3 ದಿನಗಳಲ್ಲಿ ಮಹಿಳಾ ಉದ್ಯಮಿಗಳಿಗೆ 10 ಲಕ್ಷ ರೂಪಾಯಿ! ಕೇಂದ್ರ ಸರ್ಕಾರದಿಂದ ಮಹಿಳಾ ಉದ್ಯಮಿಗಳಿಗೆ ಗುಡ್ ನ್ಯೂಸ್.

0
1759

ಸಣ್ಣ ಉದ್ದಿಮೆದಾರರು ಮತ್ತು ಮಹಿಳಾ ಉದ್ಯಮಿಗಳಿಗೆ ಈಗಿನ ಕೇಂದ್ರದ ಸಣ್ಣ ಮತ್ತು ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಖಾತೆಯ ಸಚಿವರಾದರು ನಿತಿನ್ ಗಡ್ಕರಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ, ಇತ್ತೀಚಿಗೆ ಇವರು ಸಿಕ್ಕಿ ಮಹಿಳಾ ವಿಭಾಗ ವತಿಯಿಂದ ಆಯೋಜನೆ ಮಾಡಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಬ್ಯಾಂಕ್ ಸಂಸ್ಥಾಪಕ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂಸುಫ್ ಅವರ ಜೊತೆ ಮಾತನಾಡುವ ಸಮಯದಲ್ಲಿ ಆಲೋಚನೆ ಮೂಡಿದೆ ಅಷ್ಟೇ ಅಲ್ಲದೆ ಇದೆ ಆಲೋಚನೆ ಬಗ್ಗೆ ಕೇಂದ್ರ ಹಣಕಾಸು ಸಚಿವರ ಜೊತೆಯಲ್ಲಿ ಚರ್ಚೆ ನಡೆಸಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ಸಣ್ಣ ಉದ್ದಿಮೆ ಗಳಿಗೆ ಮತ್ತು ಮಹಿಳಾ ಉದ್ಯಮಿಗಳಿಗೆ ತಕ್ಷಣಕ್ಕೆ ಹತ್ತು ಲಕ್ಷ ರೂಪಾಯಿಯ ವರೆಗೂ ಸಾಲ ನೀಡಲು ಸಾಮಾಜಿಕ ಕಿರು ಹಣಕಾಸು ಸಂಸ್ಥೆಗಳನ್ನು ಸೃಷ್ಟಿ ಮಾಡಲಾಗುವ ಆಲೋಚನೆಯೊಂದು ಮಾಡಲಾಗಿದ್ದು ಈ ಮೂಲಕ ಕೇವಲ 3 ದಿನಗಳಲ್ಲಿ ಮಹಿಳಾ ಉದ್ಯಮಿಗಳಿಗೆ 10 ಲಕ್ಷದವರೆಗೆ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು, ಹಾಗೂ ಸರಳ ಪ್ರಕ್ರಿಯೆಗಳನ್ನು ಅನುವಹಿಸಿ ಸಣ್ಣ ಮತ್ತು ಅತಿಸಣ್ಣ ಸಾಮಾಜಿಕ ಉದ್ಯಮಿಗಳಿಗೆ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

ನೀತಿ ಆಯೋಗದ ಶಿಫಾರಸ್ಸಿನ ಯೋಜನೆ ಆಧರಿಸಿ ಅದನ್ನು ರೂಪಿಸಲಾಗುವುದು, ಈ ಮೂಲಕ ಮಹಿಳಾ ಉದ್ಯಮಿಗಳಿಗೆ ಅತಿ ಸುಲಭವಾಗಿ ಸಾಲ ಸೌಲಭ್ಯ ಕಲ್ಪಿಸಿಕೊಡುವ ಮಹತ್ತರವಾದ ಉದ್ದೇಶವನ್ನು ಹೊಂದಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here