ಮಗ ಅಮೆರಿಕದಲ್ಲಿ ನೆಲಸಿದ್ದಾನೆ, ಒಳ್ಳೆಯ ಕೆಲಸದಲ್ಲಿದ್ದಾನೆ, ಹೇರಳವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆ, ಸುಂದರ ಪತ್ನಿ, ಮುದ್ದಾದ ಮಕ್ಕಳು, ಐಷಾರಾಮಿ ಕಾರು, ದೊಡ್ಡ ಬಂಗಲೆ ಎಲ್ಲವೂ ಇದೆ.
ಆತನ ತಂದೆ-ತಾಯಿ ಹಳ್ಳಿಯಲ್ಲಿ ತುಂಬಾ ಹಳೆಯದಾದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ವೃದ್ಧರಾಗಿದ್ದಾರೆ, ರೋಗಿಗಳು ಮತ್ತು ಅಸಹಾಯಕರು.
ಮಗನು ಅವರಿಗೆ ಸಹಾಯ ಮಾಡುವ ಬದಲು ತಂದೆಗೆ ಪತ್ರ ಬರೆಯುತ್ತಾನೆ. ದಯವಿಟ್ಟು ಗಮನವಿಟ್ಟು ಓದಿ ಮತ್ತು ಯಾರು ಯಾರಿಗೆ ಹೇಗೆ ಬರೆಯಬೇಕೆಂದು ಚನ್ನಾಗಿ ಯೋಚಿಸಿ?
ತಂದೆಯ ಹೆಸರಿಗೆ ಮಗನ ಪತ್ರ.
ತೀರ್ಥರೂಪು ತಂದೆಯವರಿಗೆ ಸಾಷ್ಟಾಂಗ ನಮಸ್ಕಾರಗಳು.
ನಿಮ್ಮ ಆಶೀರ್ವಾದದಿಂದ, ನಿಮ್ಮ ಭಾವನೆಗಳು ಮತ್ತು ನಿಮ್ಮ ಆಸೆಗಳಿಗೆ ಅನುಗುಣವಾಗಿ ನಾನು ಅಮೇರಿಕಾದಲ್ಲಿ ಉನ್ನತ ಹುದ್ದೆಯಲ್ಲಿದ್ದು ಸದಾ ಬ್ಯುಸಿಯಾಗಿದ್ದೇನೆ.
ಇಲ್ಲಿ ನನಗೆ ಹಣ, ಬಂಗಲೆ, ಕಾರು ಎಲ್ಲವೂ ಇದೆ, ನನಗೆ ಇಲ್ಲದಿರುವುದೆಂದರೆ ಸಮಯ ಮಾತ್ರ. ನಾನು ನಿಮ್ಮನ್ನು ಭೇಟಿ ಮಾಡಬೇಕು, ನಾನು ನಿಮ್ಮ ಪಕ್ಕದಲ್ಲಿ ಕುಳಿತು ಮಾತನಾಡಬೇಕು ಎಂದು ಬಯಸುತ್ತೇನೆ.
ನಾನು ನಿಮ್ಮ ದುಃಖ ಮತ್ತು ನೋವನ್ನು ಹಂಚಿಕೊಳ್ಳಲು ಬಯಸುತ್ತೇನೆ, ಆದರೆ ನನ್ನ ಮತ್ತು ನಿಮ್ಮ ಕ್ಷೇತ್ರದ ಅಂತರ, ಇಲ್ಲಿ ಮಕ್ಕಳ ಅಧ್ಯಯನ ಕಡ್ಡಾಯವಾಗಿದೆ.
ಕಚೇರಿ ಕೆಲಸ ಮಾಡಲೇಬೇಕು ನಾನು ಏನ್ ಮಾಡಲಿ? ನಿಮಗೆ ಹೇಗೆ ಹೇಳಲಿ? ನೀವು ಅಂದು ಇಷ್ಟಪಟ್ಟಿದ್ದ ಸ್ವರ್ಗಭೂಮಿ ಇದು.
