ಅಡುಗೆ ಮನೆಯಲ್ಲಿರುವ ಉಪ್ಪಿನಿಂದ ಮುಖವನ್ನು ಸುಂದರವಾಗಿ ಹೊಳೆಯುವಂತೆ ಮಾಡಬಹುದು, ಉಪ್ಪಿನಿಂದ ಸೌಂದರ್ಯ ವೃದ್ಧಿನ ಎಂದು ನಿಮಗೆ ಆಶ್ಚರ್ಯವಾಗಬಹುದು, ಆದರೆ ಉಪ್ಪು ಚರ್ಮ ಗ್ರಂತೆಯಲ್ಲಿರುವ ಮಲಿನವನ್ನು ಹಾಗೂ ಧೂಳನ್ನು ದೂರ ಮಾಡುತ್ತದೆ, ಇನ್ನು ಚರ್ಮದಲ್ಲಿ ಆಗಿರುವಂತಹ ಕಪ್ಪು ಕಲೆಗಳನ್ನು ಉಪ್ಪು ಹೊರಹಾಕುತ್ತದೆ, ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಸಹ ಉಪ್ಪು ಶಮನ ಮಾಡುತ್ತದೆ, ಹಾಗು ಮೊಡವೆಗಳಿದ್ದರೆ ಅದನ್ನು ಶಮನ ಮಾಡುತ್ತದೆ ಆದರೆ ಉಪ್ಪನ್ನು ಯಾವ ರೀತಿಯಲ್ಲಿ ಬಳಸಿ ಉಪಯೋಗವನ್ನು ಪಡೆಯಬೇಕು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.
ಪ್ರತಿದಿನ ಹೊರಗೆ ಹೋಗಿ ಕೆಲಸ ಮಾಡಲು ಹೋಗುತ್ತೀರಾ ಎಂದರೆ ಧೂಳು ನಿಮ್ಮ ಮುಖದ ಚರ್ಮವನ್ನು ಸಂಪೂರ್ಣವಾಗಿ ಆವರಿಸಿಬಿಡುತ್ತದೆ, ಸಾಬೂನಿನಿಂದ ತೊಳೆದರೆ ಅಷ್ಟು ಪರಿಣಾಮಕಾರಿಯಾಗಿ ಸ್ವಚ್ಛವಾಗದು, ಜೇನುತುಪ್ಪ ಜೊತೆಗೆ ಸ್ವಲ್ಪ ಉಪ್ಪನ್ನು ಬೆರೆಸಿ ಅದನ್ನು ನಿಮ್ಮ ಮುಖದ ಚರ್ಮದ ಮೇಲೆ ಮಸಾಜ್ ಮಾಡಿ 10 ನಿಮಿಷದ ನಂತರ ತಣ್ಣೀರಿನಿಂದ ಮುಖವನ್ನು ತೊಳೆದರೆ ಸ್ವಚ್ಛವಾಗುತ್ತದೆ, ಈ ಕ್ರಿಯೆಯನ್ನು ವಾರದಲ್ಲಿ ಎರಡು ಬಾರಿ ಮಾಡಬೇಕು.
ಇನ್ನು ಮುಖದ ಮೇಲೆ ಅತಿ ಹೆಚ್ಚು ಮೊಡವೆಗಳು ಮೂಡಿದಲ್ಲಿ ಉಪ್ಪು ನಿಮಗೆ ಬಹಳಷ್ಟು ಸಹಕಾರಿಯಾಗಲಿದೆ, ಹಾಗೂ ನಿಮಗೆ ಏನಾದರೂ ಜಿಡ್ಡು ಮುಖದ ಚರ್ಮ ನಿಮ್ಮದಾಗಿದ್ದರೆ 2 ಟೀ ಸ್ಪೂನ್ ನಿಂಬೆ ರಸದಲ್ಲಿ ಅರ್ಧ ಟೀ ಸ್ಪೂನ್ ಉಪ್ಪನ್ನು ಮಿಶ್ರ ಮಾಡಿ ಅದನ್ನು ನಿಮ್ಮ ಮುಖದ ಚರ್ಮದ ಮೇಲೆ ನಿಧಾನವಾಗಿ ಮಸಾಜ್ ಮಾಡಿದರೆ, ಮುಖದ ಚರ್ಮವೂ ಎಣ್ಣೆ ಜಿಡ್ಡನ್ನು ಕಳೆದು ಕಾಂತಿಯನ್ನು ಪಡೆಯುತ್ತದೆ, ಹೀಗೆ ಮಾಡುವುದರಿಂದ ಜಿಡ್ಡಿನ ಜೊತೆಯಲ್ಲಿ ಮುಖದ ಮೇಲೆ ಮೊಡವೆಗಳು ಏನಾದರೂ ಇದ್ದರೆ ಅದು ಸಹ ತೊಲಗುತ್ತದೆ.
ಇನ್ನು ಕೆಲವರದು ಒಣಗಿದ ಚರ್ಮ ವಿರುತ್ತದೆ ಅಂಥವರು ಸಹ ಉಪ್ಪನ್ನು ಈ ರೀತಿ ಬಳಸಬಹುದು ಮೊದಲು ತಿಳಿ ಹಾಲನ್ನು ನಿಮ್ಮ ಮುಖದ ಚರ್ಮ ಮೇಲೆ ಹಚ್ಚಿಕೊಳ್ಳಿ ಅದು ಒಣಗಿದ ನಂತರ ಉಪ್ಪನ್ನು ಬಳಸಿ ನಿಮ್ಮ ಮುಖದ ಮೇಲೆ ಮಸಾಜ್ ಮಾಡಿ, ಇದರಿಂದ ದೇಹದ ಹಾಲಿನಫೇಸ್ ಪ್ಯಾಕ್ ರಿಮೋ ಆಗುತ್ತದೆ ಹೀಗೆ ಮಾಡುವುದರಿಂದ ಒಣ ಚರ್ಮಕ್ಕೆ ಶಕ್ತಿ ದೊರೆಯುತ್ತದೆ ಹಾಗೂ ನಿಮ್ಮ ಮುಖದ ಮೇಲೆ ಇಂತಹ ಸಮಸ್ಯೆಗಳಿದ್ದರೆ ಅದೂ ಕೂಡ ಶಮನವಾಗುತ್ತದೆ.