ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಅತಿ ಹೆಚ್ಚು ನಿರೀಕ್ಷೆ ಪಟ್ಟು ಈ ತಂಡ ಗೆಲ್ಲಲಿ ಅಂತ ಹೇಳಿ ಇಡೀ ಕರ್ನಾಟಕ ಸಪೋರ್ಟ್ ಮಾಡ್ತಾ ಇರೋದು ಒಂದೇ ತಂಡಕ್ಕೆ. ಅದು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾತ್ರ. ಆರ್.ಸಿ.ಬಿ ಕಪ್ ಗೆಲ್ಲಲಿ, ಬಿಡಲಿ ಆದರೆ ಅಭಿಮಾನಿಗಳ ಪ್ರೋತ್ಸಾಹ, ಉ’ತ್ತೇಜನ ಮಾತ್ರ ಕಡಿಮೆಯಾಗಿಲ್ಲ, ಕಡಿಮೆ ಆಗೋದು ಇಲ್ಲ. ಆರ್.ಸಿ.ಬಿ ಟೇಬಲ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸುವಲ್ಲಿ ಕಪ್ ಗೆಲ್ಲುವಲ್ಲಿ ಎಡವುತ್ತಲೇ ಇದೆ.
ಮೂರು ಬಾರಿ ಫೈನಲ್ ಪ್ರವೇಶಿಸಿದರು ಕೂಡ ಐಪಿಎಲ್ ಅಲ್ಲಿ ಮತ್ತೆ ಸೋಲನ್ನ ಅನುಭವಿಸಿದೆ. ಹೀಗೆ ಪ್ರತಿ ವರ್ಷವೂ ಕೂಡ ಒಂದಲ್ಲ ಒಂದು ದೌ’ರ್ಬಲ್ಯಗಳನ್ನು ಅನುಭವಿಸುತ್ತಲೇ ಬಂದಿದೆ. ಅದಕ್ಕೆ ಕಾರಣಗಳು ನೋಡುವುದಾದರೆ ತುಂಬಾನೇ ಇವೆ. ದು’ರ್ಬಲ ಬೌಲಿಂಗ್ ವಿಭಾಗ, ಸ್ಥಿರ ಪ್ರದರ್ಶನ, ಕಳಪೆ ಫೀಲ್ಡಿಂಗ್, ನಾಯಕತ್ವ ವೈಫಲ್ಯ ಹೀಗೆ ಪ್ರತಿಭಾರಿಯು ಆರ್.ಸಿ.ಬಿ ದೌ’ರ್ಬಲ್ಯಗಳು ಇದ್ದೆ ಇವೆ.
ಅದು ಏನೇ ಇರಲಿ ಆಗಿದ್ದೆಲ್ಲ ಆಗಿ ಹೋಯ್ತು. ಈ ಬಾರಿ ಆರ್.ಸಿ.ಬಿ ತಂಡ ಬಲಿಷ್ಠವಾಗಿದೆ, ತಂಡ ಒಳ್ಳೊಳ್ಳೆ ಆಟಗಾರರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಈ ಬಾರಿಯಾದರೂ ನಮ್ಮ ಆರ್.ಸಿ.ಬಿ ಕಪ್ ಗೆಲ್ಲಲಿ ಎಂಬುದು ಅಭಿಮಾನಿಗಳ ಆಶಯ. ಇನ್ನೇನು ಐಪಿಎಲ್ ಶುರು ಆಗಿದೆ, ತಂಡ ಗೆಲ್ಲಲು ಯಾವ ಯಾವ ಯೋಜನೆಗಳನ್ನು ರೂಪಿಸಿದೆ, ಬೌಲಿಂಗ್ ವಿಭಾಗದಲ್ಲಿ ಯಾರು ಯಾರು ಕಣಕ್ಕಿಳಿಯುತ್ತಾರೆ. ಯಾರು ಅಗ್ರ 11 ರ ತಂಡದೊಳಗೆ ಬರ್ತಾರೆ. ಹಾಗೇಯೇ ತುಂಬಾ ಹೆಚ್ಚಾಗಿ ನಿರೀಕ್ಷೆ ಪಡ್ತಾ ಇರೋದು ಯಾರು ಆರ್ಸಿಬಿ ತಂಡದ ಓಪನ್ನಾಗಿ ಕಣಕ್ಕೆ ಇಳಿಯುತ್ತಾರೆ. ಎನ್ನುವುದು ತುಂಬಾ ಕಾಡುತ್ತಿರುವ ಪ್ರಶ್ನೆ.