ನಾನು ಬಯಸಿದರೂ ತಂದೆ-ತಾಯಿಗಳಾದ ನಿಮ್ಮ ಬಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಅಪ್ಪಾ ನನಗೆ ಪ್ರತಿನಿತ್ಯ ನನ್ನ ಹಲವಾರು ಜವಾಬ್ದಾರಿಗಳು ಸದಾ ನೆನಪಿಗೆ ಬರುತ್ತಿವೆ-
ತಂದೆ-ತಾಯಿಗಳು ಮಕ್ಕಳನ್ನು ತುಂಬಾ ಕಷ್ಟಪಟ್ಟು ಬೆಳೆಸಿ ತಾವು ಗಳಿಸಿದ್ದ ಎಲ್ಲವನ್ನೂ ಮಾರಿ ತಮ್ಮ ಮಕ್ಕಳಿಗೆ ಕಲಿಸುತ್ತಾರೆ, ಮತ್ತು ಮಕ್ಕಳು ಎಲ್ಲರನ್ನು ಬಿಟ್ಟು ವಿದೇಶಕ್ಕೆ ಹಾರಿ ಹೋಗುತ್ತಾರೆ.
ಮಗನಾಗಿ ನಾನು ನನ್ನ ತಂದೆ-ತಾಯಿಯರನ್ನು ವೃದ್ಯಾಪ್ಯದಲ್ಲಿ ನೋಡಿಕೊಳ್ಳುತ್ತಿಲ್ಲ ಅವರ ಕಣ್ಣೀರು ಒರೆಸುತ್ತಿಲ್ಲ ನನ್ನಂತಹಾ ಮಗ ಪ್ರಯೋಜನವಿಲ್ಲ ಎಂದು ಅಳುತ್ತಿದ್ದೇನೆ. ಆದರೆ ಅಪ್ಪಾ , ಸ್ವಲ್ಪ ಯೋಚಿಸಿ ನೋಡೀ ನನಗೆ ಎಂಜಿನಿಯರಿಂಗ್ ಎಂದರೇನು ಎಂದು ಎಲ್ಲಿ ಗೊತ್ತಿತ್ತು? ನನಗೆ ಹಣದ ಮೌಲ್ಯ ಏನು ಎಂದು ಎಲ್ಲಿ ಗೊತ್ತು? ಅಮೆರಿಕ ಎಲ್ಲಿದೆ ಎಂದು ನನಗೆ ಎಲ್ಲಿ ಗೊತ್ತಿತ್ತು?
ನನ್ನ ಕಾಲೇಜು, ಹಣ ಮತ್ತು ಅಮೇರಿಕಾ ಕೇವಲ ಕಲ್ಪನೆಯಾಗಿತ್ತು, ಅಂದು ನಿನ್ನ ಮಡಿಲಲ್ಲಿ ಮಲಗಿರುವುದೇ ಎಲ್ಲವೂ ಆಗಿತ್ತು ಅಲ್ಲವೇ? ನೀವೇ ನನ್ನನ್ನು ಒಮ್ಮೆಯೂ ದೇವಸ್ಥಾನಕ್ಕೆ ಕಳುಹಿಸದೇ ಶಾಲೆಗೆ ಕಳುಹಿಸಿದರಲ್ಲಾ. ನನಗೆ ಹೆಚ್ಚಿನ ಅಂಕಗಳು ಬರಬೇಕೆಂದು ಆಸ್ತಿಯನ್ನು ಮಾರಿ ನನ್ನನ್ನು ದುಬಾರಿ ಕೋಚಿಂಗ್ ಶಾಲೆಗೂ ಸೇರಿಸಿದಿರಿ.
