ಚಲನಚಿತ್ರಗಳಲ್ಲಿ ಕಳನಾಯಕನ ನಟನಾಗಿ ಅಭಿನಯಿಸಿ ಎಲ್ಲರ ಮನಗೆಲ್ಲುವ ಸೋನು ಸೂದ್ ನಿಜ ಜೀವನದಲ್ಲಿ ನಾಯಕನ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ, ಹಿಂದೆ ಹಲವು ಬಾರಿ ಸೋನು ಸೂದ್ ಅವರು ಮಾಡುತ್ತಿರುವ ಸಮಾಜಮುಖಿ ಕೆಲಸಗಳ ಬಗ್ಗೆ ನಾವೇ ನಿಮಗೆ ಮಾಹಿತಿ ನೀಡಿದ್ದೇವೆ ಬಡ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ಟ್ರ್ಯಾಕ್ಟರ್ ಕೊಡಿಸಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ತಮ್ಮ ಊರುಗಳನ್ನು ಸೇರಲು ಬಸ್, ಟ್ರೈನ್ ಸಾಲದಕ್ಕೆ ಏರೋಪ್ಲೇನ್ ಗಳ ವ್ಯವಸ್ಥೆ ಮಾಡಿ ದೊಡ್ಡತನ ಮೆರೆದಿದ್ದರು.
ಮಹಾಭಾರತದಲ್ಲಿ ಕರ್ಣನ ಪಾತ್ರದ ಪರಿಚಯ ನಮಗಿದೆಯೆ ಆದರೆ ನಿಜಜೀವನದಲ್ಲಿ ಸಹಾಯ ಕೇಳಿದ ತಕ್ಷಣ ಸಹಾಯ ಮಾಡುವ ಕರ್ಣನ ಗುಣದ ವ್ಯಕ್ತಿ ಸೋನು ಸೂದ್ ಎಂದರೆ ತಪ್ಪಾಗುವುದಿಲ್ಲ, ಇದೇ ಕಾರಣಕ್ಕಾಗಿ ದೇಶದ ಎಲ್ಲಾ ಮೂಲೆಯಿಂದಲೂ ಸೋನು ಸೂದ್ ಅವರಿಗೆ ಸಹಾಯ ಮಾಡುವಂತೆ ಅನೇಕ ಮನವಿಗಳು ಬರುತ್ತದೆ ಅದೆಲ್ಲದಕ್ಕೂ ಮಾಡುತ್ತಿದ್ದಾರೆ, ಅದೇ ರೀತಿ ಕರ್ನಾಟಕದಿಂದ ವರಲಕ್ಷ್ಮಿ ಎನ್ನುವವರು ಕೂಡ ಸೋನು ಸೂದ್ ಅವರಿಗೆ ಸಹಾಯ ಮಾಡುವಂತೆ ಸಂದೇಶವನ್ನು ಕಳುಹಿಸಿದ್ದಾರೆ.
ಹೌದು ವರಲಕ್ಷ್ಮಿ ವಿಕಲಚೇತನೆ ಸೋನು ಸೂದ್ ಅವರಿಗೆ ಟ್ವೀಟ್ ಮೂಲಕ ನಾನು ವರಲಕ್ಷ್ಮಿ ಕರ್ನಾಟಕದಿಂದ ನಿಮಗೆ ಸಂದೇಶ ಕಳುಹಿಸುತ್ತಿದ್ದೇನೆ ಹಾಗೂ ನಾನು ವಿಕಲಚೇತನ ಯಾಗಿದ್ದು ಎರಡು ವರ್ಷದ ಹಿಂದೆ ನಮ್ಮ ತಂದೆ ಕಳೆದುಕೊಂಡಿದ್ದೇನೆ,ನನ್ನ ಜೀವನ ನಡೆಸಲು ಯಾವುದೇ ಆದಾಯ ಇರುವುದಿಲ್ಲ ಆದ್ದರಿಂದ ತರಕಾರಿ ಅಂಗಡಿಯನ್ನು ತೆರೆಯಬೇಕು ಎಂದು ಯೋಚನೆ ಮಾಡಿದ್ದೇನೆ ಅದಕ್ಕಾಗಿ ನಿಮ್ಮ ಸಹಾಯವನ್ನು ಕೇಳುತ್ತಿದ್ದೇನೆ ಎಂದು ಸಂದೇಶ ಕಳುಹಿಸಿದ್ದಾರೆ.
ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿರುವ ಸೋನು ಸೂದ್ ನಾಳೆಯ ದಿನವನ್ನು ತರಕಾರಿ ಅಂಗಡಿಯ ಅಂಬಿಗೆ ಶುರು ಮಾಡೋಣ ಸಿದ್ಧವಿರಿ ಎಂದು ಉತ್ತರ ನೀಡಿದ್ದಾರೆ, ಈ ರೀತಿ ಬಡವರ ಸಹಾಯಕ್ಕೆ ನಿಂತ ಸೋನು ಸೂದ್ ಅವರಿಗೆ ಎಷ್ಟು ಕೋಟಿ ಧನ್ಯವಾದಗಳು ತಿಳಿಸಿದರು ಸಾಲದು, ನಿಮ್ಮನ್ನು ದೇವರು ಹೀಗೆ ಸದಾ ಸುಖವಾಗಿ ಇಡಲಿ, ಕೊನೆಯವರೆಗೂ ನೀವು ನಮ್ಮ ಮನಸ್ಸಲ್ಲಿ ಹೀಗೆಯೇ ಉಳಿಯುತ್ತೀರ ನಿಮಗೊಂದು ಧನ್ಯವಾದಗಳು.