಾನ್ಯವಾಗಿ ಚಂದ್ರ ಗ್ರಹಣ ರಾತ್ರಿ ಸಂಭವಿಸುವುದರಿಂದ ಹಗಲು ಏಕೆ ಆಚರಣೆ ಮಾಡಬೇಕು ಎಂಬುದು ಹಲವರ ಪ್ರಶ್ನೆಯಾಗಿದ್ದು. ಈ ಗೊಂದಲಕ್ಕೆ ಉತ್ತರವಾಗಿ. ಸೂರ್ಯ ಅಸ್ತದ ನಂತರವೂ ಚಂದ್ರ ಗ್ರಹಣ ಇರುವುದರಿಂದ ಅಂದರೆ ಸೂರ್ಯ ಅಸ್ತದ ಕಾಲ ಸಂಜೆ 6.01ಆಗಿದ್ದು ಗ್ರಹಣ ಮೋಕ್ಷ ಕಾಲ ಸಂಜೆ 6.20ಆಗಿರುತ್ತದೆ. ಈ ಕಾರಣಗಳಿಂದ ಈ ಚಂದ್ರ ಗ್ರಹಣದ ಆಚರಣೆ ನಮಗೆ ಇರುತ್ತದೆ.

ಮೂಢನಂಬಿಕೆಗೆ ಒಳಗಾಗಿ ಗ್ರಹಣ ಕಾಲದಲ್ಲಿ ಆಹಾರ ಸೇವಿಸುವುದು, ಮೊಜು ಮಸ್ತಿ, ಮನರಂಜನೆ ಯಂತಹ ಕೆಲಸ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಆಕಸ್ಮಿಕ ತೊಂದರೆ ಖಂಡಿತ. ಬದಲಾಗಿ ಗ್ರಹಣ ಕಾಲದರಲ್ಲಿ ದೇವಿ ಆರಾಧನೆ ನಮ್ಮ ಎಲ್ಲ ಪಾಪ ತೊಳೆಯಲು ಮತ್ತು ಉತ್ತಮ ಭವಿಷ್ಯ ನೀಡುವುದಕ್ಕೆ ಅತೀ ಸಹಕಾರವಾಗಲಿದೆ.

ಗ್ರಹಣ ದೋಷ ನಿವಾರಣಾ ಮಂತ್ರ :

ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ।
ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ॥

ಮಹಾಶೀರ್ಷೋಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ।
ಅತನುಶ್ಚೋರ್ಧ್ವ-ಕೇಶಶ್ಚ ಪೀಡಾಂ ಹರತು ಮೇ ತಮಃ॥

LEAVE A REPLY

Please enter your comment!
Please enter your name here