ಅಭಿಮಾನಿಗಳು ತುಂಬಾನೇ ಎದುರುನೋಡುತ್ತಾ ಇರುವಂತಹ ಐಪಿಎಲ್ ನ ಆರ್.ಸಿ.ಬಿ ತಂಡದಲ್ಲಿ ಯಾರು ಓಪನರ್ ಆಗಿ ಉತ್ತಮ ಆಟ ತೋರಿಸುತ್ತಾರೆ ಎಂದು ತುಂಬಾ ಕಾಡ್ತಾಯಿದೆ. ಓಪನರ್ ಯಾರೆಂದು ಅಭಿಮಾನಿಗಳಲ್ಲಿ ರೋ’ಮಾಂಚನವನ್ನು ಕೋ’ಲಾಹಲವೆಬ್ಬಿಸಿದೆ ಎಂದರೆ ಉತ್ಪ್ರೇಕ್ಷೆ ಆಗುವುದಿಲ್ಲ. ಈ ಬಾರಿ ಆರ್.ಸಿ.ಬಿ ತಂಡದ ಓಪನರ್ ಗಳು ಯಾರಂತ ನೀವು ಊಹಿಸಿದ್ದೀರಾ. ಯಾರು ಗೊತ್ತಾ. ಓಪನರ್ ಆಗಿ ಕಣಕ್ಕೆ ಇಳಿಸಲು ತುಂಬಾ ಆಯ್ಕೆಗಳು ಆರ್ಸಿಬಿ ತಂಡಕ್ಕೆ ಇದೆ.
ವಿರಾಟ್ ಕೊಹ್ಲಿ, ಆರೋನ್ ಪಿಂಚ್, ಪಾರ್ಥಿವ್ ಪಟೇಲ್, ದೇವದತ್ತ್ ಪಡಿಕ್ಕಲ್ ಹೀಗೆ ತಂಡದ ಆರಂಭಿಕರಾಗಿ ಯಾರು ಬೇಕಾದ್ರೂ ಇನ್ನಿಂಗ್ಸ್ ಓಪನ್ ಮಾಡಬಹುದು. ಆದರೆ ಕೆಲವು ಮೂಲಗಳ ಪ್ರಕಾರ ಈ ಬಾರಿ ನಮ್ಮ ಕರುನಾಡ ಎಡಗೈ ಬ್ಯಾಟ್ಮ್ಯಾನ್ ಕನ್ನಡದ ಹೆಮ್ಮೆ “ದೇವದತ್ ಪಡಿಕಲ್” ಅವರು ಈ ಬಾರಿ ಆರ್.ಸಿ.ಬಿ ತಂಡದಲ್ಲಿ ಆರಂಭಿಕರಾಗಳಿದ್ದಾರೆ.
ಇವರ ಜೊತೆಗೆ ಮತ್ತೋರ್ವ ಆರಂಭಿಕರಾಗಿ ಆಸ್ಟ್ರೇಲಿಯಾದ ನಾಯಕ, ಬಿಗ್ ಹಿಟ್ಟರ್ ಆಗಿರುವಂತಹ ಟ್ವೆಂಟಿ-20 ಫಾರ್ಮಟ್ ಗೆ ಹೇಳಿ ಮಾಡಿಸಿದಂತಹ ಆಟಗಾರರಾಗಿರುವ “ಆರೋನ್ ಪಿಂಚ್” ಅವರು ಬ್ಯಾಟಿಂಗ್ ಆಡುತ್ತಿದ್ದಾರೆ. ಇವರಿಂದ ನಿರೀಕ್ಷಿತ ಆಟವನ್ನು ಎಲ್ಲರೂ ಕೂಡಾ ಎದುರು ನೋಡ್ತಾನೆ ಇರ್ತಾರೆ, ದೇವದತ್ತ್ ಪಡಿಕ್ಕಲ್ ಒಬ್ಬ ಒಳ್ಳೆಯ ಆಟಗಾರ ಇವ್ರು ಹೇಗೆ ಆಡುತ್ತಾರೆ ಎಂಬುದು ಕಾದು ನೋಡಬೇಕು.
ಪ್ರತಿವರ್ಷದಂತೆ ಈ ವರ್ಷವೂ ಕೂಡ ತುಂಬಾ ಕುತೂಹಲಗಳು, ನಿರೀಕ್ಷೆಗಳು ಗರಿಗೆದರಿವೆ. ಅದೇನೆ ಇರಲಿ ಈ ಬಾರಿ ಆರ್.ಸಿ.ಬಿ ಕಪ್ ಗೆಲ್ಲಿಲಿ, ಅಭಿಮಾನಿಗಳನ್ನು ರಂಜಿಸಲಿ ಎನ್ನುವುದೇ ಎಲ್ಲರ ಆಸೆಯಾಗಿದೆ. ನೀವು ಆರ್.ಸಿ.ಬಿ ಅಭಿಮಾನಿಯಾಗಿದ್ದರೆ ಈ ಲೇಖನವನ್ನು ಎಲ್ಲೆಡೆ ಶೇರ್ ಮಾಡಿ, ಆರ್ಸಿಬಿಗೆ ಸಪೋರ್ಟ್ ಮಾಡಿ. ಎಲ್ಲರಿಗೂ ಕೂಡ ಧನ್ಯವಾದಗಳು.