ನಿಮ್ಮ ಮನಸ್ಸಿನಲ್ಲಿ ಹುದುಗಿದ್ದ ಎಲ್ಲ ಆಸೆಗಳನ್ನು ಪೂರೈಸಲು ನನ್ನ ಎಂಜಿನಿಯರಿಂಗ್ / ದುಬಾರಿ ಕೋಚಿಂಗ್ ಶಾಲೆ/ ಹಣದ ಮಹತ್ವ / ಉನ್ನತ ಸ್ಥಾನದ ಮೌಲ್ಯ ಎಲ್ಲದರ ಬಗ್ಗೆ ತಿಳಿಸಿಕೊಟ್ಟಿರಿ. ನಿಮ್ಮ ಮಡಿಲಲ್ಲಿ ಕೂರಿಸಿಕೊಂಡು ಕಲಿಸಿದಿರಿ. ಅಮ್ಮನೂ ನನಗೆ ಮುದ್ದಿನಿಂದ ಹಾಲು ಕುಡಿಸುವಾಗ ನನ್ನ ರಾಜ, ನನ್ನ ಮಗ ದೊಡ್ಡ ವ್ಯಕ್ತಿಯಾಗುತ್ತಾನೆ, ದೊಡ್ಡ ಕಾರು ಬಂಗಲೆ ಬರುತ್ತದೆ ನೀನು ಆಕಾಶದಲ್ಲಿ ಗಾಳಿಯಲ್ಲಿ ಹಾರಾಡುವೆ ಎಂದು ಹೇಳುತ್ತಿದ್ದಳು.
ನನ್ನ ಸರ್ವರೀತಿಯ ಪ್ರಗತಿಗಾಗಿ ದೇವರ ಮುಂದೆ ತುಪ್ಪದ ದೀಪಗಳನ್ನು ಬೆಳಗಿದರು ನನ್ನ ಪೂಜ್ಯ ತಂದೆಯವರೇ ನಾನು ನಿಮಗೆ ಇಷ್ಟೇ ಹೇಳಲು ಬಯಸುತ್ತೇನೆ. ನಿಮ್ಮ ಸೇವೆ ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನಿಮ್ಮ ಅನಾರೋಗ್ಯದ ಸಮಯದಲ್ಲಿ ಬಂದು ನಿಮ್ಮ ಆರೈಕೆ ಮಾಡಲು, ಔಷಧಿ ಕೊಡಲು ಆಗುತ್ತಿಲ್ಲ, ನಾನು ಹೃತ್ಪೂರಕವಾಗಿ ಮನದಾಳದಿಂದ ಬಯಸಿದರೂ ನಿಮ್ಮ ಮಗನಾಗಿ ನನ್ನ ಕರ್ತವ್ಯ ಮತ್ತು ಧರ್ಮವನ್ನು ಪೂರೈಸಲು ನನಗೆ ಸಾಧ್ಯವಾಗುತ್ತಿಲ್ಲ.
ನಿಮಗೇ ತಿಳಿದಿರುವಂತೆ ನಾನು ಸಾವಿರಾರು ಕಿಲೋಮೀಟರ್ ದೂರದ ಅಮೆರಿಕೆಯ ಬಂಗಲೆಯಲ್ಲಿದ್ದೇನೆ ಮತ್ತು ನೀವು ಅದೇ ಹಳ್ಳಿಯ ಹಳೆಯ ಮನೆಯಲ್ಲಿದ್ದೀರೀ, ಇದೆಲ್ಲವೂ ನನ್ನೊಬ್ಬನದೇ ತಪ್ಪೇ? ಹೇಳೀ.
ಇಂತೀ ನಿಮ್ಮ ಮಗ.
ಈಗ ಪ್ರತಿಯೊಬ್ಬ ತಂದೆ-ತಾಯಿಯರೂ ಯೋಚಿಸಬೇಕು, ಅವರು ತಮ್ಮ ಹೊಟ್ಟೆ-ಬಟ್ಟೆಯನ್ನು ಕಟ್ಟಿ, ದೈನಂದಿನ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ತಾವು ಗಳಿಸಿದ ಆಸ್ತಿಗಳನ್ನು ಮಾರಾಟ ಮಾಡಿ , ಇಂದಿನ ಮಕ್ಕಳ ಸುಂದರ ಭವಿಷ್ಯದ ಕನಸುಗಳನ್ನು ಕಾಣುವುದು ಇಂತಹಾ ಪರಿಸ್ಥಿತಿಗಾಗಿಯೇ? ಯೋಚಿಸಿ. ನಾವು ವಾಸ್ತವವಾಗಿ ಯಾವುದಾದರೂ ತಪ್ಪು ಮಾಡುತ್ತಿದ್ದೇವೆಯೇ. .